“ಬೆಲ್ ಬಾಟಂ’ ಹಾಡು ಬಂತು
Team Udayavani, Jan 4, 2019, 12:30 AM IST
80ರ ದಶಕದ ಜನಪ್ರಿಯ “ಬೆಲ್ ಬಾಟಂ’ ಸ್ಟೈಲ್ ಇಂದಿಗೂ ಅದೆಷ್ಟೋ ಮಂದಿಗೆ ಅಚ್ಚುಮೆಚ್ಚು. ಆಗಿನ ಕಾಲದ ಸಿನಿಮಾಗಳಲ್ಲಿ, ಫೋಟೋಗಳಲ್ಲಿ ಕಾಣುತ್ತಿದ್ದ “ಬೆಲ್ ಬಾಟಂ’ ಈಗ ಸಿನಿಮಾವಾಗಿ ಮತ್ತೆ ತೆರೆಮೇಲೆ ಬರುತ್ತಿದೆ. ಹೌದು, “ಬೆಲ್ ಬಾಟಂ’ ಹೆಸರಿನಲ್ಲಿ ಕಳೆದ ವರ್ಷ ಸೆಟ್ಟೇರಿದ್ದ ರಿಷಭ್ ಶೆಟ್ಟಿ, ಹರಿಪ್ರಿಯಾ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿರುವ ಈ ಚಿತ್ರ, ಈ ವರ್ಷ ತೆರೆಗೆ ಬರೋದಕ್ಕೆ ಅಣಿಯಾಗಿದೆ. ಸದ್ದಿಲ್ಲದೆ ತನ್ನ ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇತ್ತೀಚೆಗೆ “ಬೆಲ್ ಬಾಟಂ’ ಚಿತ್ರದ ರೆಟ್ರೋ ಹಾಡೊಂದನ್ನು ಹೊರತಂದಿದೆ.
ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಚಿತ್ರತಂಡ, “ಬೆಲ್ ಬಾಟಂ’ ಚಿತ್ರದ “ಏತಕೆ ಬೊಗಸೆ ತುಂಬಾ ಆಸೆ ನೀಡುವೆ.., ಏತಕೆ ಕನಸಿನಲ್ಲಿ ಮೀಸೆ ತೀಡುವೆ…’ ಎಂಬ ಸಾಲುಗಳಿಂದ ಶುರುವಾಗುವ ರೆಟ್ರೋ ಶೈಲಿಯ ರೊಮ್ಯಾಂಟಿಕ್ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿತು. ಯೋಗರಾಜ್ ಭಟ್ ಬರೆದಿರುವ ಈ ಮೆಲೋಡಿ ಹಾಡಿಗೆ ವಿಜಯ್ ಪ್ರಕಾಶ್ ಧ್ವನಿಯಾಗಿದ್ದು, ಅಜನೀಶ್ ಲೋಕನಾಥ್ ಈ ಹಾಡಿಗೆ ಸಂಗೀತ ಸಂಯೋಜಿಸಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಇಲ್ಲಿಯವರೆಗೆ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ರಿಷಭ್ ಶೆಟ್ಟಿ “ಬೆಲ್ ಬಾಟಂ’ ಚಿತ್ರದ ಮೂಲಕ ನಾಯಕ ನಟನಾಗಿ ಚಂದನವನಕ್ಕೆ ಪರಿಚಯವಾಗುತ್ತಿದ್ದಾರೆ. ಚಿತ್ರದಲ್ಲಿ ರಿಷಭ್ ಶೆಟ್ಟಿ ಡಿಟೆಕ್ಟಿವ್ ದಿವಾಕರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, 80ರ ದಶಕದ ಕಾಲಘಟ್ಟದಲ್ಲಿ ಚಿತ್ರದ ಕಥೆ ನಡೆಯಲಿದೆಯಂತೆ. ಜಯತೀರ್ಥ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
“ಬೆಲ್ ಬಾಟಂ’ ಹಾಡಿನ ಬಿಡುಗಡೆ ವೇಳೆ ಹಾಜರಿದ್ದ ನಟ ರಿಷಭ್ ಶೆಟ್ಟಿ, ನಟಿ ಹರಿಪ್ರಿಯಾ, ನಿರ್ದೇಶಕ ಜಯತೀರ್ಥ, ಸೇರಿದಂತೆ ಚಿತ್ರತಂಡದ ಸದಸ್ಯರು “ಬೆಲ್ ಬಾಟಂ’ನ ವಿಶೇಷತೆಗಳು ಮತ್ತು ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡರು. “ಬೆಲ್ ಬಾಟಂ’ ಬಾಂಡ್ ಚಿತ್ರವಾದರೂ ಇದನ್ನು ಹ್ಯೂಮರಸ್ ಆಗಿ ತೆರೆ ಮೇಲೆ ತಂದಿರುವುದಾಗಿ ಇಡೀ ಚಿತ್ರತಂಡ ಹೇಳಿಕೊಂಡಿದೆ.
