ಟೀಸರ್ ಮೂಲಕ ಟ್ಯೂಬ್ ಬೆಳಕು
Team Udayavani, Nov 9, 2018, 6:00 AM IST
“ದಾರಿ ಇರುವ ಕಡೆ ಮಾತ್ರ ಹೋಗಬೇಕು. ಹಾಗೊಂದು ವೇಳೆ ದಾರಿ ತಪ್ಪಿದರೆ ಏನೆಲ್ಲಾ ಆಗುತ್ತೆ ಗೊತ್ತಾ…’?
– ಹೀಗೆ ಹೇಳಿ ಸುಮ್ಮನಾದರು ನಿರ್ದೇಶಕ ವೇಣುಗೋಪಾಲ್. ಅವರು ಹೇಳಿದ್ದು “ಟ್ಯೂಬ್‌ಲೈಟ್’ ಚಿತ್ರದ ಬಗ್ಗೆ. ಈ ಟೈಟಲ್
ಎಲ್ಲೋ ಕೇಳಿದಂತಿದೆಯಲ್ಲಾ ಎಂಬ ಪ್ರಶ್ನೆ ಎದುರಾಗಬಹುದು. ಕಳೆದ ನಾಲ್ಕು ವರ್ಷಗಳ ಹಿಂದೆ ಶುರುವಾದ “ಟ್ಯೂಬ್‌ಲೈಟ್’ ಈಗ ಬೆಳಕಿಗೆ ಬಂದಿದೆ. ನಿರ್ದೇಶಕ ವೇಣುಗೋಪಾಲ್, ಚಿತ್ರ¨ ಟೀಸರ್ ಬಿಡುಗಡೆ ಮಾಡಲೆಂದೇ ತಮ್ಮ ಚಿತ್ರತಂಡದೊಂದಿಗೆ ಮಾಧ್ಯಮ ಮುಂದೆ ಬಂದಿದ್ದರು. ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ನಿರ್ದೇಶಕ ವೇಣುಗೋಪಾಲ್, ಆ ಕೆಲಸಕ್ಕೆ ಗುಡ್‌ಬೈ ಹೇಳಿ, ಈ ಚಿತ್ರ ನಿರ್ದೇಶನಕ್ಕೆ ಮುಂದಾದರು. ಸಾಕಷ್ಟು ಏರಿಳಿತಗಳ ನಡುವೆ “ಟ್ಯೂಬ್‌ಲೈಟ್’ ಮುಗಿಸಿದ್ದಾರೆ.
ತಮ್ಮ “ಟ್ಯೂಬ್‌ಲೈಟ್’ ಕುರಿತು ವೇಣುಗೋಪಾಲ್ ಹೇಳಿದ್ದಿಷ್ಟು. “ಕಥೆ ಬಗ್ಗೆ ಹೇಳುವುದಾದರೆ, ಇಲ್ಲಿ ನಾಲ್ಕು ಪ್ರಮುಖ ಪಾತ್ರಗಳ ನಡುವೆ ಕಥೆ ಸಾಗಲಿದೆ. ದಾರಿ ಇರುವ ಕಡೆ ಮಾತ್ರ ಹೋಗಬೇಕು, ದಾರಿ ತಪ್ಪಿದರೆ ಏನಾಗುತ್ತೆ ಎಂಬುದೇ ಕಥೆಯ ಸಾರಾಂಶ. ಇಲ್ಲಿ ಸಾಕಷ್ಟು ಬದುಕಿಗೆ ಹತ್ತಿರವಾಗುವಂತಹ ವಿಷಯಗಳಿವೆ. ಚಿತ್ರ ನಾಲ್ಕು ವರ್ಷದ ಹಿಂದೆ ಶುರುವಾಗಿದ್ದು, ತಡವಾಗಲು ಅನೇಕ ಕಾರಣ. ಹಾಗೆ ಹೇಳುವುದಾದರೆ, ಲಡಾಕ್, ಉತ್ತರಖಾಂಡ ಸೇರಿದಂತೆ ಹಲವು ಕಡೆ ಚಿತ್ರೀಕರಿಸಲಾಗಿದೆ. ಅಲ್ಲಿ ಹೋದಾಗ, ಅಲ್ಲಿನ
ಹವಾಗುಣಕ್ಕೆ ಹೊಂದಿಕೊಂಡು ಚಿತ್ರೀಕರಣ ಮಾಡಲಾಗುತ್ತಿತ್ತು. ಹಾಗಾಗಿ ಸಮಯ ಸಾಕಷ್ಟು ಹಿಡಿಯಿತು. ಅದೂ ಒಂದು ತಡವಾಗಲು ಮುಖ್ಯ ಕಾರಣ. ಇದ್ದೊಂದು ಜರ್ನಿ ಕಥೆಯಾದ್ದರಿಂದ ಸಹಜವಾಗಿಯೇ ಸಮಯ ಬೇಕಾಯಿತು’ ಎಂಬುದು ನಿರ್ದೇಶಕರ ಮಾತು. ಚಿತ್ರದಲ್ಲಿ ಗುರುನಂದನ್ ಇದ್ದಾರೆ. ಅವರೊಂದಿಗೆ ಆರ್ಯನ್, ರೋಹಿತ್ ಶೆಟ್ಟಿ ಮತ್ತು ರಾಜ್ ಕೂಡ ನಾಯಕರಾಗಿ ಕಾಣಿಸಿಕೊಂಡಿದ್ದಾರೆ.
