ಚಿಣ್ಣರ ಪರಿಸರ ಕಾಳಜಿ


Team Udayavani, Mar 1, 2019, 12:30 AM IST

v-29.jpg

ಕನ್ನಡದಲ್ಲಿ “ಗಂಧದ ಗುಡಿ’ ಚಿತ್ರ ಯಾರಿಗೆ ತಾನೆ ಗೊತ್ತಿಲ್ಲ. ಅರಣ್ಯ ಉಳಿಸುವ, ಪ್ರಾಣಿ ಸಂರಕ್ಷಿಸುವ ಕುರಿತಂತೆ ಬೆಳಕು ಚೆಲ್ಲಿದ ಚಿತ್ರವದು. ಈಗ “ಗಂಧದಕುಡಿ’ ಸರದಿ. ಹೌದು, ಇಲ್ಲೂ ಸಹ ಅರಣ್ಯ ನಾಶಪಡಿಸುವುದು ಬೇಡ, ಪ್ರಾಣಿ, ಗಿಡ, ಮರ, ಪ್ರಕೃತಿಯನ್ನು ರಕ್ಷಿಸಬೇಕೆಂಬ ವಿಷಯ ಹೊಂದಿದೆ. ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಅದಕ್ಕೂ ಮೊದಲು, ಚಿತ್ರದ ಆಡಿಯೋ ಬಿಡುಗಡೆ ಮಾಡುವ ಮೂಲಕ ಒಂದಷ್ಟು ಮಾಹಿತಿ ಹಂಚಿಕೊಂಡಿತು ಚಿತ್ರತಂಡ.

ಸಂತೋಷ್‌ ಶೆಟ್ಟಿ ಕಟೀಲ್‌ ಈ ಚಿತ್ರದ ನಿರ್ದೇಶಕರು. ಕಥೆ, ಚಿತ್ರಕಥೆ, ಸಂಭಾಷಣೆಯೂ ಅವರದೇ. ನಿರ್ದೇಶಕರಿಗೆ ಅನಿಮೇಷನ್‌ ಗೊತ್ತು, ಎಡಿಟಿಂಗ್‌ ಗೊತ್ತು, ಗ್ರಾಫಿಕ್ಸ್‌ ಕೂಡ ಗೊತ್ತಿತ್ತು. ಬಾಲಿವುಡ್‌ನ‌ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ ಅನುಭವ ಕೂಡ ಇತ್ತು. “ಕನಸು ಕಣ್ಣು ತೆರೆದಾಗ’ ಎಂಬ ಮೊದಲ ಚಿತ್ರ ನಿರ್ದೇಶಿಸಿದ್ದ ಅವರಿಗೆ ಪ್ರಶಸ್ತಿ ಕೂಡ ಲಭಿಸಿತ್ತು. ಈಗ “ಗಂಧದಕುಡಿ’ ಮಾಡಿದ್ದಾರೆ. ಹಿಂದಿಯಲ್ಲೂ “ಚಂದನ್‌ವನ್‌’ ಹೆಸರಲ್ಲಿ ಬಿಡುಗಡೆಯಾಗುತ್ತಿದೆ. ಇಷ್ಟೆಲ್ಲಾ ಮಾಡಿದ ನಿರ್ದೇಶಕರು, ಪ್ರಮೋಶನ್‌ಗಾಗಿ ಫೋಟೋಶೂಟ್‌ ಮಾಡಲು ಕಾಡಿಗೆ ಹೋಗಿದ್ದ ವೇಳೆ, ನೀರಿನ ಸೆಳೆತಕ್ಕೆ ಸಿಲುಕಿ ಅಸುನೀಗಿದ್ದಾರೆ. ಅವರ ಕನಸಿನ ಚಿತ್ರ ಈಗ ಪ್ರೇಕ್ಷಕರ ಮುಂದೆ ತರಲು ನಿರ್ಮಾಪಕ ಕೆ.ಸತ್ಯೇಂದ್ರ ಪೈ ಅವರು ಮುಂದಾಗಿದ್ದಾರೆ.