ಇನ್ನು ರಿಲೀಸ್‌ಗೂ ಮುನ್ನವೇ “ಬೆಲ್ ಬಾಟಂ’ ರಿಮೇಕ್ ರೈಟ್ಸ್ ತಮಿಳಿಗೆ ದೊಡ್ಡ ಮೊತ್ತಗೆ ಸೇಲ್ ಆಗಿದೆಯಂತೆ. ತಮಿಳಿನ ನಿರ್ಮಾಪಕ ಚಾರ್ಲಿ ಇಮ್ಯಾನುವೆಲ್ ಈ ಚಿತ್ರದ ರಿಮೇಕ್ ರೈಟ್ಸ್ ಖರೀದಿಸಿದ್ದು, ತಮಿಳಿನಲ್ಲಿ ಸತ್ಯ ಶಿವ ಈ ಚಿತ್ರವನ್ನು ನಿರ್ದೇಶಿಸಲಿ¨ªಾರೆ ಎನ್ನಲಾಗಿದೆ. ಸದ್ಯ ಬಿಡುಗಡೆಯಾಗಿ ಹೊರಬಂದಿರುವ “ಬೆಲ್ ಬಾಟಂ’ ಹಾಡು ನಿಧಾನವಾಗಿ ಸಿನಿಪ್ರಿಯರನ್ನು ಸೆಳೆಯುತ್ತಿದೆ. ಇದೇ ಖುಷಿಯಲ್ಲಿ ಸದ್ಯ ಭರ್ಜರಿಯಾಗಿ ಪ್ರಮೋಷನ್ ಕೆಲಸಗಳಲ್ಲಿ ನಿರತವಾಗಿರುವ ಚಿತ್ರತಂಡ ಜನವರಿ ಅಥವಾ ಫೆಬ್ರವರಿ ವೇಳೆಗೆ ಚಿತ್ರವನ್ನು ತೆರೆಗೆ ತರುವ ಯೋಜನೆಯಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bandipur ಹೆದ್ದಾರಿಯಲ್ಲಿ ಚೆಲ್ಲಿದ ಅಕ್ಕಿ ಮೆಲ್ಲುತ್ತ ನಿಂತ ಕಾಡಾನೆಗಳು: ಟ್ರಾಫಿಕ್ ಜಾಮ್
Waqf Bill: ಜಂಟಿ ಸಂಸದೀಯ ಸಮಿತಿ ಸಭೆಯಲ್ಲಿ ಗದ್ದಲ; ವಿಪಕ್ಷದ ಎಲ್ಲಾ 10 ಸಂಸದರ ಅಮಾನತು
Dharwad: ಇನ್‌ಸ್ಟಾಗ್ರಾಮ್ ಪ್ರೀತಿಗೆ ಪತಿ ತೊರೆದ 24 ರ ಯುವತಿ ಬಲಿ
Udupi; ಪವರ್ ಪರ್ಬ 2025: ಫೆ. 8 ರಂದು ಬೆಂಕಿ ರಹಿತ ಅಡುಗೆ ಸ್ಪರ್ಧೆ
ಭಾರತಾಂಬೆಗೆ ಅವಮಾನ; ಕರ್ನಾಟಕ ವಿಶ್ವವಿದ್ಯಾಲಯದಿಂದ ಪಠ್ಯ ಹಿಂದಕ್ಕೆ