ಸ್ವಾರ್ಥರತ್ನನ ಪ್ರೇಮಪುರಾಣ

Team Udayavani, Dec 28, 2018, 6:00 AM IST

50.jpg

“ಸ್ವಾರ್ಥರತ್ನ’ ಎಂಬ ಚಿತ್ರವೊಂದು ಬರುತ್ತಿರುವ ವಿಚಾರ ನಿಮಗೆ ಗೊತ್ತಿರಬಹುದು. ತುಂಬಾ ದಿನಗಳಿಂದ ಈ ಚಿತ್ರ ನಾನಾ ಕಾರ್ಯಕ್ರಮಗಳ ಮೂಲಕ ಸದ್ದು ಮಾಡುತ್ತಲೇ ಇತ್ತು. ಸಹಜವಾಗಿಯೇ ಸಿನಿಮಾ ಯಾವಾಗ ತೆರೆಕಾಣುತ್ತಿದೆ ಎಂಬ ಪ್ರಶ್ನೆ ಸಿನಿಪ್ರೇಮಿಗಳನ್ನು ಕಾಡುತ್ತಿತ್ತು. ಈಗ ಅದಕ್ಕೆ ಉತ್ತರ ಸಿಕ್ಕಿದೆ. ಚಿತ್ರ ಈ ವಾರ ತೆರೆಕಾಣುತ್ತಿದೆ. ಈ ಚಿತ್ರದ ಮೂಲಕ ಆದರ್ಶ್‌ ನಾಯಕರಾಗುತ್ತಿದ್ದಾರೆ. ಅಶ್ವಿ‌ನ್‌ ಕೊಡಂಗಿ ಈ ಚಿತ್ರದ ನಿರ್ದೇಶಕರು. ಈ ಹಿಂದೆ “ಫ‌ಸ್ಟ್‌ರ್‍ಯಾಂಕ್‌ ರಾಜು’ ಚಿತ್ರಕ್ಕೆ ಕಥೆ ಬರೆದಿರುವ ಅಶ್ವಿ‌ನ್‌ ಅವರು, ಈಗ “ಸ್ವಾರ್ಥರತ್ನ’ ನಿರ್ದೇಶಕರಾಗುತ್ತಿದ್ದಾರೆ. “ಫ‌ಸ್ಟ್‌ ರ್‍ಯಾಂಕ್‌ ರಾಜು’ ಸಿನಿಮಾ ನೋಡಿದ ನಾಯಕ ಆದರ್ಶ್‌, ಈ ತರಹದ ಒಂದು ಸಿನಿಮಾವನ್ನು ನನಗೂ ಮಾಡಿಕೊಡಿ ಎಂದು ಕೇಳಿಕೊಂಡರಂತೆ. ಅದರ ಪರಿಣಾಮವಾಗಿ ಆರಂಭವಾಗಿದ್ದೇ “ಸ್ವಾರ್ಥರತ್ನ’. ಎಲ್ಲಾ ಓಕೆ ಚಿತ್ರದ ಕಥೆಗೂ ಟೈಟಲ್‌ಗ‌ೂ ಹೇಗೆ ಹೊಂದಿಕೆಯಾಗುತ್ತದೆ ಎಂದು ನೀವು ಕೇಳಬಹುದು. ಇಡೀ ಸಿನಿಮಾ ಸ್ವಾರ್ಥಿ ಯುವಕನೊಬ್ಬನ ಸುತ್ತ ಸಾಗುವುದರಿಂದ ಟೈಟಲ್‌ ತುಂಬಾ ಚೆನ್ನಾಗಿ ಹೊಂದಿಕೆಯಾಗುತ್ತದೆ ಎಂಬುದು ಚಿತ್ರತಂಡದ ಮಾತು. 

