ಮುನ್ಸಾಮಿಯ ಕಥಾ ಪ್ರಸಂಗ : ಓಳು ಬರಿ ಓಳು!


Team Udayavani, Jul 14, 2017, 6:10 AM IST

Suchi-Olu-1.jpg

ಕಥೆ ಮಾಡೋದಕ್ಕಂತ ಸುಮಾರು ಮೂವತ್ತೈದು, ನಲವತ್ತು ಹಳ್ಳಿಗಳನ್ನು ಸುತ್ತಿದರಂತೆ ಆನಂದಪ್ರಿಯ. ಪ್ರತಿ ಹಳ್ಳಿಗೆ ಹೋದಾಗಲೂ ಒಬ್ಬರಲ್ಲಾ ಒಬ್ಬರು ಓಳ್‌ ಮುನ್ಸಾಮಿಗಳು ಸಿಗುತ್ತಿದ್ದರಂತೆ. ಕೊನೆಗೆ ಅದೇ ಓಳ್‌ ಮುನ್ಸಾಮಿಯ ಪಾತ್ರವನ್ನು ಇಟ್ಟುಕೊಂಡು ಅವರು ಸಿನಿಮಾ ಮಾಡಿರುವುದಷ್ಟೇ ಅಲ್ಲ, ಅದೇ ಹೆಸರನ್ನು ಇಟ್ಟಿದ್ದಾರೆ. ಈಗ ಆ ‘ಓಳ್‌ ಮುನ್ಸಾಮಿ’ ಸದ್ದಿಲ್ಲದೆ ಮುಗಿದಿದೆ. ಇತ್ತೀಚೆಗೊಂದು ದಿನ ಚಿತ್ರದ ಬಗ್ಗೆ ಮಾತನಾಡುವುದಕ್ಕೆ ತಮ್ಮ ತಂಡದವರೊಂದಿಗೆ ಬಂದಿದ್ದರು ಆನಂದಪ್ರಿಯ.


ಆನಂದಪ್ರಿಯ ಹೇಳುವಂತೆ ಇದು ಆಸ್ತಿಕ ಮತ್ತು ನಾಸ್ತಿಕನ ನಡುವೆ ನಡೆಯುವ ಕಥೆಯಂತೆ. ‘ಇದೊಂದು ಆಸ್ತಿಕ ಮತ್ತು ನಾಸ್ತಿಕನ ನಡುವೆ ನಡೆಯುವ ಕೋಲ್ಡ್‌ ವಾರ್‌ ಕುರಿತ ಸಿನಿಮಾ. ಇಲ್ಲಿ ಕಾಶೀನಾಥ್‌ ಆಸ್ತಿಕನಾದರೆ, ‘ಜಲ್ಸಾ’ದ ನಿರಂಜನ್‌ ಒಡೆಯರ್‌ ನಾಸ್ತಿಕನಾಗಿ ಅಭಿನಯಿಸಿದ್ದಾರೆ. ಸಾಮಾನ್ಯವಾಗಿ ಸುಳ್ಳು ಹೇಳುವವನಿಗೆ ಓಳ್‌ ಮುನ್ಸಾಮಿ ಅಂತ ಹೇಳುವುದು ವಾಡಿಕೆ. ಇಲ್ಲಿ ಅದು ಉಲ್ಟಾ. ಇಲ್ಲಿ ಮುನ್ಸಾಮಿ ಬರೀ ಸತ್ಯವನ್ನೇ ಹೇಳುತ್ತಾನೆ. ಆದರೆ, ಈಗ ಸತ್ಯ ಹೇಳುವವರು ಓಳ್‌ ಬಿಡುವವರು ಅಂತ ಆಗೋಗಿದೆ. ಹಾಗಾಗಿ ಚಿತ್ರಕ್ಕೆ ಆ ಹೆಸರು ಇಟ್ಟಿದ್ದೀವಿ. ಇದೊಂದು ಫ್ಯಾಮಿಲಿ ಸಿನಿಮಾ. ಅಸಭ್ಯತೆ, ಡಬ್ಬಲ್‌ ಮೀನಿಂಗ್‌ ಯಾವುದೂ ಇಲ್ಲ’ ಎಂದರು ಆನಂದಪ್ರಿಯ. ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನೂ ಅವರೇ ರಚಿಸಿದ್ದಾರೆ.

