ಕಿಲಾಡಿ ಮಕ್ಕಳ ಹಾಡು-ಪಾಡು

Team Udayavani, Dec 29, 2017, 10:06 AM IST

29-4.jpg

ಅವರು ಚಾಮುಂಡೇಶ್ವರಿ ದೇವಿ ಭಕ್ತರು. ಒಮ್ಮೆ ದೇವಿ ದರ್ಶನಕ್ಕೆ ಹೋಗುವಾಗ, ಆ ಬೆಟ್ಟದ ದಾರಿಯಲ್ಲಿ ಒಂದು ಚಿಕ್ಕ ಪೇಪರ್‌ ಸಿಕ್ಕಿದೆ. ಆ ಪೇಪರ್‌ ಎತ್ತಿಕೊಂಡು, ಅವರು ಅದರಲ್ಲಿದ್ದ ಮಾಹಿತಿಯೊಂದನ್ನು ಓದಿದ್ದಾರೆ. ಆಮೇಲೆ ಅದರ ಮೇಲೊಂದು ಕಥೆ ಹೆಣೆದು ಒಂದು ಸಿನಿಮಾ ಮಾಡಿದ್ದಾರೆ. ಹಾಗೆ ಮಾಡಿದ ಚಿತ್ರಕ್ಕೆ “ಕಿಲಾಡಿಗಳು’ ಎಂದು ನಾಮಕರಣ ಮಾಡಿದ್ದಾರೆ. “ಕಿಲಾಡಿಗಳು’ ಅಂದಾಕ್ಷಣ, ನೆನಪಾಗೋದೇ, ವಿಷ್ಣುವರ್ಧನ್‌ ಮತ್ತು ದ್ವಾರಕೀಶ್‌ ಅಭಿನಯದ “ಕಿಲಾಡಿಗಳು’ ಚಿತ್ರ. ಎರಡು ದಶಕದ ಬಳಿಕ ಅದೇ ಚಿತ್ರದ ಹೆರನ್ನಿಟ್ಟುಕೊಂಡು ಹೀಗೊಂದು ಮಕ್ಕಳ ಚಿತ್ರ ಮಾಡಿದ್ದಾರೆ ನಿರ್ದೇಶಕ ಹರಿಹರನ್‌. ಚಿತ್ರದ ಶೀರ್ಷಿಕೆಗೆ “ಆಪರೇಷನ್‌’ ಎಂಬ ಅಡಿಬರಹವೂ ಇದೆ. ಇತ್ತೀಚಿಗೆ ಚಿತ್ರದ ಹಾಡುಗಳನ್ನು ಹೊರತರುವ ಮೂಲಕ ಚಿತ್ರ ಬಿಡುಗಡೆಯ ಸೂಚನೆ ನೀಡಿತು ಚಿತ್ರತಂಡ.

ನಿರ್ದೇಶಕ ಹರಿಹರನ್‌ ಅವರಿಗೆ ಆ ಬೆಟ್ಟದ ದಾರಿಯಲ್ಲಿ ಸಿಕ್ಕ ಚಿಕ್ಕ ಪೇಪರ್‌ನಲ್ಲಿ ಒಂದು ವಿಷಯವಿತ್ತು. ಅದನ್ನು ಓದಿದ ಮೇಲೆ “ಕಿಲಾಡಿಗಳು’ ಕಥೆ ರೆಡಿ ಮಾಡಿ, ಅದಕ್ಕೆ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾಗಿ ಹೇಳಿಕೊಂಡರು ಅವರು. ಕಥೆ ಬಗ್ಗೆ ಹೇಳುವುದಾದರೆ, “ಮಕ್ಕಳನ್ನು ಅಪಹರಿಸಿ ಅವರನ್ನು ಅಪರಾಧ ಚಟುವಟಿಕೆಗಳಿಗೆ ಬಳಸಿಕೊಳ್ಳುವುದು, ಇನ್ನು ಮಕ್ಕಳು ವಿದೇಶಕ್ಕೆ ಹೋದಾಗ ತಂದೆಯ ಜೊತೆಗಿನ ಬಾಂಧವ್ಯ, ಶ್ರೀಮಂತ ಹಾಗು ಮದ್ಯಮ ವರ್ಗ, ಮೇಲ್ವರ್ಗ, ಕೆಳವರ್ಗ ಮಕ್ಕಳ ಕುರಿತಾದ ಸೂಕ್ಷ್ಮ ವಿಷಯಗಳು ಚಿತ್ರದ ಕಥಾವಸ್ತು. ಚಿತ್ರದಲ್ಲಿರುವ 167 ಪಾತ್ರಗಳ ಪೈಕಿ, 48 ಮಕ್ಕಳು ತೆರೆಯ ಮೇಲೆ ರಾರಾಜಿಸುತ್ತಾರೆ. ಬೆಂಗಳೂರು ಸುತ್ತಮುತ್ತ 81 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ’ ಎಂದು ವಿವರ ಕೊಡುತ್ತಾರೆ ನಿರ್ದೇಶಕರು.

ಚಿತ್ರದಲ್ಲಿ ಮಹೇಂದ್ರ ಮುನೋತ್‌ ಅವರು ಪೊಲೀಸ್‌ ಅಧಿಕಾರಿ ಪಾತ್ರ ನಿರ್ವಹಿಸಿದ್ದಾರಂತೆ.  “ಸುಮಾರು ಏಳು ದಿನಗಳ ಕಾಲ ಚಿತ್ರೀಕರಣದಲ್ಲಿ ಭಾಗವಹಿಸಿದ್ದೇನೆ. ಸಿಟಿ ಮಾರ್ಕೆಟ್‌ನ ಜನ ಜಂಗಳಿಯಲ್ಲಿ ಚಿತ್ರೀಕರಣ ಮಾಡಿದ್ದು ಮರೆಯದ ಅನುಭವ. ಅಷ್ಟೊಂದು ಜನರ ಮಧ್ಯೆ ಕೆಲಸ ಮಾಡುವುದು ಸುಲಭವಲ್ಲ. ಆದರೆ, ಯಾರಿಗೂ ತೊಂದರೆಯಾಗದಂತೆ ಚಿತ್ರೀಕರಿಸಲಾಗಿದೆ. ನಿರ್ದೇಶಕರು ನಾಲ್ಕು ನಿಮಿಷದ ಸಂಭಾಷಣೆಯನ್ನು ಹೇಳಿಸಿರುವುದು ವಿಶೇಷ. ಇನ್ನು, ಇಲ್ಲಿ ಅಪರಾಧಿಗಳನ್ನು ಬೆನ್ನತ್ತಿ ಹಿಡಿಯುವ ದೃಶ್ಯ ಚೆನ್ನಾಗಿ ಮೂಡಿ ಬಂದಿದೆ ಎನ್ನುತ್ತಾರೆ ಮಹೇಂದ್ರ ಮುನೋತ್‌.

ಎ.ಟಿ.ರವೀಶ್‌ ಚಿತ್ರದ ಮೂರು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಲಹರಿ ಸಂಸ್ಥೆ ಹೊರತಂದ ಮೂರು ಹಾಡುಗಳನ್ನು ಅಂದು ಪ್ರದರ್ಶಿಸಲಾಯಿತು.

ಟಾಪ್ ನ್ಯೂಸ್

Foot ball

ಬೆಂಗಳೂರಿನಲ್ಲಿ ಭಾರತ- ಮಾಲ್ಡೀವ್ಸ್‌   ವನಿತಾ ಫುಟ್‌ಬಾಲ್‌

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

ಡಿ. 26: ಶಬರಿಮಲೆಯಲ್ಲಿ ಮಂಡಲ ಪೂಜೆ

ಡಿ. 26: ಶಬರಿಮಲೆಯಲ್ಲಿ ಮಂಡಲ ಪೂಜೆ

Madikeri: ಕೊಟ್ಟಿಗೆಯಿಂದ ಹಸು ಕಳವು; ದೂರು ದಾಖಲು

Madikeri: ಕೊಟ್ಟಿಗೆಯಿಂದ ಹಸು ಕಳವು; ದೂರು ದಾಖಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸ್ಟಾರ್‌ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್‌. ನರಸಿಂಹಲು

Sandalwood: ಸ್ಟಾರ್‌ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್‌. ನರಸಿಂಹಲು

KD

Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್‌

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Foot ball

ಬೆಂಗಳೂರಿನಲ್ಲಿ ಭಾರತ- ಮಾಲ್ಡೀವ್ಸ್‌   ವನಿತಾ ಫುಟ್‌ಬಾಲ್‌

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

football

Football Ranking: ಭಾರತ ಒಂದು ಸ್ಥಾನ ಪ್ರಗತಿ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.