ನಿರ್ಮಾಪಕ ಸತ್ಯೇಂದ್ರ ಪೈ ಅವರದು ಐಟಿ ಕ್ಷೇತ್ರ. ಅವರಿಗೆ ಸಿನಿಮಾ ಮಾಡುವ ಆಸೆ ಇತ್ತು. ಆದರೆ, ಮನರಂಜನೆ ಜೊತೆ ಒಳ್ಳೆಯ ವಿಷಯ ಇಟ್ಟುಕೊಂಡು ಸಿನಿಮಾ ಮಾಡಬೇಕೆಂಬ ಆಶಯ ಇತ್ತು. ಪ್ರಕೃತಿಗೆ ಸಂಬಂಧಿಸಿದಂತೆ, ಮರ,ಗಿಡ ಬೆಳೆಸಿ, ಪೋಷಿಸ ಬೇಕೆಂಬ ಸಂದೇಶ ಇಟ್ಟುಕೊಂಡು ಮಕ್ಕಳ ಚಿತ್ರ ಮಾಡಲು ತೀರ್ಮಾನಿಸಿ, ಸಂತೋಷ್‌ ಹೇಳಿದ ಕಥೆಗೆ ಗ್ರೀನ್‌ಸಿಗ್ನಲ್‌ ಕೊಟ್ಟು, ಸಿನಿಮಾ ಮಾಡಿದ್ದಾರೆ. “ಇದೊಂದು ಸಾರ್ಥಕ ಪ್ರಯತ್ನ. ನನ್ನ ಮೊದಲ ಸಿನಿಮಾ ಇದಾಗಿರು ವುದರಿಂದ ಚೆನ್ನಾಗಿ ಮೂಡಿ ಬರಬೇಕು ಎಂಬ ಉದ್ದೇಶವಿತ್ತು. ಹಾಗಾಗಿ, ಬಜೆಟ್‌ ಲೆಕ್ಕೆ ಹಾಕದೆ, ಒಂದು ಕಮರ್ಷಿಯಲ್‌ ಸಿನಿಮಾ ರೇಂಜ್‌ಗೆ ಚಿತ್ರ ಮಾಡಿದ್ದೇವೆ. ಇನ್ನು, ಗ್ರಾಮೀಣ ಪ್ರದೇಶದ ಮಕ್ಕಳ ಪ್ರತಿಭೆ ನೋಡಿ, ಅವರನ್ನೂ ಇಲ್ಲಿ ಬಳಸಿಕೊಳ್ಳಲಾಗಿದೆ. ಈ ಹಿಂದೆಯೇ ಚಿತ್ರ ಬಿಡುಗಡೆಯಾಗಬೇಕಿತ್ತು. ಈಗ ಪ್ರೇಕ್ಷಕರ ಮುಂದೆ ಬರಲು ಅಣಿಯಾಗುತ್ತಿದೆ. ಹಿರಿಯ ಕಲಾವಿದರಾದ ರಮೇಶ್‌ಭಟ್‌, ಶಿವಧ್ವಜ್‌ ಅವರ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ’ ಅಂದರು ಅವರು. 

