ಪಾತಕ ಲೋಕದ ರೋಚಕ ಕಥೆ
Team Udayavani, Oct 25, 2019, 5:02 AM IST
ಕೆಲ ವರ್ಷಗಳ ಹಿಂದೆ ಬಂದ “ದಂಡುಪಾಳ್ಯ’ ಚಿತ್ರದ ಬಗ್ಗೆ ನಿಮಗೆ ಗೊತ್ತಿರಬಹುದು. ದಂಡುಪಾಳ್ಯ ಹಂತಕರ ಕ್ರೌರ್ಯದ ಕಥೆಯನ್ನು ತೆರೆಮೇಲೆ ತಂದ ಈ ಚಿತ್ರಕ್ಕೆ ಬಾಕ್ಸಾಫೀಸ್‌ನಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಅದಾದ ನಂತರ “ದಂಡುಪಾಳ್ಯ’ ಟೈಟಲ್‌ನಲ್ಲಿ ಸರಣಿ ಚಿತ್ರಗಳು ತೆರೆಗೆ ಬರಲು ಶುರುವಾದವು. “ದಂಡುಪಾಳ್ಯ’, “ದಂಡುಪಾಳ್ಯ-2′ ಆದ ನಂತರ “ದಂಡುಪಾಳ್ಯಂ-3′ ಕೂಡ ತೆರೆಗೆ ಬಂದಿತ್ತು. ಈಗ ಇದೇ ಸರಣಿಯ ಮುಂದುವರೆದ ಭಾಗವಾಗಿ “ದಂಡುಪಾಳ್ಯಂ-4′ ಚಿತ್ರ ತೆರೆಗೆ ಬರುತ್ತಿದೆ.
ಇನ್ನು “ದಂಡುಪಾಳ್ಯಂ-4′ ಚಿತ್ರದ ಟೈಟಲ್‌ಗೆ “ದಿ ಕ್ರೈಮ್ಸ್ ಟು ಬಿ ಕಂಟಿನ್ಯೂಡ್’ ಎಂಬ ಟ್ಯಾಗ್‌ಲೈನ್ ಇರುವುದರಿಂದ, “ದಂಡುಪಾಳ್ಯ’ದ ಈ ಹಿಂದಿನ ಮೂರೂ ಸರಣಿಯಲ್ಲಿದ್ದಂತೆ ಈ ಚಿತ್ರದಲ್ಲೂ ಕ್ರೌರ್ಯದ ಕಥಾನಕ ಮುಂದುವರೆಯಲಿದೆ. “ವೆಂಕಟ್ ಮೂವೀಸ್ ಪ್ರೊಡಕ್ಷನ್ಸ್’ ಬ್ಯಾನರ್‌ನಲ್ಲಿ ನಿರ್ಮಾಪಕ ವೆಂಕಟ್ ಕಥೆ, ಚಿತ್ರಕಥೆ ಮತ್ತು ಸಾಹಿತ್ಯವನ್ನು ಬರೆದು ಚಿತ್ರವನ್ನು ನಿರ್ಮಿಸಿದ್ದಾರೆ. ಕೆ.ಟಿ ನಾಯಕ್ “ದಂಡುಪಾಳ್ಯಂ-4′ ಚಿತ್ರವನ್ನು ನಿರ್ದೇಶಿಸಿ¨ªಾರೆ. ಈ ಬಾರಿ “ದಂಡುಪಾಳ್ಯಂ-4’ನಲ್ಲಿ ಸುಮನ್ ರಂಗನಾಥ್, ವೆಂಕಟ್, ಮುಮೈತ್ ಖಾನ್, ಸಂತೋಷ್, ವೀಣಾ, ಸಂಜು, ಅರುಣ್ ಬಚ್ಚನ್, ಸೋಮು, ಜೀವ, ವಿಠಲ… ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಈಗಾಗಲೇ ಸೆನ್ಸಾರ್‌ನಿಂದ ರಿಲೀಸ್‌ಗೆ ಅನುಮತಿ ಪಡೆದುಕೊಂಡಿರುವ “ದಂಡುಪಾಳ್ಯಂ-4′ ಚಿತ್ರ ಇದೇ ನವೆಂಬರ್ 1ರಂದು ತೆರೆಗೆ ಬರುತ್ತಿದೆ. ಸದ್ಯ ಚಿತ್ರದ ಪ್ರಮೋಶನ್ ಕೆಲಸಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇತ್ತೀಚೆಗೆ ಚಿತ್ರದ ಆಡಿಯೋ ಮತ್ತು ಟ್ರೇಲರ್‌ನ್ನು ಹೊರತಂದಿದೆ. ಇದೇ ವೇಳೆ ಮಾತಿಗೆ ಸಿಕ್ಕ ಚಿತ್ರತಂಡ “ದಂಡುಪಾಳ್ಯಂ-4’ನ ವಿಶೇಷತೆಗಳ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡಿತು.
