ಮತ್ತೆ ಮತ್ತೆ ಹಾಡುಗಳು!
Team Udayavani, Oct 6, 2017, 11:40 AM IST
ನಟ ಟೆನ್ನಿಸ್ ಕೃಷ್ಣ ಅವರು ನಿರ್ದೇಶಕರಾಗಿರೋದು ಗೊತ್ತೇ ಇದೆ. “ಮತ್ತೆ ಮತ್ತೆ’ ಚಿತ್ರದ ಮೂಲಕ ತಮ್ಮ ನಿರ್ದೇಶಕನ ಕನಸು ನನಸಾಗಿದ್ದು ಗೊತ್ತು. ಈಗಾಗಲೇ ಈ ಚಿತ್ರದ ಚಿತ್ರೀಕರಣ ಶುರುವಾಗಿದೆ. ಆದರೆ, ಈ ಚಿತ್ರದ
ಹೊಸ ವಿಷಯವೆಂದರೆ, ಸಿನಿಮಾ ಚಿತ್ರೀಕರಣದಲ್ಲಿರುವಾಗಲೇ, ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದೆ ಚಿತ್ರತಂಡ. ಸಾಮಾನ್ಯವಾಗಿ ಸಿನಿಮಾ ಶೂಟಿಂಗ್ ಮುಗಿದ ಬಳಿಕ ಆಡಿಯೋ ಸಿಡಿ ಬಿಡುಗಡೆ ಮಾಡುವುದು ವಾಡಿಕೆ. ಆದರೆ, ಈ ಚಿತ್ರತಂಡ, ಹಾಡುಗಳನ್ನು ಮೊದಲೇ ಬಿಡುಗಡೆಗೊಳಿಸಿ, ಚಿತ್ರದ ಪ್ರಚಾರ ಮಾಡುವ ಹೊಸ ಯೋಚನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಅಂದು ಪ್ರಕಾಶ್ ಕೋಳಿವಾಡ ಹಾಗೂ ಮಮತಾ ಇಬ್ಬರೂ ಆಡಿಯೋ ಸಿಡಿ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದರು.
ಇನ್ನೂ ಒಂದು ವಿಶೇಷವೆಂದರೆ, ನಿರ್ಮಾಪಕ ಅರುಣ್ ಹೊಸಕೊಪ್ಪ ಅವರು, ಈ ಚಿತ್ರದ ಆಡಿಯೋ ಸಿಡಿಗೆ ನೂರು ರುಪಾಯಿ ಬೆಲೆ ನಿಗದಿಪಡಿಸಿದ್ದಾರೆ! ಆಡಿಯೋ ಸಿಡಿ ಖರೀದಿಸುವವರೇ ಇಲ್ಲದ ಸಮಯದಲ್ಲಿ, ನೂರು ರುಪಾಯಿ ಕೊಟ್ಟು ಜನ ಆಡಿಯೋ ಸಿಡಿ ಪಡೆಯುತ್ತಾರಾ? ಈ ಪ್ರಶ್ನೆಗೆ, “ನಮ್ಮ ಟೀಮ್ ಹಾಗು ಆಪ್ತವಲಯದವರು ಕೊಂಡರೆ ಸಾಕು, ಮೇಲಾಗಿ ಮಾರ್ಕೆಟಿಂಗ್ ಮಾಡಿ ಎಷ್ಟಾಗುತ್ತೋ ಅಷ್ಟು ಸಿಡಿ ಸೇಲ್ ಮಾಡುವ ಮೂಲಕ ಪ್ರಚಾರ ಮಾಡುತ್ತೇವೆ ಅಂತ ಹೇಳಿ ನಿರೂಪಣೆ ಮಾಡೋಕೆ ನಿಂತರು.