ನಟ ರಮೇಶ್‌ ಭಟ್‌ ಅವರು, ನಿರ್ಮಾಪಕರ ಧೈರ್ಯ ಬಗ್ಗೆ ಹೇಳುತ್ತ ಮಾತಿಗಿಳಿದರು. “ಇಲ್ಲಿ ಸ್ವತ್ಛ ಮನಸ್ಸಿನಿಂದ ಸಿನಿಮಾ ಮಾಡಲಾಗಿದೆ. ಯಾವುದೇ ಆಸೆ, ಆಕಾಂಕ್ಷೆ ಇಲ್ಲದೆ, ದೊಡ್ಡ ಬಜೆಟ್‌ನಲ್ಲಿ ಮಕ್ಕಳ ಚಿತ್ರ ಮಾಡಿದ್ದಾರೆ. ಮಕ್ಕಳ ರಜಾ ದಿನ ನೋಡಿಕೊಂಡೇ ಚಿತ್ರೀಕರಣ ಮಾಡಲಾಗಿದೆ. ಕಾಡಲ್ಲಿ ಒಂದು ವಿಮಾನ ಸೆಟ್‌ ಹಾಕಿದ್ದು ವಿಶೇಷ. ಅದೊಂದು ಅದ್ಭುತ ಸೆಟ್‌ ಆಗಿತ್ತು. ಅಷ್ಟೊಂದು ಖರ್ಚು ಮಾಡಿ ಮಕ್ಕಳ ಸಿನಿಮಾ ಮಾಡಬೇಕಾ ಎಂಬ ಪ್ರಶ್ನೆ ಬಂದರೂ, ನಿರ್ಮಾಪಕರ ಸಿನಿಮಾ ಪ್ರೀತಿ ಅಷ್ಟಕ್ಕೆಲ್ಲ ಕಾರಣವಾಯ್ತು. ಇನ್ನು ಇಲ್ಲಿ ಸಜ್ಜನರ ಗುಂಪು ಕೆಲಸ ಮಾಡಿದ್ದರಿಂದ ಒಳ್ಳೆಯ ಚಿತ್ರ ಮೂಡಿಬಂದಿದೆ ಎಂದರು ರಮೇಶ್‌ಭಟ್‌.

ನಟ ಶಿವಧ್ವಜ್‌ ಅವರಿಗೆ ನಿರ್ದೇಶಕರು ಕಥೆ ಹೇಳುವ ಮುನ್ನ, ಸ್ಟೋರಿಬೋರ್ಡ್‌ ಪುಸ್ತಕ ಕೊಟ್ಟರಂತೆ. ಅದನ್ನು ನೋಡಿದ ಶಿವಧ್ವಜ್‌ ಅವರಿಗೆ ಇಡೀ ಸಿನಿಮಾ ನೋಡಿದಂತೆ ಭಾಸವಾಯಿತಂತೆ. ಆಮೇಲೆ ನಿರ್ದೇಶಕರು ಕಥೆ ಹೇಳಿದಾಗ, ಮಿಸ್‌ ಮಾಡಿಕೊಳ್ಳಬಾರದು ಅಂತ ಚಿತ್ರ ಮಾಡಿದ್ದೇನೆ. ಇಲ್ಲಿ ಕ್ಲೈಮ್ಯಾಕ್ಸ್‌ ತುಂಬಾ ಚೆನ್ನಾಗಿದೆ. ನಾನು ಇಲ್ಲಿ ಉದ್ಯಮಿ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದೇನೆ. ಇಂತಹ ಚಿತ್ರಗಳು ವಿದ್ಯಾರ್ಥಿಗಳಿಗೆ ತಲುಪಬೇಕು. ಸರ್ಕಾರ ಈ ನಿಟ್ಟಿನಲ್ಲಿ ಒಂದು ಆದೇಶ ಹೊರಡಿಸಬೇಕು. ಇದರಿಂದ ಮುಂದಿನ ಪೀಳಿಗೆಗೆ ಪರಿಸರ ಕಾಳಜಿ ಬಗ್ಗೆ ಅರಿವಾಗುತ್ತದೆ ಎಂದರು ಶಿವಧ್ವಜ್‌.

