ಯೆಸ್, ನಾರಾಯಣ್ ಸಿನ್ಮಾ ಮಾಡ್ತಿದ್ದಾರೆ…
Team Udayavani, Dec 11, 2020, 6:10 PM IST
ಹಿರಿಯ ನಿರ್ದೇಶಕ ಎಸ್.ನಾರಾಯಣ್ ಸಿನಿಮಾ ನಿರ್ದೇಶನ ಮಾಡದೇ ಒಂದಷ್ಟು ಗ್ಯಾಪ್ ಆಗಿತ್ತು. “ಪಂಟ’ ಚಿತ್ರದ ನಂತರ ಎಸ್.ನಾರಾಯಣ್ ನಿರ್ದೇಶನದ ಯಾವ ಚಿತ್ರವೂ ತೆರೆಕಂಡಿರಲಿಲ್ಲ. ಈಗ ನಾರಾಯಣ್ ಹೊಸ ಹುರುಪಿನೊಂದಿಗೆ ರೆಡಿಯಾಗಿದ್ದಾರೆ. ಅದು ಅವರ ಕನಸಿನ ಸಿನಿಮಾಕ್ಕಾಗಿ.
ಹೌದು, ಒಂದೊಳ್ಳೆಯಕಥೆ ಮಾಡಿಕೊಂಡು ಹೊಸ ವರ್ಷದಲ್ಲಿ ಅಖಾಡಕ್ಕೆ ಇಳಿಯಲು ನಾರಾಯಣ್ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ. ಅವರ ನಿರ್ದೇಶನದ ಹೊಸ ಸಿನಿಮಾ ಹೊಸ ವರ್ಷದ ಮೊದಲ ದಿನಅಂದರೆ ಜನವರಿ 1 ರಂದು ಸೆಟ್ಟೇರಲಿದೆ. ಎಲ್ಲಾ ಓಕೆ, ಚಿತ್ರದ ನಾಯಕ, ನಾಯಕಿ ಯಾರು,ಕಥೆ, ಟೈಟಲ್ ಏನು ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಆದರೆ, ನಾರಾಯಣ್ ಈ ಪ್ರಶ್ನೆಗೆ ಈಗಲೇ ಉತ್ತರಿಸುವುದಿಲ್ಲ. “ಎಲ್ಲವೂ ಆಯ್ಕೆ ಪ್ರಕ್ರಿಯೆಯಲ್ಲಿದೆ’ ಎಂದಷ್ಟೇ ಹೇಳುತ್ತಾರೆ.
ಆದರೆ, ಇದೊಂದು ಹೊಸ ಬಗೆಯ ಕಥೆಯಾಗಿದ್ದು, ನಾರಾಯಣ್ ಅವರ ಈ ಹಿಂದಿನ ಸಿನಿಮಾಗಳಿಗಿಂತ ಭಿನ್ನ ವಾಗಿರುತ್ತದೆಯಂತೆ.ಈ ಚಿತ್ರದ ಮತ್ತೂಂದು ವಿಶೇಷವೆಂದರೆ, ಬರೋಬ್ಬರಿ 86 ಕಲಾವಿದರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅವರ್ಯಾರು, ಅವರ ಪಾತ್ರಗಳೇನು ಎಂಬ ವಿವರವನ್ನು ನಾರಾಯಣ್ ಈಗಲೇ ಬಿಟ್ಟುಕೊಡುವುದಿಲ್ಲ. ಇಷ್ಟೇ ಈ ಚಿತ್ರದ ಮತ್ತೂಂದು ಹೈಲೈಟ್ ಎಂದರೆ 62 ಲೊಕೇಶನ್ ಗಳಲ್ಲಿ ಚಿತ್ರೀಕರಣವಾಗಲಿದೆ. ಅದಕ್ಕೆ ಕಾರಣ ಚಿತ್ರದ ಸಬ್ಜೆಕ್ಟ್.
“ಹೊಸ ವರ್ಷದ ಮೊದಲ ದಿನ ನನ್ನ ಹೊಸ ಸಿನಿಮಾ ಸೆಟ್ಟೇರುತ್ತಿರೋದು ನಿಜ. ಈ ಚಿತ್ರಕ್ಕಾಗಿ ಸಾಕಷ್ಟು ಪೂರ್ವತಯಾರಿ ಮಾಡಿಕೊಂಡಿದ್ದೇನೆ.ಪ್ರತಿಯೊಂದು ಅಂಶಗಳಲ್ಲೂ ಭಿನ್ನತೆ ಕಾಯ್ದುಕೊಳ್ಳಬೇಕೆಂಬ ಕಾರಣಕ್ಕಾಗಿ ಶ್ರಮಿಸುತ್ತಿದ್ದು,ಕಥೆ ತುಂಬಾ ಚೆನ್ನಾಗಿ ಮೂಡಿಬಂದಿದೆ. ಚಿತ್ರದ ಟೈಟಲ್, ಹೀರೋ, ಹೀರೋಯಿನ್ ಹಾಗೂ ಇತರ ತಾರಾಬಳಗದ ಆಯ್ಕೆ ಬಗ್ಗೆ ಶೀಘ್ರದಲ್ಲೇ ತಿಳಿಸುತ್ತೇನೆ’ ಎನ್ನುವುದು ಅವರ ಮಾತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Sandalwood: ಮಾಸ್ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ
Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್ ಕುಮಾರ್
MUST WATCH
ಹೊಸ ಸೇರ್ಪಡೆ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್ ಇದ್ರು: ಫೋಟೋ ಸಾಕ್ಷ್ಯ ಲಭ್ಯ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.