ಒಂದೇ ಚಿತ್ರ 3 ಭಾಷೆಯಲ್ಲಿ
Team Udayavani, Mar 30, 2018, 8:15 AM IST
ಚಿತ್ರದ ಹೆಸರು “3 ಗಂಟೆ’. ಇದು 3 ಭಾಷೆಯಲ್ಲಿ ತಯಾರಾಗುತ್ತಿರುವ ಚಿತ್ರ. ಇಲ್ಲಿ ನಡೆಯುವ ಕೆಲವು ಕೆಟ್ಟ ಘಟನೆಗಳಿಗೆ ಆ 3 ಗಂಟೆಯೇ ಕಾರಣ. ಇಲ್ಲಿ ಎಲ್ಲದ್ದಕ್ಕೂ “3′ ಎಂಬುದು ಕಾರಣವಾದ್ದರಿಂದ, ಚಿತ್ರತಂಡ ಕೂಡ ತನ್ನ ಮೊದಲ ಗೋಷ್ಠಿಯನ್ನೂ ಸಹ ಮಧ್ಯಾಹ್ನ 3 ಗಂಟೆಯಲ್ಲೇ ನಡೆಸಬೇಕು ಎಂಬ ಉದ್ದೇಶ ಹೊಂದಿತ್ತು. ಆದರೆ, “ಟೈಮ್’ ಒಂದೇ ಸಮ ಇರೋದಿಲ್ಲ. ಹಾಗಾಗಿ, ಒಂದು ಗಂಟೆ ತಡವಾಗಿಯೇ ಮಾತುಕತೆ ಶುರುವಾಯಿತು. ಅಂದಹಾಗೆ, ಹೊಸಬರೇ ಸೇರಿ ಮಾಡಿದ ಚಿತ್ರವಿದು. “3 ಗಂಟೆ’ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಅಂದಿನ ವಿಶೇಷ. ನಿರ್ದೇಶಕ ವಿಜಯಪ್ರಸಾದ್ ಅವರು ಮೋಷನ್ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಇದು ಕನ್ನಡ, ಹಿಂದಿ ಮತ್ತು ಗುಜರಾತ್ ಭಾಷೆಯಲ್ಲಿ ತಯಾರಾಗುತ್ತಿದೆ. ಈ ಚಿತ್ರದ ಮೂಲಕ ಯತೀಶ್ ನಿರ್ದೇಶಕರಾಗುತ್ತಿದ್ದಾರೆ. ಈ ಹಿಂದೆ ಅವರು ಕಿರುಚಿತ್ರ ನಿರ್ದೇಶನ ಮಾಡಿದ್ದರು. ಕಳೆದ ನಾಲ್ಕು ವರ್ಷಗಳಿಂದಲೂ ಕಿರುಚಿತ್ರ ಮಾಡಿಕೊಂಡು ಬಂದಿದ್ದ ಅವರಿಗೆ ಸಿನಿಮಾ ಮಾಡುವ ಆಸೆ ಚಿಗುರಿತು. ಒಂದು ಹಾರರ್, ಥ್ರಿಲ್ಲರ್ ಹಾಗು ಸಸ್ಪೆನ್ಸ್ ಅಂಶಗಳನ್ನಿಟ್ಟುಕೊಂಡು ಚಿತ್ರ ಮಾಡುವ ಯೋಚನೆ ಮಾಡಿ, “3 ಗಂಟೆ’ ಚಿತ್ರ ಮಾಡಿದ್ದಾರಂತೆ. ಚಿತ್ರದಲ್ಲಿ 3 ಗಂಟೆಯಲ್ಲೇ ಕೆಲ ಕೆಟ್ಟ ಘಟನೆಗಳು ನಡೆಯುತ್ತವೆ. ಅದು ಯಾಕೆ, ಏನು ಎತ್ತ ಎಂಬುದನ್ನು ತುಂಬಾ ಹೊಸತನದಿಂದ ತೋರಿಸಿದ್ದಾರಂತೆ. ಐದು ಹಂತಗಳಲ್ಲಿ ಬೆಂಗಳೂರು ಸೇರಿದಂತೆ ಇತರೆಡೆ ಚಿತ್ರೀಕರಿಸುವ ಯೋಚನೆ ನಿರ್ದೇಶಕ ಯತೀಶ್ ಅವರದು.
ಶ್ರೀಕಾಂತ್ ಗಣೇಶ್ ಈ ಚಿತ್ರದ ಮೂಲಕ ಹೀರೋ ಆಗಿದ್ದಾರೆ. ಅವರ ಕೆಲಸದಲ್ಲಿ ತೊಂದರೆಗಳು ಎದುರಾದಾಗ, ಅದನ್ನು ಹೇಗೆಲ್ಲಾ ನಿಭಾಯಿಸಲು ಹೋರಾಡುತ್ತಾರೆ ಎಂಬ ಪಾತ್ರವನ್ನು ಅವರು ನಿರ್ವಹಿಸುತ್ತಿದ್ದಾರಂತೆ. ಇನ್ನು, ಈ ಚಿತ್ರಕ್ಕೆ ಜ್ಞಾನೇಶ್ವರಿ ಕಂಡ್ರೇಗುಲ ಮತ್ತು ಅದಿತಿ ಮ್ಯಾಕಲ್ ನಾಯಕಿಯರಾಗಿ ನಟಿಸುತ್ತಿದ್ದಾರೆ. ಬೇಬಿ ಝೋನ್ನಿ ಇತರರು ಕೂಡ ಇಲ್ಲಿ ನಟಿಸಿದ್ದಾರೆ. ಅದ್ವಿಕ್ ಶೆಟ್ಟಿ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಪ್ರತಾಪ್ ಭಟ್ ಸಾಹಿತ್ಯವಿದೆ. ಈ ಚಿತ್ರಕ್ಕೆ ಗುಜರಾತ್‌ನ ಜಾಕಿ ಪಟೇಲ್ ನಿರ್ಮಾಪಕರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.