‘ಗೀತಾ ಪಿಕ್ಚರ್’ ನಡಿ ಅದ್ಧೂರಿ ‘ವೇದಾ’: ಶಿವಣ್ಣ ನಿರ್ಮಾಣದಲ್ಲಿ 125ನೇ ಚಿತ್ರ
Team Udayavani, Jun 24, 2022, 11:24 AM IST
ಶಿವರಾಜ್ ಕುಮಾರ್ ನಟನೆಯ 125ನೇ ಚಿತ್ರ “ವೇದಾ’ ಬಹುತೇಕ ಕೊನೆಯ ಹಂತದ ಚಿತ್ರೀಕರಣದಲ್ಲಿದೆ. ನವೆಂಬರ್‌ನಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಜನೆ ಚಿತ್ರತಂಡದ್ದು. ವಿಶೇಷವೆಂದರೆ ಇದು ಶಿವರಾಜ್‌ಕುಮಾರ್ ಅವರ ಹೋಂಬ್ಯಾನರ್‌ನಲ್ಲಿ ತಯಾರಾಗಿರುವ ಮೊದಲ ಸಿನಿಮಾ. “ಗೀತಾ ಪಿಕ್ಚರ್’ ಎಂಬ ಬ್ಯಾನರ್ ಹುಟ್ಟುಹಾಕಿ, ಅದರಡಿ ಈ ಚಿತ್ರ ನಿರ್ಮಾಣ ಮಾಡಲಾಗಿದೆ. ಇತ್ತೀಚೆಗೆ ಈ ಚಿತ್ರದ ಬ್ಯಾನರ್ ಲೋಗೋ ಹಾಗೂ ಮೋಶನ್ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಅದ್ಧೂರಿಯಾಗಿ ನಡೆದ ಈ ಕಾರ್ಯಕ್ರಮದಲ್ಲಿ ರಾಜ್ ಕುಟುಂಬ ಹಾಗೂ ಕನ್ನಡ ಚಿತ್ರರಂಗದ ಅನೇಕರು ಭಾಗಿಯಾಗಿದ್ದರು.”ಗೀತಾ ಪಿಕ್ಚರ್’ ಲೋಗೋವನ್ನು ಹಿರಿಯ ನಟ ಅನಂತ್ ನಾಗ್ ಅನಾವರಣಗೊಳಿಸಿದರೆ, “ವೇದಾ’ ಮೋಶನ್ ಪೋಸ್ಟರ್ ಅನ್ನು ಕ್ರಿಕೆಟಿಗ ಅನಿಲ್ ಕುಂಬ್ಳೆ ಬಿಡುಗಡೆ ಮಾಡಿ ಶುಭ ಹಾರೈಸಿದರು.
ಬಿಡುಗಡೆ ಬಳಿಕ ಮಾತನಾಡಿದ ನಟ ಅನಂತ್ ನಾಗ್, “ರಾಜ್ ಕುಟುಂಬವನ್ನು ನಾನು ಹತ್ತಿರದಿಂದ ನೋಡಿದ್ದೇನೆ, ಸಾಕಷ್ಟು ಕಲಿತಿದ್ದೇನೆ. ರಾಜ್ ಅವರ ಜೀವನ ಶೈಲಿ, ನಟನಾ ಶೈಲಿಯನ್ನು ನೋಡಿ ಅಭ್ಯಾಸಿಸಿದ್ದೇನೆ. ಈಗ ಶಿವರಾಜ್‌ಕುಮಾರ್ ಹೊಸ ಬ್ಯಾನರ್ ಹುಟ್ಟುಹಾಕಿದ್ದಾರೆ. ಈ ಬ್ಯಾನರ್‌ನಿಂದ ವಿಭಿನ್ನ ರೀತಿಯ ಕಥೆಗಳು ಸಿನಿಮಾವಾಗಲಿ’ ಎಂದು ಹಾರೈಸಿದರು.
