ಅಲೆಮಾರಿಗಳ ಊರಲ್ಲಿ…ಪಾಕಿಸ್ತಾನದ ಗಡಿಯಲ್ಲೊಂದು ಕಾಲ್ಪನಿಕ ಪಿರಂಗಿಪುರ


Team Udayavani, May 19, 2017, 11:59 PM IST

Alemari.jpg

ಸಿನಿಮಾ ಅನ್ನೋದೇ ಒಂದು ಕಲ್ಪನೆ. ಅದರಲ್ಲೂ ಕಥೆಯಲ್ಲಿ ಮೂಡಿಬರುವ ಪಾತ್ರಗಳು, ಊರುಗಳು ಎಲ್ಲವೂ ಕಾಲ್ಪನಿಕ. ಅಂಥದ್ಧೇ ಮತ್ತೂಂದು ಪ್ರಯೋಗದ ಚಿತ್ರ ‘ಪಿರಂಗಿಪುರ’. ಮೊದಲೇ ಹೇಳಿದಂತೆ, ಈ ‘ಪಿರಂಗಿಪುರ’ ಅನ್ನುವ ಊರು ಕೂಡ ಕಾಲ್ಪನಿಕವೇ. ಇದು ಸಂಚಾರಿ ವಿಜಯ್‌ ಅಭಿನಯದ ಸಿನಿಮಾ. ಜನಾರ್ದನ್‌ ಪಿ.ಜಾನಿ ಈ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ. ಮೊದಲ ಪ್ರಯತ್ನವಾದ್ದರಿಂದ, ನಿರ್ದೇಶಕರಿಗೆ ಹೊಸದೇನನ್ನೋ ಕಟ್ಟಿಕೊಡಬೇಕು ಎಂಬ ಆಸೆ ಮತ್ತು ಹಠ. ಅದಕ್ಕಾಗಿಯೇ ಅವರು, ಕಳೆದ ಎರಡು ವರ್ಷಗಳಿಂದಲೂ ಕಥೆ ಕೆತ್ತನೆಯಲ್ಲಿ ತೊಡಗಿ, ಸುಮಾರು ಎರಡು ಸಾವಿರಕ್ಕೂ ಹೆಚ್ಚು ಚಿತ್ರಗಳನ್ನು ಬಿಡಿಸಿ, ಅವರದೇ ಆದ ಕಲ್ಪನೆಯ ಊರನ್ನು ಸೃಷ್ಟಿಸಲು ಸಜ್ಜಾಗಿದ್ದಾರೆ.

ಅಂದಹಾಗೆ, ‘ಪಿರಂಗಿಪುರ’ ಎಂಬ ಇರದೇ ಊರನ್ನು ಸೃಷ್ಟಿಸಿರುವ ನಿರ್ದೇಶಕರು ಈ ಚಿತ್ರದಲ್ಲಿ ಸಂಚಾರಿ ವಿಜಯ್‌ಗೆ ಗುರುತೇ ಸಿಗದಂತಹ ಗೆಟಪ್‌ ಹಾಕಿಸಿ, ಒಂದಷ್ಟು ಕುತೂಹಲ ಕೆರಳಿಸಿದ್ದಾರೆ. ಇತ್ತೀಚೆಗೆ, ‘ಪಿರಂಗಿಪುರ’ ಕುರಿತು ವಿವರ ಕೊಡಲೆಂದೇ ಪತ್ರಕರ್ತರನ್ನು ಆಹ್ವಾನಿಸಿದ್ದರು ನಿರ್ದೇಶಕ ಜಾನಿ. ಮಾತುಕತೆಗೂ ಮುನ್ನ, ತೆರೆಯ ಮೇಲೆ ಸಣ್ಣದ್ದೊಂದು ಸಾಲು ಮೂಡಿಬಂತು. ‘ಗುರಿ ತಲುಪುವವರೆಗೂ ಎಲ್ಲರೂ ಅಲೆಮಾರಿಗಳು…’ ಈ ಸಾಲು ಹಾಗೊಮ್ಮೆ ಕಂಡು ಕಣ್ಮರೆಯಾಯಿತು. ಅದಾದ ಬಳಿಕ ‘ಪಿರಂಗಿಪುರ’ ಎಂಬ ಶೀರ್ಷಿಕೆ ಕಾಣಿಸಿಕೊಂಡು, ವಿಭಿನ್ನ ಗೆಟಪ್‌ನಲ್ಲಿರುವ ಸಂಚಾರಿ ವಿಜಯ್‌ ಅವರ ಚಿತ್ರಣವೂ ಕಾಣಿಸಿಕೊಂಡಿತು. ಅಲ್ಲಿಗೆ ‘ಪಿರಂಗಿಪುರ’ ಎಂಬ ನಿರ್ದೇಶಕರ ಕಲ್ಪನೆ ಊರಿನಲ್ಲಿ ಏನೆಲ್ಲಾ ಇದೆ ಅನ್ನೋದ್ದನ್ನು ಸ್ವಲ್ಪ ಗೌಪ್ಯವಾಗಿಟ್ಟರು ನಿರ್ದೇಶಕರು.

