ಹುಡುಗಿನೇ ಹಿಂಗಾ, ಹುಡುಗೀರೇ ಹಿಂಗಾ


Team Udayavani, Feb 23, 2018, 11:34 AM IST

hudugine.jpg

ಕನ್ನಡದಲ್ಲಿ ಈಗಾಗಲೇ ಸಾಕಷ್ಟು ವಿಡಿಯೋ ಆಲ್ಬಂಗಳು ಬಂದಿವೆ. ಬರುತ್ತಲೂ ಇವೆ. ಈಗ ಅಂಥದ್ದೇ ಹೊಸ ವಿಡೀಯೋ ಆಲ್ಬಂ ಇತ್ತೀಚೆಗೆ ಬಿಡುಗಡೆಯಾಗಿದೆ. ಬಹುತೇಕ ಹೊಸ ಪ್ರತಿಭೆಗಳೇ ಸೇರಿಕೊಂಡು ಈ ಆಲ್ಬಂ ಹೊರತಂದಿವೆ. ಇತ್ತೀಚೆಗೆ ವಿಡಿಯೋ ಹಾಡು ತೋರಿಸುವುದರ ಮೂಲಕ ತಮ್ಮ ಮೊದಲ ಪ್ರಯತ್ನದ ಬಗ್ಗೆ ಹೇಳಿಕೊಳ್ಳಲು ಪತ್ರಕರ್ತರ ಮುಂದೆ ಬಂದಿದ್ದರು ಗಣೇಶ್‌.

ಅವರ ಮೊದಲ ಪ್ರಯತ್ನದ ವಿಡೀಯೋ ಆಲ್ಬಂಗೆ ಇಟ್ಟುಕೊಂಡಿರುವ ಹೆಸರು “ಲವ್‌ಲೆಫ್ಟ್ ಅಸ್‌’. ಈ ಶೀರ್ಷಿಕೆಗೆ “ಹುಡುಗಿನೇ ಹಿಂಗಾ, ಹುಡುಗೀರೇ ಹಿಂಗಾ’ ಎಂಬ ಅಡಿಬರಹವೂ ಇದೆ. ಪ್ರೀತಿ ಬಿಧ್ದೋದ್ದಾಗ ಸಹಜವಾಗಿ ಹುಡುಗರು ಹೇಳುವ ಮಾತಿದು. ಅಂಥದ್ದೊಂದು ಕಲ್ಪನೆಯ ಮೇಲೊಂದು ಹಾಡು ಬರೆದು, ಚಿತ್ರೀಕರಿಸಿದ್ದಾರೆ ಗಣೇಶ್‌. ಈ ಆಲ್ಬಂ ಚಿತ್ರೀಕರಣಕ್ಕೆ ಹಣ ಹಾಕಿ ಹೊಸ ಪ್ರಯತ್ನಕ್ಕೆ ಸಾಥ್‌ ನೀಡಿರುವುದು ನಿರ್ಮಾಪಕ ಹೇಮಂತ್‌.

“ನಮ್ಮ ತಂಡದ ಮೇಲೆ ನಂಬಿಕೆ ಇಟ್ಟು ನಿರ್ಮಾಪಕರು ಹೇಳಿದ್ದನ್ನೆಲ್ಲಾ ಒದಗಿಸಿಕೊಟ್ಟಿದ್ದಾರೆ. ಇದೇ ಮೊದಲ ಸಲ, ಗಾಯಕ ಟಿಪ್ಪು ಅವರು ವೀಡಿಯೋ ಆಲ್ಬಂಗೆ ದನಿ ನೀಡಿದ್ದಾರೆ. ಎರಡು ವರ್ಷದ ಹಿಂದೆ ಚರ್ಚಿಸಿ, ಈ ಆಲ್ಬಂ ಸಾಂಗ್‌ ಮಾಡಲಾಗಿದೆ. ಎಲ್ಲರಿಗೂ ಇಲ್ಲಿ ಚಾಲೆಂಜಿಂಗ್‌ ಎನಿಸುವ ಕೆಲಸವಿತ್ತು. ಅದಕ್ಕೆಲ್ಲಾ ಉತ್ಸಾಹ ತುಂಬಿ ಹಾಡು ಅಚ್ಚುಕಟ್ಟಾಗಿ ಮೂಡಿ ಬರಲು ಕಾರಣ ನಿರ್ಮಾಪಕರು’ ಎಂದರು ಗಣೇಶ್‌.

