ಪ್ರದೀಪನ ಹುಲಿ ಘರ್ಜನೆ!
Team Udayavani, Jun 16, 2017, 1:01 PM IST
ಶ್ರೀನಗರ ಕಿಟ್ಟಿ ಮತ್ತು ಪ್ರದೀಪ್ ಇಬ್ಬರೂ ಒಂದು ದೊಡ್ಡ ಬ್ರೇಕ್‌ಗಾಗಿ ಕಾದಿದ್ದಾರೆ ಎಂದರೆ ತಪ್ಪಿಲ್ಲ. ಇಬ್ಬರೂ ಹಲವು ವರ್ಷಗಳ ಹಿಂದೆ ಚಿತ್ರರಂಗಕ್ಕೆ ಬಂದವರು. ಸೋಲು-ಗೆಲುವು ಎಲ್ಲವನ್ನೂ ಕಂಡವರು. ಕಳೆದ ಎರಡೂವರೆ, ಮೂರು
ವರ್ಷಗಳಿಂದ ಒಂದರ್ಥದಲ್ಲಿ ಅಜ್ಞಾತವಾಸದಲ್ಲಿದ್ದವರು. ಈಗ ಇಬ್ಬರ ಚಿತ್ರವೂ ಇವತ್ತು ಬಿಡುಗಡೆಯಾಗುತ್ತಿದೆ. “ಸಿಲಿಕಾನ್ ಸಿಟಿ’ ಎಂಬ ಚಿತ್ರದ ಮೂಲಕ ಕಿಟ್ಟಿ ಬರುತ್ತಿದ್ದರೆ, “ಟೈಗರ್’ ಆಗಿ ಪ್ರದೀಪ್ ಎಂಟ್ರಿ ಕೊಡುತ್ತಿದ್ದಾರೆ. ಈ ಎರಡು ಚಿತ್ರಗಳಿಗೆ ಕಂಬ್ಯಾಕ್ ಸಿನಿಮಾ ಎಂದು ಕರೆಯಬಹುದಾ? ಈ ಗ್ಯಾಪ್‌ನಲ್ಲಿ ಇಬ್ಬರೂ ಏನು ಮಾಡುತ್ತಿದ್ದರು? ಸಕ್ಸಸ್ ಇಲ್ಲದೆ ಮನಸ್ಥಿತಿ ಹೇಗಿತ್ತು? ಈ ಚಿತ್ರಗಳು ಇಮೇಜ್ ಬದಲಿಸುತ್ತವೆ ಎಂಬ ನಂಬಿಕೆ ಇದೆಯಾ? ಈ ಚಿತ್ರಗಳಿಂದ ಚಿತ್ರರಂಗದಲ್ಲಿ ಗಟ್ಟಿ ನೆಲೆ ಸಿಗಬಹುದೆಂಬ ಖಾತ್ರಿ ಇದೆಯಾ? ಮುಂದಿನ ಜರ್ನಿ ಯಾವ ತರಹದಿರುತ್ತದೆ? ಎಂಬಂತಹ ಹಲವಾರು ಪ್ರಶ್ನೆಗಳು ಅವರಿಬ್ಬರ ಬಗ್ಗೆ ಕಾಡುವುದು ಉಂಟು. ಈ ಪ್ರಶ್ನೆಗಳನ್ನು ಅವರೆದುರು ಇಟ್ಟಾಗ, ಅವರಿಂದ ಬಂದ ಉತ್ತರಗಳು ಹೀಗಿವೆ.
ಇದು ನನ್ನ ಕಂ ಬ್ಯಾಕ್ ಸಿನಿಮಾನೂ ಅಲ್ಲ. ಇದು ನನ್ನ ರೀ-ಇಂಟ್ರಡಕ್ಷನ್ನೂ ಅಲ್ಲ. ಅದೊಂದು ಹೊಸ ಅವತಾರ, ಬೇರೆ ರೂಪ ಅನ್ನಬಹುದು. ಸುದೀಪ್ ಸರ್ ಹೇಳಿದಂಗೆ, ಪರ್‌ಫೆಕ್ಟ್ ಇಂಟ್ರಡಕ್ಷನ್ ಅಂತಾನೂ ಅಂದುಕೊಳ್ಳಬಹುದು. ಒಟ್ನಲ್ಲಿ ಏನಾದ್ರೂ ಆಗಲಿ, ನಾನು ಹೊಸ ತರಹ ಕಾಣಿಸಿಕೊಳ್ಳಬೇಕಿತ್ತು. ಅದು “ಟೈಗರ್’ನಲ್ಲಾಗಿದೆ.
