ಚಂದಾದಾರರು ಫ್ರೀಯಾಗಿ ಮಾತಾಡಿದರು!


Team Udayavani, Nov 17, 2017, 6:00 AM IST

chandadararu.jpg

ಅದ್ಯಾರೋ ತಾರಾ ತರಹ ಕಾಣುತ್ತಾರಲ್ಲ ಎಂದು ಎಲ್ಲರೂ ದೂರದಲ್ಲಿ ಬರುತ್ತಿದ್ದವರನ್ನೇ ನೋಡುತ್ತಿದ್ದರು. ಹತ್ತಿರ ಬರುತ್ತಿದ್ದಂತೆಯೇ, ಅವರು ತಾರಾ ತರಹ ಕಾಣೋದಷ್ಟೇ ಅಲ್ಲ, ಅದು ತಾರಾನೇ ಎಂದು ಎಲ್ಲರಿಗೂ ಸ್ಪಷ್ಟವಾಯಿತು. ಹಾಗೆ ಹತ್ತಿರ ಬಂದ ತಾರಾ, ವಿಶ್‌ ಮಾಡಿ, ಮೊದಲ ಶಾಟ್‌ ಮುಗಿಸಿ ಬರುತ್ತೀನಿ ಎಂದರು ಹೋದರು. ಮತ್ತೆ 10 ನಿಮಿಷ ಮೌನ. ಅಷ್ಟರಲ್ಲಿ ಶ್ರುತಿ ಬಂದರು. ಇನ್ನೊಂದು ಕಡೆಯಿಂದ ದೇವರಾಜ್‌ ಬಂದರು. 10 ನಿಮಿಷ ಅವರ ಜೊತೆಗೆ ಮಾತಾಗುತ್ತಿದ್ದಂತೆಯೇ, ತಾರಾ, ನಿರ್ದೇಶಕ ಸ್ಯಾಮ್ಯುಯಲ್‌ ಎಲ್ಲರೂ ಬಂದು ಸೇರಿಕೊಂಡರು.

“ನೀವು ಕರೆ ಮಾಡಿದ ಚಂದಾದಾರರು ಬ್ಯುಸಿಯಾಗಿದ್ದಾರೆ’ ಎಂಬ ಚಿತ್ರದ ಮುಹೂರ್ತ ಸಮಾರಂಭ ಅದು. ಕಂಠೀರವ ಸ್ಟುಡಿಯೋದಲ್ಲಿ ಸರಳವಾಗಿ ಚಿತ್ರ ಶುರುವಾಯಿತು. ಈ ಚಿತ್ರದಲ್ಲಿ ದೇವರಾಜ್‌, ತಾರಾ, ಶ್ರುತಿ, ಭವ್ಯ, “ತಿಥಿ’ ಪೂಜಾ, ನಿರಂಜನ್‌ ದೇಶಪಾಂಡೆ ಮುಂತಾದವರು ನಟಿಸುತ್ತಿದ್ದು, “ದೂಧ್‌ ಸಾಗರ್‌’ ನಿರ್ದೇಶಿಸಿದ್ದ ಸ್ಯಾಮ್ಯುಯಲ್‌ ಟೋನಿ ನಿರ್ದೇಶಿಸುತ್ತಿದ್ದಾರೆ. ಮಧುಸೂಧನ್‌ ಎನ್ನುವವರು ಈ ಚಿತ್ರದ ಮೂಲಕ ನಿರ್ಮಾಪಕರಾಗುತ್ತಿದ್ದಾರೆ.

ಇದೊಂದು ಭಾವನಾತ್ಮಕ ಚಿತ್ರ ಎಂದೇ ತಮ್ಮ ಮಾತು ಶುರು ಮಾಡಿದರು ಸ್ಯಾಮ್ಯುಯಲ್‌. “ಸಾಮಾನ್ಯವಾಗಿ ಫೋನ್‌ ಮಾಡುವ ಸಂದರ್ಭದಲ್ಲಿ, “ನೀವು ಕರೆ ಮಾಡಿದ ಚಂದಾದಾರರು’ ಎಂಬ ಮಾತು ಕೇಳಿರುತ್ತೀರಿ. ಅದೇ ವಿಷಯವನ್ನಿಟ್ಟುಕೊಂಡು ಆಳವಾಗಿ ಹೋದಾಗ, ಒಂದೊಳ್ಳೆಯ ಕಥೆ ಸಿಕ್ಕಿತು. ಮನುಷ್ಯ ಬಿಝಿಯಾಗೋದು ತಪ್ಪಲ್ಲ. ಆದರೆ, ಏನಾಗುತ್ತಿದ್ದೀವಿ ಎಂದು ಹೇಳುವುದಕ್ಕೆ ಹೊರಟಿದ್ದೀವಿ. ಈ ಚಿತ್ರದಲ್ಲಿ ದೇವರಾಜ್‌, ತಾರಾ, ಶ್ರುತಿ ಮೂವರಿಗೂ ಬೇರೆ ತರಹದ ಗೆಟಪ್‌ಗ್ಳಿರುತ್ತವೆ. ದೇವರಾಜ್‌ ಅವರ ಹೇರ್‌ಸ್ಟೈಲ್‌ ಮತ್ತು ದಾಡಿಗೆಂದೇ ಮುಂಬೈನಿಂದ ಹೇರ್‌ಸ್ಟೈಲಿಸ್ಟ್‌ಗಳನ್ನು ಕರೆಸುತ್ತಿದ್ದೇವೆ. ಇನ್ನು ಶ್ರುತಿ ಅವರ ಚಿತ್ರಗಳನ್ನು ಸ್ಟಡಿ ಮಾಡಿ, ಒಂದೊಳ್ಳೆಯ ಪಾತ್ರ ಸೃಷ್ಟಿಸಿದ್ದೇವೆ. ಅವರ ಪಾತ್ರ ನೋಡುಗರೆಲ್ಲರನ್ನೂ ಕಾಡುತ್ತೆ’ ಎಂದರು ಸ್ಯಾಮ್ಯುಯಲ್‌.

