ಟ್ರೇಲರ್ ಹಿಟ್ ಎಫೆಕ್ಟ್; ‘ತೋತಾಪುರಿ’ಗೆ ಫುಲ್ ಡಿಮ್ಯಾಂಡ್
Team Udayavani, Apr 29, 2022, 12:52 PM IST
ಕೆಲವು ಸಿನಿಮಾಗಳ ತುಣುಕು ಇಡೀ ಸಿನಿಮಾದ ಭವಿಷ್ಯ ಹೇಳಿ ಬಿಡುತ್ತದೆ. ಈಗ “ತೋತಾಪುರಿ’ ಚಿತ್ರದ ಟ್ರೇಲರ್ ಕೂಡಾ ಈ ಚಿತ್ರದ ಭವಿಷ್ಯದ ಭರವಸೆ ಮೂಡಿಸಿದೆ. ಅದು ಹೇಗೆಂದು ನೀವು ಕೇಳಬಹುದು. ಇತ್ತೀಚೆಗಷ್ಟೇ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಹಿಟ್‌ಲಿಸ್ಟ್ ಸೇರಿದೆ. 5 ಮಿಲಿಯನ್‌ಗೆ ಅಧಿಕ ವೀವ್ಸ್‌ನೊಂದಿಗೆ ಮುನ್ನುಗ್ಗುತ್ತಿದೆ. ಇದರೊಂದಿಗೆ ಸಿನಿಮಾದ ಬಿಝಿನೆಸ್ ಕೂಡಾ ಏರಿದೆ.
ಸಿನಿಮಾದ ವಿತರಣೆಗೆ ನಿರ್ಮಾಪಕರನ್ನು ಸಂಪರ್ಕಿಸುವವರ ಸಂಖ್ಯೆ ಹೆಚ್ಚಾಗಿದೆ. ಜೊತೆಗೆ ಚಿತ್ರಕ್ಕೆ ಎಲ್ಲಾ ಏರಿಯಾಗಳಿಂದಲೂ ಬೇಡಿಕೆ ಬರುತ್ತಿದೆ. ಈ ಮೂಲಕ “ತೋತಾಪುರಿ’ ಹವಾ ಕ್ರಿಯೇಟ್ ಮಾಡಿದೆ. ಚಿತ್ರದ ಟ್ರೇಲರ್ ನೋಡಿದವರಿಗೆ ನಿರ್ದೇಶಕ ವಿಜಯ ಪ್ರಸಾದ್ ಸಿನಿಮಾದ ಚೇಷ್ಟೆ ಹಾಗೂ ಜಗ್ಗೇಶ್ ಅವರ ಮ್ಯಾನರೀಸಂ ಖುಷಿ ಕೊಡುತ್ತಿದೆ. ಈ ಚಿತ್ರ ಇಡೀ ಫ್ಯಾಮಿಲಿ ಆಡಿಯನ್ಸ್‌ಗೆ ನಗೆಹಬ್ಬವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಚಿತ್ರದಲ್ಲಿ ಚೇಷ್ಟೇ, ಫನ್ನಿ ಅಂಶಗಳ ಜೊತೆಗೆ ಗಂಭೀರವಾದ ಹಾಗೂ ಇವತ್ತು ಸಮಾಜಕ್ಕೆ ಹೆಚ್ಚು ಪ್ರಸ್ತುತವಾದ ಅಂಶಗಳು ಇವೆ ಎನ್ನಲಾಗಿದೆ.
ಇದನ್ನೂ ಓದಿ:ಮಾತ್ ಮಾತಲ್ಲಿ ಟಾಂಗ್.. ಸೌತ್ ಸಿನಿ ಹವಾ; ಬಾಲಿವುಡ್ ಉರಿ
ಅಂದಹಾಗೆ, ಚಿತ್ರ ಎರಡು ಭಾಗಗಳಲ್ಲಿ ಬಿಡುಗಡೆಯಾಗುತ್ತಿದೆ. ಎರಡೂ ಭಾಗದ ಶೂಟಿಂಗ್ ಮೊದಲೇ ಮುಗಿಸಿ ಬಿಡುಗಡೆಗೆ ಸಜ್ಜಾಗಿರುವುದೂ ಇದೇ ಮೊದಲು. ಮೋನಿಫಿಕ್ಸ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಕೆ.ಎ.ಸುರೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅತಿಹೆಚ್ಚು ದಿನ ಚಿತ್ರೀಕರಣ ಮಾಡಿರುವ ಸಿನಿಮಾ ಎಂಬ ಹೆಗ್ಗಳಿಕೆ “ತೋತಾಪುರಿ’ಗಿದೆ.
ತಾರಾಗಣದ ವಿಷಯದಲ್ಲೂ ದಾಖಲೆ ಬರೆದಿರುವ ಈ ಚಿತ್ರದಲ್ಲಿ ಡಾಲಿ ಧನಂಜಯ್, ಅದಿತಿ ಪ್ರಭುದೇವ, ಸುಮನ್ ರಂಗನಾಥ್, ದತ್ತಣ್ಣ, ವೀಣಾ ಸುಂದರ್ ಹಾಗೂ ಹೇಮಾದತ್ ಕಲಾವಿದರು ಬಣ್ಣ ಹಚ್ಚಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್ಗೆ ಡೇಟ್ ಫಿಕ್ಸ್
BGT 2024: ಪರ್ತ್ ನಲ್ಲಿ ಪಲ್ಟಿ ಹೊಡೆದ ಆಸೀಸ್: ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ
IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್
ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.