ಸುನಿ ಹೇಳಿದ ಸಖತ್ ಸ್ಟೋರಿ
Team Udayavani, Mar 27, 2020, 7:12 PM IST
“ಏನ್ ಸಖತ್ ಗುರು ಅವ್ನು….’ – ಸಿನಿಮಾ ನೋಡಿ ಹೊರಬಂದವರು ಹೀಗೆ ಹೇಳಬೇಕು. ಅಂಥದ್ದೊಂದು ಸಿನಿಮಾ ಕಟ್ಟಿಕೊಡುವ ನಿಟ್ಟಿನಲ್ಲೇ ಕೆಲಸ ಮಾಡುತ್ತಿದ್ದೇನೆ. ಹೀಗೆ ಹೇಳುತ್ತಾ ಹೋದರು ನಿರ್ದೇಶಕ “ಸಿಂಪಲ್’ ಸುನಿ. ಅವರು ಹೇಳಿಕೊಂಡಿದ್ದು ಗಣೇಶ್ ಅಭಿನಯದ “ಸಖತ್’ ಬಗ್ಗೆ. “ಚಮಕ್’ ಚಿತ್ರದ ಬಳಿಕ ಸುನಿ ಹಾಗು ಗಣೇಶ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಚಿತ್ರವಿದು. ಆ ಕುರಿತು ನಿರ್ದೇಶಕ ವಿವರ ಕೊಟ್ಟಿದ್ದು ಇಷ್ಟು.
“ಈ ಹಿಂದೆ ನನ್ನ ಮತ್ತು ಗಣೇಶ್ ಕಾಂಬಿನೇಷನ್‌ನಲ್ಲಿ “ಚಮಕ್’ ಸಿನಿಮಾ ಬಂದಿತ್ತು. ಅದು ಸಕ್ಸಸ್ ಕೂಡ ಆಗಿತ್ತು. ಈಗ ಅದೇ ಸಕ್ಸಸ್ ಫಾರ್ಮುಲ ಇಟ್ಟುಕೊಂಡೇ ಬಂದಿದ್ದೇನೆ. ಸ್ಕ್ರಿಪ್ಟ್ “ಸಖತ್’ ಆಗಿ ಮೂಡಿಬಂದಿದೆ. ಇದೊಂದು ಇಂಟ್ರೆಸ್ಟಿಂಗ್ ರಿಯಾಲಿಟಿ ಶೋವೊಂದರ ಕಥಾಹಂದರ ಹೊಂದಿದೆ. ಒಂದು ರೀತಿಯ ಕಾಮಿಡಿ ಥ್ರಿಲ್ಲರ್ ಎನ್ನಬಹುದು. ಸಿನಿಮಾ ತುಂಬ ಸಾಕಷ್ಟು ಟ್ವಿಸ್ಟ್‌ಗಳೇ ಇವೆ. ಅದೇ ಇಲ್ಲಿರುವ ಹೈಲೈಟ್. ರಿಯಾಲಿಟಿ ಶೋ ಹಾಗು ಕೋರ್ಟ್‌ವೊಂದರ ಡ್ರಾಮಾ ಚಿತ್ರದ ಇನ್ನೊಂದು ವಿಶೇಷ. ನನ್ನ ಹಿಂದಿನ “ಆಪರೇಷನ್ ಅಲಮೇಲಮ್ಮ’ ಸಿನಿಮಾ ನಂತರ ಮಾಡುತ್ತಿರುವ ಕಾಮಿಡಿ ಜಾನರ್ ಚಿತ್ರವಿದು. ಇಲ್ಲಿ ಗಣೇಶ್ ಅವರಿಗೆ ಇಬ್ಬರು ನಾಯಕಿಯರಿದ್ದಾರೆ. ಆ ಪೈಕಿ ಸುರಭಿ ಆಯ್ಕೆಯಾಗಿದ್ದು, ಇನ್ನೊಬ್ಬ ನಾಯಕಿಯ ಹುಡುಕಾಟ ನಡೆಯುತ್ತಿದೆ.
ಇಬ್ಬರು ನಾಯಕಿಯರು ಅಂದಮೇಲೆ ಇದೊಂದು ತ್ರಿಕೋನ ಪ್ರೇಮಕಥೆ ಇರಬಹುದಾ ಎಂಬ ಪ್ರಶ್ನೆ ಕಾಡುತ್ತದೆ. ಇದು ತ್ರಿಕೋನ ಪ್ರೇಮಕಥೆ ಹೊಂದಿದ್ದು, ಪಕ್ಕಾ ಸ್ವಮೇಕ್ ಕಥೆ. ಕಥೆ, ಚಿತ್ರಕಥೆ ಜೊತೆಗೆ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದೇನೆ. “ಸಖತ್’ಗೆ ಟಾರ್ಗೆಟ್ ಆಡಿಯನ್ಸ್ ಅಂತೇನೂ ಇಲ್ಲ. ಹೊಸತನ ಬಯಸೋರಿಗೆ, ಕಾಮಿಡಿ, ಥ್ರಿಲ್ಲರ್ ಇಷ್ಟಪಡೋರಿಗೆ, ಯೂಥ್ಸ್ಗೆ ಹೇಳಿಮಾಡಿಸಿದ ಸಿನಿಮಾ. ಮಾಸ್ ಬಿಟ್ಟು ಎಲ್ಲಾ ಆಡಿಯನ್ಸ್ ನೋಡಬಹುದಾದ ಚಿತ್ರವಿದು’ ಎಂದು ವಿವರ ಕೊಡುತ್ತಾರೆ ಸುನಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.