ಹಳ್ಳಿಯಲ್ಲೊಂದು ಕಾಮಿಡಿ ಕಥೆ: ತಾತನ ತಿಥಿಯಾಯ್ತು ಈಗ ಮೊಮ್ಮಗನ ಪ್ರಸ್ಥ
Team Udayavani, Aug 4, 2017, 8:19 AM IST
“ತಾತನ ತಿಥಿ ಮೊಮ್ಮಗನ ಪ್ರಸ್ಥ’ ಎಂಬ ಚಿತ್ರವೊಂದು ಆರಂಭವಾಗಿರುವುದು ನಿಮಗೆ ಗೊತ್ತಿರಬಹುದು. ಇಂದು ಆ ಚಿತ್ರ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಮೂಲಕ ಕೃಷ್ಣಚಂದ್ರ ನಿರ್ದೇಶಕರಾಗುತ್ತಿದ್ದಾರೆ. ಈ ಹಿಂದೆ ಹಲವು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ದುಡಿದ ಅನುಭವವಿರುವ ಕೃಷ್ಣಚಂದ್ರ ಅವರಿಗೆ “ತಾತನ ತಿಥಿ ಮೊಮ್ಮಗನ ಪ್ರಸ್ಥ’ ಲೈನ್ ಹೊಳೆದಿದ್ದು, “ಜಿಂದಾ’ ಚಿತ್ರದ ಡಬ್ಬಿಂಗ್ ಸಮಯದಲ್ಲಂತೆ. ಸ್ನೇಹಿತರ ಜೊತೆ ಮಾತನಾಡುತ್ತಿರುವಾಗ ಈ ಕಥೆ ಹೊಳೆಯಿತಂತೆ. ಅದನ್ನು ನಿರ್ದೇಶಕ ಮುಸ್ಸಂಜೆ ಮಹೇಶ್ ಅವರಲ್ಲಿ ಹೇಳಿದಾಗ ಅವರು ಅದಕ್ಕೊಂದು ಪೂರ್ಣ ರೂಪ ಕೊಟ್ಟರಂತೆ. ಪರಿಣಾಮವಾಗಿ ಸಿನಿಮಾ ಆಗಿ ಈಗ ಬಿಡುಗಡೆಯಾಗುತ್ತಿದೆ ಎಂಬುದು ಕೃಷ್ಣ ಮಾತು. ಇಡೀ ಚಿತ್ರ ಕಾಮಿಡಿ ಜಾನರ್‌ನಲ್ಲಿ ಸಾಗಿದ್ದು, ಹಳ್ಳಿಯ ವಾತಾವರಣ ಸೇರಿದಂತೆ ಹಲವು ಅಂಶಗಳನ್ನು ಇಲ್ಲಿ ತೋರಿಸಲಾಗಿದೆಯಂತೆ. ಚಿತ್ರದ ಸಂಭಾಷಣೆಗಳು ಕೂಡಾ ಫನ್ನಿಯಾಗಿದ್ದು, ಜನರಿಗೆ ಇಷ್ಟವಾಗುತ್ತದೆ ಎಂಬ ವಿಶ್ವಾಸ ಚಿತ್ರತಂಡಕ್ಕಿದೆ.
ಚಿತ್ರವನ್ನು ಮಧುಕುಮಾರ್ ಹಾಗೂ ಮಂಜುನಾಥ್ ನಿರ್ಮಿಸುತ್ತಿದ್ದಾರೆ. ಕಥೆ ಇಷ್ಟವಾದ ಕಾರಣ ಸಿನಿಮಾ ಮಾಡುತ್ತಿದ್ದೇವೆ ಎಂಬುದು ಮಧುಕುಮಾರ್ ಮಾತು. ಚಿತ್ರದ ಒಂದೆರಡು ದೃಶ್ಯದಲ್ಲೂ ಅವರು ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಲೋಕಿ ನಾಯಕರಾಗಿ ನಟಿಸಿದ್ದಾರೆ. ಅವರಿಗಿಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆಯಂತೆ. ಶುಭಾ ಪೂಂಜಾ ನಾಯಕಿ. ಸಿಟಿಯಿಂದ ಹಳ್ಳಿಗೆ ಬರುವ ಹಾಗೂ ಹಳ್ಳಿ ಜನರಿಗೆ ಯೋಗ ಕಲಿಸುವ ಪಾತ್ರದಲ್ಲಿ ಅವರು ನಟಿಸಿದ್ದಾರೆ. ಚಿತ್ರಕ್ಕೆ ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆ ಬರೆಯುವ ಜೊತೆಗೆ ಸಣ್ಣ ಪಾತ್ರ ಕೂಡಾ ಮಾಡಿದ್ದಾರೆ. ಚಿತ್ರದಲ್ಲಿ ಡಬಲ್ ಮೀನಿಂಗ್ ಸಂಭಾಷಣೆಗಳಿಲ್ಲ, ಬದಲಾಗಿ ಫನ್ನಿ ಸಂಭಾಷಣೆಗಳಿವೆ ಎಂಬುದು ಅವರ ಮಾತು. ಓಂ ಪ್ರಕಾಶ್ ರಾವ್ ಕೂಡಾ ನಟಿಸಿದ್ದು, ತಂಡದ ಶ್ರಮದ ಬಗ್ಗೆ ಮಾತನಾಡಿದರು. “ತಿಥಿ’ ತಮ್ಮಣ್ಣ ಕೂಡಾ ಇಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಶ್ರೀಧರ್ ಸಂಭ್ರಮ್ ಸಂಗೀತ, ನಾಗೇಶ್ ಆಚಾರ್ಯ ಛಾಯಾಗ್ರಹಣ ಚಿತ್ರಕ್ಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chennai: ನಟಿ ಕಸ್ತೂರಿ ಶಂಕರ್‌ಗೆ ನ.29ರ ವರೆಗೆ ನ್ಯಾಯಾಂಗ ಬಂಧನ
Malpe: ನಿಲ್ಲಿಸಲಾಗಿದ್ದ ಬುಲೆಟ್ ಕಳವು
Maharashtra: ಬಿಜೆಪಿ ನಾಯಕಿ ನವನೀತ್ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್ ದಾಖಲು
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.