ರಾಘವೇಂದ್ರ ಆಲ್ಬಂಗೆ ಸಂಗೀತ ನೀಡಿದ್ದಾರೆ. ಅವರಿಗೆ ಇಲ್ಲಿ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆಯಂತೆ. ಇಲ್ಲಿ ಎಲ್ಲರೂ ಹೊಸಬರೇ. ಆದರೆ, ಎಲ್ಲರಿಗೂ ಅನುಭವ ಇತ್ತು. ಆ ಅನುಭವ ಒಳ್ಳೆಯ ವಿಡೀಯೋ ಹಾಡು ಮಾಡಲು ಸಾಧ್ಯವಾಗಿದೆ ಎಂದರು ರಾಘವೇಂದ್ರ. ಈ ಹಾಡಿಗೆ ಕ್ಯಾಮೆರಾ ಹಿಡಿದಿರುವುದು ಭಾನುಪ್ರತಾಪ್‌. ನಿರ್ಮಾಪಕರು ಕೇಳಿದ್ದನ್ನೆಲ್ಲಾ ನೀಡಿದ್ದರಿಂದ ಭಾನುಪ್ರತಾಪ್‌ ಅವರಿಗೆ ಈ ಹಾಡನ್ನು ವಿಭಿನ್ನವಾಗಿ ತೋರಿಸುವ ಆಸೆ ಹೆಚ್ಚಾಯಿತಂತೆ.

“ಇಲ್ಲಿ ಕಾಫ್ಟರ್‌ ಬಳಸಲಾಗಿದೆ. ಹೆಲಿಕ್ಯಾಮ್‌ನಲ್ಲೂ ಚಿತ್ರೀಕರಿಸಲಾಗಿದೆ. ಯಾವುದೇ ಕಮರ್ಷಿಯಲ್‌ ಸಿನಿಮಾಗಳ ಸಾಂಗ್‌ಗೆ ಕಮ್ಮಿ ಇಲ್ಲವೆಂಬಂತೆ ಈ ಹಾಡು ಮೂಡಿಬಂದಿದೆ’ ಎಂಬುದು ಭಾನುಪ್ರಾತಪ್‌ ಮಾತು. ರೋಹನ್‌ರಾಜ್‌ ಹಾಡಲ್ಲಿ ಹೆಜ್ಜೆ ಹಾಕಿದ್ದಾರೆ. “ಗಣೇಶ್‌ ಎರಡು ವರ್ಷಗಳ ಹಿಂದೆ ಸಿಕ್ಕಾಗ, ಒಂದು ಸಾಹಿತ್ಯ ಬರೆದು ತೋರಿಸಿದ್ದರು. ಅದು ಚೆನ್ನಾಗಿತ್ತು. ಒಂದು ವಿಡೀಯೋ ಆಲ್ಬಂ ಮಾಡೋಣ ಅಂತ ಅಂದೇ ನಿರ್ಧರಿಸಿದ್ದೆವು. ಅದೀಗ ಈಡೇರಿದೆ.

