ಸದಭಿರುಚಿಯ ರಸ್ತೆಯ ಎರಡು ಕ್ರಾಸ್‌ ಆಚೀಚೆ ಇದೆ ಕಲ್ಯಾಣ ಮಂಟಪ

Team Udayavani, Sep 15, 2017, 10:57 AM IST

15-SUC-4.jpg

ಆ ಪ್ರಶ್ನೆ ಬರುತ್ತದೆ ಎಂದು ರಾಜೇಂದ್ರ ಕಾರಂತ್‌ ಅವರಿಗೆ ಗ್ಯಾರಂಟಿ ಗೊತ್ತಿತ್ತು. ಆದರೆ, ಕೇಳುವುದಕ್ಕೆ ಆಸ್ಪದವೇ ಕೊಡಲಿಲ್ಲ. ನೇರವಾಗಿ ತಾವೇ ಪ್ರಶ್ನೆ ಹಾಕಿಕೊಂಡು, ತಾವೇ ಉತ್ತರವನ್ನೂ ಕೊಟ್ಟುಬಿಟ್ಟರು. “ಟ್ರೇಲರ್‌ ನೋಡಿ, ಇದೇನಪ್ಪಾ ಇಷ್ಟೊಂದು ಡಬ್ಬಲ್‌ ಮೀನಿಂಗ್‌ ಮಾತುಗಳಿವೆ ಅಂತ ಅನಿಸಬಹುದು. ಚಿತ್ರದಲ್ಲಿ ಹಾಗಿಲ್ಲ. ಚಿತ್ರದಲ್ಲಿರುವ ಅಷ್ಟೂ ಡಬ್ಬಲ್‌ ಮೀನಿಂಗ್‌ ಮಾತುಗಳನ್ನು ಹುಡುಕಿ ಹುಡುಕಿ ಟ್ರೇಲರ್‌ ಮಾಡಿದ್ದಾನೆ ತನುಷ್‌. ಚಿತ್ರ ಬೇರೆ ತರಹವೇ ಇದೆ. ಅಶ್ಲೀಲತೆಯ ಗೆರೆ ದಾಟದಂತೆ ಚಿತ್ರ ಮೂಡಿಬಂದಿದೆ. ಇನ್ನೂ ಸರಿಯಾಗಿ ಹೇಳಬೇಕೆಂದರೆ, ಸದಭಿರುಚಿ ರೋಡ್‌ನ‌ ಎರಡು ಕ್ರಾಸ್‌ ಆಚೀಚೆಯಲ್ಲಿ ಈ ಚಿತ್ರ. ಇದೆ. 2 ಗಂಟೆ 10 ನಿಮಿಷದ ಪಕ್ಕಾ ಕಾಮಿಡಿ ಚಿತ್ರ ಇದು. ದುಡ್ಡು ಕೊಟ್ಟು ಬರುವ ಪ್ರೇಕ್ಷಕರಿಗೆ ಫ‌ುಲ್‌ ಮೀಲ್ಸ್‌ ಕೊಡ್ತೀವಿ ಎಂಬ ನಂಬಿಕೆ ಇದೆ’ ಎಂದು ಒಂದೇ ಉಸಿರಿನಲ್ಲಿ ಹೇಳಿಬಿಟ್ಟರು ರಾಜೇಂದ್ರ ಕಾರಂತ್‌.

“ನಂಜುಂಡಿ ಕಲ್ಯಾಣ’ ಚಿತ್ರದ ಟ್ರೇಲರ್‌ ಬಿಡುಗಡೆ ಮತ್ತು ಮೊದಲ ಪತ್ರಿಕಾಗೋಷ್ಠಿಯಲ್ಲಿ ಮೊದಲು ಮಾತನಾಡಿದ್ದು ಅದೇ ರಾಜೇಂದ್ರ ಕಾರಂತ್‌. ಅವರು ಚಿತ್ರಕ್ಕೆ ನಿರ್ದೇಶಕರಷ್ಟೇ ಅಲ್ಲ, ಕಥೆ-ಚಿತ್ರಕಥೆಯನ್ನೂ ಅವರೇ ಬರೆದಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಶುರುವಾದ ಈ ಚಿತ್ರ, ಇದೀಗ ಮುಗಿದು, ಪೋಸ್‌ r -ಪ್ರೊಡಕ್ಷನ್‌ ಹಂತದಲ್ಲಿದೆ. ಈ ಸಂದರ್ಭದಲ್ಲಿ ಮಾಧ್ಯಮದವರ ಜೊತೆಗೆ ಮಾತಾಡುವುದಕ್ಕೆ ಬಂದಿದ್ದರು. ಟ್ರೇಲರ್‌ ತೋರಿಸಿ ಚಿತ್ರತಂಡದವರೆಲ್ಲರೂ ವೇದಿಕೆ ಏರಿದರು. ರಾಜೇಂದ್ರ ಕಾರಂತ್‌ ಅಕ್ಕ-ಪಕ್ಕ ನಾಯಕ ತನುಷ್‌, ನಾಯಕಿ ಶ್ರಾವ್ಯ, ಪದ್ಮಜಾ ರಾವ್‌, ಮಂಜುನಾಥ್‌ ಹೆಗಡೆ ಮುಂತಾದವರು ಅಕ್ಕ-ಪಕ್ಕ ಕುಳಿತರು.