ಮೊದಲು ಶಿವನ ಗೆಟಪ್‌ನ ಫೋಸ್ಟರ್ ಹೊರಬಿಟ್ಟಾಗ ಎಲ್ಲರಲ್ಲೂ ಕುತೂಹಲ ಮೂಡಿದ್ದು ಸುಳ್ಳಲ್ಲ. ಅದೇನು ಆ್ಯಕ್ಷನ್ ಇರಬಹುದಾ, ಥ್ರಿಲ್ಲರ್ ಆಗಿರಬಹುದಾ ಎಂಬ ಮಾತುಗಳು ಕೇಳಿಬಂದವು. ಹೋಗ್ತಾ ಹೋಗ್ತಾ ಸಾಂಗ್ಸ್, ಟೀಸರ್ ಹೊರಬಂದಾಗ ಹೊಸತನದ ಮೇಕಿಂಗ್ ಬಗ್ಗೆ ಮಾತುಗಳು ಶುರುವಾದವು. ನಂತರದ ದಿನಗಳಲ್ಲಿ ಟ್ರೇಲರ್ ಬಿಟ್ಟಾಗ, ಎಷ್ಟೋ ಜನರಿಗೆ ಅದೊಂದು ಸಸ್ಪೆನ್ಸ್ ಸಿನಿಮಾ ಎಂಬ ಪ್ರಶ್ನೆ ಕಾಡಿದ್ದು ನಿಜ. ಇನ್ನೆಷ್ಟೋ ಜನ ಪಕ್ಕಾ ಆ್ಯಕ್ಷನ್ ಚಿತ್ರ ಅಂದುಕೊಂಡರು. ಇಲ್ಲಿ ಘೋಸ್ಟ್, ಲವ್, ಅಪ್ಪ ಮಗನ ಸೆಂಟಿಮೆಂಟ್, ಕಾಮಿಡಿ, ಥ್ರಿಲ್ಲರ್, ಆ್ಯಕ್ಷನ್ ಇರೋದನ್ನು ನೋಡಿದವರು ಇನ್ನಷ್ಟು ಕುತೂಹಲಗೊಂಡರು. ಟ್ರೇಲರ್ ದೊಡ್ಡ ಮಟ್ಟದಲ್ಲಿ ರೀಚ್ ಆಯ್ತು. ಎಲ್ಲರಿಂದಲೂ ಪಾಸಿಟಿವ್ ಮಾತು ಕೇಳಿಬಂತು. ಆರಂಭದಲ್ಲಿ 130 ಚಿತ್ರಮಂದಿರದಲ್ಲಿ ರಿಲೀಸ್ ಮಾಡುವ ಐಡಿಯಾ ಇತ್ತು. “ಟೈಗರ್’ಗೆ ಸಿಕ್ಕ ಪ್ರತಿಕ್ರಿಯೆ ನೋಡಿ 200 ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡೋ ಪ್ಲಾನಿಂಗ್ ಆಯ್ತು. ರಿಲೀಸ್ ಮುನ್ನವೇ ಚಿತ್ರದ ಬಗ್ಗೆ ಮಾತಾಡುವಂತಾಗಿದೆ. ಒಂದು ಕಡೆ ಖುಷಿ, ಇನ್ನೊಂದು ಕಡೆ ಭಯ. ಅಷ್ಟೊಂದು ಥಿಯೇಟರ್‌ನಲ್ಲಿ ರಿಲೀಸ್ ಆಗುತ್ತಿರೋ ಖುಷಿಯಾದರೆ, ಓಪನಿಂಗ್ ಕೂಡ ಹಾಗೇ ಇರುತ್ತೋ ಇಲ್ಲವೋ ಎಂಬ ಭಯವೂ ಇದೆ.
