ಉಡದಂತೆ ಇರುವ ಹುಂಬನ ಕಥೆ
Team Udayavani, Jul 20, 2018, 6:00 AM IST
“ಗೂಳಿಹಟ್ಟಿ’ ಚಿತ್ರದಲ್ಲಿ ನಟಿಸಿದ್ದ ಪವನ್ ಸೂರ್ಯ ಈಗ ಹೆಸರು ಬದಲಾಯಿಸಿಕೊಂಡಿದ್ದಾರೆ. ಸೂರ್ಯನನ್ನು ಶೌರ್ಯನನ್ನಾಗಿಸಿಕೊಂಡಿದ್ದಾರೆ. ಅಲ್ಲಿಗೆ ಇನ್ನು ಅವರು ಪವನ್ ಶೌರ್ಯ. ಅದೇ ಹೆಸರಲ್ಲಿ “ಉಡುಂಬ’ ಎಂಬ ಚಿತ್ರವನ್ನು ಮಾಡಿ ಮುಗಿಸಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದಿದ್ದು, ಮುಂದಿನ ತಿಂಗಳು ಚಿತ್ರ ಬಿಡುಗಡೆಯಾಗುತ್ತದಂತೆ. ಅದಕ್ಕೂ ಮುನ್ನ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಲಾಯಿತು. ಈ ಚಿತ್ರಕ್ಕೆ ಶಿವರಾಜ್ ಎನ್ನುವವರು ಕಥೆ ಬರೆದು ನಿರ್ದೇಶಿಸಿದ್ದಾರೆ. ಹೋದಲ್ಲಿ ಬಂದಲ್ಲಿ ಎಲ್ಲರೂ ಅವರನ್ನು “ಉಡುಂಬ’ ಎಂದರೇನು ಎಂದು ಕೇಳುತ್ತಾರಂತೆ. ನಿರ್ದೇಶಕರು ಹೇಳುವಂತೆ, ಇದು “ಉಡುಂಬ’ ಎಂದರೆ ಉಡದಂತೆ ಇರುವ ಹುಂಬನ ಕಥೆ. “ಉಡ ಎಂದರೆ ಹೇಗೆ ಅಂತ ಎಲ್ಲರಿಗೂ ಗೊತ್ತು. ಒಮ್ಮೆ ಹಿಡಿದರೆ ಬಿಡೋದಿಲ್ಲ. ಅದೇ ರೀತಿ ಒಬ್ಬ ಹುಂಬ, ಉಡದಂತೆ ಆಡಿದರೆ ಹೇಗಿರುತ್ತದೋ ಅದೇ ಕಥೆ. ಚಿತ್ರ ಬಹಳ ಚೆನ್ನಾಗಿ ಬಂದಿದೆ’ ಎಂದರು.
ಪವನ್ ಶೌರ್ಯ ಇಲ್ಲಿ ಮೀನುಗಾರರ ಹುಡುಗನಾಗಿ ಕಾಣಿಸಿಕೊಂಡಿದ್ದಾರಂತೆ. “”ಗೂಳಿಹಟ್ಟಿ’ ನಂತರ ವಿಭಿನ್ನವಾದ ಪಾತ್ರ ಇದು. ಹಾಡು, ಫೈಟು, ಎಮೋಷನ್ ಎಲ್ಲಾ ಚೆನ್ನಾಗಿ ಬಂದಿದೆ. ಚಿತ್ರಕ್ಕೆ ಕುಂಗು ಚಂದ್ರು ಮತ್ತು ಜಾಗ್ವಾರ್ ಸಣ್ಣಪ್ಪ ಅವರು ಫೈಟ್ ಮಾಡಿಸಿದ್ದಾರೆ. ಕನ್ನಡ ಚಿತ್ರ ನೋಡಿ ಬೆಳಸಿ’ ಎಂದು ಹೇಳಿದರು. ಇನ್ನು ನಾಯಕಿ ಚಿರಶ್ರೀ ಇಲ್ಲಿ ನರ್ಸಿಂಗ್ ವಿದ್ಯಾರ್ಥಿನಿಯಾಗಿ ನಟಿಸಿದ್ದಾರಂತೆ. “ಸಿಟಿಗೆ ಹೋಗಿರಿ¤àನಿ. ಅಲ್ಲಿ ಹೀರೋ ಜೊತೆ …’ ಅಂತ ಏನೋ ಹೇಳುವುದಕ್ಕೆ ಹೊರಟಿದ್ದರು. ಅಷ್ಟರಲ್ಲಿ ನಿರ್ದೇಶಕರು ಕಣ್ಣು ಬಿಟ್ಟಿದ್ದರಿಂದ, “ಸಾಕು ಅಷ್ಟೇ’ ಅಂತ ಹೇಳಿ ಮೈಕು ಕೆಳಗಿಟ್ಟರು.
ಚಿತ್ರಕ್ಕೆ “ಬಹದ್ದೂರ್’ ಚೇತನ್, “ಅಲೆಮಾರಿ’ ಸಂತು ಮತ್ತು ಲೋಕೇಶ್ ಹಾಡುಗಳನ್ನು ಬರೆದಿದ್ದಾರೆ. ಇನ್ನು ಚಿತ್ರಕ್ಕೆ ವಿನೀತ್ ರಾಜ್ ಸಂಗೀತ ಸಂಯೋಜಿಸಿದ್ದಾರೆ. ಕಥೆ ಇಷ್ಟವಾದ ಕಾರಣ ಈ ಚಿತ್ರವನ್ನು ಅವರು ಒಪ್ಪಿದರಂತೆ. “ಇದು ನನ್ನ ಮೂನೆಯ ಚಿತ್ರ. ಇದಕ್ಕೂ ಮುನ್ನ “ಮುದ್ದು ಮನಸೇ’ ಮತ್ತು “ಪ್ರೇಮ ಪಲ್ಲಕ್ಕಿ’ ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದೆ. ಇಲ್ಲಿ ಹಾಡುಗಳು ಚೆನ್ನಾಗಿ ಬಂದಿವೆ’ ಎಂದರು.
ಚಿತ್ರದ ನಿರ್ಮಾಪಕರಾದ ಹನುಮಂತ ರಾವ್ ಮತ್ತು ವೆಂಕಟ ರೆಡ್ಡಿ ಇಬ್ಬರಿಗೂ ಕನ್ನಡ ಬರುವುದಿಲ್ಲ. ಕಾರಣ ಇಬ್ಬರೂ ತೆಲುಗಿನವರು. ಇಬ್ಬರೂ ಚಾಲಾ ಬಾಗುಂದಿ, ಮಂಚಿ ಆಡಿಯೋ, ಅಂದರಿಕಿ ನಮಸ್ಕಾರಾಲು ಎಂದು ಮಾತು ಮುಗಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.