ಪ್ರವಾಸಿಗರು VS ದುಷ್ಟ ಶಕ್ತಿ


Team Udayavani, Jan 26, 2018, 11:54 AM IST

26-33.jpg

“ಆ ಹುಡುಗನಿಗೆ 22ರ ಆಸುಪಾಸು. ನಮ್ಮ ಕಚೇರಿಯಲ್ಲೇ ಕೆಲಸ ಮಾಡುತ್ತಿದ್ದ. ಅವನು ಹೇಳಿದ ಕಥೆಯನ್ನ ಸಿನಿಮಾ ಮಾಡಬೇಕೆನಿಸಿತು. ತಡಮಾಡದೆ ಚಿತ್ರ ಮಾಡಿದೆ. ಈಗ ಬಿಡುಗಡೆಗೆ ರೆಡಿಯಾಗಿದೆ…’

ಹೀಗೆ ಖುಷಿಯಿಂದ ಹೇಳಿಕೊಂಡರು ನಿರ್ಮಾಪಕ ಶಂಕರ್‌. ಅವರು ಹೇಳಿದ್ದು “3000′ ಎಂಬ ಹಾರರ್‌ ಚಿತ್ರ ನಿರ್ದೇಶಿಸಿರುವ ರಬ್ಬುನಿ ಕೀರ್ತಿ ಬಗ್ಗೆ. “3000′ ಚಿತ್ರ ನಿರ್ದೇಶಕ ಮತ್ತು ನಿರ್ಮಾಪಕರಿಬ್ಬರಿಗೂ ಮೊದಲ ಅನುಭವ. ಇನ್ನೇನು ಚಿತ್ರ ಬಿಡುಗಡೆಯ ತಯಾರಿಯಲ್ಲಿರುವ ಚಿತ್ರತಂಡ, ಇತ್ತೀಚೆಗೆ ಆಡಿಯೋ ಸಿಡಿ ಬಿಡುಗಡೆ ಮಾಡಿತು. ಅಂದು ಶ್ರೀ ವಿಶ್ವನಾಥ್‌ ಭಟ್‌ ಸ್ವಾಮೀಜಿ ವಿಶೇಷ ಆಕರ್ಷಣೆಯಾಗಿದ್ದರು. ಸಮರ್ಥನಂ ಟ್ರಸ್ಟ್‌ ಮಕ್ಕಳು ಆಡಿಯೋ ಸಿಡಿ ಬಿಡುಗಡೆ ಮಾಡಿದ ಬಳಿಕ ಮಾತುಕತೆ ಶುರುವಾಯಿತು.

ಅಂದು ಮೊದಲು ಮಾತಿಗಿಳಿದ ನಿರ್ಮಾಪಕ ಶಂಕರ್‌, “ನಾನು ನಿರ್ಮಾಪಕನಲ್ಲ. ಚಿತ್ರದ ಸದಸ್ಯನಷ್ಟೇ. ಈ ಚಿತ್ರ ಮಾಡೋಕೆ ಎರಡು ಕಾರಣ. ಚಿತ್ರರಂಗದಲ್ಲಿ ಹೊಸ ರೀತಿಯ ಚಿತ್ರ ಮಾಡುಬೇಕು. ಆ ಮೂಲಕ ಬದಲಾವಣೆಗೆ ಸಣ್ಣ ಪ್ರಯತ್ನ ಮಾಡಬೇಕು. ಇನ್ನೊಂದು ಹೊಸ ಪ್ರತಿಭೆಗಳನ್ನು ಆ ಮೂಲಕ ಹೊರತರಬೇಕು ಎಂಬ ಉದ್ದೇಶದಿಂದ ನಿರ್ಮಾಣಕ್ಕಿಳಿದೆ. ಇಲ್ಲಿ ಹಣಕ್ಕಿಂತ ಸೃಜನಶೀಲತೆ ಮುಖ್ಯ. ನಿರ್ದೇಶಕ ಕೀರ್ತಿ ಒಳ್ಳೆಯ ಪ್ರತಿಭಾವಂತ. ಅವನನ್ನು ನಂಬಿ ಸಿನಿಮಾ ಮಾಡಿದ್ದೇನೆ. ಆ ನಂಬಿಕೆ ಕೀರ್ತಿ ಉಳಿಸಿಕೊಂಡಿದ್ದಾನೆ. ಇಡೀ ತಂಡದ ಶ್ರಮದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ’ ಅಂದರು ಶಂಕರ್‌.