ಇದನ್ನೂ ಓದಿ:ಸ್ಯಾಂಡಲ್ ವುಡ್ ನಲ್ಲಿ ಈ ವಾರ ತೆರೆಗೆ 4 ಚಿತ್ರಗಳು
ತಮ್ಮ ಹುಟ್ಟುಹಬ್ಬದ ದಿನವೇ ಬ್ಯಾನರ್ ಲಾಂಚ್ ಆದ ಖುಷಿಯಲ್ಲಿದ್ದ ಗೀತಾ ಶಿವರಾಜ್‌ಕುಮಾರ್ ಮಾತನಾಡಿ, “ಶಿವರಾಜ್‌ಕುಮಾರ್ ಅವರಿಗೆ ಅಭಿಮಾನಿಗಳು, ಅವರ ಕುಟುಂಬವೇ ದೊಡ್ಡ ಶಕ್ತಿ. ಆ ಶಕ್ತಿಯಿಂದಲೇ ಈಗ ಹೊಸ ಬ್ಯಾನರ್ ಆರಂಭಿಸಿದ್ದೇವೆ. 100ನೇ ಚಿತ್ರವನ್ನು ನಾವೇ ನಿರ್ಮಿಸಬೇಕೆಂದಿದ್ದೆವು. ಈಗ 125ನೇ ಚಿತ್ರ ನಿರ್ಮಿಸಿದ್ದೇನೆ. ಇದು ನಮ್ಮ ಬ್ಯಾನರ್, ಚಿತ್ರವಲ್ಲ. ಅಭಿಮಾನಿಗಳದ್ದು’ ಎಂದರು.
ತಮ್ಮ ಹೊಸ ಬ್ಯಾನರ್ ಲಾಂಚ್ ಬಗ್ಗೆ ಮಾತನಾಡಿದ ಶಿವಣ್ಣ, “ಇವತ್ತು ನಾನು ಇಲ್ಲಿರಲು ಕಾರಣ ಅಭಿಮಾನಿಗಳು. ಅವರ ಜೊತೆ ಯಾವತ್ತಿಗೂ ಪ್ರೀತಿ, ಜಗಳ ನಡೆಯುತ್ತಲೇ ಇರುತ್ತದೆ. ಅದೊಂಥರ ಬೇರೆ ತರಹದ ಸಂಬಂಧ. ಅವರಿಲ್ಲದೇ ಇರುತ್ತಿದ್ದರೆ 125 ಸಿನಿಮಾ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಈ ಸಂದರ್ಭದಲ್ಲಿ ನಮ್ಮ ಅಪ್ಪ-ಅಮ್ಮ ಹಾಕಿದ ಬುನಾದಿ, ಕುಟುಂಬದ ಪ್ರೋತ್ಸಾಹವನ್ನು ಮರೆಯಬಾರದು. ಜೊತೆಗೆ ನಮ್ಮ ಚಿತ್ರರಂಗದ ನಿರ್ಮಾಪಕರು ಈ ಶಿವಣ್ಣನ ಯಾವತ್ತೂ ಕೆಳಗೆ ಬೀಳಲು ಬಿಡಲೇ ಇಲ್ಲ. ಸದಾ ಬಿಝಿ ಇರುವಂತೆ ನೋಡಿಕೊಂಡರು. ಅವರಿಗೆ ನಾನು ಚಿರಋಣಿ. ಈ ಬ್ಯಾನರ್ ಮೂಲಕ ಹೊಸ ಕಥೆಗಳನ್ನು ಮಾಡುವ ಆಸೆಯಿದೆ. “ವೇದಾ’ ಸಿನಿಮಾವಾಗಲು ಎಲ್ಲರೂ ಸಹಕಾರ ನೀಡಿದ್ದಾರೆ’ ಎಂದರು.
ಉಳಿದಂತೆ ನಿರ್ದೇಶಕ ಹರ್ಷ, ನಾಯಕಿ ಗಾನವಿ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಸಿನಿಮಾ ಬಗ್ಗೆ ಮಾತನಾಡಿದರು
ರವಿಪ್ರಕಾಶ್ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ
Siddakatte Kodange Kambala: ಈ ಸೀಸನ್ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.