ಈ ಚಿತ್ರಕ್ಕೆ ತಾವು ಹೀರೋ ಅಲ್ಲ, ಎಲ್ಲಾ ಪಾತ್ರಗಳು ಸಹ ಮುಖ್ಯ ಎಂದರು ದೇವರಾಜ್‌. “ಇಲ್ಲಿ ಹೊಸತನ ಇದೆ. ನಿರ್ದೇಶಕರು ನನ್ನ ಪಾತ್ರಕ್ಕೆ ಬೇರೆ ರೂಪ ಕೊಡುತ್ತಿದ್ದಾರೆ. ಚಿತ್ರದಲ್ಲಿ ಮೂವರು ನಾಯಕಿಯರಿದ್ದರೂ, ಡ್ಯುಯೆಟ್‌ ಇಲ್ಲ. ಅದರ ಬದಲು ಒಳ್ಳೆಯ ಸನ್ನಿವೇಶಗಳಿವೆ. ವಯಸ್ಸಿಗೆ ತಕ್ಕ ಪಾತ್ರ ಮಾಡುತ್ತಿದ್ದೇನೆ. ಈ ವಯಸ್ಸಿನಲ್ಲಿ ಒಂಟಿತನ ಕಾಡಿ, ಸ್ನೇಹವನ್ನು ಹುಡುಕಿ ಹೋದಾಗ ಏನೆಲ್ಲಾ ಆಗುತ್ತದೆ ಎನ್ನುವುದೇ ಚಿತ್ರದ ಕಥೆ. ಬಹಳ ಒಳ್ಳೆಯ ಸನ್ನಿವೇಶಗಳನ್ನು ಸೃಷ್ಟಿಸಿದ್ದಾರೆ. ಒಳ್ಳೇ ತಂಡ ಸಹ ಇದೆ. ಒಟ್ಟಾರೆ. ಇದೊಂದು ಹೊಸ ಪೀಳಿಗೆಯ ಚಿತ್ರವಾಗುತ್ತದೆ ಎಂಬ ನಂಬಿಕೆ ಇದೆ’ ಎಂದರು ದೇವರಾಜ್‌.

ಶ್ರುತಿ ಅವರಿಗೆ ನಿರ್ದೇಶಕರು ಕಥೆ ಹೇಳಿದಾಗ, ಅದರಲ್ಲಿ ಒಂದು ಪಾತ್ರ ತಾನು ಮಾಡಿದರೆ ಚೆಂದ ಎಂದನಿಸಿತಂತೆ ಶ್ರುತಿ ಅವರಿಗೆ. ನಿರ್ದೇಶಕರು ಸಹ ಅದೇ ಪಾತ್ರ ಕೊಟ್ಟಾಗ ಇನ್ನಷ್ಟು ಖುಷಿಯಾಯಿತಂತೆ. “ಚಿಕ್ಕ ಪಾತ್ರವಾದರೂ, ಪ್ರಮುಖವಾದ ಪಾತ್ರ. ಇದೊಂದು ಪ್ರಯೋಗಾತ್ಮಕ ಚಿತ್ರವಾಗಲಿದೆ. ದೇವರಾಜ್‌ ಅವರ ಜೊತೆಗೆ ಹಲವು ಚಿತ್ರಗಳಲ್ಲಿ ನಟಿಸಿದ್ದೇನೆ. ಈ ಚಿತ್ರದಲ್ಲೂ ತುಂಬಾ ಕಲೀತೀನಿ ಎಂಬ ನಂಬಿಕೆ ಇದೆ’ ಎಂದರು ಶ್ರುತಿ. ತಾರಾ ಅವರಿಗೆ ಈ ಚಿತ್ರದ ಬಗ್ಗೆ ಗೊತ್ತಾಗಿದ್ದು, ದೇವರಾಜ್‌ ಜೊತೆಗೆ “ಹೆಬ್ಬೆಟ್ಟ್ ರಾಮಕ್ಕ’ ಎಂಬ ಚಿತ್ರದಲ್ಲಿ ನಟಿಸುವಾಗಲಂತೆ. ಆ ನಂತರ ತಾರಾ ಅವರಿಗೂ ನಿರ್ದೇಶಕರು ಒಂದು ಪಾತ್ರ ಕೊಟ್ಟಿದ್ದಾರೆ. ಇಂಥದ್ದೊಂದು ಚಿತ್ರವನ್ನು ಮಿಸ್‌ ಮಾಡಬಾರದು ಎಂಬ ಕಾರಣಕ್ಕೆ ತಾರಾ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡರಂತೆ.