ಒಂದು ದೊಡ್ಡ ಗ್ಯಾಪ್ ಆಗಿದ್ದು ನಿಜ. ಎಲ್ಲದ್ದರಲ್ಲೂ ಲವ್‌ಸ್ಟೋರಿಯೇ ಇದೆ. ಒಂದು ಸಿನಿಮಾ ಬಿಟ್ಟರೆ, ಉಳಿದ ಐದು ಚಿತ್ರಗಳ ಕ್ಲೈಮ್ಯಾಕ್ಸ್‌ನಲ್ಲೂ ನಾನು ಸಾಯ್ತಿನಿ. “ರಂಗನ್ ಸ್ಟೈಲ್’ ಚಿತ್ರ ಪ್ರದರ್ಶನದ ಮಧ್ಯಂತರದಲ್ಲಿ ಸುಮಾರು 20 ಜನ ಆಡಿಯನ್ಸ್ ಬಂದು, “ಈ ಚಿತ್ರದಲ್ಲೂ ನೀವು ಸಾಯ್ತಿàರಾ?’ ಅಂತ ಪ್ರಶ್ನಿಸಿದರು. ನನಗೆ
ಮಾತ್ರ ಆ ಸತ್ಯ ಗೊತ್ತಿತ್ತು.
ಆಡಿಯನ್ಸ್ ಚೇಂಜ್ ಕೇಳ್ತಾ ಇದ್ದಾರೆ ಅನಿಸಿತು. ಒಂದೇ ರೀತಿಯ ಪಾತ್ರ ಮಾಡಿದರೆ ನೋಡೋರಿಗೂ ಬೋರ್ ಆಗುತ್ತೆ ಅನಿಸಿತು. ಅವರ ಜಡ್ಜ್ಮೆಂಟ್ ಸರಿ ಇತ್ತು. ಆಗ ಒಂದು ಗ್ಯಾಪ್ ತಗೊಂಡೆ. ಒಂದು, ಎರಡು ವರ್ಷ ಆದರೂ ಪರವಾಗಿಲ್ಲ. ಎಲ್ಲರಿಗೂ ರೀಚ್ ಆಗುವಂತಹ ಕಥೆ ಮಾಡಬೇಕು. ಯಾರಿಗೂ ಬೋರ್ ಆಗದಂತಹ ಸಿನಿಮಾ ಕೊಡಬೇಕು ಅಂತ ನಿರ್ಧರಿಸಿದೆ. ಆಗ ಸಿಕ್ಕಿದ್ದೇ ಈ “ಟೈಗರ್’. ನಂದಕಿಶೋರ್ ಅವರ ಬಳಿ ಹತ್ತಾರು ಕಥೆಗಳಿದ್ದವು. ಅದ್ಯಾವುದನ್ನೂ ಮಾಡದೆ, ಆರುತಿಂಗಳು ನನಗಾಗಿಯೇ “ಟೈಗರ್’ ಕಥೆ ಮಾಡಿದರು. ಆ ಚಿತ್ರಕ್ಕೆ ತಯಾರಿ ಜೋರಾಗಿ ನಡೆಯಿತು. ವಕೌìಟ್ ಮಾಡಿದೆ. ಸಿಕ್ ಪ್ಯಾಕ್ ಮಾಡಿಕೊಂಡೆ. ಪಾತ್ರಕ್ಕೆ ಹೇಗೆ ಕಾಣಬೇಕು, ಬಾಡಿಲಾಂಗ್ವೇಜ್ ಹೇಗಿರಬೇಕು, ಸ್ಕ್ರೀನ್ ಅಪಿಯರೆನ್ಸ್ ಯಾವ ರೀತಿ ಇರಬೇಕು, ಒಬ್ಬ ಪೊಲೀಸ್ ಆಗಲು ಕನಸು ಕಾಣೋನು, ತನ್ನ ಹೇರ್‌ಸ್ಟೈಲ್ ಹೆಂಗಿಟ್ಟುಕೊಳ್ಳಬೇಕು ಎಂಬಿತ್ಯಾದಿ ಕುರಿತು ಗ್ಯಾಪ್‌ನಲ್ಲಿ ತಯಾರಿ ಮಾಡಿಕೊಂಡೆ.
