ಕ್ಯಾಚಿ ಟೈಟಲ್ ಅರ್ಥ ಆಗೋದೇ ಕಷ್ಟ
ಕಿರು ಪರಿಚಯ
Team Udayavani, Jul 5, 2019, 5:00 AM IST
‘ಕಿರು’ ಎನ್ನುವ ಪದಕ್ಕಾದರೂ ಎಲ್ಲರಿಗೂ ಅರ್ಥ ತಿಳಿದಿದೆ. ಆದರೆ ಈ ‘ಮಿನ್ಕಣಜ’ ಎಂಬ ಪದಕ್ಕೆ ಅರ್ಥವೇನು ಅಂದ್ರೆ, ‘ಕನ್ನಡದಲ್ಲಿ ಇಂಥದ್ದೊಂದು ಪದವೇ ಇಲ್ಲ. ಇಂಗ್ಲೀಷ್‌ನಲ್ಲಿ ಈ ಪದವಿದೆ. ಕನ್ನಡದಲ್ಲಿ ಇಲ್ಲಿಯವರೆಗೆ ಯಾರೂ ಈ ಪದ ಬಳಸದಿದ್ದರಿಂದ, ಚಿತ್ರಕ್ಕೆ ಕ್ಯಾಚಿ ಆಗಿರಲಿ ಎನ್ನುವ ಕಾರಣಕ್ಕೆ ಈ ಪದವನ್ನು ಬಳಸಿಕೊಂಡಿದ್ದೇವೆ’ ಎನ್ನುತ್ತದೆ ಚಿತ್ರತಂಡ.
ಇನ್ನು ಅರ್ಥವಿರದ ಅಥವಾ ಅರ್ಥ ಗೊತ್ತಿರದ ಈ ‘ಕಿರು ಮಿನ್ಕಣಜ’ ಶೀರ್ಷಿಕೆಯ ಚಿತ್ರಕ್ಕೆ ಮಂಜು ಎಂ. ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಸದ್ಯ ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿದ್ದು, ಸದ್ಯ ಚಿತ್ರ ಸೆನ್ಸಾರ್ ಅಂಗಳದಲ್ಲಿದೆ. ಇತ್ತೀಚೆಗೆ ಈ ಚಿತ್ರತಂಡ ಚಿತ್ರದ ಪ್ರಚಾರದ ಮೊದಲ ಹಂತವಾಗಿ ಒಂದು ಹಾಡನ್ನು ಬಿಡುಗಡೆ ಮಾಡಿದೆ.
ಚಿತ್ರ ಸಾಹಿತಿ ಡಾ. ವಿ ನಾಗೇಂದ್ರ ಪ್ರಸಾದ್, ಮಾಜಿ ಸಚಿವ ಟಿ.ಬಿ ಜಯಚಂದ್ರ, ಕರಿಸುಬ್ಬು, ದಿನೇಶ್ ಗಾಂಧಿ ಮೊದಲಾದವರು ಕಾರ್ಯಕ್ರಮದಲ್ಲಿ ಹಾಜರಿದ್ದು, ‘ಕಿರು ಮಿನ್ಕಣಜ’ ಚಿತ್ರದ ಮೊದಲ ಹಾಡನ್ನು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಇನ್ನು ಚಿತ್ರದ ಬಗ್ಗೆ ಬೇರೇನೂ ಮಾಹಿತಿಯನ್ನು ಬಿಟ್ಟುಕೊಡದ ಚಿತ್ರತಂಡ, ‘ಚಿತ್ರದ ಟೈಟಲ್ ಬಗ್ಗೆ ಹೇಳಿದ್ರೆ, ಕಥೆಯ ಸಾಲನ್ನು ಬಿಟ್ಟುಕೊಟ್ಟಂತೆ ಆಗುತ್ತದೆ. ಸಸ್ಪೆನ್ಸ್-ಥ್ರಿಲ್ಲರ್ ಜೊತೆಗೊಂದು ಸುಂದರ ಪ್ರೇಮಕಥೆ ಇರಲಿದೆ. ಒಂದು ವಸ್ತುವಿನ ಮೇಲೆ ಕೇಂದ್ರಿಕೃತಗೊಂಡು, ಅಪರಾಧಗಳು ಆಗುತ್ತಾ ಹೋಗುತ್ತದೆ. ಮುಂದಿನ ತಿಂಗಳು ತೆರೆ ಕಾಣಲಿರುವುದರಿಂದ, ಪ್ರತಿವಾರ ಒಂದೊಂದೇ ಹಾಡನ್ನು ಬಿಡುಗಡೆ ಮಾಡಲಾಗುವುದು’ ಎಂದು ಹೇಳಿ ಸುಮ್ಮನಾಯಿತು. ಸದ್ಯ ಅಷ್ಟಾದರೂ ಚಿತ್ರತಂಡ ಹೇಳಿತಲ್ಲ ಎಂಬ ಸಮಾಧಾನದಿಂದ ಪತ್ರಕರ್ತರು ಕೂಡ ಚಿತ್ರದ ಬಗ್ಗೆ ಹೆಚ್ಚೇನು ಪ್ರಶ್ನೆ ಕೇಳಲು ಮುಂದಾಗಲಿಲ್ಲ. ‘ಕಿರು ಮಿನ್ಕಣಜ’ ಚಿತ್ರದಲ್ಲಿ ನವನಟರಾದ ರವಿ ಚಂದ್ರ. ವಿ, ಅರ್ಜುನ್ ರಮೇಶ್ ನಾಯಕ ನಟರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ವರ್ಷಿಕಾ ನಾಯಕ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಖಳನಾಗಿ ಜೀವನ್ ನೀನಾಸಂ, ಶ್ರೀಧರ ನಾಯಕ್, ಶ್ರುತಿ ನಾಯಕ್ ಹರೀಶ್ ನೀನಾಸಂ, ಗೋಪಾಲ್ ಮಹರಾಜ, ಮುಂತಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಧ್ರುವರಾಜ್ ಎಸ್-ಗಂಧರ್ವ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ಸುರೇಶ್ ಬಾಬು ಛಾಯಾಗ್ರಹಣ, ಸುಪ್ರೀತ್ ಶಂಕರ್ ಸಂಕಲನ ಕಾರ್ಯವಿದೆ. ಜನಾರ್ಧನ್ ಆರ್. (ದಸೂಡಿ) ಈ ಚಿತ್ರವನ್ನು ನಿರ್ಮಿಸಿದ್ದಾರೆ. ಮಂಡ್ಯ, ಪಾಂಡವಪುರ, ಬೆಂಗಳೂರು ಮೊದಲಾದ ಕಡೆಗಳಲ್ಲಿ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಒಟ್ಟಾರೆ ವಿ’ಚಿತ್ರ’ ಹೆಸರಟನ್ನಿಟ್ಟುಕೊಂಡು ತೆರೆಗೆ ಬರುತ್ತಿರುವ ‘ಕಿರು ಮಿನ್ಕಣಜ’ ಚಿತ್ರ ಪ್ರೇಕ್ಷಕರಿಗೆ ಎಷ್ಟರ ಮಟ್ಟಿಗೆ ಇಷ್ಟವಾಗಲಿದೆ ಅನ್ನೋದು ಗೊತ್ತಾಗಬೇಕಾದರೆ, ಇನ್ನೊಂದು ತಿಂಗಳು ಕಾಯಬೇಕು.•
ಜಿ.ಎಸ್.ಕಾರ್ತಿಕ ಸುಧನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.