ಕನ್ನಡಿಗರಿಂದ ಕನ್ನಡಕ್ಕಾಗಿ ಸಿನಿಮಾ…
ಕನ್ನಡ ಗೊತ್ತಿಲ್ಲವರಿಗೆ ಇದು ಸರ್ಜಿಕಲ್ ಸ್ಟ್ರೈಕ್!
Team Udayavani, Nov 1, 2019, 5:15 AM IST
ಕನ್ನಡ ಯಾರಿಗೆ ಗೊತ್ತಿಲ್ಲವೋ ಅವರಿಗೆ ಇದು ಕನ್ನಡ ಸರ್ಜಿಕಲ್ ಸ್ಟ್ರೈಕ್ ಇದ್ದಂತೆ ….
-ಹೀಗೆ ಹೇಳಿ ತಮ್ಮ ಕನ್ನಡ ಪ್ರೀತಿ ಬಗ್ಗೆ ಹೇಳಿಕೊಂಡರು ನಿರ್ಮಾಪಕ ಕುಮಾರ ಕಂಠೀರವ.
“ಕನ್ನಡ್ ಗೊತ್ತಿಲ್ಲ’ ಸಿನಿಮಾ ನವೆಂಬರ್ 15 ರಂದು ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ ಚಿತ್ರದ ಟ್ರೇಲರ್ ತೋರಿಸಿ ಮಾತಿಗಿಳಿದರು ಕುಮಾರ್.
“ನಾನು ಹೊಸಬ. ಸಿನಿಮಾ ಬಗ್ಗೆ ಅಷ್ಟೊಂದು ಗೊತ್ತಿಲ್ಲ. ಆದರೆ ನನಗೆ ಲವ್ ಸ್ಟೋರಿ ಸಿನಿಮಾ ಮಾಡುವ ಆಸೆ ಇತ್ತು. ಈ ಕಥೆ ಕೇಳಿದ ಮೇಲೆ ಇದನ್ನೇ ಮಾಡಬೇಕು ಎನಿಸಿತು. ಕನ್ನಡದವರು ಈಗ ಕಳೆದು ಹೋಗುತ್ತಿದ್ದೇವೇನೋ ಎಂಬ ಫೀಲ್ ಇದೆ. ಎಲ್ಲೇ ಹೋದರು ಬೇರೆ ಭಾಷಿಗರು ಸಿಗುತ್ತಾರೆ. ನಮ್ಮ ಸುತ್ತ ಇರೋರಷ್ಟೇ ಕನ್ನಡ ಮಾತನಾಡುತ್ತಾರೆ. ಹೀಗಾಗಿ ನಮ್ಮತನ, ನಮ್ಮ ಸಂಸ್ಕೃತಿ ನಮ್ಮ ಆಚರಣೆ, ವಿಚಾರ ದೂರವಾಗಿದೆ. ಅವೆಲ್ಲವೂ ಒಳಗೊಂಡ ಸಿನಿಮಾ ಇದು. ನಮ್ಮ ಕನ್ನಡದ ಸುತ್ತವೇ ತಿರುಗುವ ಸಿನಿಮಾ ಇದು. ಕನ್ನಡ ಕಲಿತೇ ತೀರು ಎಂಬಂತಹ ಸಂದೇಶದೊಂದಿಗೆ ಅಪ್ಪಟ ಕನ್ನಡತನ ಇರುವ ಸಿನಿಮಾ ಇದು’ಎಂದರು ಕುಮಾರ್ ಕಂಠೀರವ.
