ಮತ್ತೆ ಬಂದರು ಪಾಂಡವರು!

Team Udayavani, Apr 14, 2017, 3:50 AM IST

14-SUCHI-1.jpg

ಅದು 1978. ಪುಟ್ಟಣ್ಣ ಕಣಗಾಲ್‌ ನಿರ್ದೇಶನದ “ಪಡುವಾರಳ್ಳಿ ಪಾಂಡವರು’ ಎಂಬ ಅದ್ಭುತ ಚಿತ್ರ ಬಿಡುಗಡೆಯಾಗಿ ಇತಿಹಾಸ ಬರೆದಿತ್ತು. ನಾಲ್ಕು ದಶಕದ ಬಳಿಕ ಅದೇ ಹೆಸರಿನ ಸಿನಿಮಾವೊಂದು ಈಗ ಸೆಟ್ಟೇರುತ್ತಿದೆ. ಆದರೆ, ಅದು “1989′ ರಲ್ಲಿನ ಪಡುವಾರಳ್ಳಿ ಪಾಂಡವರ ಕಥೆ! ಆದರೆ, ಪುಟ್ಟಣ್ಣ ಅವರ ಚಿತ್ರಕ್ಕೂ ಹೊಸಬರ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಅಂದಹಾಗೆ, ಹೊಸ ತಂಡ ಸೇರಿಕೊಂಡು ಮಾಡುತ್ತಿರುವ ಆ ಚಿತ್ರಕ್ಕೆ “ಪಡುವಾರಳ್ಳಿ ಪಾಂಡವರು ಇನ್‌ 1989′ ಎಂದು ಹೆಸರಿಟ್ಟುಕೊಂಡಿದ್ದಾರೆ. ಈ ಚಿತ್ರಕ್ಕೆ ಜಗ್ಗು ಶಿರ್ಸಿ ನಿರ್ದೇಶಕರು. ಹೊಸ ಪ್ರತಿಭೆಗಳನ್ನೆಲ್ಲಾ ಒಗ್ಗೂಡಿಸಿ, ಹೊಸಬಗೆಯ ಕಥೆ ಮಾಡಿಕೊಂಡು ರೆಟ್ರೋ ಸ್ಟೈಲ್‌ನಲ್ಲೇ ಸಿನಿಮಾ ಮಾಡೋಕೆ ಹೊರಟಿದ್ದಾರೆ. 

ಪುಟ್ಟಣ್ಣ ಅವರ “ಪಡುವಾರಳ್ಳಿ ಪಾಂಡವರು’ ಚಿತ್ರ ಬಂದ ನಂತರದ ಹದಿಮೂರು ವರ್ಷಗಳು ಉರುಳಿದ ಮೇಲೆ ಅದೇ ಪಡುವಾರಳ್ಳಿಯಲ್ಲಿ ಏನೆಲ್ಲಾ ಆಗೋಯ್ತು ಎಂಬ ಕಲ್ಪನೆಯೊಂದಿಗೆ ಸಿನಿಮಾ ಮಾಡುತ್ತಿದ್ದಾರಂತೆ. ಜೋಗ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಯಲಿದೆ. 60 ದಿನಗಳ ಕಾಲ ಚಿತ್ರೀಕರಿಸುವ ಯೋಜನೆ ಜಗ್ಗು ಅವರದು. ಈ ಸಿನಿಮಾದ ವಿಶೇಷವೆಂದರೆ, ಪುಟ್ಟಣ್ಣರ “ಪಡುವಾರಳ್ಳಿ’ ಸಿನಿಮಾದಲ್ಲಿದ್ದ ಸ್ವಾಮೀಜಿ ಪಾತ್ರ ಇಲ್ಲಿಯೂ ಮುಂದುವರೆಯಲಿದೆ. ಆ ಚಿತ್ರದಲ್ಲಿ ಪಾಂಡವರು ದುಷ್ಟರನ್ನು ಓಡಿಸಿಕೊಂಡು ಹೋಗುವ ಕ್ಲೈಮ್ಯಾಕ್ಸ್‌ ಇತ್ತು. ಇಲ್ಲಿ ಕೌರವರ ದಂಡು ಪುನಃ ಪಡುವಾರಳ್ಳಿಯಲ್ಲಿ ಉದ್ಭವ ಆಗೋದನ್ನು ತೋರಿಸಲಾಗುವುದು ಎಂಬುದು ಜಗ್ಗು ಮಾತು.