ನಂತರ ಪೂಜಾ, ನಿರಂಜನ್‌, ಸಂಗೀತ ನಿರ್ದೇಶಕ ಮನು ಜಾರ್ಜ್‌ ಮುಂತಾದವರು ಎರಡೆರೆಡು ಮಾತುಗಳನ್ನಾಡಿದರು.

ಟಾಪ್ ನ್ಯೂಸ್

10–Cosmetic-surgery

Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ

Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್‌ ಸಿಗೋದು ಕಷ್ಟ – ವರದಿ

Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್‌ ಸಿಗೋದು ಕಷ್ಟ – ವರದಿ

Jammu and Kashmir: Vehicle falls into gorge

Jammu and Kashmir: ಕಮರಿಗೆ ಬಿದ್ದ ವಾಹನ; ಕನಿಷ್ಠ ನಾಲ್ವರು ಸಾವು

8-

UV Fusion: ಆತ್ಮಹತ್ಯೆಗೂ ಆಯಸ್ಸು ಮುಗಿದಿರಬೇಕು

Vavar Mosque: Sabarimala pilgrims should not go to Vavar Mosque: BJP MLA

Vavar Mosque: ಶಬರಿಮಲೆ ಯಾತ್ರಿಗಳು ವಾವರ ಮಸೀದಿಗೆ ಹೋಗಬಾರದು: ಬಿಜೆಪಿ ಶಾಸಕ

Sydney Test: Virat reminds Australian audience of sandpaper case

Sydney: ಆಸ್ಟ್ರೇಲಿಯಾ ಪ್ರೇಕ್ಷಕರಿಗೆ ಸ್ಯಾಂಡ್‌ಪೇಪರ್‌ ಕೇಸ್‌ ನೆನಪು ಮಾಡಿದ ವಿರಾಟ್‌|Video

Viral: ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾದ 16ರ ಬಾಲಕನ ಜತೆ ಮನೆ ಬಿಟ್ಟು ಓಡಿದ 10ರ ಬಾಲಕಿ!

Viral: ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾದ 16ರ ಬಾಲಕನ ಜತೆ ಮನೆ ಬಿಟ್ಟು ಓಡಿದ 10ರ ಬಾಲಕಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kiccha Sudeep supports Sanju Weds Geetha 2 movie

Sanju Weds Geetha 2: ಸಂಜು-ಗೀತಾಗೆ ಕಿಚ್ಚ ಸಾಥ್‌‌

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

Sandalwood: ತೆರೆ ಮೇಲೆ ಗನ್ಸ್‌ ಆ್ಯಂಡ್‌ ರೋಸಸ್‌

Sandalwood: ತೆರೆ ಮೇಲೆ ಗನ್ಸ್‌ ಆ್ಯಂಡ್‌ ರೋಸಸ್‌

Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ

Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ

ಸ್ಟಾರ್‌ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್‌. ನರಸಿಂಹಲು

Sandalwood: ಸ್ಟಾರ್‌ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್‌. ನರಸಿಂಹಲು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

shreyas manju’s Vishnupriya movie releasing on Feb 21

ಫೆ.21ರಂದು ತೆರೆಗೆ ಬರಲಿದೆ ʼವಿಷ್ಣು ಪ್ರಿಯಾʼ

2(1

Bajpe ಪ.ಪಂ.ನಿಂದ ಕುಡಿಯುವ ನೀರು ಪೂರೈಕೆಗೆ ಹೊಸ ಚಿಂತನೆ; ಹೊಸ ಬೋರ್‌ವೆಲ್‌ಗೆ ಸೌರ ಪಂಪ್‌

1(1

Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!

10–Cosmetic-surgery

Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ

Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್‌ ಸಿಗೋದು ಕಷ್ಟ – ವರದಿ

Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್‌ ಸಿಗೋದು ಕಷ್ಟ – ವರದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.