ತನುಷ್‌ ಎಲ್ಲರನ್ನೂ ಪರಿಚಯಿಸಿ, ಕಾರಂತರಿಗೆ ಮೈಕು ಕೊಟ್ಟರು. ಇದು ಅವರ ಎರಡನೆಯ ಚಿತ್ರ. “ಮಂಗನ ಕೈಲಿ ಮಾಣಿಕ್ಯ’ ಆದಮೇಲೆ ಅವರು ನಿರ್ದೇಶನ ಮಾಡಿರಲಿಲ್ಲ. “ಮಡಮಕ್ಕಿ’ ಸಂದರ್ಭದಲ್ಲಿ ತನುಷ್‌ ಪರಿಚಯವಾಗಿ, ಮುಂದೊಂದು ದಿನ ಸಿನಿಮಾ ಮಾಡುವ ಮಾತಾಗಿ, ಈಗ ಅದು ಬಿಡುಗಡೆಯ ಹಂತಕ್ಕೆ ಬಂದಿದೆ. “ಕಥೆಗೆ ಏನು ಹೆಸರಿಡಬೇಕು ಅಂತ ಬಂದಾಗ, “ನಂಜುಂಡಿ ಕಲ್ಯಾಣ’ ಅಂತ ಇಡು ಅಂತ ತನುಷ್‌ಗೆ ಹೇಳಿದೆ. ಅವನು ಹೋಗಿ, ರಾಘವೇಂದ್ರ ರಾಜಕುಮಾರ್‌ ಅವರಿಗೆ ಒಪ್ಪಿಸಿಕೊಂಡು ಬಂದ. ಅವನಿಗೆ ಐಡಿಯಾ ಕೊಡುವ ಮೂಲಕ ಅನಾವಶ್ಯಕವಾಗಿ ಜವಾಬ್ದಾರಿ ಎಳೆದುಕೊಂಡೆ. ಅದೊಂದು ಐಕಾನಿಕ್‌ ಚಿತ್ರ. ಆ ಲೆವೆಲ್‌ಗೆ ತೂಗಿಸುವ ಸಿನಿಮಾ ಮಾಡುವುದು ಅಷ್ಟು ಸುಲಭವಲ್ಲ. ತೀರಾ ಅದ್ಭುತವಲ್ಲದಿದ್ದರೂ, ಬೇಸರ ತರಿಸದ ಒಂದು ಚಿತ್ರವನ್ನು 33 ದಿನಗಳಲ್ಲಿ ಮಾಡಿ ಮುಗಿಸಿದ್ದೇವೆ’ ಎಂದರು. ಏನೋ ನೆನಪಿಸಿಕೊಂಡವರಂತೆ, “ಇದು ನಂಜುಂಡಿ ಎಂಬ ಯುವಕನ ಕಥೆ. ತನ್ನ ಹಠಮಾರಿ ತಾಯಿಯನ್ನು ಹೇಗೆ ಒಪ್ಪಿಸಿ, ತಾನು ಇಷ್ಟಪಟ್ಟ ಹುಡುಗಿಯನ್ನು ಮದುವೆಯಾಗುತ್ತಾನೆ’ ಎಂಬುದು ಚಿತ್ರದ ಕಥೆ ಎಂದು ಹೇಳಿದರು. ಈ ಹಿಂದೆ “ಮಡಮಕ್ಕಿ’ ಚಿತ್ರದಲ್ಲಿ  ಸಾಕಷ್ಟು ಕಳೆದುಕೊಂಡಿದ್ದರೂ, ಈ ಚಿತ್ರವನ್ನು ನಿರ್ಮಿಸುವ ಮನಸ್ಸು ಮಾಡಿದ್ದಕ್ಕೆ ತಮ್ಮ ತಂದೆ ದಾಸನಾಪುರ ಶಿವಣ್ಣರನ್ನು ಹೊಗಳಿದರು ತನುಷ್‌. ಇದೇ ಕೊನೆಯ ಅವಕಾಶ ಎಂದು ಹೇಳಿಯೇ ಶಿವಣ್ಣನವರು, ಚಿತ್ರ ನಿರ್ಮಿಸುವುದಕ್ಕೆ ಮುಂದಾದರಂತೆ. ಅವರ ನಂಬಿಕೆ ಉಳಿಸಿಕೊಳ್ಳುವ ಪ್ರಯತ್ನ ಮಾಡಿರುವುದಾಗಿ ಹೇಳಿದರು ತನುಷ್‌. ನಾಯಕಿ ಶ್ರಾವ್ಯಗೆ ಕಾರಂತರಿಂದ
ಹೊಗಳಿಸಿಕೊಳ್ಳಬೇಕು ಎಂಬ ಆಸೆ ಇತ್ತಂತೆ. ಅದು ಈ ಚಿತ್ರದಲ್ಲಿ ಈಡೇರಿದ್ದರಿಂದ ಅವರಿಗೆ ಸಹಜವಾಗಿಯೇ ಖುಷಿಯಾಗಿದೆ. ಇನ್ನು ಪದ್ಮಜಾ ರಾವ್‌ ಅವರು, ಶೂಟಿಂಗ್‌ ಸಂದರ್ಭದಲ್ಲಿ ಕೊಡುತ್ತಿದ್ದ ಊಟವನ್ನು ನೆನಪಿಸಿಕೊಂಡು ಬಾಯಿ ಚಪ್ಪರಿಸಿದರು. ಚಿತ್ರದಲ್ಲಿ ಕಲರ್‌ಫ‌ುಲ್‌ ಸೀರೆ ಮತ್ತು ಒಡವೆಗಳನ್ನು ಧರಿಸುವುದಕ್ಕೆ ಅವಕಾಶ ಕೊಟ್ಟಿದ್ದಕ್ಕೆ, ಧನ್ಯವಾದ ಸಲ್ಲಿಸಿದರು.

