UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
Team Udayavani, Dec 20, 2024, 10:49 AM IST
ಉಪೇಂದ್ರ ನಿರ್ದೇಶನದ ಯು-ಐ ಚಿತ್ರದ ಕಂಟೆಂಟ್ ಕುರಿತು ಉಪ್ಪಿ ಮಾತನಾಡಿದ್ದು ಕಡಿಮೆ. ಅಲ್ಲೊಂದು, ಇಲ್ಲೊಂದು ಅಂಶವನ್ನಷ್ಟೇ ಬಿಟ್ಟುಕೊಟ್ಟಿದ್ದಾರೆ. ಇಂದು ತೆರೆಕಾಣುತ್ತಿರುವ ಯು-ಐ ಕುರಿತಾದ ಕೆಲವು ಹೈಲೈಟ್ಸ್…
ಒಂಬತ್ತು ವರ್ಷಗಳ ನಂತರ ಉಪೇಂದ್ರ ನಿರ್ದೇಶನ ಮಾಡಿರುವ ಸಿನಿಮಾವಿದು. ನಿರ್ದೇಶನದ ಜೊತೆಗೆ ನಟನೆಯೂ ಅವರದ್ದೇ.
ತಾಂತ್ರಿಕವಾಗಿ ತುಂಬಾ ಅಪ್‌ಡೇಟ್ ಆಗಿರುವ ಸಿನಿಮಾ. ಇವತ್ತಿನ ಆಧುನಿಕ ತಂತ್ರಜ್ಞಾನವನ್ನು ಉಪೇಂದ್ರ ಈ ಚಿತ್ರದಲ್ಲಿ ಚೆನ್ನಾಗಿ ಬಳಸಿಕೊಂಡಿರುವುದು ಚಿತ್ರದ ತುಣುಕುಗಳಲ್ಲಿ ಕಾಣುತ್ತಿದೆ.
ಸಿಂಬಲ್ ಮೂಲಕ ಸಿನಿಮಾ ಟೈಟಲ್ ಇಡುವುದರಲ್ಲಿ ಉಪೇಂದ್ರ ನಿಸ್ಸೀಮರು. ಈ ಬಾರಿಯೂ ಯು-ಐ ಎನ್ನುವುದುನ್ನು ಚಿಹ್ನೆಯ ಮೂಲಕ ಇಟ್ಟು ಗಮನ ಸೆಳೆದ ಚಿತ್ರವಿದು.
ಟೈಟಲ್ ನೋಡಿದವರಿಂದ ನೀನು, ನಾನು ಅಥವಾ ನಾನು- ನೀನು ಎಂಬ ಅರ್ಥಬರುತ್ತಿದೆ. ಚಿತ್ರದಲ್ಲಿ ಉಪೇಂದ್ರ ಅವರು ಹೊಸದೇನೋ ಹೇಳಿರುವ ನಿರೀಕ್ಷೆ ಇದೆ.
ಮನರಂಜನೆಯ ಜೊತೆಗೆ ಚಿತ್ರದಲ್ಲಿ ಒಂದು ಗಂಭೀರವಾದ ಅಂಶವಿದೆ ಎಂದು ಉಪೇಂದ್ರ ಹೇಳುತ್ತಲೇ ಬಂದಿದ್ದಾರೆ. ಆ ಅಂಶ ಅರ್ಥವಾದರೆ ನೀವು ಸೂಪರ್ ಎಂಬ ಉದ್ಗಾರ ಕೂಡಾ ಉಪೇಂದ್ರ ಅವರಿಂದ ಬಂದಿದೆ.
