ಶ್ರೇಯಸ್ ಪ್ರೇಮಪುರಾಣ: ವಿಷ್ಣುಪ್ರಿಯದಲ್ಲಿ 90ರ ಲವ್ ಸ್ಟೋರಿ
Team Udayavani, Apr 2, 2021, 10:23 AM IST
ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ “ವಿಷ್ಣುಪ್ರಿಯ’ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ನಟ ಪುನೀತ್ ರಾಜ್ ಕುಮಾರ್ ಅವರು ಚಿತ್ರದ ಟ್ರೇಲರ್ ರಿಲೀಸ್ ಮಾಡಿ ಶುಭ ಕೋರಿದರು.
25ಕ್ಕೂ ಹೆಚ್ಚು ಚಿತ್ರಗಳನ್ನು, ಹಲವು ಜಾಹೀರಾತುಗಳನ್ನು ನಿರ್ದೇಶಿಸಿರುವ ಮಲಯಾಳಂ ಮೂಲದ ನಿರ್ದೇಶಕ ವಿ.ಕೆ ಪ್ರಕಾಶ್, “ವಿಷ್ಣುಪ್ರಿಯ’ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಚಿತ್ರ ವನ್ನು ಕೆ.ಮಂಜು ನಿರ್ಮಿಸಿದ್ದಾರೆ.
ಚಿತ್ರದ ಬಗ್ಗೆ ಮಾತನಾಡುವ ಕೆ.ಮಂಜು. “ಈ ಸಿನಿಮಾ ಮಾಡುವ ಮುನ್ನ ನಾನು ಕಥೆ ಬೇಕು ಎಂದು ಮನವಿ ಮಾಡಿದ್ದೆ. ಹಾಗಾಗಿ, 100 ರಿಂದ 125 ಕಥೆಗಳು ಬಂದಿದ್ದವು. ಅದರಲ್ಲಿ ಬೆಳಗಾವಿಯ ಹುಡುಗಿಯ ಕಥೆ ಆಯ್ಕೆಯಾಗಿ, ಅದನ್ನು ಈ ಚಿತ್ರವನ್ನಾಗಿಸಿದ್ದೇವೆ. ಆ ಕಥೆಯನ್ನು ಸಿನಿಮಾಕ್ಕೆ ತಕ್ಕಂತೆ ಬದಲಿಸಿದ್ದೇವೆ. ಇದು 1990ನಲ್ಲಿ ನಡೆದ ಲವ್‌ಸ್ಟೋರಿ. ನೈಜ ಘಟನೆಯನ್ನಿಟ್ಟುಕೊಂಡು ಕಥೆ ಮಾಡಿದ್ದಾರೆ. ತುಂಬಾ ಇಂಟೆನ್ಸ್ ಲವ್ ಸ್ಟೋರಿಯಾಗಿದ್ದು, ಮನಸ್ಸಿಗೆ ನಾಟುಂತಹ ಸಿನಿಮಾವಾಗಲಿದೆ. ವಿ.ಕೆ.ಪ್ರಕಾಶ್ ಒಳ್ಳೆಯ ನಿರ್ದೇಶಕ ಜೊತೆಗೆ ಟೆಕ್ನಿಷಿಯನ್ ಆಗಿದು ಸಿನಿಮಾವನ್ನು ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಶ್ರೇಯಸ್ ಕೂಡಾ ಸಿನಿಮಾವನ್ನು ತುಂಬಾ ಪ್ರೀತಿಸಿ ನಟಿಸಿದ್ದಾನೆ’ ಎಂದರು.
ಇದನ್ನೂ ಓದಿ:ಉಪ್ಪಿ ‘ಕಬ್ಜ’ದಲ್ಲಿ ಹೊಸ ಲೋಕ: ಅದ್ಧೂರಿ ಮೇಕಿಂಗ್‌ನಲ್ಲಿ ಚಂದ್ರು ಸಿನಿಮಾ
ನಾಯಕ ಶ್ರೇಯಸ್‌ಗೆ ಆರಂಭದಲ್ಲಿ ಚಿತ್ರದ ಲೊಕೇಶನ್ ನೋಡಿ, “ಏನಪ್ಪಾ ಈ ತರಹ ಸಿನಿಮಾ ಮಾಡ್ತಿದ್ದಾರೆ. ಕಾಸು ಉಳಿಸಲು ಈ ತರಹ ಮಾಡ್ತಿದ್ದಾರೇನೋ’ ಎಂದು ಟೆನ್ಶನ್ ಆಗಿದ್ದರಂತೆ. ಆದರೆ ಸಿನಿಮಾ ನೋಡಿದ ನಂತರ ತನ್ನ ಯೋಚನೆ ತಪ್ಪು ಎಂದು ಗೊತ್ತಾಯಿತಂತೆ. ಅಷ್ಟೊಂದು ಸುಂದರವಾಗಿ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ ಎಂದರು.
ಚಿತ್ರದಲ್ಲಿ ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರದ ಮೂಲಕ ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ನಟಿಸಿದಂತಾಗಿದೆ. ಚಿತ್ರಕ್ಕೆ ವಿನೋದ್ ಭಾರತಿ ಛಾಯಾಗ್ರಹಣವಿದೆ.
ಕಾರ್ಯಕ್ರಮದಲ್ಲಿ ಆನಂದ್ ಆಡಿಯೋ ಶ್ಯಾಮ್, ನಿರ್ದೇಶಕ ಇಂದ್ರಜಿತ್ ಲಂಕೇಶ್, ನಿರ್ಮಾಪಕ ರಮೇಶ್ ರೆಡ್ಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಇದನ್ನೂ ಓದಿ: ಹೇಗಿದೆ ಈ ಸಿನಿಮಾ: ‘ಯುವ ಮನಸ್ಸುಗಳಿಗೊಂದು ‘ಪವರ್ ಫುಲ್’ ಮೆಸೇಜ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ZEBRA Movie: ಜೀಬ್ರಾ ಮೇಲೆ ಡಾಲಿ ಕಣ್ಣು
Drone Prathap: ಸಿನಿಮಾರಂಗಕ್ಕೆ ಡ್ರೋನ್ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.