Toby movie; ಉದಯವಾಣಿಯಲ್ಲಿ ಟೋಬಿ…: ರಾಜ್- ಚೈತ್ರ ಜತೆ ಮಾತುಕತೆ
Team Udayavani, Aug 11, 2023, 10:11 AM IST
ಸದ್ಯ ಕನ್ನಡ ಚಿತ್ರರಂಗದಲ್ಲಿ ಭರ್ಜರಿ ನಿರೀಕ್ಷೆ ಹುಟ್ಟಿಸಿರುವ ಚಿತ್ರವೆಂದರೆ ಅದು ರಾಜ್ ಬಿ ಶೆಟ್ಟಿ ನಟನೆಯ “ಟೋಬಿ’. ಈಗಾಗಲೇ ಫಸ್ಟ್‌ಲುಕ್, ಟ್ರೇಲರ್ ಮೂಲಕ ಗಮನ ಸೆಳೆದಿರುವ ಈ ಚಿತ್ರ ಆಗಸ್ಟ್ 25 ರಂದು ತೆರೆಕಾಣುತ್ತಿದೆ. ಸದ್ಯ ಪ್ರಮೋಶನ್‌ನಲ್ಲಿ ಬಿಝಿಯಾಗಿರುವ ಚಿತ್ರತಂಡ ಗುರುವಾರ “ಉದಯವಾಣಿ’ ಕಚೇರಿಗೆ ಭೇಟಿ ನೀಡಿತು.
ನಟ ರಾಜ್ ಬಿ ಶೆಟ್ಟಿ ಹಾಗೂ ನಾಯಕಿ ಚೈತ್ರಾ ಆಚಾರ್ “ಟೋಬಿ’ ಸಿನಿಮಾದ ಕುರಿತಾಗಿ ಉದಯವಾಣಿಯಲ್ಲಿ ತಮ್ಮ ಅನುಭವ ಹಂಚಿಕೊಂಡರು. ಈ ವೇಳೆ ಮಾತನಾಡಿದ ರಾಜ್ ಬಿ ಶೆಟ್ಟಿ, “ಉದಯವಾಣಿ ಆರಂಭದಿಂದಲೂ ನಮಗೆ ಬೆಂಬಲ ಕೊಡುತ್ತಲೇ ಬಂದಿದೆ. ಈಗ ನಮ್ಮ “ಟೋಬಿ’ಗೂ ಪ್ರೋತ್ಸಾಹ ನೀಡುತ್ತಿರುವ ಖುಷಿ ಇದೆ. “ಟೋಬಿ’ ಒಂದು ಹೊಸ ಬಗೆಯ ಸಿನಿಮಾವಾಗಿ ಪ್ರೇಕ್ಷಕರಿಗೆ ಇಷ್ಟವಾಗುವ ವಿಶ್ವಾಸವಿದೆ. ಇದೊಂದು ಕಂಟೆಂಟ್ ಸಿನಿಮಾ. ಸ್ಟಾರ್ ಸಿನಿಮಾಗಳ ಜೊತೆಗೆ ಕಂಟೆಂಟ್ ಸಿನಿಮಾಗಳು ಗೆದ್ದಾಗ ಮತ್ತೂಂದಿಷ್ಟು ಹೊಸಬರು ಚಿತ್ರ ರಂಗಕ್ಕೆ ಬರುತ್ತಾರೆ. ನಮ್ಮ ನಿರೀಕ್ಷೆಗೂ ಮೀರಿ ಸಿನಿಮಾದ ಟ್ರೇಲರ್ ಹಿಟ್ ಆಗಿದೆ. ಜನ ಸಿನಿಮಾವನ್ನು ಕೂಡಾ ಇದೇ ರೀತಿ ಇಷ್ಟಪಡುತ್ತಾರೆ ಎಂಬ ವಿಶ್ವಾಸವಿದೆ’ ಎನ್ನುವುದು ರಾಜ್ ಬಿ ಶೆಟ್ಟಿ ಮಾತು.
