ಕನ್ನಡ ದೇಶದಲ್ಲಿ ಹಾಡು ಹಬ್ಬ
Team Udayavani, Oct 12, 2018, 6:00 AM IST
“ಕನ್ನಡ ದೇಶದೊಳ್’ ಎಂಬ ಸಿನಿಮಾವೊಂದು ಬರುತ್ತಿರುವ ವಿಚಾರ ನಿಮಗೆ ತಿಳಿದಿರಬಹುದು. ಇತ್ತೀಚೆಗೆ ಆ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ನಡೆಯಿತು. ಮಾಜಿ ಲೋಕಾಯುಕ್ತರಾದ ಸಂತೋಷ್ ಹೆಗ್ಡೆ ಹಾಗೂ ಬಿಬಿಎಂಪಿ ಮೇಯರ್ ಚಿತ್ರದ ಆಡಿಯೋ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು. ಕನ್ನಡ ಕೇವಲ ನವೆಂಬರ್ ತಿಂಗಳಿನಲ್ಲಿ ಮಾತನಾಡುವುದಕ್ಕೆ ಸೀಮಿತವಾಗದೇ, ವರ್ಷದ ಪ್ರತಿ ದಿನ, ಪ್ರತಿ ತಿಂಗಳು ಕನ್ನಡದ ಪ್ರೀತಿ ಬೆಳೆಸಿಕೊಳ್ಳಬೇಕೆನ್ನುತ್ತಾ ಚಿತ್ರತಂಡಕ್ಕೆ ನೂತನ ಮೇಯರ್ ಗಂಗಾಂಬಿಕೆ ಶುಭಕೋರಿದರು. ಈ ಚಿತ್ರವನ್ನು ಅಭಿರಾಮ್ ಕಂಠೀರವ ನಿರ್ದೇಶಿಸಿದ್ದಾರೆ. ಈ ಚಿತ್ರದ ಮೂಲಕ ಕನ್ನಡದ ಕಂಪನ್ನು ಸೂಸಲಿದ್ದಾರಂತೆ. “ಈ ಟೈಟಲ್‌ನಡಿ ಸಿನಿಮಾ ಮಾಡಿದ್ದರಿಂದ ನನ್ನ ಜವಾಬ್ದಾರಿ ಹೆಚ್ಚಿತ್ತು. ಈ ಚಿತ್ರದ ಮೂಲಕ ಕನ್ನಡ ಶಕ್ತಿಯನ್ನು ತೋರಿಸಲಿದ್ದೇನೆ. ಈ ಮೂಲಕ ಕನ್ನಡ ಮಾತನಾಡದವರು ಕೂಡಾ ನಮ್ಮ ಕನ್ನಡದ ಬಗ್ಗೆ ಹೆಮ್ಮೆ ಪಡುವಂತಾಗಬೇಕು’ ಎನ್ನುವುದು ನಿರ್ದೇಶಕ ಕಂಠೀರವ ಅವರ ಮಾತು. ಈ ಚಿತ್ರವನ್ನು 30 ಜಿಲ್ಲೆಗಳಲ್ಲಿ ಚಿತ್ರೀಕರಿಸಿದ್ದು, ಈ ಸಮಯದಲ್ಲಿ ಸಾಕಷ್ಟು ಕಷ್ಟಪಟ್ಟಿದ್ದಾಗಿ ಹೇಳಿಕೊಂಡರು.
ಅದು ಆಡಿಯೋ ಬಿಡುಗಡೆ ಸಮಾರಂಭವಾದ್ದರಿಂದ ಅಲ್ಲಿ ಸಂಭ್ರಮ ಮನೆ ಮಾಡಿತ್ತು. ಹಾಡು, ಕುಣಿತದ ಸಂಭ್ರಮದಲ್ಲಿ ಚಿತ್ರತಂಡ ಮಾತು ಮರೆಯಿತು. ಇದೇ ವೇಳೆ ಕೊಡವ, ಕೊಂಕಣಿ, ಉತ್ತರ ಕರ್ನಾಟಕ, ತುಳು ಭಾಷೆಗಳಲ್ಲಿ ತಯಾರಾಗಿರುವ ಲಿರಿಕಲ್ ವಿಡಿಯೋವನ್ನು ಕೂಡಾ ಪ್ರದರ್ಶಿಸಲಾಯಿತು. ಚಿತ್ರಕ್ಕೆ ಸೊಲೋಮನ್ ಸಂಗೀತ ನೀಡಿದ್ದಾರೆ. ಚಿತ್ತೂರು ಮೂಲದ ಸೋಲೋಮನ್, ಕೇರಳದಲ್ಲಿ ಸಂಗೀತ ಕಲಿತು, ತಮಿಳುನಾಡಿನಲ್ಲಿ ಕೆಲಸ ಆರಂಭಿಸಿ, ಈಗ ಕನ್ನಡದಲ್ಲಿ ತಮ್ಮ ಚೊಚ್ಚಲ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಕನ್ನಡ ಕಲಿತು ಮಾತನಾಡುವ ಭರವಸೆಯೊಂದಿಗೆ ಅವರ ಮಾತು ಮುಗಿಯಿತು. ಚಿತ್ರವನ್ನು ಪ್ರಕಾಶ್, ವಿನೋದ್, ವೆಂಕಟೇಶ್, ಯೋಗಾನಂದ್ ಹಾಗೂ ವಿಶ್ವನಾಥ್ ಸೇರಿ ನಿರ್ಮಿಸಿದ್ದು, ನವೆಂಬರ್ 1 ರಂದು ಬಿಡುಗಡೆ ಮಾಡುವ ಯೋಚನೆ ಅವರಿಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.