ಅಭಿ ಕಥೆ ಶುರು
Team Udayavani, Aug 3, 2018, 6:00 AM IST
ಚಿತ್ರರಂಗದಲ್ಲಿ ನಟನಾಗಿ ಮಿಂಚಬೇಕೆಂಬ ಆಸೆಯಿಂದ ಬಂದವರು ನಟನೆಯ ಕಡೆಗಷ್ಟೇ ಹೆಚ್ಚು ಗಮನಕೊಡುತ್ತಾರೆ. ಕಥೆ, ಸಂಭಾಷಣೆ ಬರೆಯುವ ಕಡೆ ಹೆಚ್ಚು ಆಸಕ್ತಿ ವಹಿಸುವುದಿಲ್ಲ. ಆದರೆ, ಅಭಿಷೇಕ್ ಮಾತ್ರ ಚಿತ್ರರಂಗಕ್ಕೆ ಬಂದ ಕೆಲವೇ ವರ್ಷಗಳಲ್ಲಿ ಸಿನಿಮಾಕ್ಕೊಂದು ಕಥೆ ಕೂಡಾ ಬರೆದಿದ್ದಾರೆ. ಈಗ ಆ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಅಷ್ಟಕ್ಕೂ ಯಾರು ಈ ಅಭಿಷೇಕ್ ಎಂದರೆ ಸದ್ಯ ಬಿಡುಗಡೆಯ ಹಂತದಲ್ಲಿರುವ “ಲೌಡ್ ಸ್ಪೀಕರ್’ ಚಿತ್ರದ ಕಥೆಗಾರ ಹಾಗೂ ನಟ ಎನ್ನಬೇಕು. ಬ್ಯಾಂಕಾಕ್‌ನಲ್ಲಿ ಫಿಲಂ ಮೇಕಿಂಗ್ ಕೋರ್ಸ್ ಮಾಡಿಕೊಂಡಿರುವ ಅಭಿಷೇಕ್ ನಟನಾಗಬೇಕೆಂಬ ಕನಸಿನೊಂದಿಗೆ ಚಿತ್ರರಂಗಕ್ಕೆ ಎಂಟ್ರಿಕೊಟ್ಟು “ಜಗ್ಗುದಾದಾ’, “ಚಕ್ರವ್ಯೂಹ’, “ಧೈರ್ಯಂ’ ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡಿರುವ ಅಭಿಷೇಕ್‌ಗೆ ಬರವಣಿಗೆಯ ಆಸಕ್ತಿ ಕೂಡಾ ಇತ್ತಂತೆ. ಹಾಗಾಗಿಯೇ ಅವರಿಗೆ “ಲೌಡ್ ಸ್ಪೀಕರ್’ ಕಥೆ ಹೊಳೆದಿದೆ.
ಇವತ್ತು ಮನುಷ್ಯನ ಎಲ್ಲಾ ಸೀಕ್ರೇಟ್‌ಗಳು ಮೊಬೈಲ್‌ನಲ್ಲಿ ಅಡಗಿವೆ. ಒಂದು ವೇಳೆ ಎಲ್ಲರೂ ಲೌಡ್ ಸ್ಪೀಕರ್ ಹಾಕಿಕೊಂಡೇ ಮಾತನಾಡಬೇಕು ಎಂಬ ಕಾನೂನು ಬಂದರೆ ಏನೆಲ್ಲಾ ಆಗಬಹುದು, ಸಂಬಂಧಗಳು ಹೇಗಾಗಬಹುದೆಂಬ ಅಂಶವನ್ನಿಟ್ಟುಕೊಂಡು “ಲೌಡ್ ಸ್ಪೀಕರ್’ ಕಥೆ ಮಾಡಿದ್ದಾರಂತೆ. “ಕಥೆ ಇವತ್ತಿನ ಬಿಝಿ ಲೈಫ್ಗೆ ತುಂಬಾ ಹೊಂದುತ್ತದೆ. ಹೊಸ ಬಗೆಯಿಂದ ಕೂಡಿರುವ ಕಥೆಯನ್ನು ಜನ ಇಷ್ಟಪಡುತ್ತಾರೆಂಬ ವಿಶ್ವಾಸವಿದೆ’ ಎನ್ನುತ್ತಾರೆ ಅಭಿಷೇಕ್. ಅಂದಹಾಗೆ, ಅಭಿಷೇಕ್ “ಲೌಡ್ ಸ್ಪೀಕರ್’ ಚಿತ್ರದಲ್ಲಿ ಪ್ರಮುಖ ಪಾತ್ರ ಕೂಡಾ ಮಾಡಿದ್ದಾರೆ. ಚಿತ್ರ ಆಗಸ್ಟ್ 10 ರಂದು ತೆರೆಕಾಣುತ್ತಿದೆ. ಮುಂದೆ ಚಿತ್ರರಂಗದಲ್ಲಿ ಒಳ್ಳೆಯ ಪಾತ್ರಗಳನ್ನು ಮಾಡುವ ಕನಸು ಅಭಿಷೇಕ್‌ಗಿದೆ.
ರವಿ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ
Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.