ಬಿಟೌನ್ ಕದ ತಟ್ಟಿದ ಕರಾವಳಿ ಹುಡುಗಿ
ಹಿಂದಿ ಸಿನಿಮಾದತ್ತ ಸೋನಾಲ್ ಮಾಂತೆರೋ
Team Udayavani, Jun 14, 2019, 5:00 AM IST
ತುಳುನಾಡಿನ ಬಹುತೇಕ ನಟಿಮಣಿಯರು ಕನ್ನಡದಲ್ಲಿ ಗುರುತಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಇಲ್ಲಿ ಕಾಲಿಟ್ಟ ಕೂಡಲೇ ಅವರಿಗೆ ಪರಭಾಷೆಯಲ್ಲೂ ಅವಕಾಶಗಳು ಹುಡುಕಿ ಬರುತ್ತಿವೆ ಎಂಬುದು ವಿಶೇಷ. ಹೌದು, ಈಗಾಗಲೇ ಕರಾವಳಿಯ ಅನೇಕ ನಟಿಯರು ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ ಭಾಷೆಯಲ್ಲಿ ಮಿಂಚುತ್ತಿದ್ದಾರೆ. ಆ ಸಾಲಿಗೆ ಸೋನಾಲ್ ಮಾಂತೆರೋ ಎಂಬ ಬೆಡಗಿ ಹೊಸ ಸೇರ್ಪಡೆಯಾಗಿದ್ದಾರೆ.
ಹಾಗೆ ನೋಡಿದರೆ, ಸೋನಾಲ್ ಮಾಂತೆರೋ, ತುಳು ಭಾಷೆಯಲ್ಲಿ ಬಿಡುಗಡೆಯಾಗಿ ಸೂಪರ್‌ಹಿಟ್ ಚಿತ್ರ ಎನಿಸಿಕೊಂಡ “ಪಿಲಿಬೈಲ್ ಯಮನಕ್ಕ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟವರು. ಅದಾದ ನಂತರ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟ ಅವರು, ಯೋಗರಾಜ್‌ಭಟ್ ನಿರ್ದೇಶನದ “ಪಂಚತಂತ್ರ’ ಚಿತ್ರದ ನಾಯಕಿಯಾಗಿ ಕಾಣಿಸಿಕೊಂಡರು. ಆ ಸಿನಿಮಾದಲ್ಲಿ ನಟಿಸುತ್ತಲೇ, ನಿರ್ದೇಶಕರ ಅಚ್ಚುಮೆಚ್ಚಿನ ನಟಿ ಎನಿಸಿಕೊಂಡ ಸೋನಾಲ್, ಪುನಃ ಯೋಗರಾಜ್‌ಭಟ್ ನಿರ್ದೇಶನದ “ಗಾಳಿಪಟ-2′ ಚಿತ್ರದಲ್ಲೂ ಅವಕಾಶ ಪಡೆದರು. ಅದಷ್ಟೇ ಅಲ್ಲ, ಅವರು ಸ್ಟಾರ್ ನಟ ಉಪೇಂದ್ರ ಅಭಿನಯದ “ಬುದ್ಧಿವಂತ-2′ ಚಿತ್ರಕ್ಕೂ ನಾಯಕಿಯಾಗಿ ಆಯ್ಕೆಯಾದರು. ಸದ್ಯಕ್ಕೆ ಆ ಚಿತ್ರಗಳ ಚಿತ್ರೀಕರಣದತ್ತ ಗಮನಹರಿಸಿರುವ ಅವರು, ಈಗ ಬಾಲಿವುಡ್ ಕಡೆಗೂ ಮುಖ ಮಾಡಿದ್ದಾರೆ. ಹೌದು, ಸೋನಾಲ್ ಮಾಂತೆರೋ, ಇದೇ ಮೊದಲ ಸಲ ಹಿಂದಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಷ್ಟೇ ಅಲ್ಲ, ಹಿಂದಿ ಚಿತ್ರದ ಜೊತೆಯಲ್ಲಿ ಅವರು ಟಾಲಿವುಡ್‌ನತ್ತ ಕೂಡ ತಮ್ಮ ಚಿತ್ತ ಹರಿಸಿದ್ದಾರೆ ಎಂಬುದು ಗಮನಕ್ಕಿರಲಿ.
ಅದೆಲ್ಲಾ ಸರಿ, ಸೋನಾಲ್ ಮಾಂತೆರೋ, ಬಾಲಿವುಡ್‌ಗೆ ಹೋಗುತ್ತಿರುವುದು ಯಾವ ಚಿತ್ರಕ್ಕೆ ಎಂಬ ಪ್ರಶ್ನೆ ಎದುರಾಗುವುದು ಸಹಜ. ಅದಕ್ಕೆ ಉತ್ತರ “ಸಾಜನ್ ಚಲೆ ಸಸುರಾಲ್-2′. ಹೌದು 1996 ರಲ್ಲಿ ಬಿಡುಗಡೆಯಾಗಿದ್ದ “ಸಾಜನ್ ಚಲೆ ಸಸುರಾಲ್’ ಚಿತ್ರದಲ್ಲಿ ಗೋವಿಂದ ನಾಯಕರಾಗಿದ್ದರು. ಅವರಿಗೆ ಟಬು ಹಾಗು ಕರಿಷ್ಮಾ ನಾಯಕಿಯರಾಗಿ ನಟಿಸಿದ್ದರು. ಈಗ “ಸಾಜನ್ ಚಲೆ ಸಸುರಾಲ್-2′ ಚಿತ್ರ ಶುರುವಾಗಲಿದೆ. ಈ ಚಿತ್ರದಲ್ಲಿ ಸೋನಾಲ್ ಮಾಂತೆರೋ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಅದೇನೆ ಇರಲಿ, ಕನ್ನಡದಲ್ಲಿ ನಟಿಸುವ ಮೂಲಕ ಇತರೆ ಭಾಷೆಗಳಲ್ಲೂ ಗುರುತಿಸಿ ಕೊಳ್ಳುತ್ತಿರುವ ನಾಯಕಿಯರ ಸಾಲಿಗೆ ಸೋನಾಲ್ ಮಾಂತೆರೋ ಅವರೂ ಸೇರಿದ್ದಾರೆ. ಬಾಲಿವುಡ್‌ನ “ಸಾಜನ್ ಚಲೆ ಸಸುರಾಲ್-2′ ಚಿತ್ರದಲ್ಲಿ ಸೋನಾಲ್ ಪಾತ್ರ ಹೇಗಿರುತ್ತೆ, ಯಾವಾಗ ಶುರುವಾಗುತ್ತೆ. ಅವರಿಗೆ ಜೋಡಿ ಯಾರು ಇತ್ಯಾದಿ ಎಂಬ ಪ್ರಶ್ನೆಗಳಿಗೆ ಇಷ್ಟರಲ್ಲೇ ಉತ್ತರ ಸಿಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Ranchi: ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ!
Hunsur: ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ
ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.