ಹುಟ್ಟು ದರಿದ್ರವಾದ್ರೂ ಸಾವು ಚರಿತ್ರೆ ಆಗಿರಬೇಕು
ಗೋದ್ರಾ ಸಂದೇಶ
Team Udayavani, Jan 24, 2020, 5:39 AM IST
ಗುಜರಾತ್ ರಾಜ್ಯದ “ಗೋದ್ರಾ’ದಲ್ಲಿ ಕೆಲ ವರ್ಷಗಳ ಹಿಂದೆ ನಡೆದ ಭಾರೀ ಹಿಂಸಾಚಾರ ಅನೇಕರಿಗೆ ನೆನಪಿರಬಹುದು. ಈಗಲೂ “ಗೋದ್ರಾ’ ಘಟನೆ ಆಗಾಗ್ಗೆ ರಾಜಕೀಯ ವಲಯದಲ್ಲಿ ಒಂದಷ್ಟು ಸುದ್ದಿಗೆ ಕಾರಣವಾಗುತ್ತಲೇ ಇರುತ್ತದೆ. ಈಗ ಇದೇ “ಗೋದ್ರಾ’ದ ಬಗ್ಗೆ ಸ್ಯಾಂಡಲ್‌ವುಡ್‌ನಲ್ಲೂ ಒಂದಷ್ಟು ಸುದ್ದಿಯಾಗುತ್ತಿದೆ. ಅಂದಹಾಗೆ, “ಗೋದ್ರಾ’ಕ್ಕೂ ಗಾಂಧಿನಗರಕ್ಕೂ ಏನು ಸಂಬಂಧ ಅನ್ನೋದನ್ನ ಕೇಳ್ಳೋದಕ್ಕೂ ಮುನ್ನ, ನಾವೇ ಹೇಳ್ತೀವಿ ಕೇಳಿ.
“ಗೋದ್ರಾ’ ಎನ್ನುವ ಟೈಟಲ್ ಇಟ್ಟುಕೊಂಡು ಹೊಸ ಚಿತ್ರವೊಂದು ತೆರೆಗೆ ಬರಲು ಸಿದ್ಧವಾಗುತ್ತಿದೆ. ನಟ ನೀನಾಸಂ ಸತೀಶ್ ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು, ಇತ್ತೀಚೆಗೆ ಈ ಚಿತ್ರದ ಟೀಸರ್ ಹೊರಬಂದಿದೆ. “ಕಾಶ್ಮೀರ, ಗೋದ್ರಾ ಮತ್ತು ಅಯೋಧ್ಯೆ ಸಮಸ್ಯೆಗಳು ಈ ದೇಶದಲ್ಲಿ ಸಾಕಷ್ಟು ಸಂಚಲನ ಮೂಡಿಸಿರುವ ಸೂಕ್ಷ್ಮ ವಿಷಯಗಳು. ಆದರೆ, ಇದರ ಹಿಂದೆ ನೂರಾರು ಮುಖಗಳು ಇದೆ. ಕೆಲವರಿಗೆ ಈ ವಿಷಯದಲ್ಲಿ ವಾಸ್ತವವೇನು? ಏನು ನಡೆಯುತ್ತಿದೆ ಎಂಬ ಅರಿವಿದ್ದರೆ, ಇನ್ನು ಕೆಲವರಿಗೆ ಅದರ ಹಿಂದಿರುವ ಸತ್ಯದ ಅರಿವಿಲ್ಲ. ಇಂಥ ನೂರಾರು ಮುಖಗಳಲ್ಲಿ ನಮ್ಮ ಚಿತ್ರದ ಟೈಟಲ್ ಕೂಡ ಒಂದಾಗಿದೆ. ಇಲ್ಲಿ ನಕ್ಸಲ್ ವಾದ, ಪ್ರಸಕ್ತ ರಾಜಕಾರಣ, ಗಾಂಧಿವಾದ, ಬಂಡಾಯ, ಕ್ರಾಂತಿ ಹೀಗೆ ಹತ್ತಾರು ವಿಷಯಗಳ ಚರ್ಚೆಯಿದೆ. ಇವೆಲ್ಲದಕ್ಕೂ ಪೂರಕವೆನ್ನುವಂತೆ ಕೆಲ ನೈಜ ಘಟನೆಗಳನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಚಿತ್ರದಲ್ಲಿ ನಾವು ಹೇಳುತ್ತಿರುವ ಸಬ್ಜೆಕ್ಟ್ಗೆ ಸೂಕ್ತವೆನ್ನುವ ಕಾರಣಕ್ಕೆ “ಗೋದ್ರಾ’ ಅಂಥ ಟೈಟಲ್ ಇಟ್ಟಿದ್ದೇವೆ’ ಎಂದು ಟೈಟಲ್ ಬಗ್ಗೆ ಸಮಜಾಯಿಷಿ ಕೊಡುತ್ತದೆ ಚಿತ್ರತಂಡ.
