ದಿಬ್ಬಣ ಹೊರಡ್ಸೌರೆ ಉಮೇಶ್‌!


Team Udayavani, Mar 31, 2017, 11:24 AM IST

31-SUCHITRA-9.jpg

“ಲೆಕ್ಕ ಇಟ್ಟಿಲ್ಲ. ಇದು ನನ್ನ 24ನೇ ಸಿನಿಮಾನೋ, 25ನೇ ಸಿನಿಮಾನೋ ಗೊತ್ತಿಲ್ಲ. “ಅವಳೇ ನನ್ನ ಹೆಂಡ್ತಿ’ಯಿಂದ ಶುರುವಾಗಿ,
ಇಲ್ಲಿಯವರೆಗೂ ಬಂದಿದ್ದೀನಿ …’ ತಮ್ಮನ್ನು ತಾವು ಪರಿಚಯಿಸಿಕೊಂಡೇ ಮಾತಿಗೆ ಕುಳಿತರು ಹಿರಿಯ ನಿರ್ದೇಶಕ ಎಸ್‌. ಉಮೇಶ್‌. ಅವರು ಈಗ ಇನ್ನೊಂದು ಹೊಸ ಸಿನಿಮಾ ಶುರು ಮಾಡಿಬಿಟ್ಟಿದ್ದಾರೆ. “ತುಂಬಿದ ಮನೆ’ ಲೆವೆಲ್‌ನ ಸಿನಿಮಾ ಇದು ಎಂಬುದು ಅವರ ನಂಬಿಕೆ.

ತಾರಾಗಣದಲ್ಲದಿದ್ದರೂ, ಕಥೆಯ ವಿಷಯದಲ್ಲಿ ಇದು “ತುಂಬಿದ ಮನೆ’ ರೇಂಜ್‌ಗೆ ಬರುತ್ತದಂತೆ. ಈ ಚಿತ್ರಕ್ಕೆ ಅವರು ಇಟ್ಟಿರುವ
ಹೆಸರು “ಮದುವೆ ದಿಬ್ಬಣ’. ಕಳೆದ ವಾರ ಕನಕಪುರ ರಸ್ತೆಯಲ್ಲಿರುವ ರವಿಕಿರಣ್‌ ಎಸ್ಟೇಟ್‌ನಲ್ಲಿ ಅವರು ಈ ಚಿತ್ರ ಪ್ರಾರಂಭಿಸಿದ್ದಾರೆ.

ರವಿಕಿರಣ್‌ ಅವರ ಎಸ್ಟೇಟ್‌ನಲ್ಲಿ ಚಿತ್ರ ಪ್ರಾರಂಭಿಸುವುದಷ್ಟೇ ಅಲ್ಲ, ರವಿಕಿರಣ್‌ ಅವರಿಗೂ ಒಂದು ಪ್ರಮುಖ ಪಾತ್ರವನ್ನು
ಅವರು ಕೊಟ್ಟಿದ್ದಾರೆ. ಅವರಿಗೆ ಜೊತೆಯಾಗಿ ಚಂದ್ರಕಲಾ ಮೋಹನ್‌ ಇದ್ದಾರೆ. ಇನ್ನು ಈ ಚಿತ್ರದ ಮೂಲಕ ಅಭಿಷೇಕ್‌ ಬಣ್ಣ ಹಚ್ಚಿದರೆ, ಸೋನಾಲ್‌ ಮಂಟೇರಾ ನಾಯಕಿಯಾಗಿದ್ದಾರೆ.

ಚಿತ್ರವನ್ನು ಬಾ.ನಾ. ರವಿ ಎನ್ನುವವರು ನಿರ್ಮಿಸುತ್ತಿದ್ದಾರೆ. ರವಿಕಿರಣ ಮತ್ತು ಚಂದ್ರಕಲಾ ಅಭಿನಯದ ಮೊದಲ ದೃಶ್ಯದ ಚಿತ್ರೀಕರಣ ಮಾಡಿ, ಎಲ್ಲರನ್ನೂ ಪರಿಚಯಿಸಿಕೊಡುತ್ತಾ ಮಾತಿಗೆ ಕುಳಿತರು ಉಮೇಶ್‌. “ಹೆಸರೇ ಹೇಳುವಂತೆ ಇದು ಮದುವೆಗೆ ಸಂಬಂಧಿಸಿದ
ಸಿನಿಮಾ. ಅದರಲ್ಲೂ ಹಳ್ಳಿ ಮದುವೆಯ ಕುರಿತಾದ ಸಿನಿಮಾ ಇದು. ಹಂಸರಾಜ್‌ ಅವರು ಚಿತ್ರಕಥೆ ಬರೆದಿದ್ದಾರೆ. 31ರಿಂದ 
ಸತತವಾಗಿ ಒಂದು ತಿಂಗಳ ಕಾಲ ಚಿತ್ರೀಕರಣ ಮಾಡಲಿದ್ದೇವೆ. ಇಲ್ಲಿ ಚಂದ್ರಕಲಾ ಮೋಹನ್‌ ತಾಯಿ ಮತ್ತು ಮಗಳಾಗಿ ದ್ವಿಪಾತ್ರ ಮಾಡುತ್ತಿದ್ದಾರೆ. 

