ರಾಜನ ರೊಮ್ಯಾಂಟಿಕ್ ಸಾಂಗ್ಸ್
Team Udayavani, Jan 24, 2020, 5:31 AM IST
ನವ ನಟ ರಾಜ್ ಸೂರ್ಯನ್ ಅಭಿನಯದ ರೊಮ್ಯಾಂಟಿಕ್ ಕಂ ಹಾರರ್-ಥ್ರಿಲ್ಲರ್ ಚಿತ್ರ “ಮೈ ನೇಮ್ ಇಸ್ ರಾಜಾ’ ತೆರೆಗೆ ಬರಲು ಸಿದ್ಧವಾಗಿದೆ. ಸದ್ಯ ಚಿತ್ರದ ಅಂತಿಮ ಹಂತದ ಪ್ರಮೋಶನ್ ಕಾರ್ಯಗಳನ್ನು ನಡೆಸುತ್ತಿರುವ ಚಿತ್ರತಂಡ, ಇತ್ತೀಚೆಗೆ ಚಿತ್ರದ ಆಡಿಯೋವನ್ನು ಹೊರತಂದಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್, ನಿರ್ಮಾಪಕರಾದ ಬಾ.ಮಾ ಹರೀಶ್, ಎನ್.ಎಂ ಸುರೇಶ್, ಉಮೇಶ್ ಬಣಕಾರ್, ಬಾ.ಮಾ ಗಿರೀಶ್, ಹಂಚಿಕೆದಾರ ರಮೇಶ್ ಬಾಬು ಸೇರಿದಂತೆ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರ ಸಮ್ಮುಖದಲ್ಲಿ “ಮೈ ನೇಮ್ ಇಸ್ ರಾಜಾ’ ಚಿತ್ರದ ಹಾಡುಗಳು ಹೊರಬಂದವು.
ಆಡಿಯೋ ಬಿಡುಗಡೆಯ ಬಳಿಕ ಮಾತನಾಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, “ಇಂದಿನ ಆಡಿಯನ್ಸ್‌ಗೆ ಇಷ್ಟವಾಗುವಂಥ ಕ್ಯಾಚಿಯಾದ ಟೈಟಲ್ ಚಿತ್ರದಲ್ಲಿದೆ. ಚಿತ್ರದಲ್ಲಿ ಕಮರ್ಷಿಯಲ್ ಅಂಶಗಳಿದ್ದು, ಈ ಕಾಲಕ್ಕೆ ತಕ್ಕಂತೆ ಸಿನಿಮಾ ಮಾಡಿದ್ದಾರೆ. ಚಿತ್ರತಂಡಕ್ಕೆ ಒಳ್ಳೆಯದಾಗಲಿ’ ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದರು. ವೇದಿಕೆ ಮೇಲಿದ್ದ ಮುಖ್ಯ ಅತಿಥಿಗಳು “ಮೈ ನೇಮ್ ಇಸ್ ರಾಜಾ’ ಚಿತ್ರ ಯಶಸ್ವಿಯಾಗಲಿ ಎಂದು ಶುಭ ಕೋರಿದರು.
ಇದೇ ವೇಳೆ ಚಿತ್ರದ ಬಗ್ಗೆ ಮಾತನಾಡಿದ ನಾಯಕ ರಾಜ್ ಸೂರ್ಯನ್, “ಇದು ಇತ್ತೀಚೆಗೆ ಬರುತ್ತಿರುವ ಸಿನಿಮಾಗಳಿಗಿಂತ ತುಂಬ ವಿಭಿನ್ನವಾದ ಕಥೆ ಇರುವ ಸಿನಿಮಾ. ಟ್ರೇಲರ್‌ನಲ್ಲಿ ಸಿನಿಮಾದ ಕಥೆಯ ಸಣ್ಣ ಎಳೆಯನ್ನು ಬಿಟ್ಟುಕೊಟ್ಟಿದ್ದೇವೆ. ಗ್ಲಾಮರಸ್ ಆ್ಯಂಡ್ ರೊಮ್ಯಾಂಟಿಕ್ ಆಗಿದ್ದರೂ, ಇಡೀ ಫ್ಯಾಮಿಲಿ ಕುಳಿತು ನೋಡುವ ಸಿನಿಮಾ ಇದು. ಸಿನಿಮಾದಲ್ಲಿ ಗಂಡ-ಹೆಂಡತಿಯ ಸಂಬಂಧದ ಜೊತೆಗೆ ಒಂದೊಳ್ಳೆ ಮೆಸೇಜ್ ಕೂಡ ಹೇಳಿದ್ದೇವೆ’ ಎಂದು ವಿವರಣೆ ನೀಡಿದರು.
