ಮಳೆಯಲ್ಲಿ ಮಿಂದೆದ್ದವರು!
Team Udayavani, Jan 5, 2018, 11:08 AM IST
ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ಹಲ್ಲೆ ಆಗಿದ್ದು ಗೊತ್ತೇ ಇದೆ. ಅಲ್ಲಿ ಭಾರತೀಯರ ನಿಗೂಡ ಕಣ್ಮರೆ ಆಗಿದ್ದೂ ಉಂಟು. ಈ ವಿಷಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆಗಳು ಆಗಿದ್ದು ನಿಜ. ಅಂಥದ್ದೇ ವಿಷಯ ಇಟ್ಟುಕೊಂಡು ಒಂದು ಚಿತ್ರ ಮಾಡಿ, ಅದನ್ನು ತೆರೆಗೆ ತರಲು ಸಜ್ಜಾಗಿದ್ದಾರೆ ನಿರ್ದೇಶಕ ಜನಾರ್ದನ್. ಆ ಚಿತ್ರಕ್ಕೆ ಅವರು ಇಟ್ಟುಕೊಂಡಿರುವ ಹೆಸರು “ನೀನಿಲ್ಲದ ಮಳೆ’. ಜನವರಿ 12 ಕ್ಕೆ ರಾಜ್ಯ ಮತ್ತು ವಿದೇಶದಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ, ಚಿತ್ರದ ಟ್ರೇಲರ್ ಹಾಗು ವೀಡಿಯೋ ಹಾಡನ್ನು ಬಿಡುಗಡೆ ಮಾಡುವ ಮೂಲಕ ಚಿತ್ರತಂಡದೊಂದಿಗೆ ಮಾತುಕತೆಗೆ ಕುಳಿತರು ಜನಾರ್ದನ್.
“ಈ ಚಿತ್ರ ಮಾಡೋಕೆ ಸಾಕಷ್ಟು ಕಷ್ಟಪಟ್ಟಿದ್ದೇವೆ. ಅನೇಕ ಅಡಚಣೆಗಳ ನಡುವೆಯೂ ಒಂದೊಳ್ಳೆಯ ಸಿನಿಮಾ ಮಾಡಿದ ತೃಪ್ತಿ ನಮ್ಮದು. ಚಿತ್ರ ತಡವಾಗಿದೆ. ಒಂದಲ್ಲ, ಎರಡಲ್ಲ, ಮೂರಲ್ಲ, ನಾಲ್ಕು ವರ್ಷಗಳ ಕಾಲ ತಡವಾಗಿ ಈ ಚಿತ್ರ ತೆರೆಗೆ ಬರುತ್ತಿದೆ. ತಡವಾಗೋಕೆ ಹಲವು ಕಾರಣಗಳು. ಮೊದಲೇ ಹೇಳಿದಂತೆ ಇದೊಂದು ಭಾರತೀಯ ವಿದ್ಯಾರ್ಥಿಗಳ ಮೇಲಿನ ಹಲ್ಲೆ ಹಾಗೂ ನಿಗೂಢ ಕಣ್ಮರೆ ಸುತ್ತ ನಡೆಯುವ ಕಥೆ. ಬಹುತೇಕ ಅಮೆರಿಕದಲ್ಲಿ ಚಿತ್ರೀಕರಿಸಿದ್ದೇವೆ. ವಿಜಯ್‌ಚೆಂಡೂರ್ ಮತ್ತು ಇಂದ್ರಸೇನ ನನ್ನೊಂದಿಗೆ ಕಥೆ, ಚಿತ್ರಕಥೆಗೆ ಸಹಾಯ ಮಾಡಿದ್ದಾರೆ. ಅಮೆರಿಕದಲ್ಲಿ ಚಿತ್ರೀಕರಿಸುವ ವೇಳೆ ಪ್ರಿಯಾಭಾರತಿ, ಸತೀಶ್ ಅವರು ಸಾಕಷ್ಟು ಸಹಾಯ ಮಾಡಿದ್ದರಿಂದಲೇ ಚಿತ್ರ ಚೆನ್ನಾಗಿ ಮೂಡಿಬರಲು ಸಾಧ್ಯವಾಗಿದೆ. ಮೈನಸ್ 10 ಡಿಗ್ರಿಯಲ್ಲಿ ಚಿತ್ರೀಕರಿಸಿದ್ದೇವೆ. 28 ದಿನಗಳ ಕಾಲ ಅಲ್ಲಿನ ವೈಟ್‌ಹೌಸ್, ಕ್ಯಾಪಿಟಲ್ ಬಿಲ್ಡಿಂಗ್ ಸುತ್ತಮುತ್ತ ಚಿತ್ರೀಕರಿಸಿದ್ದೇವೆ. ಅಷ್ಟೊಂದು ಚಳಿ ಇದ್ದರೂ, ಐದೈದು ಜಕೀìನ್ ಧರಿಸಿ ಕೆಲಸ ಮಾಡಿದ್ದೇವೆ. ಚಿತ್ರ ನೋಡಿ ಹೊರಬಂದವರಿಗೆ ಒಂದೊಳ್ಳೆಯ ಸಂದೇಶವಂತೂ ಇದೆ. ನಿರ್ಮಾಪಕರ ಪ್ರೋತ್ಸಾಹದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ’ ಅಂದರು ಜನಾರ್ದನ್.
