ಸಂಚಾರಿಯ ಮೈಲಿಗಲ್ಲು ದಾರಿ ತಪ್ಪಿದವರ ಕಥೆ
Team Udayavani, Jul 28, 2017, 10:18 AM IST
ಸಂಚಾರಿ ವಿಜಯ್ ನಾಯಕರಾಗಿ ನಟಿಸಿರುವ “6ನೇ ಮೈಲಿ’ ಚಿತ್ರದ ಮೋಶನ್ ಪೋಸ್ಟರ್ ಇತ್ತೀಚೆಗೆ ಬಿಡುಗಡೆಯಾಯಿತು. ನಟಿ ಶ್ರುತಿ ಹರಿಹರನ್ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಈ ಚಿತ್ರವನ್ನು ಸೀನಿ ನಿರ್ದೇಶನ ಮಾಡಿದ್ದಾರೆ.
ಚಾರಣಕ್ಕೆ ಹೋಗುವ ಮೂರು ತಂಡ ಕಾಡಿನಲ್ಲಿ ತಪ್ಪಿಸಿಕೊಳ್ಳುವ ಮೂಲಕ ಕಥೆ ತೆರೆದುಕೊಳ್ಳುತ್ತದೆಯಂತೆ. ಇದರ ಜೊತೆಗೆ ಚಿತ್ರದಲ್ಲಿ ನೈಜ ಘಟನೆಗಳನ್ನು ಕೂಡಾ ಸೇರಿಸಲಾಗಿದೆಯಂತೆ. ಜೀವನದುದ್ದಕ್ಕೂ ಅಪರಿಚಿತ ವ್ಯಕ್ತಿಗಳು ಮೈಲಿಗಲ್ಲಿನಂತೆ ಎದುರಾಗುತ್ತಾರೆ ಮತ್ತು ಬೇರೆ ಬೇರೆ ಸನ್ನಿವೇಶಗಳು ಎದುರಾಗುತ್ತವೆ. ಅವೆಲ್ಲವನ್ನು ಹೇಗೆ ನಿಭಾಹಿಸುತ್ತಾರೆ ಎಂಬ ಅಂಶ ಕೂಡಾ ಸಿನಿಮಾದಲ್ಲಿ ಪ್ರಮುಖವಾಗಿದೆಯಂತೆ. 21 ದಿನಗಳ ಕಾಲ ಚಿತ್ರೀಕರಣ ಮಾಡಿದ್ದು, ಶಿರಸಿ, ಯಲ್ಲಾಪುರ ಕಾಡಿನಲ್ಲಿ ಚಿತ್ರೀಕರಣ ಮಾಡಿದ್ದು ಒಂದು ಹೊಸ ಅನುಭವ ನೀಡಿದೆ ಎನ್ನುವುದು ನಿರ್ದೇಶಕರ ಮಾತು.
ಈ ಸಿನಿಮಾವನ್ನು ನರರೋಗ ತಜ್ಞರಾದ ಡಾ. ಶೈಲೇಶ್ ಕುಮಾರ್ ನಿರ್ಮಿಸಿದ್ದಾರೆ. ಅವರು ಈ ಸಿನಿಮಾ ನಿರ್ಮಿಸಲು ಕಾರಣ, ನಿರ್ದೇಶಕರು ಕಥೆ ಹೇಳಿದ ರೀತಿಯಂತೆ. ನಿರ್ದೇಶಕರು ತುಂಬಾ ಆಸಕ್ತಿಕರವಾಗಿ ಕಥೆ ಹೇಳಿದ್ದು, ಹಾಗಾಗಿ ಸಿನಿಮಾ ಮಾಡಿದೆ. ಈಗ ಸಿನಿಮಾ ಕೂಡಾ ಚೆನ್ನಾಗಿ ಮೂಡಿಬಂದಿದೆ ಎಂಬುದು ಶೈಲೇಶ್ ಅವರ ಮಾತು. ಚಿತ್ರದಲ್ಲಿ ನಟಿಸಿದ ಸಂಚಾರಿ ವಿಜಯ್‌ಗೆ “ಆರನೇ ಮೈಲಿ’ ಸಿನಿಮಾ ತಮ್ಮ ಕೆರಿಯರ್‌ನಲ್ಲಿ ಹೊಸ ಮೈಲಿಗಲ್ಲಾಗುವ ವಿಶ್ವಾಸ. ಚಿತ್ರದ ದ್ವಿತೀಯಾರ್ಧ ರಿವರ್ಸ್ ಸ್ಕ್ರೀನ್‌ಪ್ಲೇನಲ್ಲಿ ಸಾಗಲಿದ್ದು, ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂಬುದು ಅವರ ಮಾತು. ಚಿತ್ರದಲ್ಲಿ ನೇತ್ರಾ, ಸುದೇಶ್, ಜಾಹ್ನವಿ, ಹೇಮಾ ನಟಿಸಿದ್ದಾರೆ. ಅಕ್ಟೋಬರ್‌ನಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಕಾರ್ಯಕ್ರಮದಲ್ಲಿ ವಸಿಷ್ಠ ಹಾಜರಿದ್ದರು.
ಅಂದಹಾಗೆ, ಚಿತ್ರದ ಹಾಡುಗಳ ಧ್ವನಿಮುದ್ರಣ ಕಾರ್ಯ ಲಂಡನ್‌ನ ಮೆಟ್ರೋ ಪಾಲಿಸನ್‌ನಲ್ಲಿ ನಡೆಯಲಿದ್ದು, ಕನ್ನಡ ಚಿತ್ರರಂಗದಲ್ಲಿ ಯಾವ ಚಿತ್ರದ ರೆಕಾರ್ಡಿಂಗ್ ಕೂಡಾ ಅಲ್ಲಿ ನಡೆದಿಲ್ಲವಂತೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.