ಮಗನ ಜಯ; ಅಪ್ಪನ ಹಾದಿ
Team Udayavani, Aug 31, 2018, 6:00 AM IST
ಕನ್ನಡದಲ್ಲಿ ಕಿರುಚಿತ್ರಗಳ ಕಲರವ ಕೊಂಚ ಜಾಸ್ತಿಯೇ ಇದೆ. ಸಿನಿಮಾ ನಿರ್ದೇಶಿಸುವ ಕನಸು ಹೊತ್ತು ಬರುವ ಪ್ರತಿಭಾವಂತರು, ಮೊದಲು ಕಿರುಚಿತ್ರಗಳಿಗೆ ಮೊರೆ ಹೋಗುತ್ತಿದ್ದಾರೆ. ಆ ನಂತರ ಚಿತ್ರ ನಿರ್ದೇಶಕನಕ್ಕೆ ಕೈಹಾಕುತ್ತಿದ್ದಾರೆ. “ವಿದಾತೃ’ ಕಿರುಚಿತ್ರ ನಿರ್ದೇಶಿಸಿರುವ ಸಂತು ಕೂಡ ತಮ್ಮ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ. ಇತ್ತೀಚೆಗೆ ಕಿರುಚಿತ್ರ ಪ್ರದರ್ಶನ ಏರ್ಪಡಿಸಿದ್ದ ಸಂತು, ತಮ್ಮ ಮೊದಲ ಪ್ರಯತ್ನ ಕುರಿತು ಹೇಳಿದ್ದಿಷ್ಟು.
“ಇದು 27 ನಿಮಿಷದ ಕಿರುಚಿತ್ರ. ನನ್ನ ಕನಸಿಗೆ ಬಣ್ಣ ತುಂಬಿದ್ದು ನಾಯಕ ವಿವೇಕ್ ಸಿಂಹ. ನಾನು ರಂಗಭೂಮಿಯಲ್ಲಿ ಕೆಲಸ ಮಾಡಿಕೊಂಡಿದ್ದೆ. ಎಲ್ಲೋ ಒಂದು ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದವನು ಆ ಕೆಲಸ ಬಿಟ್ಟು ಬಂದೆ. ನನ್ನ ಮುಂದೆ ಸಿನಿಮಾ ಕಾಣುತ್ತಿತ್ತು. ಒಂದು ಚಿತ್ರ ಮಾಡಬೇಕು ಎಂಬ ಆಸೆ ಚಿಗುರಿತು. ಒಮ್ಮೆ ವಿವೇಕ್ ಸಿಂಹ ಅವರನ್ನು ರಿಯಾಲಿಟಿ ಶೋ ಒಂದರಲ್ಲಿ ಭೇಟಿಯಾದೆ. ಆಗಲೇ ನನಗೆ, ಕಥೆ ಬರೆಯಬೇಕು ಎಂಬ ಯೋಚನೆ ಬಂತು. ಹಾಗೊಂದು ಕಥೆ ಮಾಡಿಕೊಂಡು ವಿವೇಕ್ ಬಳಿ ಹೋದೆ. ಹಿಂದೆ ಮುಂದೆ ನೋಡದೆ, ಒಪ್ಪಿ ಪ್ರೋತ್ಸಾಹಿಸಿದ್ದಕ್ಕೆ “ವಿದಾತೃ’ ಕಿರುಚಿತ್ರವಾಗಿದೆ’ ಎಂದು ವಿವರ ಕೊಟ್ಟರು ಸಂತು. “ಇದು ಅಪ್ಪ-ಮಗನ ಸಂಬಂಧವಿರುವ ಚಿತ್ರ. ಮಗನಿಗೆ ನಿರ್ದೇಶಕನಾಗುವ ಆಸೆ. ಆದರೆ, ಅದು ಸಾಧ್ಯವಾಗಲ್ಲ. ಮನೆಯಲ್ಲಿ ಹೇಳಿಕೊಳ್ಳುವ ಸ್ಥಿತಿ ಇರಲ್ಲ. ಆದರೂ, ಅವನಿಗೆ ನಿರ್ದೇಶಕ ಆಗುವ ಕನಸು. ಅಪ್ಪನ ಅನಾರೋಗ್ಯ ಒಂದು ಕಡೆ, ಕೆಲಸವಿಲ್ಲದೆ ಅಲೆದದಾಡುವ ಮಗ ಇನ್ನೊಂದು ಕಡೆ, ಓದುವ ತಂಗಿ ಮತ್ತೂಂದು ಕಡೆ. ಸದಾ ಯಾವುದಾದರೊಂದು ಕೆಲಸ ಮಾಡೋ ಎಂದು ಹೇಳುವ ಅಮ್ಮ ಮಗದೊಂದು ಕಡೆ. ಇವಿಷ್ಟು ಅಂಶ ಇಟ್ಟುಕೊಂಡು ಕಥೆ ಬರೆದು ಮಾಡಿದ ಚಿತ್ರವಿದು. ಎಲ್ಲರ ಸಹಕಾರ ಇದ್ದುದರಿಂದಲೇ “ವಿದಾತ್ರು’ ನಿಮ್ಮ ಮುಂದೆ ಬರಲು ಸಾಧ್ಯವಾಯ್ತು’ ಅಂದರು ನಿರ್ದೇಶಕ ಸಂತು.
