ಮಿಲನ ಹೊಸ ಯಾನ
ಗೆಲುವಿಗಿಂತ ಕಲಿತದ್ದೇ ಹೆಚ್ಚು...
Team Udayavani, Dec 27, 2019, 5:24 AM IST
“ಏಳು ವರ್ಷಗಳ ಯಾನ, ಈವರೆಗೆ ಹತ್ತು ಚಿತ್ರಗಳಲ್ಲಿ ನಟನೆ. ಗೆದ್ದಿದ್ದು ಕಮ್ಮಿ, ಕಲಿತದ್ದೇ ಜಾಸ್ತಿ…’
– ಇದು ನಟಿ ಮಿಲನ ನಾಗರಾಜ್ ಅವರ ಮಾತು. ಮಿಲನ ಕನ್ನಡ ಚಿತ್ರರಂಗಕ್ಕೆ ಬಂದು ಏಳು ವರ್ಷಗಳಾಗಿವೆ. ಇಷ್ಟು ವರ್ಷಗಳ ಜರ್ನಿಯಲ್ಲಿ ಕನ್ನಡದ ಜೊತೆ ತಮಿಳು ಹಾಗು ಮಲಯಾಳಂ ಚಿತ್ರರಂಗವನ್ನೂ ಮಿಲನ ಸ್ಪರ್ಶಿಸಿದ್ದಾರೆ. ಹೊಸ ವರ್ಷದಲ್ಲಿ ಹೊಸ ಬಗೆಯ ಚಿತ್ರಗಳ ನಿರೀಕ್ಷೆಯಲ್ಲಿರುವ ಮಿಲನ, ತಮ್ಮ ಸಿನಿಜರ್ನಿಯಲ್ಲಾದ ಅನುಭವ ಹಂಚಿಕೊಂಡಿದ್ದಾರೆ.
“ಆರಂಭದಲ್ಲಿ ಸಿಕ್ಕ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಂಡಿದ್ದರಿಂದಲೇ ಇಂದು ಸತತ ಸಿನಿಮಾಗಳಲ್ಲಿ ನಟಿಸುವ ಮೂಲಕ ತಾನೊಬ್ಬ ನಟಿಯಾಗಿ ನೆಲೆ ಕಂಡಿದ್ದೇನೆ. ಈಗಾಗಲೇ ನಾನು ನಟಿಸಿರುವ “ಮತ್ತೆ ಉದ್ಭವ’, “ಓ’,”ಲವ್ ಮಾಕ್ಟೇಲ್’ ಮತ್ತು “ವರ್ಜಿನ್’ ಚಿತ್ರಗಳು ಬಿಡುಗಡೆಗೆ ಸಜ್ಜಾಗಿವೆ. ಇದರೊಂದಿಗೆ ತಮಿಳಿನ ಚಿತ್ರವೂ ಬಿಡುಗಡೆಗೆ ರೆಡಿಯಾಗಿದೆ. ಹೊಸ ವರ್ಷದಲ್ಲಿ ಏನಿಲ್ಲವೆಂದರೂ ನಾನು ನಟಿಸಿದ ಐದು ಸಿನಿಮಾಗಳು ಪರದೆ ಮೇಲೆ ಕಾಣಿಸಿಕೊಳ್ಳಲಿವೆ. ಸದ್ಯಕ್ಕೆ ನಾನು ನನ್ನ ಹೋಮ್ ಬ್ಯಾನರ್‌ನ ಸಿನಿಮಾ ಮೇಲೆ ಸಾಕಷ್ಟು ಗಮನಹರಿಸಿದ್ದೇನೆ. “ಲವ್ ಮಾಕ್ಟೇಲ್’ ನನ್ನ ನಿರ್ಮಾಣದ ಚಿತ್ರ. ಅದರಲ್ಲಿ ನಾಯಕಿಯಾಗಿಯೂ ನಟಿಸಿದ್ದೇನೆ. “ಮದರಂಗಿ’ ಕೃಷ್ಣ ನಿರ್ದೇಶನದ ಜೊತೆ ನಾಯಕರಾಗಿಯೂ ನಟಿಸಿದ್ದಾರೆ. ಹಾಗಾಗಿ ನಾನು ಸದ್ಯಕ್ಕೆ ಯಾವ ಕಥೆಗಳನ್ನೂ ಕೇಳಿಲ್ಲ. ಕಥೆಗಳು ಹುಡುಕಿ ಬರುತ್ತಿವೆಯಾದರೂ, ನನಗೆ ಮೊದಲು ನನ್ನ ಅಭಿನಯದ ಚಿತ್ರಗಳು ಬಿಡುಗಡೆಯಾಗಬೇಕಿದೆ. ಹಾಗೆ ನೋಡಿದರೆ, ನಾನು ಈ ವರ್ಷ ಬ್ಯುಸಿಯಾಗಿದ್ದು ನಿಜ. ಹಾಗಂತ ಈಗ ಬರುವ ಕಥೆಗಳನ್ನೆಲ್ಲಾ ಸುಮ್ಮನೆ ಒಪ್ಪಿಕೊಳ್ಳಲ್ಲ. ತುಂಬಾನೇ ಚ್ಯೂಸಿಯಾಗಿದ್ದೇನೆ. ಸದ್ಯ ನಾನು ನಟಿಸಿರುವ ಎಲ್ಲಾ ಚಿತ್ರಗಳ ಮೇಲೂ ನಿರೀಕ್ಷೆ ಹೆಚ್ಚಿದೆ. ಕೂಡ್ಲು ರಾಮಕೃಷ್ಣ ಅವರ ನಿರ್ದೇಶನದ “ಮತ್ತೆ ಉದ್ಭವ’ ಚಿತ್ರದಲ್ಲಿ ವಿಶೇಷ ಪಾತ್ರವಿದೆ. ಅದರಲ್ಲಿ ಸ್ಟಾರ್ ನಟಿಯಾಗಿದ್ದು, ನಂತರ ರಾಜಕೀಯ ರಂಗಕ್ಕೆ ಎಂಟ್ರಿಯಾಗುವ ಪಾತ್ರವದು.
ಹಾಗಂತ, “ರಮ್ಯಾ’ ಅವರ ಪಾತ್ರವಿರಬಹುದೇನೋ ಅಂತಂದುಕೊಳ್ಳುವಂತಿಲ್ಲ. ಕಥೆಗೆ ತಕ್ಕ ಪಾತ್ರವದು. ಅದೊಂದು ಸ್ಪೆಷಲ್ ಆಗಿರುವ ರೋಲ್. ಸಾಕಷ್ಟು ತಿರುವು ಕೊಡುವಂತಹ ಪಾತ್ರ. “ಓ’ ಎಂಬ ಮತ್ತೂಂದು ಸಿನಿಮಾ ಕೂಡ ಹಾರರ್ ಜಾನರ್ ಹೊಂದಿದೆ. ಭಯಪಡಿಸುವುದರ ಜೊತೆಯಲ್ಲೊಂದು ಥ್ರಿಲ್ ಕೊಡುವ ಸಿನಿಮಾ ಅದು. “ವರ್ಜಿನ್’ ಎಂಬ ಚಿತ್ರದಲ್ಲಿ ವಿಶೇಷ ಪಾತ್ರ ಮಾಡಿದ್ದೇನೆ. ಅದನ್ನು ಈಗಲೇ ಹೇಳುವಂತಿಲ್ಲ. ತಮಿಳು ಚಿತ್ರದಲ್ಲಿ ಕಾರ್ಪೋರೇಟ್ ಕಚೇರಿಯಲ್ಲಿ ಕೆಲಸ ಮಾಡುವ ಹುಡುಗಿ ಪಾತ್ರ ಮಾಡಿದ್ದೇನೆ. “ಲವ್ ಮಾಕ್ಟೇಲ್’ ಚಿತ್ರದಲ್ಲಿ ಸಾಕಷ್ಟು ಕಲಿತಿದ್ದೇನೆ. ನಟನೆ ಜೊತೆಗೆ ನಿರ್ಮಾಣದಲ್ಲೂ ತೊಡಗಿದ್ದು ಹೊಸ ಅನುಭವ. ಬೇರೆ ಚಿತ್ರದಲ್ಲಿ ನಟನೆಗಷ್ಟೇ ಗಮನಕೊಡುತ್ತಿದ್ದೆ. “ಲವ್ ಮಾಕ್ಟೇಲ್’ನಲ್ಲಿ ನಿರ್ಮಾಣ ವಿಭಾಗ ಸೇರಿದಂತೆ ನಿರ್ದೇಶನ, ಸಂಭಾಷಣೆ, ಕಾಸ್ಟೂéಮ್ಸ್, ಮೇಕಪ್ ಹೀಗೆ ಇತರೆ ವಿಭಾಗದಲ್ಲೂ ಕೆಲಸ ಮಾಡಿದ್ದೇನೆ. ಅದೊಂಥರಾ ದೊಡ್ಡ ಜವಾಬ್ದಾರಿ ಕೆಲಸ. ಇಷ್ಟು ವರ್ಷಗಳ ಸಿನಿಮಾ ಪಯಣದಲ್ಲಿ ನನಗೆ “ಲವ್ ಮಾಕ್ಟೇಲ್’ನಲ್ಲಾದ ಅನುಭವ ಬೇರೆಲ್ಲೂ ಆಗಿಲ್ಲ. ಕಾರಣ, ಅಲ್ಲಿ ಎಲ್ಲಾ ವಿಭಾಗದಲ್ಲೂ ತೊಡಗಿಕೊಳ್ಳಲು ಅವಕಾಶ ಸಿಕ್ಕಿದ್ದು ಮತ್ತು ಕಲಿತದದ್ದು. ಇಲ್ಲಿ ಗೆಲುವು-ಸೋಲು ಸಹಜ. ಅದರ ಬಗ್ಗೆ ಎಂದೂ ತಲೆಕೆಡಿಸಿಕೊಂಡಿಲ್ಲ. ಆದರೆ, ಸಾಕಷ್ಟು ಕಲಿತಿದ್ದೇನೆ ಎಂಬ ಸಂತಸವಿದೆ’ ಎನ್ನುತ್ತಾರೆ ಮಿಲನ.
ಹೊಸ ವರ್ಷದಲ್ಲಿ ಹೊಸ ಕಥೆ, ಪಾತ್ರಗಳ ನಿರೀಕ್ಷೆ ಮಾಡುತ್ತೇನೆ. ನಿರ್ಮಾಣ ಕೆಲಸವೂ ಮುಂದುವರೆಯಲಿದೆ. ಅದೊಂಥರಾ ಖುಷಿಯ ಜೊತೆ ಜವಾಬ್ದಾರಿ ಕಲಿಸುತ್ತೆ. ನಟನೆ ಜೊತೆಯಲ್ಲಿ ನಿರ್ಮಾಣ ಮಾಡುವ ಬಗ್ಗೆ ಯೋಚಿಸುತ್ತೇನೆ. ನಮ್ಮದೇ ಮಗುವನ್ನು ಎಷ್ಟು ಮುದ್ದಾಗಿ, ಜೋಪಾನವಾಗಿ ಬೆಳೆಸುತ್ತೇವೋ, ಅಷ್ಟೇ ಜೋಪಾನವಾಗಿ, ಎಚ್ಚರಿಕೆಯಿಂದ ಸಿನಿಮಾ ನಿರ್ಮಾಣ ಮಾಡಬೇಕು. ಒಟ್ಟಾರೆ, “ಲವ್ ಮಾಕ್ಟೇಲ್’ನಲ್ಲಿ ಕ್ಯೂಟ್ ಆಗಿರುವ ಪಾತ್ರವಿದೆ. ಅದು ರೆಗ್ಯುಲರ್ ಪಾತ್ರವಂತೂ ಅಲ್ಲ, ತುಂಬಾ ಆಳವಾಗಿರುವಂತಹ, ಮನಸ್ಸಿಗೆ ಕಾಡುವಂತಹ ಪಾತ್ರವದು. ನಟನೆಗೆ ಹೆಚ್ಚು ಸ್ಕೋಪ್ ಇದೆ. ಸಿನಿಮಾದಲ್ಲಿ ಅದು ಅರ್ಧ ಬಂದರೂ, ನೆನಪಲ್ಲುಳಿಯಲಿದೆ. ಇಷ್ಟು ವರ್ಷದ ಜರ್ನಿ ತೃಪ್ತಿ ಕೊಟ್ಟಿದೆ’ ಎಂದು ಹೇಳಿ ಸುಮ್ಮನಾಗುತ್ತಾರೆ ಮಿಲನ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.