ಮೊದಲು ಈ ರೇಂಜ್‌ಗೆ ಹಾಡು ಮೂಡಿಬರುತ್ತೆ ಅಂದುಕೊಂಡಿರಲಿಲ್ಲ. ಈಗ ನೋಡಿದ ಮೇಲೆ ಖುಷಿಯಾಗಿದೆ ಎಂದರು ರೋಹನ್‌ರಾಜ್‌. ಈ ಹಾಡಲ್ಲಿ ವಿಜಯಶ್ರೀ, ಅಮೂಲ್ಯ ಕೂಡ ನಟಿಸಿದ್ದಾರೆ. ಅಂದಹಾಗೆ, ಈ ಹಾಡಿಗೆ ಎಂಟು ಲಕ್ಷ ಖರ್ಚು ಮಾಡಿರುವ ನಿರ್ಮಾಪಕರು, ಹಣ ಹಿಂದಿರುಗಿ ಬರುತ್ತೆ ಎಂಬ ನಂಬಿಕೆ ಇಟ್ಟುಕೊಂಡಿಲ್ಲವಂತೆ. ಸಿನಿಮಾ ಮೇಲಿನ ಪ್ರೀತಿಯಿಂದ ಮೊದಲು ಈ ವಿಡೀಯೋ ಆಲ್ಬಂ ಮಾಡಿರುವುದಾಗಿ ಹೇಳುತ್ತಾರೆ ನಿರ್ಮಾಪಕರು.

ಟಾಪ್ ನ್ಯೂಸ್

Sathish-jarakhoili

Belgavi: ಸಿ.ಟಿ.ರವಿ ಪ್ರಕರಣ ಮುಂದುವರಿಸುವಲ್ಲಿ ಅರ್ಥವೇ ಇಲ್ಲ: ಸಚಿವ ಸತೀಶ್‌ ಜಾರಕಿಹೊಳಿ

1-allu

Allu Arjun; ತಪ್ಪು ಮಾಹಿತಿ, ಚಾರಿತ್ರ್ಯ ಹರಣಕ್ಕೆ ಯತ್ನ: ರೇವಂತ್ ರೆಡ್ಡಿಗೆ ತಿರುಗೇಟು

1-modi-bg

Hala Modi; ಮಿನಿ ಹಿಂದೂಸ್ಥಾನಕ್ಕೆ ಸಾಕ್ಷಿಯಾಗುತ್ತಿದ್ದೇನೆ: ಕುವೈಟ್ ನಲ್ಲಿ ಮೋದಿ

1-mohali

Mohali; ಬಹುಮಹಡಿ ಕಟ್ಟಡ ಕುಸಿತ: ಹಲವರು ಸಿಲುಕಿರುವ ಶಂಕೆ

kejriwal 2

Delhi excise policy; ಕೇಜ್ರಿವಾಲ್ ವಿಚಾರಣೆಗೆ ಲೆಫ್ಟಿನೆಂಟ್ ಗವರ್ನರ್ ಅನುಮತಿ ಪಡೆದ ಇಡಿ

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

1-russia

9/11-ಶೈಲಿಯಲ್ಲಿ ರಷ್ಯಾದ ವಸತಿ ಕಟ್ಟಡಗಳ ಮೇಲೆ ಉಕ್ರೇನ್ ನಿಂದ ಸರಣಿ ಡ್ರೋನ್ ದಾಳಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸ್ಟಾರ್‌ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್‌. ನರಸಿಂಹಲು

Sandalwood: ಸ್ಟಾರ್‌ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್‌. ನರಸಿಂಹಲು

KD

Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್‌

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

15

Junior World Cup shooting: ಭಾರತದ ಆತಿಥ್ಯದಲ್ಲಿ ಜೂ. ವಿಶ್ವಕಪ್‌ ಶೂಟಿಂಗ್‌

1

Udupi: ಕುದ್ರು ನೆಸ್ಟ್‌ ರೆಸಾರ್ಟ್‌ನಲ್ಲಿ ಬೆಂಕಿ ಅವಘಡ

Udupi: 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

Udupi: 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

Mrinal Hebbalkar: ನನ್ನ ತಾಯಿಗೆ ರವಿ ಬಳಸಿದ ಪದದಿಂದ ನೋವಾಗಿದೆ: ಮೃಣಾಲ್‌

Mrinal Hebbalkar: ನನ್ನ ತಾಯಿಗೆ ರವಿ ಬಳಸಿದ ಪದದಿಂದ ನೋವಾಗಿದೆ: ಮೃಣಾಲ್‌

accident

Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.