ನಿರ್ದೇಶಕ ರಬ್ಬುನಿ ಕೀರ್ತಿ ಈ ಚಿತ್ರದಲ್ಲಿ ಸಾಕಷ್ಟು ಕಲಿತಿದ್ದಾರಂತೆ. “ನಾನೊಂದು ಕಥೆ ಹೇಳಿದ್ದನ್ನು ಕೇಳಿ, ನನ್ನ ಮೇಲೆ ಭರವಸೆ ಇಟ್ಟು ಹಣ ಹಾಕಿ ಚಿತ್ರ ಮಾಡಿದ ನಿರ್ಮಾಪಕರಿಗೆ ತೃಪ್ತಿ ಎನಿಸವಂತಹ ಚಿತ್ರ ಕೊಟ್ಟ ನಂಬಿಕೆ ನನ್ನದು. ಇದು ಒಬ್ಬರ ಶ್ರಮವಲ್ಲ. ಇಡೀ ತಂಡದ ಸಹಕಾರ, ಪ್ರೋತ್ಸಾಹದಿಂದ ಈ ಚಿತ್ರ ಮಾಡಲು ಸಾಧ್ಯವಾಗಿದೆ. ಫೆಬ್ರವರಿಯಲ್ಲಿ ಚಿತ್ರ ಬಿಡುಗಡೆಗೆ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಎಲ್ಲಾ ಸರಿ, “3000′ ಕಥೆ ಏನೆಂಬ ಪ್ರಶ್ನೆ ಎದುರಾಗಬಹುದು. ಒಂದು ಕೆಟ್ಟ ಶಕ್ತಿ ಎದುರಾದಾಗ, ಪ್ರವಾಸಕ್ಕೆ ಹೋಗಿದ್ದ ಹುಡುಗರು ಎಷ್ಟೆಲ್ಲಾ ತೊಂದರೆ ಅನುಭವಿಸುತ್ತಾರೆ ಎಂಬುದು ಕಥೆ’ ಎನ್ನುತ್ತಾರೆ ನಿರ್ದೇಶಕರು.

ಸಂಗೀತ ನಿರ್ದೇಶಕ ಅಲೆನ್ಸ್‌ ಅವರು ಅಂದು ಸಖತ್‌ ಖುಷಿಯ ಮೂಡ್‌ನ‌ಲ್ಲಿದ್ದರು. ಕಾರಣ, ಅಂದು ಅವರ ದಿನ. “3000′ ಅಲೆನ್ಸ್‌ ಅವರ ಮೊದಲ ಚಿತ್ರವಂತೆ. “ಮೊದಲ ಸಲವೇ ನನಗೆ ಹಾರರ್‌ ಚಿತ್ರ ಸಿಕ್ಕಿದೆ. ಇಂತಹ ಚಿತ್ರ ಮಾಡುವಾಗ ಸಹಜವಾಗಿಯೇ ಚಾಲೆಂಜ್‌ ಇರುತ್ತೆ. ಸಾಕಷ್ಟು ಹಾರರ್‌ ಚಿತ್ರಗಳು ಬಂದಿವೆ. ಅವುಗಳಿಗಿಂತ ಭಿನ್ನವಾಗಿ ಕೊಡಬೇಕೆಂಬ ಹಠವಿತ್ತು. ಸೌಂಡಿಂಗ್‌, ಎಫೆಕ್ಟ್ ಇಲ್ಲಿ ಮುಖ್ಯ. ಹಿನ್ನೆಲೆ ಸಂಗೀತ ಜೊತೆಗೆ ನಾಲ್ಕು ಹಾಡುಗಳಿವೆ. ಹಾಲಿವುಡ್‌ ಶೈಲಿಯ ಸಂಗೀತವನ್ನೂ ಇಲ್ಲಿ ಕೇಳಬಹುದು. ಲ್ಯಾಟಿನ್‌ ಭಾಷೆಯಲ್ಲೊಂದು ಹಾಡು ಇರುವುದು ಇನ್ನೊಂದು ವಿಶೇಷ’ ಎನ್ನುತ್ತಾರೆ ಅಲೆನ್ಸ್‌.

