ಇಂದಿನಿಂದ ಬಬ್ರೂ ಜರ್ನಿ ಶುರು
ಅಮೆರಿಕಾದಲ್ಲಿ ಚಿತ್ರೀಕರಣ...
Team Udayavani, Dec 6, 2019, 6:10 AM IST
ಕನ್ನಡದಲ್ಲಿ “ಬೆಳದಿಂಗಳ ಬಾಲೆ’ ಎಂದೇ ಕರೆಸಿಕೊಳ್ಳುವ ಸುಮನ್ ನಗರ್‌ಕರ್ ಹೊಸ ಇನ್ನಿಂಗ್ಸ್ ಶುರುಮಾಡಿರುವುದು ಗೊತ್ತೇ ಇದೆ. ನಟನೆ ಜೊತೆಯಲ್ಲಿ ನಿರ್ಮಾಣಕ್ಕೂ ಇಳಿದಿದ್ದು ಗೊತ್ತು. ಅವರ ನಿರ್ಮಾಣದಲ್ಲಿ ತಯಾರಾಗಿರುವ “ಬಬ್ರೂ’ ಇಂದು ಬಿಡುಗಡೆಯಾಗಿದೆ. ಇತ್ತೀಚೆಗೆ ನಟ ದರ್ಶನ್ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿರುವುದು ವಿಶೇಷ. ಅಂದು ದರ್ಶನ್ ಬೇರೆ ಕಾರ್ಯಕ್ರಮಕ್ಕೆ ಹೋಗಬೇಕಿದ್ದರಿಂದ ಕೇವಲ ಹತ್ತೇ ನಿಮಿಷ ಮಾತ್ರ ವೇದಿಕೆಯಲ್ಲಿದ್ದರು. ಆ ಹತ್ತು ನಿಮಿಷದಲ್ಲಿ ಟ್ರೇಲರ್ ರಿಲೀಸ್ ಮಾಡಿ, ಚಿತ್ರದ ಸಂಗೀತ ನಿರ್ದೇಶಕರನ್ನು ಸನ್ಮಾನಿಸಿ, ವೇದಿಕೆ ಮೇಲೇರಿ, “ನನ್ನ ತಿಳುವಳಿಕೆ ಪ್ರಕಾರ ಕನ್ನಡ ಸಿನಿಮಾವೊಂದು ಸಂಪೂರ್ಣ ಯುಎಸ್‌ಎನಲ್ಲೇ ಚಿತ್ರೀಕರಣಗೊಂಡು ರಿಲೀಸ್ ಆಗುತ್ತಿರುವುದು “ಬಬ್ರೂ’. ಟ್ರೇಲರ್ ನೋಡಿದಾಗ, ಏನೋ ವಿಶೇಷತೆ ಇದೆ ಎನಿಸುತ್ತೆ. ಸುಮನ್ ನಗರ್‌ಕರ್ ಅವರು ಪುನಃ ಇಲ್ಲಿಗೆ ಬಂದು ಒಳ್ಳೆಯ ಚಿತ್ರ ಕೊಡುತ್ತಿದ್ದಾರೆ. ಚಿತ್ರತಂಡಕ್ಕೆ ಒಳ್ಳೆಯದಾಗಲಿ’ ಎಂದು ಶುಭ ಹಾರೈಸಿ ಹೋದರು ದರ್ಶನ್.
ನಿರ್ದೇಶಕ ಸುಜಯ್ ರಾಮಯ್ಯ ಅವರಿಗೆ ಇದು ಮೊದಲ ಅನುಭವ. ತಮ್ಮ ಚಿತ್ರದ ಬಗ್ಗೆ ಹೇಳಿಕೊಂಡ ಅವರು, “ನಾನು 9 ನೇ ತರಗತಿ ಓದುವಾಗಲೇ ಉಪೇಂದ್ರ ಅವರ “ಎ’ ಸಿನಿಮಾ ನೋಡಿದ್ದೆ. ಆಗಲೇ ನಾನೊಂದು ಸಿನಿಮಾ ಮಾಡಬೇಕು ಅಂತ ನಿರ್ಧರಿಸಿದ್ದೆ. ಮನೆಯಲ್ಲಿ ಕೇಳಿದಾಗ, ಮೊದಲು ಬಿಇ ಮುಗಿಸು ಅಂದ್ರು, ಸರಿ ಅಂತ ಬಿಇ ಮುಗಿಸಿದೆ. ಆಮೇಲೆ ನಾಲ್ಕು ವರ್ಷ ಕೆಲಸವನ್ನೂ ಮಾಡಿದೆ. ಅದಾಗಲೇ 15 ವರ್ಷ ಕಳೆದು ಹೋಯಿತು. ಕೊನೆಗೆ ಒನ್‌ಲೈನ್ ಸ್ಟೋರಿ ರೆಡಿ ಮಾಡಿಕೊಂಡು ಸುಮನ್ ನಗರ್‌ಕರ್ ಅವರಿಗೆ ಹೇಳಿದೆ. ಅವರು ಓಕೆ ಅಂದ್ರು. ಸಿನಿಮಾ ಮುಗಿದು ಈಗ ರಿಲೀಸ್ ಆಗುತ್ತಿದೆ. ಒಂದು ಸಣ್ಣ ತಂಡ ಕಟ್ಟಿಕೊಂಡು ಮಾಡಿದ ಚಿತ್ರವಿದು. ಸಿನಿಮಾ ಶುರು ಮಾಡಿದ ಮೊದಲ ದಿನವೇ ಕ್ಯಾಮೆರಾ ಬಿದ್ದು ಎಲ್ಲರ ಮೂಡ್ ಬದಲಾಗಿತ್ತು. ಇನ್ನು, ಗುರು ಸರ್ ಅವರಿಂದ ಸಿನಿಮಾ ಯಾವ ಕೊರತೆ ಇಲ್ಲದೆ ಮೂಡಿ ಬಂದಿದೆ. ಚಿತ್ರದಲ್ಲಿ “ಬಬ್ರೂ’ ಒಂದು ಕಾರಿನ ಹೆಸರು. ವಿದೇಶದಲ್ಲಿ ಕಾರಿಗೂ ಹೆಸರು ನೋಂದಾಯಿಸಬೇಕು. ಹಾಗಾಗಿ ನಮಗೊಂದು ಕಾರು ಬೇಕಿತ್ತು. ಒಂದು ಮಾಡೆಲ್ ಕಾರು ನೋಡಿದ್ವಿ. ಕೊನೆಗೆ ಅದನ್ನು ಖರೀದಿಸಿಕೊಟ್ಟ ನಿರ್ಮಾಪಕರು, ಅದಕ್ಕೆ “ಬಬ್ರೂ’ ಅಂತ ಅಲ್ಲಿನ ಟ್ರಾನ್ಸ್‌ಪೊàರ್ಟ್ ಕಚೇರಿಯಲ್ಲಿ ನೋಂದಾಯಿಸಿ, ಅದೇ ಹೆಸರನ್ನು ಇಲ್ಲಿ ಶೀರ್ಷಿಕೆಯಾಗಿಸಿ ಸಿನಿಮಾ ಮಾಡಿದೆವು. ಇಲ್ಲಿ ಕಾರು ಕೂಡ ಪ್ರಮುಖ ಪಾತ್ರ ವಹಿಸಿದೆ’ ಎಂದರು.
ಸುಮನ್ ನಗರ್‌ಕರ್ ಅವರಿಗೆ ಮೊದಲ ಸಲ “ಬಬ್ರೂ’ ನಿರ್ಮಾಣ ಮಾಡಿದ ಖುಷಿ. “ಎನ್‌ಆರ್‌ಐ ಕನ್ನಡಿಗರು ಸೇರಿ ಮಾಡಿದ ಚಿತ್ರವಿದು. ಇಲ್ಲಿ ಕನ್ನಡಿಗರೂ ಇದ್ದಾರೆ. ವಿದೇಶಿ ನಟ,ನಟಿಯರೂ ಇದ್ದಾರೆ. ಮೆಕ್ಸಿಕನ್ ಹಾಗೂ ಸ್ಪ್ಯಾನಿಶ್ ನಟ, ನಟಿಯರು ಕಾಣಿಸಿಕೊಂಡಿದ್ದು, ಯಾವ ಪಾತ್ರ ಯಾಕೆ ಅನ್ನೋದು ಚಿತ್ರ ನೋಡಿದಾಗ ಗೊತ್ತಾಗುತ್ತೆ’ ಅಂದರು ಸುಮನ್.
ಚಿತ್ರದಲ್ಲಿ ಮಾಹಿ ಹಿರೇಮಠ, ಕಾಶ್ಮೀರಿ ಮೂಲದ ಸನ್ನಿ, ಗಾನಾ ಭಟ್ ಸೇರಿದಂತೆ ಹಲವರು ನಟಿಸಿದ್ದಾರೆ. ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತವಿದೆ. ಅರುಣ್ ಶಾಸಿŒ ಸಂಭಾಷಣೆ ಬರೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Padubidri: ಸ್ಕೂಟಿಗೆ ಈಚರ್ ವಾಹನ ಢಿಕ್ಕಿ; ಸವಾರನಿಗೆ ಗಾಯ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
ಅಖಿಲ ಭಾರತ ಅಂತರ್ ವಿ.ವಿ.ವೇಟ್‌ಲಿಫ್ಟಿಂಗ್:ಮಂಗಳೂರು ವಿವಿ ರನ್ನರ್ ಅಪ್
Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.