ಗಿರಿಗಿಟ್ ತಂದ ಸಂತಸ
ಹಿಟ್‌ಲಿಸ್ಟ್‌ಗೆ ತುಳು ಸಿನಿಮಾ
Team Udayavani, Sep 13, 2019, 5:00 AM IST
“ಗಿರಿಗಿಟ್’ ಎಂಬ ತುಳು ಸಿನಿಮಾವೊಂದು ಬಿಡುಗಡೆಯಾಗಿರುವ ಬಗ್ಗೆ ನಿಮಗೆ ಗೊತ್ತಿರಬಹುದು. ಆಗಸ್ಟ್ 23 ರಂದು ತೆರೆಕಂಡಿದ್ದ ಈ ಚಿತ್ರ ಈಗ ಚಿತ್ರತಂಡ ಮೊಗದಲ್ಲಿ ನಗುತರಿಸಿದೆ. ಅದಕ್ಕೆ ಕಾರಣ ಚಿತ್ರಕ್ಕೆ ಎಲ್ಲೆಡೆಯಿಂದ ಸಿಗುತ್ತಿರುವ ಪ್ರತಿಕ್ರಿಯೆ. ಹೌದು, “ಗಿರಿಗಿಟ್’ ಚಿತ್ರ ನೋಡಿದವರು ಮೆಚ್ಚಿಕೊಳ್ಳುವ ಮೂಲಕ ಚಿತ್ರ ಹಿಟ್‌ಲಿಸ್ಟ್ ಸೇರಿದ ಖುಷಿಯಲ್ಲಿದೆ ಚಿತ್ರತಂಡ. ಈ ವಿಷಯವನ್ನು ಹೇಳಲೆಂದೇ ಚಿತ್ರತಂಡ ಮಾಧ್ಯಮ ಮುಂದೆ ಬಂದಿತ್ತು. ಅಂದು ತುಳು ಚಿತ್ರತಂಡಕ್ಕೆ ಸಾಥ್ ನೀಡಿದವರು ನಟ, ನಿರ್ದೇಶಕ ರಿಷಭ್ ಶೆಟ್ಟಿ. “ಇವತ್ತು ತುಳು ಭಾಷೆಯಲ್ಲಿ ಒಳ್ಳೆಯ ಚಿತ್ರಗಳು ಬರುತ್ತಿವೆ. ಆ ಸಾಲಿಗೆ “ಗಿರಿಗಿಟ್’ ಕೂಡಾ ಸೇರಿದೆ. ಪ್ರಾದೇಶಿಕವಾಗಿ ಈ ತರಹದ ಸಿನಿಮಾಗಳು ಗೆದ್ದಾಗ ಅಲ್ಲಿನ ಚಿತ್ರರಂಗ ಬೆಳೆಯುತ್ತದೆ. ಪ್ರಾದೇಶಿಕವಾಗಿ ಭಾಷೆ, ಸಂಸ್ಕೃತಿ ಭಿನ್ನವಾಗಿರುತ್ತದೆ. ಆ ನಿಟ್ಟಿನಲ್ಲಿ ಸಿನಿಮಾ ಮಾಡಿ, ಗೆದ್ದಾಗ ಅಲ್ಲೊಂದು ಚಿತ್ರರಂಗವೇ ಆರಂಭವಾಗುತ್ತದೆ ಮತ್ತು ಸಾಕಷ್ಟು ಮಂದಿಗೆ ಅದು ಸಹಾಯವಾಗುತ್ತದೆ. ಈಗ “ಗಿರಿಗಿಟ್’ ಗೆದ್ದು ಮತ್ತಷ್ಟು ಮಂದಿಗೆ ಉತ್ಸಾಹ ತಂದಿದೆ’ ಎಂದರು.
ಚಿತ್ರ ಈಗಾಗಲೇ ಬೆಂಗಳೂರಿನಲ್ಲೂ ಬಿಡುಗಡೆಯಾಗಿದ್ದು, ಇಲ್ಲಿನ ಪ್ರೇಕ್ಷಕರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆಯಂತೆ. ವಿತರಕ ಜಯಣ್ಣ ಹಾಗೂ ಜಯಣ್ಣ ಅವರನ್ನು ಸೂಚಿಸಿದ ರಿಷಭ್‌ಗೆ ಚಿತ್ರತಂಡ ಥ್ಯಾಂಕ್ಸ್ ಹೇಳಲು ಮರೆಯಲಿಲ್ಲ. ಈಗಾಗಲೇ ಕನ್ನಡ, ತುಳು ಚಿತ್ರಗಳಲ್ಲಿ ನಟಿಸಿರುವ ರೂಪೇಶ್ ಶೆಟ್ಟಿ ಈ ಚಿತ್ರದ ನಾಯಕ. ಕೇವಲ ನಾಯಕರಾಗಿಯಷ್ಟೇ ಇವರು ಈ ಚಿತ್ರದಲ್ಲಿ ತೊಡಗಿಸಿಕೊಂಡಿಲ್ಲ. ನಿರ್ದೇಶನದಲ್ಲೂ ಭಾಗಿಯಾಗಿದ್ದಾರೆ. ರೂಪೇಶ್ ಶೆಟ್ಟಿ ಹಾಗೂ ರಾಕೇಶ್ ಕದ್ರಿ ಜೊತೆಯಾಗಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಪ್ರೇಕ್ಷಕರಿಂದ ಸಿಗುತ್ತಿರುವ ಬಗ್ಗೆ ಖುಷಿಯಿಂದ ಮಾತನಾಡಿದರು ರೂಪೇಶ್. ನಾಯಕಿ ಶಿಲ್ಪಾ ಕೂಡಾ ಸಿನಿಮಾಕ್ಕೆ, ಪಾತ್ರಕ್ಕೆ ಸಿಗುತ್ತಿರುವ ಮೆಚ್ಚುಗೆಯಿಂದ ಖುಷಿಯಾಗಿದ್ದರು.
ಮಂಜುನಾಥ ಅತ್ತಾವರ್ ಹಾಗೂ ಶೂಲಿನ್ ಫಿಲಂಸ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಖಳನಾಯಕನಾಗಿ ರೋಶನ್ ಶೆಟ್ಟಿ ಬಣ್ಣ ಹಚ್ಚಿದ್ದಾರೆ. ಇನ್ನು ಚಿತ್ರಕ್ಕೆ ಡೇರಲ್ ಮಸ್ಕರೇನಸ್ ಹಾಗೂ ಜೋಯೆಲ್ ರೆಬೆಲ್ಲೊ ಸಂಗೀತ, “ಬಲೆ ತೆಲಿಪಾಲೆ’ ಖ್ಯಾತಿಯ ಪ್ರಸನ್ನ ಶೆಟ್ಟಿ ಬೈಲೂರು ಸಂಭಾಷಣೆ ಚಿತ್ರಕ್ಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಬಾಲ್ಯದ ಮಧುರ ನೆನೆಪಿನೊಳಗೆ…: ಆ ಕಾಲ ಹೀಗಿತ್ತು!
Udupi: ಎಂಜಿಎಂ ವಿದ್ಯೆ ಎಂಬ ಅಮೃತ ನೀಡುತ್ತಿದೆ: ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ
Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA
Guarantee Scheme: ಸರಕಾರದ ಖಜಾನೆ ತುಂಬಲು ಅನಧಿಕೃತ ಲೇಔಟ್ ಸಕ್ರಮಗೊಳಿಸಲಿ:ಜನಾರ್ದನ ರೆಡ್ಡಿ
Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.