![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Apr 29, 2022, 11:52 AM IST
ಒಂದು ಕಾಲದಲ್ಲಿ ಭಾರತೀಯ ಸಿನಿ ದೊಡ್ಡಣ್ಣ ಎನಿಸಿಕೊಂಡಿದ್ದ ಬಾಲಿವುಡ್‌ನಲ್ಲಿ ಈಗ ಸಣ್ಣದೊಂದು ಭಯ ಶುರುವಾಗಿದೆ. ಆ ಭಯ ಉರಿಯಾಗಿ ಪರಿವರ್ತನೆಯಾಗಿದೆ. ಅದರ ಪರಿಣಾಮ ಅಲ್ಲಿನ ಬೇರೆ ಬೇರೆ ನಟರು ಆ ಉರಿಯನ್ನು ಮಾತಿನ ಮೂಲಕ ಕಾರುತ್ತಿದ್ದಾರೆ!
ಅಷ್ಟಕ್ಕೂ ಈ ಭಯ, ಉರಿ, ವ್ಯಂಗ್ಯದ ಮಾತುಗಳಿಗೆ ಕಾರಣವೇನೆಂದು ನೀವು ಕೇಳಿದರೆ ಅದಕ್ಕೆ ಸಿಗುವ ಉತ್ತರ ಸೌತ್ ಸಿನಿಮಾಗಳ ಭರ್ಜರಿ ಗೆಲುವು. ದಕ್ಷಿಣ ಭಾರತೀಯ ಚಿತ್ರರಂಗಗಳಿಂದ ತಯಾರಾಗುತ್ತಿರುವ ಸಿನಿಮಾಗಳು ಈಗ ಎಲ್ಲಾ ಕಡೆ ತಲುಪುತ್ತಿವೆ. ಅದರಲ್ಲೂ ಬಾಲಿವುಡ್ ಸಿನಿಮಾಗಳ ಭದ್ರ ಕೋಟೆಯಾಗಿದ್ದ ಉತ್ತರ ಭಾರತದಲ್ಲಿ ಸೌತ್ ಸಿನಿಮಾಗಳು ಕೋಟಿ ಕೋಟಿ ಬಾಚಿಕೊಳ್ಳುತ್ತಿವೆ. ಇದು ಬಾಲಿವುಡ್ ಮಂದಿಯ ಉರಿಗೆ ಕಾರಣವಾಗಿದೆ. ಅದನ್ನು ಮಾತಿನ ಮೂಲಕ, ಟಾಂಗ್ ಕೊಡುವ ಮೂಲಕ ಅಲ್ಲಿನ ನಟರು ಹೊರ ಹಾಕುತ್ತಿದ್ದಾರೆ.
ಸದ್ಯ ಹಿಂದಿ ರಾಷ್ಟ್ರೀಯ ಭಾಷೆಯಲ್ಲ ಎಂದು ಕಿಚ್ಚ ಸುದೀಪ್ ಹೇಳಿರುವ ಮಾತಿಗೆ ಅಜೇಯ್ ದೇವಗನ್ ಮಾಡಿರುವ ಟ್ವೀಟ್‌ವೊಂದು ಉದಾಹರಣೆಯಾದರೆ, ಕೆಲ ದಿನಗಳ ಹಿಂದಷ್ಟೇ ನವಾಜುದ್ದೀನ್ ಸಿದ್ಧಿಕಿ ಕೂಡಾ ಸೌತ್ ಸಿನಿಮಾಗಳನ್ನು ನೋಡಿಲ್ಲ, ನೋಡೋದು ಇಲ್ಲ. ಒಂದು ಸಿನಿಮಾದ ಗೆಲುವನ್ನು ಜನ ಬೇಗನೇ ಮರೆತು ಬಿಡುತ್ತಾರೆ ಎಂದು ಹೇಳಿಕೆ ನೀಡಿದ್ದರು. ಅದಕ್ಕೂ ಹಿಂದೆ ಜಾನ್ ಅಬ್ರಹಾಂ ಕೂಡಾ ಸೌತ್ ಸಿನಿಮಾಗಳ ಬಗ್ಗೆ ಕೇವಲವಾಗಿ ಮಾತನಾಡಿದ್ದರು. ಆದರೆ, ಸೌತ್ ಸಿನಿ ದುನಿಯಾ ಮಾತ್ರ ಮಾತಲ್ಲಿ ಉತ್ತರ ಕೊಡದೇ ಕಾರ್ಯದಲ್ಲಿ ಮಾಡಿ ತೋರಿಸಿದೆ
ಬಿಟೌನ್ ದಾಖಲೆ ಉಡೀಸ್
