ಮೊದಲ ಬಾರಿಗೆ ರಗಡ್ ಪಾತ್ರ
Team Udayavani, May 18, 2018, 6:00 AM IST
“ಸಾಹೇಬ’ ಆಯ್ತು, “ಬೃಹಸ್ಪತಿ’ ಆಗೋಯ್ತು. ಮುಂದೇನು ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಆ ಪ್ರಶ್ನೆಗಳಿಗೆ ಈಗ ಉತ್ತರ ಸಿಕ್ಕಿದ್ದು, ರವಿಚಂದ್ರನ್ ಅವರ ಮಗ ಮನೋರಂಜನ್ ಈಗ “ಚಿಲ್ಲಂ’ ಎಂಬ ಚಿತ್ರ ಒಪ್ಪಿಕೊಂಡಿದ್ದಾರೆ. ಇದವರ ಮೂರನೆಯ ಚಿತ್ರ. ಶೀರ್ಷಿಕೆಯೇ ಭಿನ್ನವಾಗಿದೆ. ಇನ್ನು ಕಥೆ ಅದಕ್ಕಿಂತಲೂ ವಿಭಿನ್ನವಂತೆ. ಹಾಗಾಗಿಯೇ ಮನೋರಂಜನ್ ಕಥೆ ಒಪ್ಪಿ ಚಿತ್ರ ಮಾಡೋಕೆ ಗ್ರೀನ್‌ಸಿಗ್ನಲ್ ಕೊಟ್ಟಿದ್ದಾರೆ. ಚಿತ್ರದ ಹೈಲೆಟ್ ಏನು, ಪಾತ್ರದ ತಯಾರಿ ಹೇಗಿದೆ, ಯಾವಾಗ ಶುರು ಇತ್ಯಾದಿ ವಿಷಯ ಕುರಿತು ಮನೋರಂಜನ್ ಮಾತನಾಡಿದ್ದಾರೆ.
“ಚಿಲ್ಲಂ’ ನಿಮ್ಮ ಮೂರನೇ ಚಿತ್ರ. ತಯಾರಿ ಹೇಗಿದೆ?
ಯಾವ ಚಿತ್ರ ಮಾಡಿದರೂ, ಅದು ನನ್ನ ಮೊದಲ ಚಿತ್ರ ಅಂದುಕೊಳ್ಳುತ್ತೇನೆ. ಹಿಂದಿನ ಎರಡು ಚಿತ್ರಗಳಲ್ಲಿ ಸಣ್ಣ ಇದ್ದೆ. ಈ ಚಿತ್ರದ ಕಥೆ ಡಿಫರೆಂಟ್, ಪಾತ್ರವೂ ಸಖತ್ ಆಗಿದೆ. ಹಾಗಾಗಿ ನಾನು ಬಾಡಿ ಬಿಲ್ಡ್ ಮಾಡುತ್ತಿದ್ದೇನೆ. ದಪ್ಪನೆ ಗಡ್ಡ, ಕೂದಲು ಬಿಡುತ್ತಿದ್ದೇನೆ. ಶೂಟಿಂಗ್ ಶುರುವಾಗುವವರೆಗೂ
ವಕೌìಟ್ ಮಾಡುತ್ತಿರುತ್ತೇನೆ. ಪಕ್ಕಾ ತಯಾರಿಯೊಂದಿಗೇ ಸೆಟ್‌ಗೆ ಹೋಗುತ್ತೇನೆ. ಇಲ್ಲಿ ರಾ ಆಗಿ ಕಾಣೋದು ಗ್ಯಾರಂಟಿ.
ಪಾತ್ರದ ಬಗ್ಗೆ ಹೇಳ್ಳೋದಾದರೆ?
“ಚಿಲ್ಲಂ’ನಲ್ಲಿ ಡ್ರಗ್ ಡೀಲರ್ ಪಾತ್ರವಿದೆ. ಆ ಪಾತ್ರ ರಗಡ್ ಆಗಿದೆ. ಮೊದಲ ಸಲ ಗಾಂಜಾ ಸ್ಮಗ್ಲರ್ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ. ಮೆಚೂರ್ ಆಗಿರುವ ಖದರ್ ಲುಕ್ ಇರಲಿದೆ. ಆಟಿಟ್ಯೂಡ್ ಇರುವಂತಹ ವಿಭಿನ್ನ ಪಾತ್ರ. ಒಟ್ಟಾರೆ ಮನೋರಂಜನೆಯೇ ಈ ಚಿತ್ರದ ಉದ್ದೇಶ.
ರಾಘವೇಂದ್ರ ರಾಜಕುಮಾರ್ ವಿಲನ್ ಅಂತೆ?
