ಮಾರಿಕೊಂಡವರ ಮಾತು, ದೇವನೂರು ಮೂರು ಕಥೆಗಳು ಒಂದಾದವು…

Team Udayavani, Aug 18, 2017, 6:05 AM IST

mari.jpg

ನಿರ್ದೇಶಕ ಕೆ.ಶಿವರುದ್ರಯ್ಯ ಅವರು “ಮಾರಿಕೊಂಡವರು’ ಎಂಬ ಸಿನಿಮಾ ಮಾಡಿರೋದು ನಿಮಗೆ ಗೊತ್ತೇ ಇದೆ. ಈಗ ಆ ಚಿತ್ರ ಬಿಡುಗಡೆಯಾಗುತ್ತಿದ್ದು, ಈ ವಾರ ತೆರೆ ಕಾಣುತ್ತಿದೆ. “ಮಾರಿಕೊಂಡವರು’ ಚಿತ್ರ ಲೇಖಕ ದೇವನೂರು ಮಹಾದೇವ ಅವರ ಮೂರು ಕಥೆಗಳನ್ನು ಆಧರಿಸಿದ್ದು. “ಮಾರಿಕೊಂಡವರು’, “ಡಾಂಬರು ಬಂದದು’ ಹಾಗೂ “ಗ್ರಸ್ತರು’ ಎಂಬ ಮೂರು ಕಥೆಗಳನ್ನು ಸಂಯೋಜಿಸಿ ಈ ಚಿತ್ರ ಮಾಡಲಾಗಿದೆ. ತುರ್ತು ಪರಿಸ್ಥಿತಿಯ ನಂತರದ ದಿನಗಳಲ್ಲಿ ದೇವನೂರು ಎಂಬ ಕುಗ್ರಾಮದಲ್ಲಿ ನಡೆವ ಪ್ರಸಂಗಗಳನ್ನಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಚಿತ್ರದಲ್ಲಿ ಸುನೀಲ್‌ ಕುಮಾರ್‌, ಸಂಚಾರಿ ವಿಜಯ್‌, ಸೋನು ಗೌಡ, ಸಂಯುಕ್ತಾ ಹೊರನಾಡು, ಸರ್ದಾರ್‌ ಸತ್ಯ ಪ್ರಮುಖ ಪಾತ್ರ ಮಾಡಿದ್ದಾರೆ. 

ಚಿತ್ರ 70ರ ದಶಕದಲ್ಲಿ ನಡೆಯುವುದರಿಂದ ಅದಕ್ಕೆ ಪೂರಕವಾದ ಲೊಕೇಶನ್‌ಗಳಲ್ಲಿ ಚಿತ್ರೀಕರಿಸಲಾಗಿದ್ದು, ಸುಮಾರು 30ಕ್ಕೂ ಹೆಚ್ಚು ಲೊಕೇಶನ್‌ಗಳನ್ನು ಈ ಚಿತ್ರದಲ್ಲಿ ಬಳಸಲಾಗಿದೆಯಂತೆ. ಪಾತ್ರಗಳಿಗೆ ಪೂರಕವಾದ ಕಲಾವಿದರು ಸಿಕ್ಕ ಹಾಗೂ ಕಂಟಿನ್ಯೂಟಿ ಕಾಯ್ದುಕೊಂಡ ಖುಷಿ ನಿರ್ದೇಶಕ ಶಿವರುದ್ರಯ್ಯ ಅವರದು. “ಕಲಾವಿದರ ನಟನೆ ಅವರ ಕಣ್ಣು, ಮುಖದಲ್ಲಿ ವ್ಯಕ್ತವಾಗಬೇಕು. ಆಗ ಪಾತ್ರಕ್ಕೆ ಜೀವ ತುಂಬಲು ಸಾಧ್ಯ. ಈ ಚಿತ್ರದ ಪ್ರತಿ ಕಲಾವಿದರು ಪಾತ್ರವನ್ನು ಜೀವಿಸಿದ್ದಾರೆ’ ಎನ್ನುವುದು ಶಿವರುದ್ರಯ್ಯ ಮಾತು. ಚಿತ್ರವನ್ನು ಕೆಲವೇ ಕೆಲವು ಚಿತ್ರಗಳಲ್ಲಿ ಬಿಡುಗಡೆ ಮಾಡುತ್ತಿದ್ದು, ಹಿರಿಯ ನಿರ್ಮಾಪಕ ಬಿ.ಎನ್‌.ಗಂಗಾಧರ್‌ ಅವರು ರಿಲೀಸ್‌ಗೆ ಸಾಥ್‌ ನೀಡುತ್ತಿದ್ದಾರಂತೆ. ಚಿತ್ರದ ನಿರ್ಮಾಪಕರಾದ ಗುರುರಾಜ್‌ ಹಾಗೂ ವೆಂಕಟೇಶ್‌ ಕೂಡಾ ಸಿನಿಮಾ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. 

