ಬುದ್ಧಿವಂತನ ಕಥೆ: ಹಳ್ಳಿಯ ಕಾಮಿಡಿ ಚಿತ್ರಣ


Team Udayavani, Apr 27, 2018, 3:45 PM IST

bhuddhivanta.jpg

ಬೋರಾಪುರ ಎಂಬ ಊರಲ್ಲಿ ಯಾರೆಲ್ಲಾ ಇದ್ದಾರೆ, ಅಲ್ಲಿ ಏನೆಲ್ಲಾ ನಡೆಯುತ್ತೆ ಎಂಬುದಕ್ಕೆ ಈ ವಾರ ಉತ್ತರ ಸಿಗಲಿದೆ. ಅಂದರೆ, ಈ ವಾರ “ಡೇಸ್‌ ಆಫ್ ಬೋರಾಪುರ’ ಚಿತ್ರ ಬಿಡುಗಡೆಯಾಗುತ್ತಿದೆ. ಅಲ್ಲಿಗೆ ಆ ಊರೊಳಗಿನ ವಿಷಯ ಆಚೆ ಬರಲಿದೆ. ಅಂದಹಾಗೆ, ಇದೊಂದು ಹಳ್ಳಿ ಸೊಗಡಿನ ಸಿನಿಮಾ. ಈ ಚಿತ್ರದಲ್ಲಿ ಅನಿತಾಭಟ್‌ ಅವರನ್ನು ಹೊರತುಪಡಿಸಿದರೆ ಬಹುತೇಕರು ಹೊಸಬರು.

ಇಲ್ಲೊಂದು ಕುತೂಹಲವಿದೆ. ಅದೊಂದು ರೀತಿ ಥ್ರಿಲ್ಲರ್‌ ಅಂಶಗಳನ್ನೊಳಗೊಂಡಿದೆ. ಇನ್ನು, ಇಲ್ಲಿ ಹಾಸ್ಯಕ್ಕೂ ಕೊರತೆ ಇಲ್ಲ. ಒಟ್ಟಾರೆ, ಒಂದು ಹಳ್ಳಿಯಲ್ಲಿ ಕಾಣಸಿಗುವ ಪಾತ್ರಗಳು ಹೇಗೆ ವರ್ತಿಸುತ್ತವೆ, ಎಷ್ಟೆಲ್ಲಾ ಸಮಸ್ಯೆಗೆ ಸಿಲುಕಿಕೊಳ್ಳುತ್ತವೆ ಎಂಬುದನ್ನು ಹಾಸ್ಯದ ಮೂಲಕ ತೋರಿಸುವ ಪ್ರಯತ್ನ ಮಾಡಿದ್ದಾರಂತೆ ನಿರ್ದೇಶಕರು. ಇನ್ನು, ಚಿತ್ರಕ್ಕೆ ಸೂರ್ಯ ಸಿದ್ಧಾಂತ್‌ ನಾಯಕ.

ಈಗಾಗಲೇ ಚಿತ್ರದ ಟ್ರೇಲರ್‌ ಮತ್ತು ಹಾಡುಗಳಿಗೆ ಸಿಕ್ಕಿರುವ ಪ್ರತಿಕ್ರಿಯೆ ನೋಡಿ, ಅವರಿಗೆ ಚಿತ್ರದ ಮೇಲೂ ವಿಶ್ವಾಸ ಮೂಡಿದೆಯಂತೆ. ಅವರಿಲ್ಲಿ ವಿದ್ಯಾವಂತ ಹುಡುಗನಾಗಿ ನಟಿಸಿದ್ದಾರಂತೆ. ಇಡೀ ಹಳ್ಳಿಗೆ ಅವರೊಬ್ಬರೇ ಓದಿರುವ ಬುದ್ಧಿವಂತ. ಆ ಹಳ್ಳಿಯಲ್ಲಿ ಒಂದು ಘಟನೆ ನಡೆಯುತ್ತೆ. ಆಮೇಲೆ ಎಷ್ಟೊಂದು ಸಮಸ್ಯೆ ಎದುರಾಗುತ್ತೆ. ಅದರಿಂದ ಹೇಗೆ ಹೊರಬರುತ್ತಾರೆ ಎಂಬುದನ್ನು ಇಲ್ಲಿ ಚೆನ್ನಾಗಿ ತೋರಿಸಲಾಗಿದೆ ಎನ್ನುತ್ತಾರೆ ಸೂರ್ಯ ಸಿದ್ಧಾಂತ್‌. 