ನಿರ್ದೇಶಕ ಅಶ್ವಿನ್ ಕೃಷ್ಣ ಮಾತನಾಡಿ, “ಇಂದಿನ ಆಡಿಯನ್ಸ್ ನಿರೀಕ್ಷಿಸುವಂತ ಎಲ್ಲ ಎಂಟರ್‌ಟೈನ್ಮೆಂಟ್ ಎಲಿಮೆಂಟ್ಸ್ ಇರುವ, ಪಕ್ಕಾ ಪೈಸಾ ವಸೂಲ್ ಸಿನಿಮಾ. ಇದರ ಮೂಲಕ ಒಳ್ಳೆ ಕಲಾವಿದರು ಇಂಡಸ್ಟ್ರಿಗೆ ಬರುತ್ತಿ¨ªಾರೆ’ ಎಂದರು. “ಮೈ ನೇಮ್ ಇಸ್ ರಾಜಾ’ ಚಿತ್ರದ ಹಾಡುಗಳಿಗೆ ಎಲ್ವಿನ್ ಜೋಶ್ವಾ ಸಂಗೀತ ಸಂಯೋಜಿಸಿದ್ದಾರೆ. “ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಎಲ್ಲ ಹಾಡುಗಳು ಕಥೆಗೆ ಪೂರಕವಾಗಿವೆ. ಡಾ. ವಿ ನಾಗೇಂದ್ರ ಪ್ರಸಾದ್, ಕವಿರಾಜ್, ಅನಿಲ್ ಹಾಡುಗಳಿಗೆ ಸಾಹಿತ್ಯ ರಚಿಸಿದ್ದು, ಬರೆದಿ¨ªಾರೆ. ಸಂಚಿತ್ ಹೆಗ್ಡೆ , ಚೇತನ್ ನಾಯಕ್ ಮುಂತಾದವರು ಹಾಡಿಗೆ ಧ್ವನಿಯಾಗಿದ್ದಾರೆ’ ಎಂದು ವಿವರಣೆ ನೀಡಿದರು. “ಮೈ ನೇಮ್ ಇಸ್ ರಾಜಾ’ ಚಿತ್ರದಲ್ಲಿ ರಾಜ್ ಸೂರ್ಯನ್‌ಗೆ ಆಕರ್ಷಿಕಾ ನಾಯಕಿಯಾಗಿ ಜೋಡಿಯಾಗಿ ದ್ದಾರೆ. ಜನವರಿ 31ರಂದು ರಿಲೀಸ್ ಆಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Election 2025: ದೆಹಲಿ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ; ಬಿಜೆಪಿ V/s AAP
Mangaluru: ನೇತ್ರಾವತಿ ಸೇತುವೆ ಮೇಲಿನ ಸಿಸಿ ಕೆಮರಾಗಳಿಗಿಲ್ಲ ನಿರ್ವಹಣೆ ಭಾಗ್ಯ
Asaram Bapu: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಸಾರಾಂ ಬಾಪುಗೆ ಮಧ್ಯಂತರ ಜಾಮೀನು
ಕೌಟುಂಬಿಕ ದೌರ್ಜನ್ಯ ಆರೋಪ: ʼಬಿಂದಾಸ್ʼ ನಟಿ ಹನ್ಸಿಕಾ, ಸಹೋದರ, ತಾಯಿ ವಿರುದ್ಧ FIR ದಾಖಲು
Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.