ಗುರುನಂದ ನ್ “ಟ್ಯೂಬ್‌ಲೈಟ್’ ಬಗ್ಗೆ ತುಂಬಾ ನಂಬಿಕೆ ಇಟ್ಟುಕೊಂಡಿದ್ದಾರಂತೆ. ಅವರು 2014ರಲ್ಲಿ ಈ ಚಿತ್ರ ಒಪ್ಪಿ ಕೆಲಸ ಶುರುಮಾಡಿದಾಗ, “ಫಸ್ಟ್ ರ್‍ಯಾಂಕ್ ರಾಜು’ ಚಿತ್ರವಿನ್ನೂ ಶುರುವಾಗಿರಲಿಲ್ಲವಂತೆ. ಗುರುನಂದನ್ ಇಲ್ಲಿ ಫೋಟೋಗ್ರಾಫರ್ ಆಗಿ ಕಾಣಿಸಿಕೊಂಡಿದ್ದು, ಒಂದು ಪ್ರಾಜೆಕ್ಟ್ ಮೇಲೆ ಅವರು ಲಡಾಕ್‌ಗೆ ಪ್ರಯಾಣ ಬೆಳೆಸುತ್ತಾರೆ. ಅವರ ಜೊತೆ ಮೂವರು ಗೆಳೆಯರೂ ಹೊರಡುತ್ತಾರೆ. ಆ ದಾರಿ ಮಧ್ಯೆ ಒಂದಷ್ಟು ಸಮಸ್ಯೆ ಎದುರಾಗುತ್ತದೆ. ಅದೇ ಚಿತ್ರ¨ ಹೈಲೈಟ್’ ಎಂಬುದು ಗುರುನಂದನ್
ಮಾತು. ಈ ಚಿತ್ರಕ್ಕೆ ಸಂಬಂಧಿಸಿದಂತೆ ವೆಂಕಟಾದ್ರಿ ಎಂಬುವವರು ಕಂಪ್ಯೂಟರ್ ಗೇಮ್‌ವೊಂದನ್ನು ರೂಪಿಸಿದ್ದು , ಹದಿನೈದು ಹಂತದ ಗೇಮ್ ಅದು ಎಂಬುದು ವಿಶೇಷ. ಆ ಪೈಕಿ ಐದು ಹಂತದ ಗೇಮ್ ಆಡಿ ವಿಜೇತರಾದವರಿಗೆ ಸಿನಿಮಾ ಟಿಕೆಟ್ ಉಚಿತ
ಎಂಬುದು ಚಿತ್ರತಂಡದ ಹೇಳಿಕೆ.
ಚಿತ್ರಕ್ಕೆ ಮನೋಹರ ಜೋಶಿ ಛಾಯಾಗ್ರಹಣವಿದೆ. ಚಿತ್ರಕ್ಕೆ ವಿವೇಕ್ ಚಕ್ರವರ್ತಿ ಎರಡು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಜಗನ್ ಚಿತ್ರಕ್ಕೆ ನಿರ್ಮಾಪಕರು. ಇನ್ನು, ಈ ಚಿತ್ರದಲ್ಲಿ ಅನುಶ್ರೀ ಮತ್ತು ಸಹನಾ ನಾಯಕಿಯರು. ಇನ್ನೊಂದು ವಿಶೇಷವೆಂದರೆ,
“ಮಠ’ ಗುರುಪ್ರಸಾದ್ ಇಲ್ಲೊಂದು ಕಲ್ಕಿ ಎಂಬ ಪಾತ್ರ ಮಾಡಿದ್ದಾರಂತೆ. ಒಂದರ್ಥದಲ್ಲಿ ಸಿನಿಮಾಗೆ ಅವರೇ “ಲೈಮ್‌ಲೈಟ್’ ಅಂತೆ. ಚಿತ್ರ ನೋಡಿದವರಿಗೆ ಲಡಾಕ್‌ಗೆ ಹೋಗಿ ಬಂದ ಅನುಭವ ಆಗೋದು ಗ್ಯಾರಂಟಿ ಎಂಬುದು ಚಿತ್ರತಂಡದ ಮಾತು. ಎಲ್ಲವೂ
ಅಂದುಕೊಂಡಂತೆ ನಡೆದರೆ, ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ “ಟ್ಯೂಬ್‌ಲೈಟ್’ ಆನ್ ಆಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್ ಮದುವೆ?
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.