ವಿವೇಕ್ ಸಿಂಹ ಅವರಿಗೆ ಎಲ್ಲರ ಪ್ರೋತ್ಸಾಹದಿಂದ ಇಂಥದ್ದೊಂದು ಕಿರುಚಿತ್ರ ಮಾಡಲು ಸಾಧ್ಯವಾಯ್ತಂತೆ. ಯಾವುದೇ ಸಿನಿಮಾಗೆ ಕಡಿಮೆ ಇಲ್ಲದಂತೆ, “ಎಲ್ಲೂ ಹೊಂದಾಣಿಕೆ ಮಾಡಿಕೊಳ್ಳದೆ ಚಿತ್ರ ಮಾಡಬೇಕು ಅಂತ ಹೊರಟಾಗ, ಮಧ್ಯೆ ಒಂದು ಕಡೆ ಹಣದ ಸಮಸ್ಯೆ ಎದುರಾಯ್ತು. ಕೊನೆಗೆ, ನವೀನ್ ಎಂಬುವವರು ಸಾಥ್ ನೀಡಿ ಪ್ರೋತ್ಸಾಹಿಸಿದರು. ಈ ಚಿತ್ರಕ್ಕೆ ರಾಘವೇಂದ್ರ, ಮಧು, ಗೌತಮ್, ಗೋವಿಂದ್, ಹೃಷಿಕೇಶ್, ರಕ್ಷಿತ್, ಸುನೀಲ್ ಕುಲಕರ್ಣಿ,ನಿಸರ್ಗ ಎಲ್ಲರ ಶ್ರಮ ಚಿತ್ರಕ್ಕಿದೆ’ ಎಂದರು ವಿವೇಕ್.
ತೇಜಸ್ವಿನಿ ಶೇಖರ್ ನಾಯಕಿಯಾಗಿ ನಟಿಸಿದರೆ, ನಾಗೇಂದ್ರ ಶಾ ಮತ್ತು ಪದ್ಮಕಲಾ ಅಪ್ಪ-ಅಮ್ಮನಾಗಿ ಕಾಣಿಸಿಕೊಂಡಿದ್ದಾರೆ. ನಿಸರ್ಗ, ಗಿರೀಶ್, ವಿನೋದ್, ಜ್ಯೋತಿ ನಗರ್ ಪುರುಷೋತ್ತಮ್, ರಾಘವೇಂದ್ರ, ಸುನೀಲ್‌ಕುಲಕರ್ಣಿ ಅಭಿನಯವಿದೆ. ಚಿತ್ರಕ್ಕೆ ಕಾರ್ತಿಕ್ ಶರ್ಮ ಅವರು “ಅಪ್ಪ ಎಂಬ ಆಕಾಶ’ ಎಂಬ ಹಾಡಿಗೆ ಸಂಗೀತ ನೀಡಿದ್ದಾರೆ. ಆಶ್ಲೇ ಮೆಂಡೋಂಸಾ ಹಿನ್ನೆಲೆ ಸಂಗೀತವಿದೆ. ವಿಶ್ವಾಸ್ ಕೌಂಡಿನ್ಯ ಛಾಯಾಗ್ರಹಣವಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.