ಪಾರ್ಟ್ 2 ಕ್ರೇಜ್ ಜೋರು
ಹಿಟ್ ಸಿನಿಮಾಗಳ ಮುಂದುವರೆದ ಭಾಗಗಳಿಗೆ ಬೇಡಿಕೆ
Team Udayavani, Oct 9, 2020, 1:07 PM IST
ಕನ್ನಡ ಚಿತ್ರರಂಗದ ಈ ಬಾರಿಯ ಒಂದು ವಿಶೇಷವೆಂದರೆ ಪಾರ್ಟ್-2 ಸಿನಿಮಾಗಳ ಕುತೂಹಲ. ಮೊದಲ ಭಾಗದಲ್ಲಿ ಯಶಸ್ವಿ ಚಿತ್ರ ಎನಿಸಿಕೊಂಡ ಅನೇಕ ಚಿತ್ರಗಳ ಮುಂದುವರಿದ ಭಾಗ ತಯಾರಾಗಿ ಈಗ ಬಿಡುಗಡೆಯ ಹಂತಕ್ಕೆಬಂದಿದೆ. ಈ ಚಿತ್ರಗಳು ಈ ಬಾರಿ ದೊಡ್ಡ ಮಟ್ಟದಲ್ಲಿಅಭಿಮಾನಿಗಳಲ್ಲಿ ಕ್ರೇಜ್ ಹುಟ್ಟಿಸಿರೋದಂತೂ ಸುಳ್ಳಲ್ಲ. ಅಷ್ಟಕ್ಕೂ ಪಾರ್ಟ್-2 ಸಿನಿಮಾಗಳು ಯಾವುದೆಂದು ನೋಡುತ್ತಾ ಹೋಗುವುದಾದರೆ ಮೊದಲ ಸ್ಥಾನದಲ್ಲಿ ಸಿಗೋದು ಕೆಜಿಎಫ್-2
ಕೆಜಿಎಫ್-2 ಕ್ರೇಜ್ : 2018ರಲ್ಲಿ ಬಿಡುಗಡೆಯಾಗಿ ಬಹುದೊಡ್ಡ ಯಶಸ್ಸುಕಂಡಿತು. ಅದಕ್ಕಿಂತ ಹೆಚ್ಚಾಗಿ ಕನ್ನಡ ಸಿನಿ ಪ್ರೇಮಿಗಳಿಗೆ ಪ್ಯಾನ್ ಇಂಡಿಯಾಬಗ್ಗೆ ತಿಳುವಳಿಕೆ ನೀಡಿದ ಸಿನಿಮಾ ಕೆಜಿಎಫ್ ಎಂದರೆ ತಪ್ಪಲ್ಲ.ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂಮಲಯಾಳಂನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಹಿಟ್ ಆದ ಸಿನಿಮಾ ಅಂದುಕೋಟಿಗಟ್ಟಲೆ ಬಿಝಿನೆಸ್ ಮಾಡಿ ಕನ್ನಡ ಸಿನಿಮಾದ ಮಾರುಕಟ್ಟೆಯನ್ನು ವಿಸ್ತರಿಸಿದ್ದು ಸುಳ್ಳಲ್ಲ. ಈಗ ಆ ಚಿತ್ರದ ಮುಂದುವರಿದ ಭಾಗಕೆಜಿಎಫ್-2 ಸಿದ್ಧವಾಗಿದೆ. ಈ ಬಾರಿ ಚಿತ್ರದ ನಿರೀಕ್ಷೆಯ ಜೊತೆಗೆಪಾತ್ರವರ್ಗ ಕೂಡಾ ಹಿರಿದಾಗಿದೆ. ಮುಖ್ಯವಾಗಿ ಕೆಜಿಎಫ್-2ನಲ್ಲಿ ಬಾಲಿವುಡ್‌ನ ಖ್ಯಾತ ನಟಸಂಜಯ್ ದತ್ ಎಂಟ್ರಿಯಾಗುವ ಮೂಲಕ ಚಿತ್ರದ ಕಲರ್‌ಕೂಡಾ ಬದಲಾಗಿದೆ. ಮತ್ತೂಂದು ವಿಶೇಷವೆಂದರೆ ಸಂಜಯ್ ದತ್ ನಟಿಸುತ್ತಿರುವದಕ್ಷಿಣ ಭಾರತದ ಮೊದಲ ಚಿತ್ರಕೆಜಿಎಫ್-2. ಇನ್ನು ಈ ಚಿತ್ರದಲ್ಲಿ ಬಾಲಿವುಡ್ ನಟಿ ರವೀನಾ ಟಂಡನ್ ಕೂಡಾ ಪ್ರಮುಖ ಪಾತ್ರ ಮಾಡಿದ್ದಾರೆ. ಈ ಎಲ್ಲಾ ಕಾರಣಗಳಿಂದಾಗಿ ಚಿತ್ರದ ಖದರ್‌ಕೂಡಾ ಬದಲಾಗಿದೆ.