ಸಿನಿಮಾ ತಂಡವನ್ನು ಪರಿಚಯ ಮಾಡಿಕೊಡುತ್ತಲೇ ಒಬ್ಬೊಬ್ಬರಿಗೆ ಮೈಕ್ ಕೊಡುತ್ತಾ ಹೋದರು ಅರುಣ್ ಹೊಸಕೊಪ್ಪ. ಅದರಂತೆ ಮೊದಲು ಟೆನ್ನಿಸ್ ಕೃಷ್ಣ ಮಾತಿಗೆ ನಿಂತರು. “ನಿರ್ದೇಶಕ ಆಗಬೇಕು ಅಂತ ಇಲ್ಲಿಗೆ ಬಂದೆ. ಆಗಿದ್ದು, ನಟ. ಈಗ ಆ ಅವಕಾಶ ಸಿಕ್ಕಿದೆ. ಇಲ್ಲಿ ಹೊಸಬರಿಗೆ ಅವಕಾಶ ಕಲ್ಪಿಸಲಾಗಿದೆ. ಮೊದಲು ವರ್ಕ್‌ಶಾಪ್ ಮಾಡಿಸಿ, ಕ್ಯಾಮೆರಾ ಮುಂದೆ ನಿಲ್ಲಿಸಿದ್ದೇನೆ. ಇನ್ನು, ಹಿರಿಯ ಕಲಾವಿದರೂ ಇಲ್ಲಿ ನಟಿಸುತ್ತಿದ್ದಾರೆ. ಅಶಕ್ತ
ಕಲಾವಿದರಿಗೆ ಸಿನಿಮಾದಿಂದ ಬಂದ ಲಾಭದ ಶೇ.25 ರಷ್ಟು ಹಣವನ್ನು ಕೊಡಲು ತೀರ್ಮಾನಿಸಿದ್ದೇವೆ’ ಎಂದರು ಟೆನ್ನಿಸ್. ಈ ಸಿನಿಮಾಗೆ ಇಮಿ¤ಯಾಜ್ ಸುಲ್ತಾನ್ ಸಂಗೀತ ನೀಡಿದ್ದಾರೆ.
ಗಾಯಕರಾಗಬೇಕು ಅಂತ ಅವರು ಈ ಇಂಡಸ್ಟ್ರಿಗೆ ಬಂದರೆ, ಅವರನ್ನು ಟೆನ್ನಿಸ್ ಕೃಷ್ಣ ಸಂಗೀತ ನಿರ್ದೇಶಕರಾಗುವ ಅವಕಾಶ ಮಾಡಿಕೊಟ್ಟರಂತೆ. ಅವರಿಲ್ಲಿ ಐದು ಹಾಡುಗಳನ್ನು ಕೊಟ್ಟಿದ್ದಾರೆ. ಬಹುತೇಕ ಹೊಸ ಗಾಯಕರಿಗೆ ಹಾಡುವ
ಅವಕಾಶ ಕೊಟ್ಟಿದ್ದಾಗಿ ಹೇಳಿಕೊಂಡರು ಇಮಿ¤ಯಾಜ್ ಸುಲ್ತಾನ್. ಅಂದು ಹಿರಿಯ ಕಲಾವಿದ ಉಮೇಶ್, ಇನ್ನೊಬ್ಬ ನಿರ್ಮಾಪಕ ಅಚ್ಯುತ್ ಗೌಡ, ಬ್ಯಾಂಕ್ ಜನಾರ್ದನ್, ರೇಖಾ ದಾಸ್ ಮಾತನಾಡಿದರು. ಉಳಿದಂತೆ ಚಿತ್ರದಲ್ಲಿ ಅಂಬರೀಷ್ ಸಾರಂಗಿ, ನವೀನ್, ಅಶ್ವಿನಿ, ಹೇಮಾಶ್ರೀ, ತನ್ಮಯಿ, ವಿನಯ್ ಚಂದ್ರು ಇತರರು ನಟಿಸಿದ್ದಾರೆ. ಚಿತ್ರಕ್ಕೆ ಆನಂದ್ ಕ್ಯಾಮೆರಾ ಹಿಡಿದರೆ, ಕಿಶೋರ್ ಸಂಭಾಷಣೆ ಬರೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Sullia: ಜಾಕ್‌ವೆಲ್ ಹೂಳು ತೆಗೆದ ಬಳಿಕ ನಾಗಪಟ್ಟಣ ಡ್ಯಾಂಗೆ ಗೇಟ್
Arrested: ಪೈಂಟ್ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ
Dharmasthala: ದೇವರ ದರ್ಶನ ಇನ್ನಷ್ಟು ಸುಲಲಿತ
ISRO ಮುಂದೆ ಪ್ರಮುಖ ಕಾರ್ಯ ಯೋಜನೆಗಳಿವೆ: ನೂತನ ಅಧ್ಯಕ್ಷ ವಿ.ನಾರಾಯಣನ್
Mollywood: ನಟಿ ಹನಿ ರೋಸ್ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.