ಒಂದು ಸಮಯದಲ್ಲಿ ದಕ್ಷಿಣ ಭಾರತೀಯ ಚಿತ್ರರಂಗವೆಂದರೆ ಮೂಗು ಮುರಿಯುತ್ತಿದ್ದ ಮಂದಿ ಇವತ್ತು ಸೌತ್ ಸಿನಿಮಾಗಳಿಗೆ ರೆಡ್ ಕಾರ್ಪೆಟ್ ಹಾಕಿ ಕಾಯುತ್ತಿದ್ದಾರೆ. ಬಾಲಿವುಡ್ ಸಿನಿಮಾಗಳು ಮಾಡದ ಕಮಾಲ್ ಅನ್ನು ಈ ಸಿನಿಮಾಗಳು ಮಾಡುತ್ತಿವೆ. ಸದ್ಯ ಸೌತ್ ಫಿಲಂ ಇಂಡಸ್ಟ್ರಿ ಎನಿಸಿಕೊಂಡಿರುವ ತೆಲುಗು, ಕನ್ನಡ, ತಮಿಳು, ಮಲಯಾಳಂ .. ಈ ಚಿತ್ರರಂಗಗಳಿಂದ ಬಿಗ್ ಬಜೆಟ್ ಸಿನಿಮಾಗಳು ತಯಾರಾಗಿ, ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸುತ್ತಿವೆ. ಕೋವಿಡ್‌ನ ಹೊಡೆತಕ್ಕೆ ಎಲ್ಲಾ ಚಿತ್ರರಂಗಗಳು ನಲುಗಿ ಹೋಗಿದ್ದವು. ಆದರೆ, ಕೋವಿಡ್ ಬಳಿಕ ಬೇಗನೇ ಚೇತರಿಸಿಕೊಂಡ ಚಿತ್ರರಂಗವೆಂದರೆ ಅದು ಸೌತ್ ಫಿಲಂ ಇಂಡಸ್ಟ್ರಿ. ಬಾಲಿವುಡ್ ಒಂದು ಗೆಲುವಿಗೆ ಇನ್ನೂ ಎದುರು ನೋಡುತ್ತಲೇ ಇದೆ. ಆದರೆ, ದಕ್ಷಿಣ ಭಾರತದಿಂದ ತಯಾರಾದ ಸಾಲು ಸಾಲು ಚಿತ್ರಗಳು ಸಿಕ್ಸರ್ ಬಾರಿಸುತ್ತಾ ಮುಂದೆ ಸಾಗುತ್ತಲೇ ಇದೆ.
ಇದನ್ನೂ ಓದಿ:‘ಶೋಕಿವಾಲ’ನ ಕಲರ್ ಫುಲ್ ಎಂಟ್ರಿ
ಆ ತರಹದ ಒಂದಷ್ಟು ಸಿನಿಮಾಗಳನ್ನು ಉದಾಹರಿಸೋದಾದರೆ “ಪುಷ್ಪ’, “ಆರ್‌ಆರ್‌ಆರ್’, “ಕೆಜಿಎಫ್-2′ . ಹೀಗೆ ಲೆಕ್ಕ ಹಾಕುತ್ತಾ ಹೋದರೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಈ ಎಲ್ಲಾ ಸಿನಿಮಾಗಳು ಬಾಲಿವುಡ್ ಸಿನಿಮಾಗಳು ಮಾಡಿದ ಎಲ್ಲಾ ದಾಖಲೆಗಳನ್ನು ಪುಡಿಗಟ್ಟಿವೆ. ಇವೆಲ್ಲವನ್ನು ಬಾಲಿವುಡ್ ಮಂದಿಗೆ ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ.
ಸೌತ್ ರೀಮೇಕ್‌ನಲ್ಲಿ ಬಾಲಿವುಡ್ ಮುಂದು
ದಕ್ಷಿಣ ಭಾರತೀಯ ಸಿನಿಮಾದ ಬಗ್ಗೆ ಹಗುರವಾಗಿ ಮಾತನಾಡುವ ಬಾಲಿವುಡ್, ಇಲ್ಲಿ ಹಿಟ್ ಆದ ಸಿನಿಮಾಗಳನ್ನು ರೀಮೇಕ್ ಮಾಡುವಲ್ಲಿ ಸಿಕ್ಕಾಪಟ್ಟೆ ಆಸಕ್ತಿ ತೋರಿಸುತ್ತಿದೆ. ದಕ್ಷಿಣದಲ್ಲಿ ಭಾರತದಲ್ಲಿ ಹಿಟ್ ಆದ ಸಿನಿಮಾಗಳನ್ನು ಹಿಂದಿಗೆ ರೀಮೇಕ್ ಮಾಡಿ, ಅದೆಷ್ಟೋ ಅಲ್ಲಿನ ನಟರು ತಮ್ಮ ಸಿನಿಕೆರಿಯರ್‌ನಲ್ಲಿ ಮರುಜೀವ ಪಡೆದುಕೊಂಡಿದ್ದಾರೆ. ಕಳೆದ 5 ವರ್ಷಗಳಲ್ಲಿ ಬಾಲಿವುಡ್, ದಕ್ಷಿಣ ಭಾರತದ 4 ಪ್ರಮುಖ ಭಾಷೆಗಳ ಶೇ 65ಕ್ಕೂ ಹೆಚ್ಚು ಚಿತ್ರಗಳನ್ನು ರೀಮೇಕ್ ಮಾಡಿದೆ.
ರವಿಪ್ರಕಾಶ್ ರೈ
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.