ಇದು ಕನ್ನಡದ ಜತೆಯಲ್ಲಿ ತೆಲುಗು ಮತ್ತು ತಮಿಳು ಭಾಷೆಯಲ್ಲಿ ಏಕಕಾಲಕ್ಕೆ ತಯಾರಾಗುತ್ತಿರುವ ಸಿನಿಮಾ. ಹಾಗಾಗಿಯೇ ನಿರ್ದೇಶಕರು ಅಂದು ಮಾತಿಗೆ ಕುಳಿತಿದ್ದರು. ‘ಇದು ರಾಜಾರಾಮ್‌ ಎಂಬ ವ್ಯಕ್ತಿಯ ಬದುಕಿನ ಏರಿಳಿತಗಳನ್ನು ಮನೋಸೈದ್ಧಾಂತಿಕ ರೀತಿಯಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡುತ್ತಿದ್ದೇನೆ. ಪ್ರಾಚೀನ ಕಾಲದ ಅಪರಾಧ ಚರಿತ್ರೆಯನ್ನು ಬಿಂಬಿಸುವ ಹಚ್ಚೆಗಳನ್ನು ಹೊಂದಿರುವ ಪಿರಂಗಿಗಳು ಎಂಬ ಪಾತ್ರಗಳನ್ನೂ ಸೃಷ್ಟಿಸಲಾಗಿದೆ. ಜೈ ಮತ್ತು ರಾಣಾ ಎಂಬ ಇಬ್ಬರು ಕಲಾವಿದರು ಈ ವಿಶಿಷ್ಟ ಪಾತ್ರಗಳಿಗೆ ತಯಾರಾಗುತ್ತಿದ್ದಾರೆ. ಅದು ಚಿತ್ರದ ಹೈಲೆಟ್‌ ಆಗಿರುವ ಪಾತ್ರಗಳು ಎಂಬುದು ನಿರ್ದೇಶಕರ ಮಾತು.

ಬೆಂಗಳೂರಿನಿಂದ ರಾಜಸ್ಥಾನದವರೆಗೆ ನಡೆಯುವ ಜರ್ನಿ ಕಥೆ ಇದು. ಸುಮಾರು 70 ದಿನಗಳ ಕಾಲ ತಂಡ ಪ್ರಯಾಣ ಬೆಳೆಸುತ್ತಲೇ ಚಿತ್ರೀಕರಣದಲ್ಲಿ ತೊಡಗಿಕೊಳ್ಳಲಿದೆ. ನಾಯಕ ಸಂಚಾರಿ ವಿಜಯ್‌ ಚಿತ್ರದಲ್ಲಿ ಮೂರು ವಿಭಿನ್ನ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು, ನಕ್ಷತ್ರ ಮತ್ತು ರಾಕಿ ಎಂಬ ಇನ್ನೆರಡು ವಿಶಿಷ್ಟ ಪಾತ್ರಗಳ ಕಥೆಯೂ ವಿಜಯ್‌ ಪಾತ್ರಗಳ ಜತೆ ಸಾಗಲಿವೆ ಎಂದು ವಿವರ ಕೊಡುತ್ತಾರೆ ಜನಾರ್ಧನ್‌.