ಚಿತ್ರದ ಪತ್ರಿಕಾಗೋಷ್ಠಿಗೆ ಬಂದಿದ್ದ ಕಾಶೀನಾಥ್‌, ಇದು ತಮ್ಮ  ಪಾಲಿಗೆ ವಿಭಿನ್ನ ಸಿನಿಮಾ ಎಂದರು. ‘ನಾನು ಇದುವರೆಗೂ ಇಂಥಾ ಪಾತ್ರ ಮಾಡಿರಲಿಲ್ಲ. ಕಥೆ ಕೇಳಿದೆ ಇಷ್ಟವಾಯಿತು, ಅದೇ ಕಾರಣಕ್ಕೆ ಒಪ್ಪಿಕೊಂಡೆ. ಚಿತ್ರದಲ್ಲಿ ಸಂಭಾಷಣೆಗಳು ಚೆನ್ನಾಗಿವೆ’ ಎಂದರು. ಇನ್ನು ಕಾಶೀನಾಥ್‌ ಅವರು ತಮ್ಮ ಚಿತ್ರದಲ್ಲಿ ಇರುವುದೇ ಜಾಕ್‌ಪಾಟ್‌ ಎಂದರು ನಿರಂಜನ್‌. ಈ ಚಿತ್ರದಲ್ಲಿ ಅವರು ಹಳ್ಳಿ ಹುಡುಗನ ಪಾತ್ರ ಮಾಡಿದ್ದಾರಂತೆ. ‘ಯಾವುದೇ ಸ್ಟೈಲ್‌ಗ‌ಳಿಲ್ಲದೆ ಸಾಮಾನ್ಯ ಹೈದನ ಪಾತ್ರ. ನನ್ನ, ಕಾಶೀನಾಥ್‌ ಅವರ ಮಧ್ಯೆ ಹಗ್ಗಾ ಜಗ್ಗಾಟ ನಡೆಯುತ್ತಲೇ ಇರುತ್ತವೆ. ಇಬ್ಬರಲ್ಲಿ ಯಾರು ಗೆಲ್ತೀವಿ ಅನ್ನೋದೇ ಸಸ್ಪೆನ್ಸ್‌’ ಎಂದರು. ಇನ್ನು ಅಖೀಲಾ ಪ್ರಕಾಶ್‌ ಚಿತ್ರದಲ್ಲಿ ಗಂಗಾ ಎಂಬ ಮುಗ್ಧ ಹುಡುಗಿಯ ಪಾತ್ರವನ್ನು ಮಾಡಿದ್ದಾರಂತೆ. ಇನ್ನು ಈ ಚಿತ್ರವನ್ನು ಸಮೂಹ ಟಾಕೀಸ್‌ ಸಂಸ್ಥೆ ನಿರ್ಮಿಸುತ್ತಿದೆ. ಚಿತ್ರದ ಟ್ರೇಲರ್‌ ಬಿಡುಗಡೆ ಮಾಡುವುದಕ್ಕೆ ಸತೀಶ್‌ ನೀನಾಸಂ ಬಂದಿದ್ದರು. ಸಂಗೀತ ನಿರ್ದೇಶಕ ಸತೀಶ್‌ ಬಾಬು, ಗೀತರಚನೆಕಾರ ರಾಮ್‌ನಾರಾಯಣ್‌ ಮುಂತಾದವರು ಇದ್ದರು.

ಟಾಪ್ ನ್ಯೂಸ್

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ

RSS

Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ

CM-Office

By Election Result: ನಾನು ದಂತದ ಗೋಪುರದಲ್ಲಿ ಕೂತವನಲ್ಲ,ಜನರೊಂದಿಗೆ ಸದಾ ಒಡನಾಟವಿದೆ: ಸಿಎಂ

1-ree

Maharashtra; ಪತಿಗೆ ಸೋಲು: ಮತಯಂತ್ರಗಳ ಕುರಿತು ಆಪಾದಿಸಿದ ನಟಿ ಸ್ವರಾ ಭಾಸ್ಕರ್

mamata

West Bengal bypolls; ಟಿಎಂಸಿ ಕ್ಲೀನ್ ಸ್ವೀಪ್: ಪ್ರತಿಭಟನೆಗಳು ಬಿಜೆಪಿಗೆ ಸಹಕಾರಿಯಾಗಲಿಲ್ಲ

satish

ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್‌ ಜಾರಕಿಹೊಳಿ

55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್‌ – ಮನರಂಜನೆಗೆ ಹೊಸ ಆಯಾಮ

55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್‌ – ಮನರಂಜನೆಗೆ ಹೊಸ ಆಯಾಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

priyanka upendra in life is beautiful movie

Priyanka Upendra: ಬ್ಯೂಟಿಫುಲ್‌ ಲೈಫ್‌ ನಲ್ಲಿ ಪ್ರಿಯಾಂಕಾ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ

RSS

Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ

7

Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು

Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ

Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ

Katpadi: ಸ್ಕೂಟರ್‌ಗೆ ಟೆಂಪೋ ಢಿಕ್ಕಿ 

Katpadi: ಸ್ಕೂಟರ್‌ಗೆ ಟೆಂಪೋ ಢಿಕ್ಕಿ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.