ಚಿತ್ರದಲ್ಲಿ ಮೂವರು ನಾಯಕರು, ಅವರಿಗೆ ಮೂವರು ನಾಯಕಿಯರು. ಪ್ರೀತಮ್‌, ಸುಹಾನ್‌, ಪ್ರಸಾದ್‌, ಸ್ವಾತಿ, ಉಜಾಲ ಮತ್ತು ಕಾವ್ಯಾ ಇಲ್ಲಿ ನಟಿಸಿದ್ದಾರೆ. ಅಂದು ಇವರೆಲ್ಲರೂ ಚಿತ್ರದ ಬಗ್ಗೆ ಎರಡೆರೆಡು ಮಾತನಾಡಿದರು. ಅಂದು ಲಯ ಕೋಕಿಲ, ಪ್ರವೀಣ್‌ ಗೋಡಿಡಿ, ಪೃಥ್ವಿರಾಜ್‌, ಆನಂದ್‌ ಆಡಿಯೋ ಸಂಸ್ಥೆಯ ಆನಂದ್‌, ವೆಂಕಟ್‌ಗೌಡ್ರು ಇತರರು ಚಿತ್ರಕ್ಕೆ ಶುಭ ಹಾರೈಸುವ ಹೊತ್ತಿಗೆ ಹೊತ್ತು ಮೀರಿತ್ತು.

ಟಾಪ್ ನ್ಯೂಸ್

GM-Pancha

Average Income: ದೇಶದ ಗ್ರಾಮ ಪಂಚಾಯ್ತಿ ಆದಾಯ ಕೇವಲ 59 ಮಾತ್ರ

KH-Muniyappa

Ration Card: ರಾಜ್ಯದಲ್ಲಿ ಪಡಿತರ ನೀಡಲು ಹಣದ ಕೊರತೆ ಇಲ್ಲ: ಸಚಿವ ಮುನಿಯಪ್ಪ

udupi-Kota-Mee

Udupi: ಕಸ್ತೂರಿ ರಂಗನ್‌ ವರದಿ ಬಗ್ಗೆ ಯಾರೂ ಆತಂಕಪಡಬೇಕಿಲ್ಲ: ಕೋಟ ಶ್ರೀನಿವಾಸ ಪೂಜಾರಿ

siddanna-2

Congress ಗ್ಯಾರಂಟಿ ಸುಳ್ಳು ಎಂದು ಸಾಬೀತು ಮಾಡಿ: ಮೋದಿಗೆ ಸಿದ್ದರಾಮಯ್ಯ ಸವಾಲು

BJP FLAG

BJP; ಈ ವಾರವೇ ವಕ್ಫ್ ಹೋರಾಟ: ಅಧಿವೇಶನಕ್ಕೂ ಬಿಸಿ…ಹೇಗಿರಲಿದೆ ಪ್ರತಿಭಟನೆ?

1-USAA

America; ಭಾರತಕ್ಕೆ 84.40 ಕೋ.ರೂ. ಮೌಲ್ಯದ 1,400 ಕಲಾಕೃತಿ ವಾಪಸ್‌

mob

Bengaluru; ಮೊಬೈಲ್‌ಗಾಗಿ ಜಗಳ ಮಾಡಿದ ಮಗನ ಹೊಡೆದು ಕೊಂ*ದ ಅಪ್ಪ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

priyanka upendra in life is beautiful movie

Priyanka Upendra: ಬ್ಯೂಟಿಫುಲ್‌ ಲೈಫ್‌ ನಲ್ಲಿ ಪ್ರಿಯಾಂಕಾ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Rakesh Adiga in Maryade Prashne movie

Rakesh Adiga: ನಾನು ಮಿಡಲ್‌ ಕ್ಲಾಸ್‌ ಹುಡುಗ ಮರ್ಯಾದೆ ಉಳಿಸಿ!

ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

Bagheera: ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

GM-Pancha

Average Income: ದೇಶದ ಗ್ರಾಮ ಪಂಚಾಯ್ತಿ ಆದಾಯ ಕೇವಲ 59 ಮಾತ್ರ

KH-Muniyappa

Ration Card: ರಾಜ್ಯದಲ್ಲಿ ಪಡಿತರ ನೀಡಲು ಹಣದ ಕೊರತೆ ಇಲ್ಲ: ಸಚಿವ ಮುನಿಯಪ್ಪ

Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ

Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ

8

ಗಂಭೀರ್‌ ಅವರ ಯಾತನೆಯ ತರಬೇತಿ ಶೈಲಿ ಭಾರತಕ್ಕೆ ಹೊಂದಲ್ಲ: ಟಿಮ್‌ ಪೇನ್‌

udupi-Kota-Mee

Udupi: ಕಸ್ತೂರಿ ರಂಗನ್‌ ವರದಿ ಬಗ್ಗೆ ಯಾರೂ ಆತಂಕಪಡಬೇಕಿಲ್ಲ: ಕೋಟ ಶ್ರೀನಿವಾಸ ಪೂಜಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.