ಅಂದಹಾಗೆ, ಈ ಚಿತ್ರದ ಚಿತ್ರೀಕರಣಕ್ಕೆ ರಾಜಸ್ಥಾನದಲ್ಲಿ ಒಂದು ಗ್ರಾಮವವನ್ನೇ ಮರು ಸೃಷ್ಟಿಸುವ ಯೋಚನೆ ಚಿತ್ರತಂಡಕ್ಕಿದೆ. ತಮಿಳಿನ ಖ್ಯಾತ ಕಲಾ ನಿರ್ದೇಶ ಬಾಲಚಂದರ್‌ ಅವರಿಗೆ ಆ ಜವಾಬ್ದಾರಿ ವಹಿಸಲಾಗಿದೆಯಂತೆ. ಅಂದಹಾಗೆ, ‘ಪಿರಂಗಿಪುರ’ ಎಂಬ ಕಾಲ್ಪನಿಕ ಊರನ್ನು ಪಾಕಿಸ್ತಾನದ ಗಡಿಯಿಂದ 40 ಕಿ.ಮೀ. ದೂರದಲ್ಲಿರುವ ಜಾಗದಲ್ಲಿ ಸೃಷ್ಟಿಸಲಾಗಲಿದೆಯಂತೆ. ಇನ್ನು, ಅಂದು ಚಿತ್ರದ ಹೊಸ ಪೋಸ್ಟರ್‌ ಬಿಡುಗಡೆ ಮಾಡಲು ಆಗಮಿಸಿದ್ದ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌, ಹೊಸಬರ ಪ್ರಯತ್ನಕ್ಕೆ ಜಯ ಸಿಗಲಿ ಎಂದು ಶುಭಹಾರೈಸಿದದ ಅವರು, ‘ಈ ಕಥೆ ಕೇಳಿದ್ದೇನೆ. 160 ವರ್ಷಗಳ ಹಿಂದಿನ ಕಾಲಕ್ಕೆ ಜಗ್ಗುವ ಹಾಗೆಯೇ ಇಂದಿನ ವರ್ತಮಾನಕ್ಕೆ ಒಗ್ಗುವ ವಿಶಿಷ್ಟ ಕಥೆ ಮಾಡಿಕೊಂಡಿದ್ದಾರೆ. ಬಹುತೇಕ ರಂಗಭೂಮಿ ಹುಡುಗರು ಇಲ್ಲಿರುವುದರಿಂದ ಚಿತ್ರದ ಮೇಲೆ ವಿಶ್ವಾಸವಿದೆ’ ಎಂದರು ಅವರು. ಸಂಚಾರಿ ವಿಜಯ್‌ಗೆ ಚಿತ್ರತಂಡ ಶ್ರಮಿಸುತ್ತಿರುವುದನ್ನು ನೋಡಿ, ಅವರಿಗೆ ಪಾತ್ರವನ್ನು ಇನ್ನೂ ಚೆನ್ನಾಗಿ ಕಟ್ಟಿಕೊಡಬೇಕು ಎಂಬ ಛಲ ಹುಟ್ಟಿದೆಯಂತೆ. ಇನ್ನು, ‘ಚಿತ್ರದ ಕೊನೆಯ ಇಪ್ಪತ್ತು ನಿಮಿಷಗಳಲ್ಲಿ ಬರುವ ಚೇಸಿಂಗ್‌ ವಿಶೇಷವಾಗಿರಲಿದೆ. ಉಳಿದದ್ದು ತೆರೆಯ ಮೇಲೆ ನೋಡಿ’ ಎಂದಷ್ಟೇ ಹೇಳಿ ಸುಮ್ಮನಾದರು ವಿಜಯ್‌. ಶ್ಯಾಮ್‌ ಎಲ್‌. ರಾಜ್‌ ಸಂಗೀತ ನೀಡಿದರೆ, ಅದ್ವೆ„ತ ಗುರುಮೂರ್ತಿ ಛಾಯಾಗ್ರಹಣವಿದೆ. ದಿನೇಶ್‌ ಸುಬ್ಬರಾಯನ್‌ ಸಾಹಸ ಚಿತ್ರಕ್ಕಿದೆ. ಇಷ್ಟರಲ್ಲೇ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ.