ಚೇತನ್‌ ನಾಡಿಗೇರ್‌

ಟಾಪ್ ನ್ಯೂಸ್

Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ

Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ

Kerala High Court: ಸಿಎಂಗೆ ಕಪ್ಪು ಬಾವುಟ ಪ್ರದರ್ಶನ ತಪ್ಪಲ್ಲ

Kerala High Court: ಸಿಎಂಗೆ ಕಪ್ಪು ಬಾವುಟ ಪ್ರದರ್ಶನ ತಪ್ಪಲ್ಲ

Supreme Court: ಜ್ಞಾನವಾಪಿ ಮತ್ತಷ್ಟು ಸಮೀಕ್ಷೆಗೆ ಕೋರಿಕೆ: ಮಸೀದಿಗೆ ನೋಟಿಸ್‌

Supreme Court: ಜ್ಞಾನವಾಪಿ ಮತ್ತಷ್ಟು ಸಮೀಕ್ಷೆಗೆ ಕೋರಿಕೆ: ಮಸೀದಿಗೆ ನೋಟಿಸ್‌

Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು

Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು

Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ

Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ

Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.

Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.

Ullala–Encroch

Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

priyanka upendra in life is beautiful movie

Priyanka Upendra: ಬ್ಯೂಟಿಫುಲ್‌ ಲೈಫ್‌ ನಲ್ಲಿ ಪ್ರಿಯಾಂಕಾ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ

Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ

Kerala High Court: ಸಿಎಂಗೆ ಕಪ್ಪು ಬಾವುಟ ಪ್ರದರ್ಶನ ತಪ್ಪಲ್ಲ

Kerala High Court: ಸಿಎಂಗೆ ಕಪ್ಪು ಬಾವುಟ ಪ್ರದರ್ಶನ ತಪ್ಪಲ್ಲ

Supreme Court: ಜ್ಞಾನವಾಪಿ ಮತ್ತಷ್ಟು ಸಮೀಕ್ಷೆಗೆ ಕೋರಿಕೆ: ಮಸೀದಿಗೆ ನೋಟಿಸ್‌

Supreme Court: ಜ್ಞಾನವಾಪಿ ಮತ್ತಷ್ಟು ಸಮೀಕ್ಷೆಗೆ ಕೋರಿಕೆ: ಮಸೀದಿಗೆ ನೋಟಿಸ್‌

Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು

Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು

1-tata

ಮೆಜೆಂಟಾ ಮೊಬಿಲಿಟಿ ಸಂಸ್ಥೆ ವಾಹನ ಬಳಗಕ್ಕೆ ಟಾಟಾ ಏಸ್‌ ಇವಿ ಸೇರ್ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.