ನಟಿ ಹರಿಪ್ರಿಯಾ ಮಾತನಾಡಿ, “”ಕನ್ನಡ್ ಗೊತ್ತಿಲ್ಲ’ ನನ್ನ ವೃತ್ತಿ ಜೀವನದಲ್ಲಿ ವಿಭಿನ್ನ ಪಾತ್ರ. ಈ ವರ್ಷದಲ್ಲಿ ಇದು ಬಿಡುಗಡೆಯಾಗುತ್ತಿರುವ ನನ್ನ 6ನೇ ಚಿತ್ರ. ಎಲ್ಲಾ ಸಿನಿಮಾಗಳು ಬೇರೆ ಬೇರೆ ಜಾನರ್‌ನಲ್ಲಿವೆ. ಕನ್ನಡದ ಮೇಲೆ ಎಲ್ಲರಿಗೂ ಇಲ್ಲಿ ಇನ್ನಷ್ಟು ಲವ್ ಆಗಲಿದೆ. ಅಷ್ಟರ ಮಟ್ಟಿಗೆ ಕನ್ನಡ ಮೇಳೈಸಿದೆ. ಈಗಾಗಲೇ ಸಾಂಗ್ಸ್, ಟೀಸರ್ ರೀಚ್ ಆಗಿದೆ. ನ.15 ರಂದು ಬಿಡುಗಡೆಯಾಗುತ್ತಿದೆ. ಜಯಣ್ಣ ಚಿತ್ರ ವಿತರಣೆ ಮಾಡುತ್ತಿದ್ದಾರೆ. ಚಿತ್ರದಲ್ಲಿ ಸಾಕಷ್ಟು ವಿಶೇಷತೆಗಳಿವೆ. ಕನ್ನಡಿಗರ ಸುತ್ತವೇ ಸಾಗುವ ಚಿತ್ರದಲ್ಲಿ ಎಲ್ಲವೂ ಇದೆ. ಪ್ರತಿ ಕನ್ನಡಿಗನಿಗೂ ಇದು ಹೆಮ್ಮೆಯ ಸಿನಿಮಾ ಆಗಲಿದೆ’ ಎಂದರು ಹರಿಪ್ರಿಯಾ.
ಸುಧಾರಾಣಿ ಅವರಿಲ್ಲಿ ಒಳ್ಳೆಯ ಪಾತ್ರ ಮಾಡಿದ್ದಾರಂತೆ. ಆ ಬಗ್ಗೆ ಮಾತನಾಡುವ ಅವರು, “ನನ್ನದು ಚಿಕ್ಕ ಪಾತ್ರವಿದ್ದರೂ ಚೊಕ್ಕವಾಗಿದೆ. ಪರಿಣಾಮಕಾರಿಯಾಗಿರುವಂತಹ ಪಾತ್ರ ಮಾಡಿದ್ದು ಹೆಮ್ಮೆ ಎನಿಸುತ್ತೆ. ನಿರ್ದೇಶಕರಿಗೆ ಇದು ಮೊದಲ ಚಿತ್ರ ಎನಿಸಲ್ಲ. ಅಷ್ಟರ ಮಟ್ಟಿಗೆ ಸಿನಿಮಾ ಮಾಡಿದ್ದಾರೆ. ಗಿರಿಧರ್ ಛಾಯಾಗ್ರಹಣ ಕೆಲಸ ಚೆನ್ನಾಗಿದೆ ಹಾಡುಗಳು ಸಹ ಇಷ್ಟವಾಗುತ್ತವೆ’ ಎಂದರು ಸುಧಾರಾಣಿ
ನಿರ್ದೇಶಕ ಮಯೂರ್ ಅವರಿಗೆ ಮೊದಲ ಚಿತ್ರವಿದು ಅವರು ತಮ್ಮ ಸುತ್ತ ಇರುವ ಪಾತ್ರ ಪೋಣಿಸಿ ಕಥೆ ಮಾಡಿದ್ದಾರಂತೆ. ಎಲ್ಲರ ಸಹಕಾರದಿಂದ ಈ ಚಿತ್ರ ಮಾಡಲು ಸಾಧ್ಯವಾಗಿದೆ.ಇಲ್ಲೊಂದು ಸಂದೇಶವಿದೆ. ಅದೇ ಚಿತ್ರದ ಹೈಲೈಟ್ ಎಂದರು. ಹಾಸ್ಯ ನಟ ಧರ್ಮಣ್ಣ ಗಿರಿಧರ್ ದಿವಾನ, ಪವನ್ ಕುಮಾರ್ ಇತರರು ಚಿತ್ರದ ಕುರಿತು ಮಾತನಾಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.