ಟಾಪ್ ನ್ಯೂಸ್

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

1-qwewqeqw

Pro Kabaddi;ಬೆಂಗಳೂರು ಬುಲ್ಸ್‌  ಜಯಭೇರಿ: ತಮಿಳ್‌ ತಲೈವಾಸ್‌ಗೆ 32-36 ಅಂಕಗಳ ಸೋಲು

1-ewewqe

Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡ‌ರ್ ಸ್ಫೋ*ಟ: ಅಪಾರ ಹಾನಿ

Bommai

By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ

CM-Shiggavi

By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ

Hasanmbe

Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!

1-gopal

Maharashtra polls: ಗೋಪಾಲ್ ಶೆಟ್ಟಿ ನಾಮಪತ್ರ ಹಿಂಪಡೆಯುವಲ್ಲಿ ಯಶಸ್ವಿಯಾದ ಬಿಜೆಪಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

aaram aravinda swamy movie song hudukuta hoda

Aaram Aravinda Swamy: ಹುಡುಕತ್ತಾ ಹೋದ ಅರವಿಂದ್‌ ಸ್ವಾಮಿ

Sandalwood: ಗೆಲುವಿನ ಓಟದಲ್ಲಿ ಮಂಕಾದ ಹೊಸಬರು; ಕೈ ಹಿಡಿಯದ ಪ್ರೇಕ್ಷಕ

Sandalwood: ಗೆಲುವಿನ ಓಟದಲ್ಲಿ ಮಂಕಾದ ಹೊಸಬರು; ಕೈ ಹಿಡಿಯದ ಪ್ರೇಕ್ಷಕ

abhimanyu kashinath ellige payana yavudo daari movie

Ellige Payana Yavudo Daari Movie; ದಾರಿ ಹೊಸದಾಗಿದೆ ಗೆಲುವು ಬೇಕಾಗಿದೆ

Komal Kumar: ಯಲಾಕುನ್ನಿ ಪೈಸಾ ವಸೂಲ್‌ ಸಿನಿಮಾ

Komal Kumar: ಯಲಾಕುನ್ನಿ ಪೈಸಾ ವಸೂಲ್‌ ಸಿನಿಮಾ

director suri

Cini Talk: ಸಿನಿಮಾ ನಿರ್ದೇಶಕ ಬಿಝಿನೆಸ್‌ ಮ್ಯಾನ್‌ ಅಲ್ಲ!: ನಿರ್ದೇಶಕ ಸೂರಿ ಮಾತು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-wqqwewq

Australia ಗೆಲುವಿಗೆ ಕಮಿನ್ಸ್‌  ನೆರವು: ಪಾಕಿಸ್ಥಾನ 203; ಆಸೀಸ್‌  8 ವಿಕೆಟಿಗೆ 204

crime

Trasi: ಕಾರು ಢಿಕ್ಕಿಯಾಗಿ ಗಾಯ; ಪ್ರಕರಣ ದಾಖಲು

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

1-qwewqeqw

Pro Kabaddi;ಬೆಂಗಳೂರು ಬುಲ್ಸ್‌  ಜಯಭೇರಿ: ತಮಿಳ್‌ ತಲೈವಾಸ್‌ಗೆ 32-36 ಅಂಕಗಳ ಸೋಲು

1-ewewqe

Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡ‌ರ್ ಸ್ಫೋ*ಟ: ಅಪಾರ ಹಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.