ಸಕ್ಸಸ್ ಇಲ್ಲದಿದ್ದರೂ, ಸಮಾಧಾನವಾಗಿದ್ದೆ. ಕಾರಣ, ಸಿನಿಮಾ ನೋಡಿದ ಮೇಲೆ ವಿಮರ್ಶೆ ಬರೆಯೋರು, ಫೇಸ್‌ಬುಕ್, ಟ್ವಿಟ್ಟರ್‌ನಲ್ಲಿ ಅಭಿಪ್ರಾಯ ತಿಳಿಸೋರೆಲ್ಲಾ ನನ್ನ ನಟನೆ ಬಗ್ಗೆ ಒಳ್ಳೇ ಮಾತಾಡಿದ್ದರೂ, ಸಿನಿಮಾ ಚೆನ್ನಾಗಿಲ್ಲ ಅಂತ ಬರೆಯೋರು. ಆಡಿಯನ್ಸ್ ಕೂಡ ಅದನ್ನು ಓದಿ, ಥಿಯೇಟರ್‌ಗೂ ಹೋಗುತ್ತಿರಲಿಲ್ಲ. ಆಗ ನನ್ನ ಮನಸ್ಥಿತಿ ಹೇಗಾಗಿರಬೇಡ ಹೇಳಿ? ಆದರೂ ನಾನು ತಾಳ್ಮೆ ಕಳೆದುಕೊಳ್ಳಲಿಲ್ಲ. ಯಾವುದೋ ಒಂದು ಸಬೆjಕ್ಟ್ ಸಿಕ್ಕೇ ಸಿಗುತ್ತೆ. ಒಂದು ಸಕ್ಸಸ್ ಸಿಗೋವರೆಗೂ ನಾನು ಎಫರ್ಟ್ ಹಾಕಲೇ ಬೇಕು ಅಂತಾನೇ, ಸಿನಿಮಾ ಮಾಡುತ್ತಲೇ ಬಂದೆ. ಎಲ್ಲವೂ ಹಾಗೇ ಬಂದು, ಹಾಗೆ ಹೋದವು. ಸೋತರೂ ಕೂಡ ನಾನು ಎಫರ್ಟ್ ಹಾಕುವುದನ್ನು ಮಾತ್ರ ಬಿಡಲಿಲ್ಲ. ಆ ಎಫರ್ಟ್ ಇಂದು “ಟೈಗರ್’ ಮೂಲಕ ವಿಶ್ವಾಸ ತುಂಬಿದೆ. ಮೊದಲ ಚಿತ್ರ ಗೆದ್ದಿದ್ದರೆ, ನಾನೊಬ್ಬ ನಟ ಆಗೋಕೆ ಸಾಧ್ಯವಾಗುತ್ತಿರಲಿಲ್ಲ. ಈಗ ಆಗಿದ್ದೆಲ್ಲ ಒಳ್ಳೆಯದ್ದಕ್ಕೆ ಅಂದುಕೊಂಡಿದ್ದೇನೆ. ಸೋಲು ನನಗೊಂದು ಪಾಠ ಕಲಿಸಿದೆ. ಅದೇ ಈಗ ಗೆಲುವಿಗೆ ಮುನ್ನುಡಿ ಬರೆಯಲಿದೆ.
ನನಗೆ ಈ “ಟೈಗರ್’ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತದೆ ಎಂಬ ಬಗ್ಗೆ ಗೊತ್ತಿಲ್ಲ. ವಿಮರ್ಶೆಗಳು ಹೇಗಿರುತ್ತವೋ ಗೊತ್ತಿಲ್ಲ. ಆದರೆ, ಇಷ್ಟು ವರ್ಷಗಳಲ್ಲಿ ಮಾಡಿದ ಸಿನಿಮಾಗಳಿಗೆ ಹೋಲಿಸಿದರೆ, ಹಂಡ್ರೆಡ್ ಪರ್ಸೆಂಟ್ ನಾನು ಈ ಚಿತ್ರದ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದೇನೆ. ನನ್ನ ಎಫರ್ಟ್ ನಾನು ಹಾಕಿದ್ದೇನೆ. ಸೋಲು-ಗೆಲುವು ನನ್ನ ಕೈಯಲಿಲ್ಲ. ಜನರು ಕೊಡುವ ಫಲಿತಾಂಶಕ್ಕೆ ತಲೆಬಾಗುತ್ತೇನೆ. ಒಂದಂತೂ ಸತ್ಯ, ಎಲ್ಲೋ ಒಂದು ಕಡೆ, “ಟೈಗರ್’ ನನಗೊಂದು ಹೊಸ ಇಮೇಜ್ ಕಲ್ಪಿಸಿ, ಇಲ್ಲಿ ಗಟ್ಟಿನೆಲೆ ಕಾಣಿಸುತ್ತದೆ ಎಂಬ ಅದಮ್ಯ ವಿಶ್ವಾಸ ನನಗಿದೆ.