ಹೌದು, ಮೊದಲ ಸಲ ನಾನು ರಾಘಣ್ಣನ ಜೊತೆ ನಟಿಸುತ್ತಿರೋದು ಹೆಮ್ಮೆ ಎನಿಸುತ್ತಿದೆ. ರಾಘಣ್ಣ ಹದಿಮೂರು ವರ್ಷಗಳ ಬಳಿಕ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ಇರುವುದಕ್ಕೆ ಚಿತ್ರದಲ್ಲಿ ಇನ್ನಷ್ಟು ತೂಕ ಹೆಚ್ಚಿಸಿದೆ. ಚಿಲ್ಲಂ’ನ ಹೈಲೆಟ್ ಏನು? ಇದು ಸ್ವಮೇಕ್ ಕಥೆ. ತುಂಬಾ ಇಂಟ್ರೆಸ್ಟಿಂಗ್ ಆಗಿದೆ. ಒಳ್ಳೇ ಸ್ಕೋಪ್ ಇರುವಂತಹ ಪಾತ್ರವೂ ಇದೆ. ಕಥೆಯಲ್ಲಿ ಸಾಕಷ್ಟು ತಿರುವುಗಳಿವೆ. ಹಿಂದಿನ ಚಿತ್ರಗಳಿಗೆ ಹೋಲಿಸಿದರೆ,
ಇಲ್ಲಿ ಎಲ್ಲವೂ ಫ್ರೆಶ್. “ಸಾಹೇಬ’, “ಬೃಹಸ್ಪತಿ’ ಚಿತ್ರಗಳಲ್ಲಿ ನನ್ನ ಪಾತ್ರ ಸಾಫ್ಟ್ ಅಂತ ಎಲ್ಲರೂ ಹೇಳುತ್ತಿದ್ದರು. “ಚಿಲ್ಲಂ’ನಲ್ಲಿ ಹೈಲೆಟ್ ಅಂದರೆ, ರಗಡ್ ಪಾತ್ರ ಮಾಡುತ್ತಿರೋದೇ ವಿಶೇಷ. ಭರ್ಜರಿ ಫೈಟ್ಸ್, ಚೇಸಿಂಗ್ ಎಲ್ಲವೂ ಇದೆ. ಎಲ್ಲಕ್ಕಿಂತ ಮುಖ್ಯವಾಗಿ, ಚಿತ್ರದಲ್ಲಿ ದೊಡ್ಡ ತಾರಾಬಳಗವಿದೆ. ನಾನಾ
ಪಾಟೇಕರ್, ದೇವರಾಜ್ ಪೊಲೀಸ್ ಅಧಿಕಾರಿಗಳಾಗಿ ಕಾಣಿಸಿಕೊಂಡರೆ, ರಾಘಣ್ಣ ವಿಲನ್, ಸುಮನ್ ರಂಗನಾಥ್ ಕೂಡ ಸ್ಪೆಷಲ್ ರೋಲ್ ಮಾಡುತ್ತಿದ್ದಾರೆ. ಸರಿತಾ ಅಮ್ಮನ ಪಾತ್ರ ಮಾಡುತ್ತಿದ್ದಾರೆ. ನಾಯಕಿಯಾಗಿ ಪ್ರಿಯಾಂಕ ತಿಮ್ಮೇಶ್ ಇದ್ದಾರೆ. ಇದೊಂದು ದೊಡ್ಡ ಬಜೆಟ್ ಚಿತ್ರ ಅದೇ ಹೈಲೆಟ್.
ಚಿತ್ರತಂಡ ಹೇಗಿದೆ?
ಒಳ್ಳೆಯ ತಂಡ ಸಿಕ್ಕಿದ್ದರಿಂದಲೇ ಕೆಲಸ ಮಾಡುತ್ತಿದ್ದೇನೆ. ನಿರ್ದೇಶಕಿ ಚಂದ್ರಕಲಾ ಕಥೆ ಹೇಳಿದಾಗ, ಎಲ್ಲೂ ಡೌಟ್ ಇರಲಿಲ್ಲ. ಅಲ್ಲಿ ಮೊದಲು ಅವರು ಗೆದ್ದರು. ಚರ್ಚೆ ಮಾಡಬೇಕು ಅಂದಾಗೆಲ್ಲ ಬರುತ್ತಿದ್ದರು. ಏನಾದರೂ ಬದಲಾವಣೆ ಬಯಸಿದಾಗ, ಒಪ್ಪಿದರು. ನನಗೆ ಎರಡು ತಿಂಗಳು ಮುಂಚೆಯೇ, ಸ್ಕ್ರಿಪ್ಟ್ ಕೊಟ್ಟಿದ್ದರು. ಮೊದಲೇ ಪ್ಲಾನಿಂಗ್ ಮಾಡಿಕೊಂಡಿದ್ದರಿಂದ ಯಾವುದೇ ಸಮಸ್ಯೆ ಇಲ್ಲದಂತೆ ಕೆಲಸ ನಡೆಯುತ್ತಿದೆ.
ಅಪ್ಪ ಕಥೆ ಕೇಳಿದ್ರಾ?
ಇಲ್ಲ. ನಾನೇ ಕೇಳಿ ಆಯ್ಕೆ ಮಾಡಿಕೊಂಡೆ. ನಿನಗೆ ಇಷ್ಟದ ಪಾತ್ರ, ಕಥೆಯನ್ನು ನೀನೇ ಆಯ್ಕೆ ಮಾಡಿಕೋ ಅಂತ ಅಪ್ಪ ಹೇಳಿದ್ದಾರೆ. ಅದರಂತೆ ಇಲ್ಲಿ ಕಥೆ, ಪಾತ್ರ ಇಷ್ಟವಾಯ್ತು. ಒಪ್ಪಿಕೊಂಡೆ.
ಸಹೋದರ ವಿಕ್ಕಿ ಏನ್ಮಾಡ್ತಾ ಇದ್ದಾರೆ?
ಸದ್ಯಕ್ಕೆ ಸಿನಿಮಾಗೆ ರೆಡಿಯಾಗುತ್ತಿದ್ದಾನೆ. ಒಳ್ಳೇ ಪ್ರಾಜೆಕ್ಟ್ ಬಂದರೆ, ಅವನೂ ಫಿಲ್ಡ್‌ಗೆ ಇಳಿತಾನೆ.
ವಿಜಯ್ ಭರಮಸಾಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mangaluru: ಗಾಂಜಾ ಸೇವನೆ; ಯುವಕನ ಬಂಧನ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.