“ಇದು ಕೌಟುಂಬಿಕ ಸಿನಿಮಾ. ಇದರಲ್ಲಿ ಫ್ಯಾಮಿಲಿ ಎಮೋಶನ್ಸ್‌ಗೆ ತುಂಬಾ ಸ್ಕೋಪ್ ಇದೆ. ಒಂದು ಕುಟುಂಬದ ನಡುವಿನ ಸಂಬಂಧ, ಅವರ ನಡುವಿನ ಬಂಧ ಯಾವ ರೀತಿಯದ್ದು ಎಂಬ ವಿಷಯವನ್ನು ನಾವು ಟೋಬಿಯ ಮೂಲಕ ಜನರಿಗೆ ಹೇಳಲಿದ್ದೇವೆ’ ಎನ್ನುತ್ತಾರೆ ರಾಜ್ ಶೆಟ್ಟಿ ಮಾತು.
ನಾಯಕಿ ಚೈತ್ರಾ ಆಚಾರ್ ಕೂಡಾ ತಮ್ಮ ಪಾತ್ರದ ಬಗ್ಗೆ ಹಾಗೂ ಒಳ್ಳೆಯ ತಂಡದ ಜೊತೆ ೆಲಸ ಮಾಡಿದ ಖುಷಿ ಹಂಚಿಕೊಂಡರು.
“ಟೋಬಿ’ ಚಿತ್ರಕ್ಕೆ “ಮಾರಿ ಮಾರಿ ..ಮಾರಿಗೆ ದಾರಿ’ ಎಂಬ ಅಡಿಬರಹವಿದೆ. ರಾಜ್ ಬಿ ಶೆಟ್ಟಿ ಈವರೆಗಿನ ಚಿತ್ರಗಳ ಪೈಕಿ ಟೋಬಿ ಬಿಗ್ ಬಜೆಟ್‌ನ ಚಿತ್ರ. ಲೈಟರ್ ಬುದ್ಧ ಫಿಲಂಸ್, ಅಗಸ್ತ್ಯ ಫಿಲಂಸ್ ಹಾಗೂ ಕಾಫಿ ಗ್ಯಾಂಗ್ ಸ್ಟುಡಿಯೋ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ರವಿ ರೈ ಕಳಸ ಈ ಚಿತ್ರದ ನಿರ್ಮಾಪಕರು. ಶಾಮಿಲ್ ಬಂಗೇರ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು. ರಾಜ್ ಬಿ ಶೆಟ್ಟಿ ರಚನೆ ಹಾಗೂ ಬಾಸಿಲ್ ಅವರ ನಿರ್ದೇಶನ ಈ ಚಿತ್ರಕ್ಕಿದೆ.
ರಾಜ್ ಬಿ. ಶೆಟ್ಟಿ, ಸಂಯುಕ್ತಾ ಹೊರನಾಡು, ಚೈತ್ರಾ ಆಚಾರ್, ಗೋಪಾಲಕೃಷ್ಣ ದೇಶಪಾಂಡೆ, ದೀಪಕ್ ರಾಜ್ ಶೆಟ್ಟಿ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಉದಯವಾಣಿಯಲ್ಲಿ ನಡೆದ “ಟೋಬಿ’ ಸಂವಾದ ಕಾರ್ಯಕ್ರಮದಲ್ಲಿ ಮಣಿಪಾಲ ಮೀಡಿಯಾ ನೆಟ್‌ವರ್ಕ್ ಲಿಮಿಟೆಡ್‌ನ ಎಂ.ಡಿ ಹಾಗೂ ಸಿಇಓ ವಿನೋದ್ ಕುಮಾರ್, ಬೆಂಗಳೂರು ಸ್ಥಾನಿಕ ಸಂಪಾದಕ ಬಿ.ಕೆ.ಗಣೇಶ್, ಬ್ಯೂರೋ ಚೀಫ್ ಎಂ.ಎನ್.ಗುರುಮೂರ್ತಿ, ಸಿನಿಮಾ ಮಾರುಕಟ್ಟೆ ವಿಭಾಗ ಮುಖ್ಯಸ್ಥ ಬಿ.ಕೆ.ಕೃಷ್ಣಪ್ಪ ಹಾಗೂ ಸಿನಿಮಾ ವಿಭಾಗ ಮುಖ್ಯಸ್ಥ ರವಿಪ್ರಕಾಶ್ ರೈ ಉಪಸ್ಥಿತರಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.