ಪ್ರಸಾದ್‌ ಕೆ. ಶೆಟ್ಟಿ ಸಂಗೀತವಿದೆ, ಸಚಿನ್‌ ಶೆಟ್ಟಿ ಛಾಯಾಗ್ರಹಣ ಮಾಡಿದ್ದಾರೆ. ರವಿರಾಜ್‌ ಗಾಣಿಗ ಸಂಕಲನವಿದೆ. ಕರಿಸುಬ್ಬು, ಸಂಭಾಷಣೆ ಬರೆದ ರಜಾಕ್‌ ಪುತ್ತೂರು, ಸಿನಿಮಾ ಹೊಣೆಗಾರಿಕೆ ಹೊತ್ತ ಪ್ರೀತ ಮೆನೇಜಸ್‌ ಮಾತನಾಡಿದರು. ಚಿತ್ರಕ್ಕೆ ಕೃಷ್ಣಮೋಹನ್‌ ಪೈ ಕೂಡ ನಿರ್ಮಾಪಕರು. ಚಿತ್ರದಲ್ಲಿ ಜ್ಯೋತಿ ರೈ, ಅರವಿಂದ್‌ ಶೆಟ್ಟಿ, ತಮನ್ನಾ ಶೆಟ್ಟಿ ಇತರರು ನಟಿಸಿದ್ದಾರೆ. ಲಹರಿ ವೇಲು ಹಾಗೂ ಪೊಲೀಸ್‌ ಮಾಜಿ ಅಧಿಕಾರಿ ಬಿ.ಎನ್‌.ಎಸ್‌.ರೆಡ್ಡಿ ಚಿತ್ರದ ಕುರಿತು ಮಾತನಾಡಿದರು.

ವಿಜಯ್‌ ಭರಮಸಾಗರ

ಟಾಪ್ ನ್ಯೂಸ್

7-vitla

Vitla: ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿ ಸಾವು

Kane Williamson makes a brilliant comeback

NZvsENG: ಭರ್ಜರಿ ಕಮ್‌ಬ್ಯಾಕ್ ಮಾಡಿದ ಕೇನ್‌ ವಿಲಿಯಮ್ಸನ್‌

Delhi: ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಸ್ಫೋಟ… ಪೊಲೀಸ್, ಅಗ್ನಿಶಾಮಕ ದಳ ದೌಡು

Delhi: ಒಂದು ತಿಂಗಳ ಅಂತರದಲ್ಲಿ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಎರಡನೇ ಸ್ಫೋಟ

Belagavi: ಸಿಪಿಐ ಕಿರುಕುಳ ಆರೋಪ, ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ

Belagavi: ಸಿಪಿಐ ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ

11

BBK11: ಮಂಜುವನ್ನು ರೋಗಿಷ್ಠ ರಾಜ ಎಂದ ರಜತ್; ಜೋರಾಗಿ ನಕ್ಕ ಶಿಶಿರ್, ಐಶ್ವರ್ಯಾ

Bangladesh:ಇಸ್ಕಾನ್‌ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್‌,ಸರ್ಕಾರಕ್ಕೆ ಮುಖಭಂಗ

Bangladesh:ಇಸ್ಕಾನ್‌ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್‌,ಸರ್ಕಾರಕ್ಕೆ ಮುಖಭಂಗ

bellad

Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನ‌ಪ್ಪನವರ ವಿರುದ್ದ ಬೆಲ್ಲದ್‌ ಟೀಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

priyanka upendra in life is beautiful movie

Priyanka Upendra: ಬ್ಯೂಟಿಫುಲ್‌ ಲೈಫ್‌ ನಲ್ಲಿ ಪ್ರಿಯಾಂಕಾ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

8-sirwar

Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ

kuladalli keelyavudo kannada movie

Kannada Cinema: ಕ್ಲೈಮ್ಯಾಕ್ಸ್‌ ನತ್ತ ʼಕುಲದಲ್ಲಿ ಕೀಳ್ಯಾವುದೋʼ

7-vitla

Vitla: ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿ ಸಾವು

Kane Williamson makes a brilliant comeback

NZvsENG: ಭರ್ಜರಿ ಕಮ್‌ಬ್ಯಾಕ್ ಮಾಡಿದ ಕೇನ್‌ ವಿಲಿಯಮ್ಸನ್‌

Delhi: ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಸ್ಫೋಟ… ಪೊಲೀಸ್, ಅಗ್ನಿಶಾಮಕ ದಳ ದೌಡು

Delhi: ಒಂದು ತಿಂಗಳ ಅಂತರದಲ್ಲಿ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಎರಡನೇ ಸ್ಫೋಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.