ನಾಯಕ ಆದರ್ಶ್‌ ಸಿನಿಮಾ ರಂಗಕ್ಕೆ ಬರುವ ಮುನ್ನ ಸಾಕಷ್ಟು ತಯಾರಿ ಮಾಡಿಕೊಂಡೇ ಬಂದಿದ್ದಾರೆ. ಹಿಂದಿ, ತಮಿಳು ಚಿತ್ರದಲ್ಲಿ ಮಾಡಿರುವ ಆದರ್ಶ್‌, ಸ್ವಾರ್ಥ ಸ್ವಭಾವ ಹುಡುಗನಾಗಿ ಅವರಿಲ್ಲಿ ನಟಿಸಿದ್ದಾರಂತೆ. ಎಲ್ಲಾ ಪಾತ್ರ ನಿರ್ವಹಿಸುವುದು ಸುಲಭ. ಆದರೆ, ಸ್ವಾರ್ಥ ವ್ಯಕ್ತಿಯ ವ್ಯಕ್ತಿತ್ವವನ್ನು ತೋರ್ಪಡಿಸುವುದು ಕಷ್ಟದ ಕೆಲಸವಾಗಿತ್ತಂತೆ. ಸದಾ ಸ್ವಾರ್ಥವನ್ನೇ ಯೋಚಿಸುವ ವ್ಯಕ್ತಿಗೆ ಲವ್‌ ಆದಾಗ ಹೇಗಿರುತ್ತದೆ, ಆತ ಹುಡುಗಿಗೆ ಹೃದಯದಲ್ಲಿ ಜಾಗ ಕೊಡುವಲ್ಲೂ ಸ್ವಾರ್ಥಿಯಾಗುತ್ತಾನಾ ಎಂಬ ಅಂಶದೊಂದಿಗೆ ಚಿತ್ರ ಸಾಗುತ್ತದೆಯಂತೆ.  ಇಲ್ಲಿ ನಿರ್ಮಾಣದಲ್ಲೂ ತೊಡಗಿಸಿಕೊಂಡಿರುವ ಆದರ್ಶ್‌, ಸಿನಿಮಾ ನಿರ್ಮಾಣದ ಕಷ್ಟ ಅರಿತಿದ್ದಾರಂತೆ. ಈಗಿನ ಕಾಲಕ್ಕೆ ತಕ್ಕಂತಹ ಕಥೆ ಇಲ್ಲಿದೆ. ಭರಪೂರ ಮನರಂಜನೆಯೂ ಇದೆ. ಇಡೀ ಚಿತ್ರ ನಗುವಿನಲ್ಲೇ ಸಾಗಿಸುತ್ತದೆ ಎಂದು ಚಿತ್ರದ ಬಗ್ಗೆ ವಿಶ್ವಾಸದಿಂದ ಹೇಳುತ್ತಾರೆ. 

ಚಿತ್ರದ ನಿರ್ದೇಶಕ ಅಶ್ವಿ‌ನ್‌ ಕೊಡಂಗಿ ಹೇಳುವಂತೆ, ಇದು ಫ‌ುಲ್‌ ಮೀಲ್ಸ್‌. ಥಿಯೇಟರ್‌ನೊಳಗೆ ಬಂದ ಪ್ರೇಕ್ಷಕನಿಗೆ ಎಲ್ಲಾ ರೀತಿಯ ರಸಗಳು ಸಿಗುತ್ತವೆಯಂತೆ. “ಹಾಸ್ಯ, ರೊಮ್ಯಾನ್ಸ್‌ ಜೊತೆಗೆ ಸಾಗುತ್ತಲೇ ನಗಿಸುತ್ತ ಹೋಗುವ ಚಿತ್ರದಲ್ಲಿ “ನವರಸ’ ಮೀರಿ ಸ್ವಾರ್ಥ ರಸವೂ ಇದೆ. ಅದನ್ನು ಚಿತ್ರಮಂದಿರದಲ್ಲಿ ನೋಡಿ’ ಎನ್ನುವುದು ಅಶ್ವಿ‌ನ್‌ ಮಾತು. ಚಿತ್ರದಲ್ಲಿ ನಾಯಕಿಯರಾಗಿ ರಿಷಿಕಾ ವರ್ಷ ಹಾಗೂ ಸ್ನೇಹಾ ಸಿಂಗ್‌ ನಟಿಸಿದ್ದಾರೆ. ರಿಷಿಕಾಗೆ ಇದು ಮೊದಲ ಚಿತ್ರ. ಅವರಿಲ್ಲಿ ಕವನ ಎಂಬ ಪಾತ್ರ ಮಾಡಿದ್ದಾರಂತೆ. ಅದೊಂದು ರೀತಿ ಗಂಡುಬೀರಿ ಹುಡುಗಿ ಪಾತ್ರ. ಹುಡುಗಿಯೊಬ್ಬಳು ಸ್ವಾರ್ಥಿ ಹುಡುಗನನ್ನು ಭೇಟಿ ಮಾಡಿದಾಗ ಏನೆಲ್ಲಾ ಆಗುತ್ತದೆ ಎಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆಯಂತೆ. ಸ್ನೇಹಾ ಸಿಂಗ್‌ ಕೂಡಾ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು. 
 