ಚಿತ್ರದ ಬಗ್ಗೆ ಮೊದಲು ಮಾತಿಗಿಳಿದ ನಿರ್ಮಾಪಕ ವೆಂಕಟ್, “ಚಿತ್ರದ ಟೈಟಲ್ಲೇ ಹೇಳುವಂತೆ ಇದೊಂದು ಕ್ರೈಮ್-ಥ್ರಿಲ್ಲರ್ ಚಿತ್ರ. ಸುಮಾರು ಒಂದೂವರೆ ವರ್ಷ ಸಮಯ ತೆಗೆದುಕೊಂಡು ಚಿತ್ರವನ್ನು ಮಾಡಿದ್ದೇವೆ. ಪೊಲೀಸ್, ಕ್ರಿಮಿನಲ್ಸ್, ಪಬ್ಲಿಕ್ ಎಲ್ಲದರ ಬಗ್ಗೆಯೂ ಚಿತ್ರದಲ್ಲಿ ಹೇಳಿದ್ದೇವೆ. ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ. ಸಮಾಜದಲ್ಲಿ ಅಪರಾಧಗಳನ್ನು ಮಾಡಿ ತಾವೇ ಬುದ್ಧಿವಂತರು ಅಂದುಕೊಂಡವರಿಗೆ ಎಂತಹ ಅಂತ್ಯ ಆಗುತ್ತದೆ ಎನ್ನುವ ಮೆಸೇಜ್ ಚಿತ್ರದಲ್ಲಿದೆ’ ಎಂದು ವಿವರಣೆ ನೀಡಿದರು.
ಈ ಬಾರಿ “ದಂಡುಪಾಳ್ಯಂ-4′ ಚಿತ್ರದ ನಿರ್ದೇಶನದ ಹೊಣೆಯನ್ನು ಕೆ.ಟಿ ನಾಯಕ್ ವಹಿಸಿಕೊಂಡಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ಕೆ.ಟಿ ನಾಯಕ್, “ಮೆಸೇಜ್ ಕೊಡುವಂತ ಸಬೆjಕ್ಟ್ ಇಟ್ಟುಕೊಂಡು ಅದನ್ನು ಎಂಟರ್‌ಟೈನ್ಮೆಂಟ್ ಆಗಿ ಜನಕ್ಕೆ ಈ ಚಿತ್ರದಲ್ಲಿ ಹೇಳುತ್ತಿದ್ದೇವೆ. ಚಿತ್ರ ಜನಕ್ಕೆ ಇಷ್ಟವಾಗುತ್ತದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಚಿರಯೌವ್ವನೆ ಸುಮನ್ ರಂಗನಾಥ್ “ದಂಡುಪಾಳ್ಯಂ-4’ನಲ್ಲಿ ಡಿ-ಗ್ಲಾಮರಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಪಾತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯ ಮಾತುಗಳನ್ನಾಡುವ ಸುಮನ್ ರಂಗನಾಥ್, “ನಾನು ಇಲ್ಲಿಯವರೆಗೆ ಬಂದಿರುವ “ದಂಡುಪಾಳ್ಯ’ ಸೀರಿಸ್‌ನ ಚಿತ್ರಗಳನ್ನು ನೋಡಿಲ್ಲ. ಆದ್ರೆ ಚಿತ್ರತಂಡದ ಸ್ಟೋರಿ ಕೇಳುತ್ತಿದ್ದಂತೆ, ಕ್ಯಾರೆಕ್ಟರ್ ಇಷ್ಟವಾಯ್ತು. ಹಾಗಾಗಿ, ಚಿತ್ರವನ್ನು ಒಪ್ಪಿಕೊಂಡೆ. ಇಲ್ಲಿ ನನ್ನದು ಅಭಿನಯಕ್ಕೆ ತುಂಬಾ ಪ್ರಾಮುಖ್ಯತೆಯಿರುವ, ಡಿ-ಗ್ಲಾಮರಸ್ ಕ್ಯಾರೆಕ್ಟರ್. ಇಡೀ ಚಿತ್ರದಲ್ಲಿ ರಗಡ್ ಲುಕ್‌ನಲ್ಲಿ ಕಾಣುತ್ತೇನೆ. ಕಲಾವಿದೆಯಾಗಿ ಚಿತ್ರಕ್ಕೆ ಕಂಪ್ಲೀಟ್ ಎಫರ್ಟ್ ಹಾಕಿದ್ದೇನೆ. ಫಸ್ಟ್‌ಟೈಮ್ ಇಂಥದ್ದೊಂದು ಕ್ಯಾರೆಕ್ಟರ್ ಮಾಡುತ್ತಿರುವುದಕ್ಕೆ ಖುಷಿ ಇದೆ. ಟೀಮ್ ಜೊತೆ ಕೆಲಸ ಮಾಡಿದ್ದು ಒಳ್ಳೆಯ ಅನುಭವ’ ಎಂದರು.
“ದಂಡುಪಾಳ್ಯಂ-4′ ಕನ್ನಡ, ತಮಿಳು, ತೆಲುಗು, ಮಲೆಯಾಳಂ, ಹಿಂದಿಯಲ್ಲಿ ಏಕಕಾಲಕ್ಕೆ ತೆರೆಗೆ ತರಲು ಚಿತ್ರತಂಡ ಪ್ಲಾನ್ ಮಾಡಿಕೊಳ್ಳುತ್ತಿದೆ. ಚಿತ್ರಕ್ಕೆ ಆರ್.ಗಿರಿ, ಬೆನಕ ರಾಜು ಛಾಯಾಗ್ರಹಣವಿದೆ. ಬಾಬು ಎ ಶ್ರೀವಾತ್ಸವ, ಪ್ರೀತಿ ಮೋಹನ್ ಸಂಕಲನ ಕಾರ್ಯವಿದೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು, ಆನಂದ ರಾಜ ವಿಕ್ರಮ ಸಂಗೀತ ಸಂಯೋಜಿಸಿದ್ದಾರೆ. ಶಿವ ಸಮಯ್ ಚಿತ್ರಕ್ಕೆ ಸಂಭಾಷಣೆ ಬರೆದಿ¨ªಾರೆ. “ದಂಡುಪಾಳ್ಯಂ-4′ ಹಿಂದಿನ ಮೂರು ಚಿತ್ರಗಳಂತೆ ಸಕ್ಸಸ್ ಲೀಸ್ಟ್ ಸೇರಿಲಿದೆಯಾ ಅನ್ನೋದು ನವೆಂಬರ್ ಮೊದಲ ವಾರ ಗೊತ್ತಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!
Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ
RenukaswamyCase: ದರ್ಶನ್ ಸೇರಿ ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರು; ವಿಚಾರಣೆ ಮುಂದೂಡಿಕೆ
Bengaluru: ಮಲಗಿದ ನಾಯಿ ಮೇಲೆ ಕಾರು ಹತ್ತಿಸಿದ ಚಾಲಕ!
Mangaluru: ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಯ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.