ಕುತೂಹಲ ಹೆಚ್ಚಿಸಿದಕೋಟಿಗೊಬ್ಬ-3 : ಸುದೀಪ್ ನಾಯಕರಾಗಿರುವಕೋಟಿಗೊಬ್ಬ-3ಕಿಚ್ಚನ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ಡಾ.ವಿಷ್ಣುವರ್ಧನ್ ಅವರು ಕೋಟಿಗೊಬ್ಬ ಚಿತ್ರದಲ್ಲಿ ನಟಿಸಿ, ಆ ಚಿತ್ರ ಹಿಟ್‌ಲಿಸ್ಟ್ ಸೇರಿತ್ತು. ಆ ಚಿತ್ರವನ್ನು ನಿರ್ಮಿಸಿದ ಸೂರಪ್ಪ ಬಾಬು ಅವರು ಸುದೀಪ್ ಅವರ ಜೊತೆಕೋಟಿಗೊಬ್ಬ-2 ಚಿತ್ರ ನಿರ್ಮಿಸಿದ್ದಲ್ಲದೇ ಚಿತ್ರ ಯಶಸ್ಸುಕೂಡಾಕಂಡಿತು. ಈಗ ಸೂರಪ್ಪ ಬಾಬು ಅವರುಕೋಟಿಗೊಬ್ಬ-3 ಚಿತ್ರವನ್ನು ನಿರ್ಮಿಸಿದ್ದು, ಸುದೀಪ್ ಹೀರೋ. ಈ ಚಿತ್ರ ಕೂಡಾ ಬಿಡುಗಡೆಯ ಹಂತಕ್ಕೆ ಬಂದಿದ್ದು, ಚಿತ್ರದ ಹಾಡು ಅಭಿಮಾನಿಗಳಕ್ರೇಜ್ ಹೆಚ್ಚಿಸಿದೆ.
ಭಜರಂಗಿ 2 ನಲ್ಲಿ ಶಿವಣ್ಣ ಮಿಂಚು : ಇನ್ನು, ಶಿವರಾಜ್‌ಕುಮಾರ್ ಅವರ ಭಜರಂಗಿ-2.2013ರಲ್ಲಿ ನಿರ್ದೇಶಕ ಹರ್ಷ ಹಾಗೂ ಶಿವರಾಜಕುಮಾರ್ ಕಾಂಬಿನೇಶನ್‌ನಲ್ಲಿ ಬಂದ ಭಜರಂಗಿ ಒಂದು ಫ್ಯಾಂಟಸಿ ಡ್ರಾಮಾವಾಗಿ ಅಭಿಮಾನಿಗಳನ್ನು ರಂಜಿಸಿತ್ತು. ಈಗ ಆ ಕಾಂಬಿನೇಶನ್‌ನಲ್ಲಿ ಭಜರಂಗಿ-2 ಬರುತ್ತಿದೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿರುವ ಈ ಚಿತ್ರದ ಟೀಸರ್ ಶಿವಣ್ಣ ಹುಟ್ಟುಹಬ್ಬಕ್ಕೆ ಬಿಡುಗಡೆಯಾಗಿದ್ದು, ಚಿತ್ರದ ರಗಡ್ ಲುಕ್ ಗಮನ ಸೆಳೆಯುತ್ತಿದೆ. ಈ ಎಲ್ಲಾಕಾರಣಗಳಿಂದಾಗಿ ಪಾರ್ಟ್ 2 ಸಿನಿಮಾಗಳ ಮೇಲೆ ಅಭಿಮಾನಿಗಳಕ್ರೇಜ್ ಹೆಚ್ಚಿರೋದು ಸುಳ್ಳಲ್ಲ.
ಪಾರ್ಟ್ 2ನಲ್ಲೂ ಬರಲಿದೆ ಉಪ್ಪಿ “ಕಬ್ಜ’ : ಇಂಡಿಯಾ ಸಿನಿಮಾವಾಗಿ ನಿರೀಕ್ಷೆ ಹೆಚ್ಚಿಸಿದೆ. ಈಗ ಮತ್ತೂಂದು ಪ್ಯಾನ್ ಇಂಡಿಯಾ ಚಿತ್ರ ಪಾರ್ಟ್ 2 ಆಗಿ ಬರಲು ತಯಾರಿ ನಡೆಸಿದೆ. ಅದು ಉಪೇಂದ್ರ ಅವರ “ಕಬj’ ಚಿತ್ರ. ಹೌದು, ಆರ್. ಚಂದ್ರು ನಿರ್ಮಾಣ, ನಿರ್ದೇಶನದ ಈ “ಕಬ್ಜ’ ಚಿತ್ರಕೂಡಾ ಪಾರ್ಟ್ 2 ಆಗಿ ಬರಲಿದೆ. ಈ ವಿಷಯವನ್ನು ಸ್ವತಃ ನಿರ್ದೇಶಕ ಆರ್.ಚಂದ್ರು ಅವರೇ ಸ್ಪಷ್ಟಪಡಿಸಿದ್ದಾರೆ. ಆರಂಭದಲ್ಲಿ ಚಂದ್ರು ಅವರಿಗೆ ಪಾಟ್2ಮಾಡುವ ಯಾವುದೇ ಯೋಚನೆ ಇರಲಿಲ್ಲ. ಆದರೆ, ಲಾಕ್ ಡೌನ್‌ನಲ್ಲಿ ಚಿತ್ರೀಕರಣವಿಲ್ಲದೇ, ಮನೆಯಲ್ಲಿದ್ದ ವೇಳೆ ಈ ಆಲೋಚನೆ ಬಂದಿದೆ.