ಹುಬ್ಬಳ್ಳಿಯಲ್ಲಿ ಮುಗುಳು ನಗೆೆ
Team Udayavani, Jul 14, 2017, 4:15 AM IST
‘ಮುಗುಳು ನಗೆ’ ಚಿತ್ರದಲ್ಲಿ ಯೋಗರಾಜ್ ಭಟ್ಟರು ‘ಹೊಡಿ ಒಂಬತ್’ ಎಂಬ ಹಾಡು ಬರೆದಿರೋದು ನಿಮಗೆ ಗೊತ್ತೇ ಇದೆ. ಇತ್ತೀಚೆಗೆ ಆ ಹಾಡಿನ ಬಿಡುಗಡೆ ಹುಬ್ಬಳ್ಳಿಯಲ್ಲಿ ನಡೆಯಿತು. ಹುಬ್ಬಳ್ಳಿ ಮಂದಿ ಮುಂದೆ ಅದ್ಧೂರಿಯಾಗಿ ‘ಹೊಡಿ ಒಂಬತ್’ ಹಾಡನ್ನು ಬಿಡುಗಡೆ ಮಾಡಲಾಯಿತು. ಅಷ್ಟಕ್ಕೂ ಭಟ್ಟರಿಗೆ ‘ಹೊಡಿ ಒಂಬತ್’ ಹೇಗೆ ಹೊಳೆಯಿತು ಎಂಬ ಕುತೂಹಲ ಅನೇಕರಿಗಿದೆ. ಅದನ್ನು ಭಟ್ಟರು ಬಿಚ್ಚಿಡುತ್ತಾರೆ.
‘ಹೊಡಿ ಒಂಬತ್’ ಹಾಡಿಗೆ ಸ್ಫೂರ್ತಿ ಬಾಗಲಕೋಟೆ ಜನರು. ರಿಯಾಲಿಟಿ ಶೋವೊಂದರ ಶೂಟಿಂಗ್ ಬಾಗಲಕೋಟೆಯಲ್ಲಿ ನಡೆದಾಗ ಜಡ್ಜ್ ಆಗಿದ್ದ ನಾನು, ಅಲ್ಲಿನ ಜನರ ‘ಹೊಡಿ ಒಂಬತ್’ ಎಂದು ಒಕ್ಕೊರಲಿನಿಂದ ಕೂಗಿದ್ದು ರೋಮಾಂಚನ ಮೂಡಿಸಿತ್ತು. ಬೆಂಗಳೂರಿಗೆ ಬಂದಾಗ ‘ಮುಗುಳು ನಗೆ’ ಹಾಡೊಂದನ್ನ ‘ಹೊಡಿ ಒಂಬತ್’ ಮೇಲೆ ಯಾಕೆ ಮಾಡಬಾರದು ಎಂದು ಯೋಚಿಸಿ, ಗಣೇಶ್ ಹಾಗೂ ನಿರ್ಮಾಪಕ ಸೈಯದ್ ಅವರಲ್ಲಿ ಮಾತನಾಡಿದೆ. ಅವರು ಒಪ್ಪಿದರು. ಈಗ ಆ ಹಾಡು ಹಿಟ್ ಆಗಿದೆ. ಈಗ ಸಾಂಕೇತಿಕವಾಗಿ ಬಿಡುಗಡೆಯಾಗುತ್ತಿದೆ’ ಎಂದು ‘ಹೊಡಿ ಒಂಭತ್’ ಹಾಡು ಹುಟ್ಟಿದ ಬಗ್ಗೆ ಹೇಳಿಕೊಂಡರು ಭಟ್ಟರು. ‘ಚಿತ್ರದ ಮೊದಲ ಹಾಡು ಹುಬ್ಬಳ್ಳಿಯಲ್ಲಿ ಬಿಡುಗಡೆಯಾಗುತ್ತಿದೆ. ಎರಡು ದಿನಗಳ ನಂತರ ಬೆಂಗಳೂರಿನಲ್ಲಿ ಎರಡನೇ ಹಾಡು, ಮತ್ತೆರಡು ದಿನಗಳ ನಂತರ ಮೈಸೂರು, ದಾವಣಗೆರೆ.. ಹೀಗೆ ಏಳು ಸ್ಥಳಗಳಲ್ಲಿ ಚಿತ್ರದ ಏಳು ಹಾಡುಗಳನ್ನು ಬಿಡುಗಡೆ ಮಾಡಲು ಚಿತ್ರತಂಡ ಆಲೋಚಿಸಿದೆ’ ಎಂದರು. ನಟ ಗಣೇಶ್, ಉತ್ತರ ಕರ್ನಾಟಕ ಇಷ್ಟ, ಇಲ್ಲಿ ಭಾಷೆ ತುಂಬಾ ಇಷ್ಟ. ಇಲ್ಲಿ ಜನ ಬಹಳ ಮುಗ್ಧರು ಎಂದರು.
ಚಿತ್ರದ ನಿರ್ಮಾಣಕ್ಕೆ ಶ್ರಮಿಸಿದ ನಿರ್ಮಾಪಕ ಸೈಯದ್ ಸಲಾಂಗೆ ಅಭಿನಂದನೆ ತಿಳಿಸಿ, ನಮ್ಮಿಬ್ಬರನ್ನ ಸಹಿಸಿಕೊಂಡ ನಿಮ್ಮ ತಾಳ್ಮೆ ಮೆಚ್ಚುವಂಥದ್ದೇ ಎಂದು ರೇಗಿಸಿದರು ಗಣೇಶ್. ರಾಜು ತಾಳಿಕೋಟೆ ಕೂಡಾ ಮಾತನಾಡಿದರು. ‘ನನಗೂ ‘ಮುಗುಳು ನಗೆ’ಗೂ ಸಂಬಂಧವಿಲ್ಲ. ಆದರೆ ನನ್ನ – ಭಟ್ಟರ ನಡುವೆ ಉತ್ತಮ ಬಾಂಧವ್ಯ ಇದೆ. ಚಿತ್ರರಂಗಕ್ಕೆ ಪರಿಚಯಿಸಿದವರು ಅವರೇ. ನಮ್ಮ ಭಾಗಕ್ಕೆ ಬಂದ ವಿಷಯ ಕೇಳಿ ಸೌಜನ್ಯ ಭೇಟಿಗೆ ಬಂದಿದ್ದೆ. ಮೂಲತಃ ಉತ್ತರ ಕರ್ನಾಟಕದವರೇ ಆಗಿರುವ ಭಟ್ಟರು ಇನ್ನಷ್ಟು ಉತ್ತಮ ಸಿನಿಮಾ ಕೊಡಲಿ’ ಎಂದು ಹಾರೈಸಿ ಮಾತು ಮುಗಿಸಿದರು. ಚಿತ್ರ ನಿರೀಕ್ಷೆ ಮೀರಿ ಚೆನ್ನಾಗಿ ಬಂದಿದೆ. 10 ವರ್ಷಗಳ ನಂತರ ಇಬ್ಬರ ಕಾಂಬಿನೇಷನ್‌ನ ಸಿನಿಮಾ ನಿರ್ಮಾಣ ಮಾಡಲು ಅವಕಾಶ ಸಿಕ್ಕಿದ್ದು ನನ್ನಅದೃಷ್ಟ’ ಎಂಬುದು ನಿರ್ಮಾಪಕ ಸೈಯ್ಯದ್ ಸಲಾಂ ಮಾತು.
– ಬಸವರಾಜು ಕರುಗಲ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.