ಟಾಪ್ ನ್ಯೂಸ್

22-hunsur

Hunsur: ಒಂದೆಡೆ ಚಿರತೆ ಸೆರೆ, ಮತ್ತೊಂದೆಡೆ ಅಪಘಾತ

CDS ಬಿಪಿನ್‌ ರಾವತ್‌ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಪತನಕ್ಕೆ ಮಾನವ ಲೋಪವೇ ಕಾರಣ: ವರದಿ

Human Error: ಮಾನವ ಲೋಪದಿಂದಲೇ CDS ರಾವತ್‌ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಪತನ: ವರದಿ

21-sabarimala

Sabarimala: ಭಕ್ತರ ಸುರಕ್ಷೆಗಾಗಿ ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ ರವಿ ಹೇಳಿಕೆ ಪ್ರಕರಣ; ಕಣ್ಣೀರು ಹಾಕಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

Belagavi: ಸಿ.ಟಿ ರವಿ ಹೇಳಿಕೆ ಪ್ರಕರಣ; ಕಣ್ಣೀರು ಹಾಕಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ

CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ

Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ

Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

Ayogya 2: ಇಲ್ಲಿ ಎಲ್ಲವೂ ಡಬಲ್‌ ಆಗಿರುತ್ತದೆ…ಇದು ʼಅಯೋಗ್ಯʼನ ಭರವಸೆ

Ayogya 2: ಇಲ್ಲಿ ಎಲ್ಲವೂ ಡಬಲ್‌ ಆಗಿರುತ್ತದೆ…ಇದು ʼಅಯೋಗ್ಯʼನ ಭರವಸೆ

Sandalwood: ರಂಗೇರಲಿದೆ ಜನವರಿ; ಹೊಸ ವರ್ಷದ ಮೊದಲ ತಿಂಗಳಲ್ಲಿ ಸಿನಿ ಮಿಂಚು

Sandalwood: ರಂಗೇರಲಿದೆ ಜನವರಿ; ಹೊಸ ವರ್ಷದ ಮೊದಲ ತಿಂಗಳಲ್ಲಿ ಸಿನಿ ಮಿಂಚು

Pushpa-2; Bollywood withered in Pushpa fire

Pushpa-2; ಪುಷ್ಪ ಫೈರ್‌ ನಲ್ಲಿ ಬಾಡಿದ ಬಾಲಿವುಡ್

Yuva rajkumar’s Ekka movie muhurtha

Ekka: ಯುವ ರಾಜಕುಮಾರ್‌ ಹೊಸ ಸಿನಿಮಾ ʼಎಕ್ಕʼ ಮುಹೂರ್ತ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

22-hunsur

Hunsur: ಒಂದೆಡೆ ಚಿರತೆ ಸೆರೆ, ಮತ್ತೊಂದೆಡೆ ಅಪಘಾತ

Sakrebailu: ತಾಂತ್ರಿಕ ದೋಷದಿಂದ ಸುಟ್ಟು ಕರುಕಲಾದ ಬಸ್

Sakrebailu: ತಾಂತ್ರಿಕ ದೋಷದಿಂದ ಸುಟ್ಟು ಕರಕಲಾದ ಬಸ್

CDS ಬಿಪಿನ್‌ ರಾವತ್‌ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಪತನಕ್ಕೆ ಮಾನವ ಲೋಪವೇ ಕಾರಣ: ವರದಿ

Human Error: ಮಾನವ ಲೋಪದಿಂದಲೇ CDS ರಾವತ್‌ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಪತನ: ವರದಿ

21-sabarimala

Sabarimala: ಭಕ್ತರ ಸುರಕ್ಷೆಗಾಗಿ ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ ರವಿ ಹೇಳಿಕೆ ಪ್ರಕರಣ; ಕಣ್ಣೀರು ಹಾಕಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

Belagavi: ಸಿ.ಟಿ ರವಿ ಹೇಳಿಕೆ ಪ್ರಕರಣ; ಕಣ್ಣೀರು ಹಾಕಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.