ಇನ್ನು ರವಿಕಿರಣ್‌ ಅವರು ಚಂದ್ರಕಲಾ ಅವರ ಜೋಡಿಯಾಗಿ ನಟಿಸುತ್ತಿದ್ದಾರೆ. ಅಭಿಷೇಕ್‌ ಮತ್ತು ಸೋನಾಲ್‌ ಚಿತ್ರದ ನಾಯಕ-ನಾಯಕಿ. ಕೆ.ಆರ್‌.ಪೇಟೆ ಶಿವರಾಜ್‌ ಇಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸುಮಾರು ಒಂದೂವರೆ ತಿಂಗಳ ಕಾಲ ಕೂತು
ಕಥೆ ಮಾಡಿದ್ದೇವೆ’ ಎಂದರು ಉಮೇಶ್‌. ಈ ಪಾತ್ರದಲ್ಲಿ ಅಭಿನಯಕ್ಕೆ ಸ್ಕೋಪ್‌ ಇರುವ ಕಾರಣಕ್ಕೆ ಒಪ್ಪಿಕೊಂಡಿದ್ದಾಗಿ ಹೇಳಿಕೊಂಡರು ರವಿಕಿರಣ್‌. “ನಾಲ್ಕೈದು ದೃಶ್ಯಗಳಿದ್ದರೂ ಪರವಾಗಿಲ್ಲ. ಅಭಿನಯಕ್ಕೆ ಅವಕಾಶವಿದ್ದರೆ ಮತ್ತು ಜನ ಮೆಚ್ಚಿದರೆ ಅಷ್ಟೇ ಸಾಕು’ ಎಂದರು ರವಿಕಿರಣ್‌. ಮೊದಲ ಬಾರಿಗೆ ದ್ವಿಪಾತ್ರ ಮಾಡುತ್ತಿರುವ ಬಗ್ಗೆ ಚಂದ್ರಕಲಾ ಬಹಳ ಖುಷಿಯಾದರು. ಇನ್ನು ರವಿಕಿರಣ್‌, ಚಂದ್ರಕಲಾ, ಉಮೇಶ್‌ರಂಥವರ ಜೊತೆಗೆ ಕೆಲಸ ಮಾಡುತ್ತಿರುವುದು ಅಭಿಷೇಕ್‌ ಮತ್ತು ಸೋನಾಲ್‌ ಬಹಳ ಹೆಮ್ಮೆ ವ್ಯಕ್ತಪಡಿಸಿದರು. 

ಈ ಚಿತ್ರವನ್ನು ಬಾ.ನಾ. ರವಿ ಎನ್ನುವವರು ನಿರ್ಮಿಸುತ್ತಿದ್ದಾರೆ. ಸಣ್ಣ ಸ್ಟುಡಿಯೋ ಇಟ್ಟುಕೊಂಡಿರುವ ಅವರಿಗೆ ಇದು ಮೊದಲನೆಯ ಚಿತ್ರ. ಚಿತ್ರಕ್ಕೆ ಎ.ಟಿ. ರವೀಶ್‌ ಅವರ ಸಂಗೀತವಿದೆ.  

ಟಾಪ್ ನ್ಯೂಸ್

kangana-2

Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

kl-rahul

IPL Auction: ‌ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್‌ ರಾಹುಲ್;‌ ಖರೀದಿ ಆರಂಭಿಸಿದ ಆರ್‌ ಸಿಬಿ

sanjay-raut

Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್

IPL Mega Auction: Huge demand for spinner Chahal; Miller to Lucknow

IPL Mega Auction: ಸ್ಪಿನ್ನರ್‌ ಚಾಹಲ್‌ ಗೆ ಭಾರೀ ಬೇಡಿಕೆ; ಮಿಲ್ಲರ್‌ ಲಕ್ನೋಗೆ

DKShi

Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್

rishabh-pant

IPL Mega Auction: ಭರ್ಜರಿ ಬಿಡ್‌ ಗಳಿಸಿ ಅಯ್ಯರ್‌ ದಾಖಲೆ ಮುರಿದ ರಿಷಭ್‌ ಪಂತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

priyanka upendra in life is beautiful movie

Priyanka Upendra: ಬ್ಯೂಟಿಫುಲ್‌ ಲೈಫ್‌ ನಲ್ಲಿ ಪ್ರಿಯಾಂಕಾ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ‌ ಒಂದು ವರ್ಷದ ಮರಿ ಚಿರತೆ ರಕ್ಷಣೆ

kangana-2

Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

kl-rahul

IPL Auction: ‌ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್‌ ರಾಹುಲ್;‌ ಖರೀದಿ ಆರಂಭಿಸಿದ ಆರ್‌ ಸಿಬಿ

sanjay-raut

Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.