ಪ್ರಶಾಂತ್‌ ಈ ಚಿತ್ರದ ಮತ್ತೂಬ್ಬ ನಾಯಕ. ಅವರಿಲ್ಲಿ ಸೂರ್ಯ ಸಿದ್ಧಾಂತ್‌ ಮಾಡುವ ಕೆಲಸಗಳಿಗೆಲ್ಲ ಕಲ್ಲು ಹಾಕುವ ಪಾತ್ರ ನಿರ್ವಹಿಸಿದ್ದಾರಂತೆ. ಅನಿತಾ ಭಟ್‌, ಇಲ್ಲಿ ನಾಟಕದ ಕಲಾವಿದೆಯಾಗಿ ನಟಿಸಿದ್ದಾರಂತೆ.  ಅಮಿತಾ ರಂಗನಾಥ್‌ ಆ ಹಳ್ಳಿಯಲ್ಲಿ ಓದಿರುವ ವಿದ್ಯಾವಂತೆಯಾಗಿದ್ದು ವಿಶೇಷ ಪಾತ್ರ ಮಾಡಿದ್ದಾರಂತೆ. ಇನ್ನು, ಪ್ರಕೃತಿ ಇಲ್ಲಿ ಪ್ರೀತಿಸಿದ ಹುಡುಗನನ್ನು ಮದುವೆಯಾಗದೆ ಬೇರೊಬ್ಬನಿಗೆ ಸಂಗಾತಿಯಾಗುವ ಪಾತ್ರ ಮಾಡಿದ್ದಾರಂತೆ.

ಚಿತ್ರದಲ್ಲಿ ದಿನೇಶ್‌ ಮಂಗಳೂರು, ಸುಚೇಂದ್ರ ಪ್ರಸಾದ್‌, ತೆಲುಗು ನಟ ಷಫಿ ಇತರರು ನಟಿಸಿದ್ದಾರೆ. ಚಿತ್ರದ ಒಂದು ಹಾಡಿಗೆ ಜಗ್ಗೇಶ್‌ ಧ್ವನಿ ನೀಡಿರುವುದು ವಿಶೇಷ. ಮಧು ಬಸವರಾಜು ಮತ್ತು ಅಜಿತ್‌ ಕುಮಾರ್‌ ಗದ್ದಿ  ನಿರ್ಮಾಣ ಮಾಡಿದ್ದಾರೆ. ಅಂದು ನಿರ್ದೇಶಕ ಎನ್‌. ಆದಿತ್ಯ ಕುಣಿಗಲ್‌ ಬಂದಿರಲಿಲ್ಲ. ಕಾರಣಕ್ಕೆ ಯಾರಿಂದಲೂ ಉತ್ತರ ಬರಲಿಲ್ಲ. ವಿವೇಕ್‌ ಚಕ್ರವರ್ತಿ ಸಂಗೀತವಿದೆ. ಮಂಡ್ಯ ಮನು ಸಂಭಾಷಣೆ ಬರೆದಿದ್ದಾರೆ. ಶರವಣನ್‌ ಛಾಯಾಗ್ರಹಣವಿದೆ.

ಟಾಪ್ ನ್ಯೂಸ್

bidar

Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ

1-s-v

Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ

congress

Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Vijayapura: ಬಿಚ್ಚಿಟ್ಟರೆ ಬಣ್ಣ ಬಯಲು, ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು: ಯತ್ನಾಳ್

ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ

fir

Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ

1-ajmir

Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

priyanka upendra in life is beautiful movie

Priyanka Upendra: ಬ್ಯೂಟಿಫುಲ್‌ ಲೈಫ್‌ ನಲ್ಲಿ ಪ್ರಿಯಾಂಕಾ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

bidar

Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ

1-s-v

Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ

congress

Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

156

Nikhil Kumarswamy: ಸೋತ ನಿಖಿಲ್‌ಗೆ ಜಿಲ್ಲೆಯ ಪಕ್ಷ ಸಂಘಟನೆ ಹೊಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.