ಚಿತ್ರದಲ್ಲಿ ಸರ್ದಾರ್‌ ಸತ್ಯ ಕೂಡಾ ನಟಿಸಿದ್ದಾರೆ. ಅವರಿಗೆ ಶಿವರುದ್ರಯ್ಯ ಜೊತೆ ಕೆಲಸ ಮಾಡಿ ಖುಷಿಯಾಗಿದೆಯಂತೆ. ಅದಕ್ಕೆ ಕಾರಣ ಅವರ ಅಚ್ಚುಕಟ್ಟಾದ ಕೆಲಸ. ಯಾವ ದೃಶ್ಯ ಹೇಗೆ ಮೂಡಿಬರಬೇಕೆಂಬ ಸ್ಪಷ್ಟ ಕಲ್ಪನೆ ಅವರಿಗಿದೆ ಎಂಬುದು ಸತ್ಯ ಮಾತು. ಚಿತ್ರದಲ್ಲಿ ಸೋನು ಗೌಡ, ಶಿಶಿರ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. “ನಿರ್ದೇಶಕ ಶಿವರುದ್ರಯ್ಯ ಅವರು ನಮ್ಮ ತಂದೆಯ ಆಪ್ತರು. ಯಾವ ಪಾತ್ರ ಕೊಟ್ಟರೂ ಒಪ್ಪಿಕೋ ಎಂದರು. ತುಂಬಾ ಒಳ್ಳೆಯ ಪಾತ್ರವೇ ಸಿಕ್ಕಿದೆ. ಪಾತ್ರ ಕೂಡಾ ತುಂಬಾ ಇಷ್ಟವಾಯಿತು’ ಎನ್ನುವುದು ಸೋನು ಮಾತು. ಚಿತ್ರದಲ್ಲಿ ಸಂಯುಕ್ತಾ ಹೊರನಾಡು ಕೂಡಾ ನಟಿಸಿದ್ದು, ಅವರಿಲ್ಲಿ ಲಕ್ಷ್ಮೀ ಎಂಬ ಪಾತ್ರ ಮಾಡಿದ್ದಾರೆ. “ನಿರ್ದೇಶಕರು ಫ್ರೆàಮ್‌ ಟು ಫ್ರೆàಮ್‌ ವಿವರಿಸುತ್ತಿದ್ದರು. ನನ್ನದು ತುಂಬಾ ದ್ವಂದ್ವ ಇರುವ ಪಾತ್ರ. ಬಾಡಿ ಲಾಂಗ್ವೇಜ್‌ನಲ್ಲೇ ಎಲ್ಲವನ್ನು ಹೇಳಬೇಕಿತ್ತು. ಈ ಚಿತ್ರ ಒಂದು ಒಳ್ಳೆಯ ಅನುಭವ ಕೊಟ್ಟಿದ್ದು ಸುಳ್ಳಲ್ಲ’ ಎಂಬುದು ಸಂಯುಕ್ತಾ ಮಾತು. ಚಿತ್ರದಲ್ಲಿ ನಟಿಸಿದ ಮಧುಸೂಧನ್‌ ಕೂಡಾ ತಮ್ಮ ಅನುಭವ ಹಂಚಿಕೊಳ್ಳುವ ಜೊತೆಗೆ ನಿರ್ದೇಶಕರಿಂದ ಮೆಚ್ಚುಗೆ ಕೂಡಾ ಪಡೆದರು. 