ಮೊದಲು ನೀವು ನಿಮ್ಮನ್ನು ನಂಬಿ. ನಿಮ್ಮೊಳಗಿನ ಶಕ್ತಿಯನ್ನು ಬಡಿದೆಬ್ಬಿಸಿ…ಈ ಜಗತ್ತಿನಲ್ಲಿ ನಿಮಗಿಂತ ಸ್ಟ್ರಾಂಗ್ ಯಾರೂ ಇಲ್ಲ. ಎಲ್ಲರ ಸಲಹೆ ಪಡೆಯಿರಿ. ಆದರೆ, ನಿಮ್ಮನ್ನು ನೀವು ನಂಬಿ ಎಂಬ ಸಂದೇಶ ಕೂಡಾ ಈ ಚಿತ್ರದಲ್ಲಿದೆ ಎನ್ನಲಾಗಿದೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿರುವ ಸಿನಿಮಾ. ಅಮೀರ್ ಖಾನ್ ಸೇರಿದಂತೆ ಬೇರೆ ಬೇರೆ ಭಾಷೆಯ ನಿರ್ದೇಶಕರು ಈ ಸಿನಿಮಾ ಮೇಲೆ ಒಂದು ಕಣ್ಣಿಟ್ಟಿರುವುದು ಸುಳ್ಳಲ್ಲ.
“ಯು-ಐ’ ಚಿತ್ರ ತಲೆಗೆ ಹುಳ ಬಿಡಲ್ಲ, ಬದಲಾಗಿ ತಲೆ ಯೊಳಗೆ ತುಂಬಿಕೊಂಡಿರುವ ಹುಳವನ್ನು ತೆಗೆಯುತ್ತದೆ. ಇದು ಕನ್‌ಫ್ಯೂಸ್ ಮಾಡುವ ಸಿನಿಮಾವಲ್ಲ, ಕನ್ವಿನ್ಸ್ ಮಾಡುವ ಸಿನಿಮಾ ಎಂಬ ವಾದ ಉಪ್ಪಿಯದ್ದು.
ಹಂಗೆರಿಯ ಪ್ರಮುಖ ನಗರ ಬುಡಾ ಪೆಸ್ಟ್ ನಲ್ಲಿ ಹಾಡಿನ ರೆಕಾರ್ಡ್ ಮಾಡಲಾಗಿದೆ. 90-ಪೀಸ್ ಆರ್ಕೆಸ್ಟ್ರಾ ಬಳಸಿ ಸಂಗೀತವನ್ನು ರೆಕಾರ್ಡ್ ಮಾಡಲಾಗಿದೆ.
ಮುಂಗಡ ಬುಕ್ಕಿಂಗ್‌ನಲ್ಲಿ ಅತಿ ವೇಗವಾಗಿ ಟಿಕೆಟ್‌ಗಳು ಮಾರಾಟವಾದ ಖ್ಯಾತಿ ಕೂಡಾ ಯು-ಐ ಚಿತ್ರದ್ದು.
ವೀನಸ್ ಎಂಟರ್‌ಟೈನರ್ ಹಾಗೂ ಲಹರಿ ಫಿಲಂಸ್ ಚಿತ್ರವನ್ನು ಬಿಗ್ ಬಜೆಟ್‌ನಲ್ಲಿ ನಿರ್ಮಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya: ಮನಸೂರೆಗೊಳ್ಳುವ ಶ್ರೀ ಆತ್ಮಲಿಂಗೇಶ್ವ ರ-ಧಾರ್ಮಿಕ ಚರ್ಚೆ, ಸಂವಾದ
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Udupi: ಗೀತಾರ್ಥ ಚಿಂತನೆ-130: “ನಂದಲ್ಲ, ನಂದಲ್ಲ’ ಎಂಬ ನಿರಂತರ ಅನುಸಂಧಾನ ಮುಖ್ಯ
Buntakal Technical College: ಅಂತಾರಾಷ್ಟ್ರೀಯ ಸಮ್ಮೇಳನ ;ವಿದ್ಯಾರ್ಥಿ ವಿಚಾರ ಸಂಕಿರಣ
Mandya:ಟಿಪ್ಪು ಆಳ್ವಿಕೆ- ಪ್ರವಾಸಿಗರ ಕಣ್ಮನ ಸೆಳೆಯುವ ಜಾಮೀಯಾ ಮಸೀದಿ, ಬೇಸಿಗೆ ಅರಮನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.