ಕಥೆಯನ್ನು ಮತ್ತಷ್ಟು ಬೆಳೆಸಿ, ಪಾರ್ಟ್ 2ಗೆಬೇಕಾದಂತೆ ಮಾಡಿದ್ದಾರೆ. ಪಾರ್ಟ್ 2ಗೆ ಬೇಕಾದ ಸ್ಕ್ರಿಪ್ಟ್ ಕೂಡಾ ಸಿದ್ಧವಾಗಿದೆಯಂತೆ. ಮೊದಲು “ಕಬ್ಜ’ ಸಿನಿಮಾದ ಚಿತ್ರೀಕರಣ ಮುಗಿಸಿ, ಆ ಚಿತ್ರ ಬಿಡುಗಡೆಯಾದ ನಂತರ “ಕಬ್ಜ’ ಪಾರ್ಟ್ 2ಮಾಡಲಿದ್ದಾರಂತೆ. ಈ ಬಗ್ಗೆ ಮಾತನಾಡುವ ನಿರ್ದೇಶಕ ಆರ್.ಚಂದ್ರು, “ಲಾಕ್ ಡೌನ್‌ನಲ್ಲಿರುವಾಗ ಈ ಯೋಚನೆ ಬಂತು. ಸದ್ಯ ಪಾರ್ಟ್ 2 ಸ್ಕ್ರಿಪ್ಟ್ ಸಿದ್ಧವಾಗಿದೆ. ಮೊದಲ ಭಾಗವನ್ನು ಮುಗಿಸಿ, ಬಿಡುಗಡೆ ಮಾಡಿದ ನಂತರ “ಕಬ್ಜ-2′ ಬಗ್ಗೆ ಯೋಚಿಸುತ್ತೇನೆ’ ಎನ್ನುತ್ತಾರೆ. ಇತ್ತೀಚೆಗೆ “ಕಬj’ ಚಿತ್ರದ ಥೀಮ್ ಪೋಸ್ಟರ್ ಬಿಡುಗಡೆಯಾಗಿದ್ದು, ಸಿನಿಮಾ ಪ್ರೇಮಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೊಸ ಬಗೆಯಿಂದಕೂಡಿದ್ದು, ಪ್ಯಾನ್ ಇಂಡಿಯಾ ಸಿನಿಮಾವೆಂಬುದು ಪೋಸ್ಟರ್‌ನಲ್ಲೇ ಗೊತ್ತಾಗುತ್ತಿದೆ ಎಂಬ ಪ್ರಶಂಸೆಯ ಮಾತುಗಳು ಕೇಳಿಬರುತ್ತಿದೆ. ಲಾಕ್‌ಡೌನ್‌ನಿಂದ ಬ್ರೇಕ್ ಆಗಿದ್ದ ಚಿತ್ರೀಕರಣಕ್ಕೆ ಮತ್ತೆ ಚಾಲನೆ ನೀಡಲು ಚಂದ್ರು ಸಿದ್ಧತೆ ನಡೆಸುತ್ತಿದ್ದಾರೆ. ಇಡೀ ಚಿತ್ರ ಸೆಟ್‌ನಲ್ಲೇ ನಡೆಯಲಿದೆ. ಚಿತ್ರಕ್ಕೆ ನಾಯಕಿಯ ಆಯ್ಕೆ ಇನ್ನಷ್ಟೇ ಆಗಬೇಕಿದ್ದು, ಪ್ಯಾನ್ ಇಂಡಿಯಾ ಸಿನಿಮಾವಾದ್ದರಿಂದ ಎಲ್ಲಾ ಭಾಷೆಗಳಿಗೂ ಹೊಂದುವಂತಹ ನಾಯಕಿಯನ್ನೇಕರೆತರುವ ಯೋಚನೆಯಲ್ಲಿದೆ ಚಿತ್ರತಂಡ.
ಲವ್ ಮಾಕ್ಟೇಲ್ 2 : ಮದರಂಗಿ ಕೃಷ್ಣ ನಾಯಕರಾಗಿರುವ “ಲವ್ ಮಾಕ್ಟೇಲ್’ ಚಿತ್ರ ಹಿಟ್ ಆಗುತ್ತಿದ್ದಂತೆ ಈಗ ಚಿತ್ರತಂಡ “ಲವ್ ಮಾಕ್ಟೇಲ್2′ ಮಾಡಲು ಮುಂದಾಗಿದೆ. ಈಗಾಗಲೇ ಪೂರ್ವ ತಯಾರಿಜೋರಾಗಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಈ ಚಿತ್ರಕೂಡಾ ಕ್ರೇಜ್ ಹುಟ್ಟಿಸುವ ಸಾಧ್ಯತೆ ಇದೆ.
-ರವಿಪ್ರಕಾಶ್ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.