ನಾನೀಗ “ಟೈಗರ್’ ಬಗ್ಗೆ ಮಾತ್ರ ಯೋಚಿಸುತ್ತಿದ್ದೇನೆ. ಮುಂದಿನ ಸಿನಿ ಜರ್ನಿ ಬಗ್ಗೆ ಯೋಚಿಸಿಲ್ಲ. ಕಳೆದ ಮೂರು ವರ್ಷಗಳಿಂದಲೂ ಹಗಲು-ರಾತ್ರಿ ಇದಕ್ಕಾಗಿಯೇ ಲೈಫ್ ಕಳೆದಿದ್ದೇನೆ. ಸಾಕಷ್ಟು ಕನಸು ಕಂಡಿದ್ದೇನೆ. ಈ ಚಿತ್ರ ರಿಲೀಸ್ ಬಳಿಕ ನಾನು ಬೇರೆ ಸಿನಿಮಾ ಬಗ್ಗೆ ಯೋಚಿಸುತ್ತೇನೆ. ನನಗೂ ಆಸೆಗಳಿವೆ. ಆದರೆ, ಈ “ಟೈಗರ್’ ಹೇಗೆ ಜನರ ಮನಸ್ಸನ್ನು ಗೆಲ್ಲುತ್ತೆ ಎಂಬುದನ್ನು ನೋಡಿ ಆಮೇಲೆ ಮುಂದಿನ ಹೆಜ್ಜೆ ಇಡುತ್ತೇನೆ.
ನನಗೆ ಕಲಾತ್ಮಕ, ಕಮರ್ಷಿಯಲ್ ಸಿನಿಮಾಗಳ ವ್ಯತ್ಯಾಸ ಗೊತ್ತಿಲ್ಲ. ಸಿನಿಮಾ ಅಂದರೆ ಒಂದೇ ಅಷ್ಟೇ. ಈ ಎರಡರಲ್ಲೂ ಎಲ್ಲವೂ ಇರಬೇಕು. ಅದು ಇದ್ದರೆ ಮಾತ್ರ ಸಿನಿಮಾ. ನನಗೆ ಹೊಸ ಪ್ರಯೋಗ ಅಂದರೆ, ಕಥೆಯಲ್ಲಿ ಹೊಸತಿರಬೇಕು. ನಟನೆಯಲ್ಲಿ ಹೊಸತನ್ನು ಕೊಡಬೇಕು ಇದು ನನ್ನ ಪ್ರಕಾರ ಪ್ರಯೋಗ. ಅದೇನೆ ಇರಲಿ, ಪ್ರತಿಯೊಬ್ಬ ನಟನಿಗೂ ಒಂದೊಂದು ಸಿನಿಮಾ ಪ್ರಯೋಗವೇ ಆಗಿರುತ್ತೆ.
ವಿಜಯ್ ಭರಮಸಾಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Yadagiri: ಸಂಸದ, ಸಚಿವ, ಶಾಸಕರಿದ್ದರೂ ಅಧಿಕಾರಿಗಳು ಗೈರು; ಸಿಟ್ಟಾದ ಸಚಿವ ದರ್ಶನಾಪುರ
Bengaluru: ಕಬ್ಬನ್ ಪಾರ್ಕ್‌ನಲ್ಲಿ ಪುಷ್ಪ ಪ್ರದರ್ಶನ
S.Africa: ಫಿಕ್ಸಿಂಗ್ ಕೇಸ್‌ನಲ್ಲಿ ಜೈಲು ಪಾಲಾದ ದ. ಆಫ್ರಿಕಾದ ಮಾಜಿ ನಂಬರ್ 1 ಬೌಲರ್
Wedding Story: ಕಂಕಣ ಕಾಲ-3: ವಿವಾಹ ಭೋಜನವಿದು.. ನಾರ್ತ್ ಭಕ್ಷ್ಯಗಳಿವು…
Relationships: ಸಂಬಂಧಗಳಲ್ಲಿ ಮಾಯವಾದ ಸಹಿಷ್ಣುತೆ : ಸಹಿಷ್ಣು ಗುಣದಿಂದಲೇ ಬಾಂಧವ್ಯದ ಪ್ರಗತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.