ನಾಯಕಿ ವ್ಯಾಲರಿಗೆ ಇದು ಮೊದಲ ಕನ್ನಡ ಚಿತ್ರ. ಈ ಹಿಂದೆ ಅಮೆರಿಕದಲ್ಲಿ ಹಲವು ಶಾರ್ಟ್‌ಫಿಲ್ಮ್ಗಳಲ್ಲಿ ನಟಿಸಿದ ಅನುಭವ ವ್ಯಾಲರಿಗಿದೆ. ಅವರಿಲ್ಲಿ ಗೃಹಮಂತ್ರಿ ಮಗಳ ಪಾತ್ರ ನಿರ್ವಹಿಸಿದ್ದಾರಂತೆ. ಕನ್ನಡ ಸಿನಿಮಾದಲ್ಲಿ ನಟಿಸಿ, ಸಾಕಷ್ಟು ಕಲಿಯೋಕೆ ಸಾಧ್ಯವಾಗಿದೆ ಎಂಬುದು ವ್ಯಾಲರಿ ಮಾತು.
ನಿರ್ಮಾಪಕ ಶೈಲೇಂದ್ರ ಕೆ.ಬೆಲ್ದಾಳ್ ಅವರಿಗೆ ಒಳ್ಳೆಯ ಕಥೆ ಅನಿಸಿದ್ದರಿಂದ ಅವರು ನಿರ್ಮಾಣಕ್ಕೆ ಮುಂದಾದರಂತೆ. ಈಗಿನ ಯೂತ್ಸ್ ಹೇಗೆ ವಿದೇಶದಲ್ಲಿ ಶೋಕಿಗೆ ಬಿದ್ದು ಲೈಫ್ ಹಾಳು ಮಾಡಿಕೊಳ್ಳುತ್ತಾರೆ ಅನ್ನೋದನ್ನು ಹೇಳಲಾಗಿದೆ. ಸಂಕ್ರಾಂತಿಗೆ ಚಿತ್ರ ಬಿಡುಗಡೆಯಾಗಲಿದೆ. ನಿಮ್ಮೆಲ್ಲರ ಸಹಕಾರ ಇರಲಿ ಅಂದರು ಅವರು.
ಮತ್ತೂಬ್ಬ ನಿರ್ಮಾಪಕ ದೇವರಾಜ್ ಅವರು, ಆರ್.ಚಂದ್ರು ಜತೆಗೆ ನಿರ್ದೇಶಕರಾಗಬೇಕು ಅಂತ ಇಲ್ಲಿಗೆ ಬಂದರಂತೆ. ಆದರೆ, ಇವರು ಆಗಿದ್ದು ಮಾತ್ರ ನಿರ್ಮಾಪಕ. “ಚಿತ್ರ ತಡವಾಯ್ತು. ಅದಕ್ಕೆ ಕಾರಣಗಳು ಸಾಕಷ್ಟಿವೆ. ಮೊದಲ ಅನುಭವ ಆಗಿದ್ದರಿಂದ ಇಷ್ಟೆಲ್ಲಾ ತಡವಾಗಿದೆ. ಬಜೆಟ್ ಅಂದುಕೊಂಡಿದ್ದಕ್ಕಿಂತ ಜಾಸ್ತಿಯಾಗಿದೆ ಎಂದರು ಅವರು. ತಬಲಾ ನಾಣಿ, ಲಕ್ಕಿ ಶಂಕರ್ ಇಲ್ಲಿ ಹೀರೋ ಜತೆಗೆ ಪತ್ರಕರ್ತರಾಗಿ ಕಾಣಿಸಿಕೊಂಡಿದ್ದಾರಂತೆ. ಇಲ್ಲಿ ಸಂದೇಶ ಇರುವುದರಿಂದ ಪ್ರತಿಯೊಬ್ಬರಿಗೂ ಸಲ್ಲುವ ಚಿತ್ರವಿದು ಅಂದರು ಅವರು. ಕ್ಯಾಮೆರಾಮೆನ್ ನಿರಂಜನ್‌ಬಾಬು, ಸಂಗೀತ ನಿರ್ದೇಶಕ ಇಂದ್ರಸೇನ ಚಿತ್ರದ ಬಗ್ಗೆ ಹೇಳಿಕೊಳ್ಳುವ ಹೊತ್ತಿಗೆ ಮಾತುಕತೆಗೆ ಬ್ರೇಕ್ ಬಿತ್ತು. ಇದಕ್ಕೂ ಮುನ್ನ ಮಾಜಿ ಪೊಲೀಸ್ ಅಧಿಕಾರಿ ನಾಗರಾಜ್ ಟ್ರೇಲರ್ ಬಿಡುಗಡೆ ಮಾಡಿದರೆ, ಗಾಯಕ ಆಲೂರು ನಾಗಪ್ಪ ವೀಡಿಯೋ ಸಾಂಗ್ ಬಿಡುಗಡೆ ಮಾಡಿ ಶುಭಕೋರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.