ಶಶಿಕುಮಾರ್ ಪುತ್ರನ ಚೊಚ್ಚಲ ಚಿತ್ರ ರೆಡಿ
ಸೀತಾಯಣ ಮೂಲಕ ಅಕ್ಷಿತ್ ಬೆಳ್ಳಿ ತೆರೆಗೆ
Team Udayavani, Nov 6, 2020, 1:10 PM IST
ಹಿರಿಯ ನಟ ಶಶಿಕುಮಾರ್ ಪುತ್ರ ಅಕ್ಷಿತ್ ಶಶಿಕುಮಾರ್ ಮೊದಲಬಾರಿ ನಾಯಕನಾಗಿ ನಟಿಸಿರುವ “ಸೀತಾಯಣ’ ಚಿತ್ರದಕೆಲಸಗಳು ಸದ್ದಿಲ್ಲದೆ ನಡೆಯುತ್ತಿದೆ. ಇತ್ತೀಚೆಗೆ ಚಿತ್ರತಂಡ, ಚಿತ್ರದಲ್ಲಿ ಬರುವ ಹಾಡೊಂದನ್ನು ಬಿಡುಗಡೆ ಮಾಡಿದೆ.
ಮದುವೆ ಶುಭ ಸಂದರ್ಭದಲ್ಲಿ ರಾಮಾಯಣದ ಶ್ಲೋಕವನ್ನು ಬಳಸುವ ಬದಲು ಅದಕ್ಕೆ ತಕ್ಕಂತೆ ಸಿದ್ಧಪಡಿಸಲಾದ ಹಾಡು ಇದಾಗಿದೆ. ಸೀತೆಯ ಗುಣ ಮತ್ತು ಸೌಂದರ್ಯ ಸಾರುವ ಈ ಗೀತೆಯ ಸಾಲುಗಳಿಗೆ ಗಾಯಕಿ ನಯನಾ ನಾಯರ್ ಧ್ವನಿಯಾಗಿದ್ದಾರೆ. ನಟ ಕಂ ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ಈ ಹಾಡನ್ನು ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದರು. ಹೊಸ ತಲೆಮಾರಿನ ರೊಮ್ಯಾಂಟಿಕ್ ಲವ್ ಸ್ಟೋರಿ ಹೊಂದಿರುವ “ಸೀತಾಯಣ’ ಚಿತ್ರಕ್ಕೆ ಪ್ರಭಾಕರ್ ಆರಿಪಾಕ್ ನಿರ್ದೇಶನ ಮಾಡುತ್ತಿದ್ದಾರೆ. ” ಕಲರ್ ಕ್ಲೌಡ್ಸ್ ಎಂಟರ್‌ಟೈನ್ಮೆಂಟ್’ ಬ್ಯಾನರ್‌ನಲ್ಲಿ ಲಲಿತಾ ರಾಜಲಕ್ಷ್ಮೀ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇನ್ನು “ಸೀತಾಯಣ’ ಚಿತ್ರದಲ್ಲಿ ನಾಯಕ ಅಕ್ಷಿತ್ ಶಶಿಕುಮಾರ್‌ಗೆ ನಾಯಕಿಯಾಗಿ ಅನಹಿತಾ ಭೂಷಣ್ ಜೋಡಿಯಾಗಿ ಅಭಿನಯಿಸಿದ್ದಾರೆ.
ಉಳಿದಂತೆ ವಿಕ್ರಂ ಶರ್ಮಾ, ಶರ್ಮಿತಾ ಗೌಡ, ಮಧು ಸೂದನ್, ಮೇಘನಾ ಗೌಡ, ಅಜಯ್‌ಘೋಷ್, ಹಿತೇಶ್, ವಿಧೆಯುಲೇಖ ರಮನ್, ಬಿತ್ರಿಸತ್ತಿ, ಕೃಷ್ಣ ಭಗವಾನ್, ಅನಂತ ಬಾಬು, ಗುಂಡು ಸುದರ್ಶನ್, ಮಧುಮಣಿ, ಅಪ್ಪರಾವ್, ಲೋಬೋ ಮುಂತಾದವರು ಇತರ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. “ಸೀತಾಯಣ’ ಚಿತ್ರಕ್ಕೆ ಪದ್ಮನಾಭ್ ಭಾರದ್ವಾಜ್ ಸಂಗೀತ ಸಂಯೋಜಿಸಿದ್ದು, ಕವಿರಾಜ್, ಗೌಸ್‌ಪೀರ್ ಸಾಹಿತ್ಯವನ್ನು ರಚಿಸಿದ್ದಾರೆ. ಚಿತ್ರಕ್ಕೆ ದುರ್ಗಾಪ್ರಸಾದ್ ಕೊಳ್ಳಿ ಛಾಯಾಗ್ರಹಣ, ಪ್ರವೀಣ್ ಪುಡಿ ಸಂಕಲನವಿದೆ.ಬೆಂಗಳೂರು, ಮಂಗಳೂರು, ಆಗುಂಬೆ, ವೈಜಾಕ್, ಹೈದರಾಬಾದ್, ಬ್ಯಾಂಕಾಕ್ ಮೊದಲಾದ ಕಡೆಗಳಲ್ಲಿ ಸುಮಾರು 63 ದಿನಗಳ ಕಾಲ “ಸೀತಾಯಣ’ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಏಕಕಾಲಕ್ಕೆ ಈ ಚಿತ್ರ ನಿರ್ಮಾಣವಾಗುತ್ತಿದ್ದು, ಮುಂದಿನ ವರ್ಷದ ಆರಂಭದಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್ಲೆಸ್ ಅನಿಸಿತು…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.