ಪ್ರೇಕ್ಷಕರ ಮುಂದೆ ಸುಂದರಿ
ಜನ್ಮಾಂತರದ ಕಥೆ
Team Udayavani, May 31, 2019, 6:00 AM IST
ಕನ್ನಡದಲ್ಲಿ ಸಸ್ಪೆನ್ಸ್-ಥ್ರಿಲ್ಲರ್ ಸಿನಿಮಾಗಳಿಗೆ ಲೆಕ್ಕವಿಲ್ಲ. ಅದರಲ್ಲೂ ಜನ್ಮಾಂತರದ ಕಥೆಗಳು ಇಲ್ಲಿ ಬಂದು ಹೋಗಿವೆ. ಈಗ ಆ ಸಾಲಿಗೆ “ಸುವರ್ಣ ಸುಂದರಿ’ ಚಿತ್ರ ಸೇರ್ಪಡೆಯಾಗುತ್ತಿದೆ. ಹೌದು, ಕಳೆದ ಎರಡು ವರ್ಷಗಳಿಂದಲೂ ಚಿತ್ರೀಕರಣ ನಡೆಸಿ, ಬಿಡುಗಡೆಯ ತಯಾರಿಯಲ್ಲಿದ್ದ ಚಿತ್ರ ಇಂದು ತೆರೆಗೆ ಬರುತ್ತಿದೆ. ಈ ಚಿತ್ರದ ವಿಶೇಷವೆಂದರೆ, ಬಹಳ ಸಮಯದ ನಂತರ ಪಂಚಭಾಷೆ ತಾರೆ ಜಯಪ್ರದಾ ಅವರು ಕನ್ನಡ ಪ್ರೇಕ್ಷಕರ ಎದುರು ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಾದರೆ, ಸುವರ್ಣ ಸುಂದರಿ ಅವರೇನಾ? ಈ ಪ್ರಶ್ನೆಗೆ ಸಿನಿಮಾ ನೋಡಬೇಕು. ಜಯಪ್ರದಾ ಈ ಚಿತ್ರದ ಹೈಲೈಟ್. ಆಗಿದ್ದರೂ, ಅವರೊಂದಿಗೆ ಅನೇಕ ಅಂಶಗಳು ಹೈಲೈಟ್ ಆಗಿರಲಿವೆ ಎಂಬುದು ಚಿತ್ರತಂಡದ ಮಾತು.
ಇದು ಮೂರು ಜನ್ಮಗಳ ಸಸ್ಪೆನ್ಸ್-ಥ್ರಿಲ್ಲರ್ ಕಥೆ ಹೊಂದಿರುವ ಚಿತ್ರ. ಈ ಚಿತ್ರದಲ್ಲಿ ಜಯಪ್ರದಾ ಅವರೊಂದಿಗೆ, ಪೂರ್ಣ, ಸಾಕ್ಷಿ, ಇಂದ್ರ, ರಾಮ್, ಮುದ್ದು ಕುಮಾರಿ, ಸಾಯಿಕುಮಾರ್, ತಿಲಕ್, ಅವಿನಾಶ್, ಜೈ ಜಗದೀಶ್, ಸತ್ಯ ಪ್ರಕಾಶ್ ಸೇರಿದಂತೆ ಅನೇಕ ನಟ,ನಟಿಯರು ಕಾಣಿಸಿಕೊಂಡಿದ್ದಾರೆ. “ಸುವರ್ಣ ಸುಂದರಿ’ಯ ಇನ್ನೊಂದು ವಿಶೇಷವೆಂದರೆ, ಇದು ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಏಕಕಾಲಕ್ಕೆ ಮೂಡಿಬರುತ್ತಿದೆ. ಇನ್ನು, “ಎಸ್.ಟೀಂ ಪಿಕ್ಚರ್ಸ್’ ಬ್ಯಾನರ್‌ನಲ್ಲಿ ಎಂ. ಎಲ್ ಲಕ್ಷ್ಮೀ ಚಿತ್ರವನ್ನು ನಿರ್ಮಿಸಿದ್ದಾರೆ. ಎಂ.ಎಸ್.ಎನ್ ಸೂರ್ಯ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಚಿತ್ರದ ಬಗ್ಗೆ ನಿರ್ದೇಶಕ ಎಂ.ಎಸ್.ಎನ್ ಸೂರ್ಯ, ಅವರಿಗೆ ಇನ್ನಿಲ್ಲದ ಭರವಸೆ ಇದೆ. “ಈ ಚಿತ್ರದಲ್ಲಿ ಇಎಫ್ಎಕ್ಸ್ ಸಾಕಷ್ಟು ಪ್ರಭಾವ ಬೀರಲಿದೆ. ಆ ಕೆಲಸಕ್ಕಾಗಿ ಸುಮಾರು ಒಂದು ವರ್ಷ ಸಮಯ ಹಿಡಿದಿದೆ. ಹಾಗಾಗಿಯೇ ಚಿತ್ರ ತಡವಾಗಿದೆ. ಇನ್ನು, ಎಲ್ಲವನ್ನೂ ಸಮಾಧಾನದಿಂದ, ಚೆನ್ನಾಗಿ ಕೆಲಸ ಮಾಡಿದ್ದರಿಂದಲೇ ಪ್ರತಿಯೊಂದು ದೃಶ್ಯವೂ ಸಹ ಅದ್ಭುತವಾಗಿ ಮೂಡಿಬಂದಿದೆ. ಚಿತ್ರದ ಕಾನ್ಸೆಪ್ಟ್, ನಿರೂಪಣೆ ಎಲ್ಲವೂ ಹೊಸ ಫೀಲ್ ಕೊಡುವ ಮೂಲಕ ನೋಡುಗರಿಗೊಂದು ಮನರಂಜನಾತ್ಮಕ ಚಿತ್ರವಾಗಿ ಹೊರಹೊಮ್ಮಲಿದೆ. ಇಲ್ಲಿ ಮನರಂಜನೆ ಜೊತೆಗೆ ಪಕ್ಕಾ ಕಮರ್ಷಿಯಲ್ ಅಂಶಗಳೂ ಇಲ್ಲಿವೆ’ ಎಂಬುದು ನಿರ್ದೇಶಕರ ಮಾತು.
ಆರಂಭದಲ್ಲಿ ಬಿಡುಗಡೆಯಾದ “ಸುವರ್ಣ ಸುಂದರಿ’ ಚಿತ್ರದ ಟ್ರೇಲರ್ ಮತ್ತು ಆಡಿಯೋಗೆ ಒಳ್ಳೆಯ ಮೆಚ್ಚುಗೆ ಸಿಕ್ಕಿತ್ತು. ಅದೇ ಮೆಚ್ಚುಗೆ ಚಿತ್ರಕ್ಕೂ ಸಿಗಲಿದೆ ಎಂಬುದು ಚಿತ್ರತಂಡದ ನಂಬಿಕೆ ಸಾಯಿ ಕಾರ್ತಿಕ್ ಸಂಗೀತವಿದೆ ಯುವ ಮಹಂತಿ ಛಾಯಾಗ್ರಹಣವಿದೆ. ಪ್ರವೀಣ್ ಪುಡಿ ಸಂಕಲನವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ
ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ
ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!
Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರ ಪೈಕಿ ಓರ್ವ ಮೃತ್ಯು, ಸಹಸವಾರೆ ಗಾಯ
ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.