ಪುಟ್ಟಣ್ಣರ ಚಿತ್ರದ ಸ್ಪೂರ್ತಿ ಪಡೆದು ಹುಟ್ಟಿಕೊಂಡ ಈ ಕಥೆಗೆ ಐವರು ನಾಯಕರಿದ್ದಾರೆ. ಮುಂಬೈನ ಅನುಪಮ್‌ ಖೇರ್‌ ನಟನಾ ಶಾಲೆಯಲ್ಲಿ ಕಲಿತ ವಿನು ವೆಂಕಟೇಶ್‌, ಸತೀಶ್‌, ಜಾನ್‌, ಮಹಾಸತಿ, ಆಶಾ ಭಂಡಾರಿ, ಬಸವರಾಜ್‌ ಬಣಕಾರ್‌, ಇತರರು ನಟಿಸಿದ್ದಾರೆ. ಇವರೊಂದಿಗೆ ಸ್ವಸ್ತಿಕ್‌ ಶಂಕರ್‌ ಹಾಗೂ  ಸ್ವಾಮೀಜಿ ಪಾತ್ರದಲ್ಲಿ ಜಿ.ವಿ.ಕೃಷ್ಣ ಅವರು ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನು, ಚಿತ್ರಕ್ಕೆ ಬಕ್ಕೇಶ್‌ ರೊನಾಡ್‌ ಹಾಗೂ ಪಂಚಮ್‌ದೇವ್‌ ಸಂಗೀತ ನೀಡಿದ್ದಾರೆ. ಈ ಪೈಕಿ ಪಂಚಮ್‌ ದೇವ್‌ ರಂಗಕಲಾವಿದರಾಗಿದ್ದು, ಅವರಿಲ್ಲಿ ರೊಮ್ಯಾಂಟಿಕ್‌ ಹಾಡೊಂದನ್ನು ಸಂಯೋಜಿಸಿದ್ದಾರಂತೆ. ನಾಯಕ ವಿನು ವೆಂಕಟೇಶ್‌ಗೆ 
ಇದು ಮೊದಲ ಚಿತ್ರವಾಗಿದ್ದು, ಅವರ ಆಯ್ಕೆ ಮಾಡಿದ್ದಕ್ಕೆ ಖುಷಿಯಾಗಿದೆಯಂತೆ. ನಾಯಕಿ ಆಶಾಭಂಡಾರಿ ಮೂಲತಃ ಭರತನಾಟ್ಯ ಕಲಾವಿದೆಯಾಗಿದ್ದು, ಮಾಡೆಲಿಂಗ್‌ನಲ್ಲೂ ಮಿಂದೆದ್ದವರು. ಆಡಿಷನ್‌ ಮೂಲಕ ಅವರಿಲ್ಲಿ ಆಯ್ಕೆಯಾಗಿದ್ದನ್ನು ಹೇಳಿಕೊಂಡರು.

ಹಿರಿಯ ಕಲಾವಿದ ಸ್ವಸ್ತಿಕ್‌ ಶಂಕರ್‌ಗಿಲ್ಲಿ ಕೌರವ ದಂಡಿನಲ್ಲಿ ಕಾಣಿಸಿಕೊಳ್ಳುವ ಮುಖ್ಯಸ್ಥನ ಪಾತ್ರವಂತೆ. ಅಂದು ನಿರ್ಮಾಪಕ ಅಣಜಿ ನಾಗರಾಜ್‌ ಚಿತ್ರದ ಟೀಸರ್‌ ಬಿಡುಗಡೆ ಮಾಡಿ ಶುಭಹಾರೈಸಿದರೆ, ಸಂಚಾರಿ ವಿಜಯ್‌ ಸಾಂಗ್‌ ಮೇಕಿಂಗ್‌ ವೀಡಿಯೋ ರಿಲೀಸ್‌ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದರು.

ಟಾಪ್ ನ್ಯೂಸ್

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

1-balaaaa

Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್

Siddu-Bagalakote

Ration Card: ಅನರ್ಹರಿಗೆ ಬಿಪಿಎಲ್‌ ಕಾರ್ಡ್‌ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

K L RAhul

KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

priyanka upendra in life is beautiful movie

Priyanka Upendra: ಬ್ಯೂಟಿಫುಲ್‌ ಲೈಫ್‌ ನಲ್ಲಿ ಪ್ರಿಯಾಂಕಾ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Rakesh Adiga in Maryade Prashne movie

Rakesh Adiga: ನಾನು ಮಿಡಲ್‌ ಕ್ಲಾಸ್‌ ಹುಡುಗ ಮರ್ಯಾದೆ ಉಳಿಸಿ!

ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

Bagheera: ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

1-balaaaa

Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್

Siddu-Bagalakote

Ration Card: ಅನರ್ಹರಿಗೆ ಬಿಪಿಎಲ್‌ ಕಾರ್ಡ್‌ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.