“ಭೂಮಿ ಮೇಲೆ ಹಲವರು ದರಿದ್ರರಾಗಿ ಹುಟ್ಟುತ್ತಾರೆ. ನಂತರ ಅವರ ಸಾವು ಚರಿತ್ರೆಯಾಗುತ್ತದೆ. ಈ ಚಿತ್ರದಲ್ಲಿ ನನ್ನದೂ ಅದೇ ರೀತಿ ಸಾಗುವ ಪಾತ್ರ’ ಎಂದು “ಗೋದ್ರಾ’ ಚಿತ್ರದ ತಮ್ಮ ಪಾತ್ರದ ಬಗ್ಗೆ ವಿವರಣೆ ಕೊಡುತ್ತಾರೆ ನಾಯಕ ನಟ ನೀನಾಸಂ ಸತೀಶ್. ಕೆಲ ಸಮಯದಿಂದ ಕನ್ನಡ ಚಿತ್ರಗಳಲ್ಲಿ ಅಪರೂಪವಾಗಿದ್ದ ನಟಿ ಶ್ರದ್ದಾ ಶ್ರೀನಾಥ್ ಇಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ವಸಿಷ್ಠ ಸಿಂಹ, ರಕ್ಷಾ, ಅಚ್ಯುತ ರಾವ್, ಬಲರಾಜವಾಡಿ ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಈ ಹಿಂದೆ “ಸವಾರಿ’, “ಚಂಬಲ್’ ಮೊದಲಾದ ಚಿತ್ರಗಳಿಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವವಿರುವ ಕೆ.ಎಸ್ ನಂದೀಶ್ ಚೊಚ್ಚಲ ಬಾರಿಗೆ “ಗೋದ್ರಾ’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ದೃಶ್ಯಗಳಿಗೆ ಬೇಕಾಗಿರುವ ಬೇಸಿಗೆ, ಮಳೆಗಾಲ, ತುಂಬಿ ಹರಿಯುವ ನದಿ, ಹೀಗೆ ಹತ್ತಾರು ಅಂಶಗಳು ಅವಶ್ಯಕತೆಯಿದ್ದರಿಂದ, ಇವೆಲ್ಲಾಕ್ಕೂ ಕಾದು ಚಿತ್ರೀಕರಣ ಮುಗಿಸಿರುವುದರಿಂದ ಚಿತ್ರ ಸುಮಾರು ಎರಡು ವರ್ಷ ಸಮಯ ತೆಗೆದುಕೊಂಡಿದೆಯಂತೆ. “ಜಾಕೋಬ್ ಫಿಲಂಸ್’ ಮತ್ತು “ಲೀಡರ್ ಫಿಲಂಸ್ ಪೊ›ಡಕ್ಷನ್ಸ್’ ಬ್ಯಾನರ್‌ನಲ್ಲಿ ಜಂಟಿಯಾಗಿ “ಗೋದ್ರಾ’ ಚಿತ್ರ ನಿರ್ಮಾಣವಾಗಿದೆ. ಸದ್ಯ ಟೀಸರ್ ಮೂಲಕ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇದೇ ಮಾರ್ಚ್ ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Gangolli: ಮರದ ದಿಮ್ಮಿಗೆ ಡಿಕ್ಕಿ ಹೊಡೆದ ಮೀನುಗಾರಿಕಾ ದೋಣಿ
BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್
Mudigere; ಕಾಫಿ ಎಸ್ಟೇಟ್ ನಲ್ಲಿ ಕಾಡುಕೋಣ ದಾಳಿ: ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಮೃ*ತ್ಯು
Bajpe: ಕೆಂಜಾರು ಹಾಸ್ಟೆಲ್ ಕೊಳಚೆ ನೀರು ಖಾಸಗಿ ಜಾಗಕ್ಕೆ; ಸುತ್ತಮುತ್ತ ದುರ್ವಾಸನೆ
Kaikamba: ದೊಡ್ಡಳಿಕೆ ಅಣೆಕಟ್ಟಿನಿಂದ ಎಡನಾಲೆಗೆ ನೀರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.