ಟಾಪ್ ನ್ಯೂಸ್

Parcel: ಮಹಿಳೆಯ ಮನೆಗೆ ಬಂದ ಪಾರ್ಸೆಲ್ ನಲ್ಲಿತ್ತು ಮೃತದೇಹ… 1.3 ಕೋಟಿ ರೂ.ಗೆ ಬೇಡಿಕೆ

Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ವ್ಯಕ್ತಿಯ ಮೃತದೇಹ… ಮಹಿಳೆಗೆ ಶಾಕ್ !

Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ

Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ

CT Ravi Arrest; ಧೂರ್ತ ಸರ್ಕಾರ ನೀಚತನದ ಕೆಲಸ ಮಾಡಿದೆ: ಆರಗ ಜ್ಞಾನೇಂದ್ರ

CT Ravi Arrest; ಧೂರ್ತ ಸರ್ಕಾರ ನೀಚತನದ ಕೆಲಸ ಮಾಡಿದೆ: ಆರಗ ಜ್ಞಾನೇಂದ್ರ

25-kota

CT Ravi ಬಂಧನ ಪ್ರಕರಣ; ಗೃಹ ಸಚಿವರು ಸ್ಪಷ್ಟನೆ ನೀಡಲಿ: ಕೋಟ

Mandya:ಕನ್ನಡ ಸಾಹಿತ್ಯ ಸಮ್ಮೇಳನ-ಕನ್ನಡ ಸಂಕಷ್ಟದಲ್ಲಿದೆ ಎಂಬುದಕ್ಕೆ ಕಾರಣ ತಿಳಿಯಬೇಕು: ಸಿಎಂ

Mandya:ಕನ್ನಡ ಸಾಹಿತ್ಯ ಸಮ್ಮೇಳನ-ಕನ್ನಡ ಸಂಕಷ್ಟದಲ್ಲಿದೆ ಎಂಬುದಕ್ಕೆ ಕಾರಣ ತಿಳಿಯಬೇಕು: ಸಿಎಂ

Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ

Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ

ಹಿಂದೂ ಮುಖಂಡರು ಮಂದಿರ-ಮಸೀದಿ ವಿವಾದ ಕೆದಕುವುದನ್ನು ನಿಲ್ಲಿಸಬೇಕು: ಮೋಹನ್‌ ಭಾಗ್ವತ್

ಹಿಂದೂ ಮುಖಂಡರು ಮಂದಿರ-ಮಸೀದಿ ವಿವಾದ ಕೆದಕುವುದನ್ನು ನಿಲ್ಲಿಸಬೇಕು: ಮೋಹನ್‌ ಭಾಗ್ವತ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

KD

Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್‌

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

Ayogya 2: ಇಲ್ಲಿ ಎಲ್ಲವೂ ಡಬಲ್‌ ಆಗಿರುತ್ತದೆ…ಇದು ʼಅಯೋಗ್ಯʼನ ಭರವಸೆ

Ayogya 2: ಇಲ್ಲಿ ಎಲ್ಲವೂ ಡಬಲ್‌ ಆಗಿರುತ್ತದೆ…ಇದು ʼಅಯೋಗ್ಯʼನ ಭರವಸೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Parcel: ಮಹಿಳೆಯ ಮನೆಗೆ ಬಂದ ಪಾರ್ಸೆಲ್ ನಲ್ಲಿತ್ತು ಮೃತದೇಹ… 1.3 ಕೋಟಿ ರೂ.ಗೆ ಬೇಡಿಕೆ

Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ವ್ಯಕ್ತಿಯ ಮೃತದೇಹ… ಮಹಿಳೆಗೆ ಶಾಕ್ !

KD

Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್‌

Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ

Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ

CT Ravi Arrest; ಧೂರ್ತ ಸರ್ಕಾರ ನೀಚತನದ ಕೆಲಸ ಮಾಡಿದೆ: ಆರಗ ಜ್ಞಾನೇಂದ್ರ

CT Ravi Arrest; ಧೂರ್ತ ಸರ್ಕಾರ ನೀಚತನದ ಕೆಲಸ ಮಾಡಿದೆ: ಆರಗ ಜ್ಞಾನೇಂದ್ರ

25-kota

CT Ravi ಬಂಧನ ಪ್ರಕರಣ; ಗೃಹ ಸಚಿವರು ಸ್ಪಷ್ಟನೆ ನೀಡಲಿ: ಕೋಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.