ವಾಸುಕಿ ಕಂಠದಲ್ಲಿ ಇನ್ನೂನೂ ಬೇಕಾಗಿದೆ…
ಮುಂದಿನ ನಿಲ್ದಾಣದಲ್ಲಿ ಸುಮಧುರ ಹಾಡು
Team Udayavani, Oct 11, 2019, 5:07 AM IST
ಭಿನ್ನ ಪೋಸ್ಟರ್ ಡಿಸೈನ್, ಮೋಶನ್ ಪೋಸ್ಟರ್ ಹಾಗೂ ಹಾಡುಗಳಿಂದಲೇ ಸದ್ದು ಮಾಡಿರುವ ಚಿತ್ರ “ಮುಂದಿನ ನಿಲ್ದಾಣ’. ಒಂದೊಂದೇ ಹಾಡುಗಳನ್ನು ಹರಿಬಿಡುತ್ತಿರುವ ಚಿತ್ರತಂಡ, ಇತ್ತೀಚೆಗಷ್ಟೇ ಮತ್ತೂಂದು ಸುಮಧುರ ಹಾಡೊಂದನ್ನು ಬಿಡುಗಡೆ ಮಾಡಿದೆ. ಸಂಗೀತ ನಿರ್ದೇಶಕ ಕಮ್ ಹಾಡುಗಾರ ವಾಸುಕಿ ವೈಭವ್ ಕಂಠಸಿರಿಯಲ್ಲಿ ಮೂಡಿಬಂದಿರುವ “ಇನ್ನೂನೂ ಬೇಕಾಗಿದೆ’ ಎಂಬ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಕಮಾಲ್ ಮಾಡುತ್ತಿದೆ.
“ರಾಮ ರಾಮ ರೇ’ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪರಿಚಿತವಾದ ವಾಸುಕಿ, ಇತ್ತೀಚೆಗೆ ಶತದಿನೋತ್ಸವ ಆಚರಿಸಿಕೊಂಡ “ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ ಚಿತ್ರಕ್ಕಾಗಿ ಭಿನ್ನ ಹಾಡುಗಳನ್ನು ನೀಡಿ ಮನೆ ಮಾತಾಗಿದ್ದರು.
ಇದೀಗ “ಮುಂದಿನ ನಿಲ್ದಾಣ’ ಚಿತ್ರಕ್ಕಾಗಿ “ಇನ್ನೂನೂ ಬೇಕಾಗಿದೆ’ ಎನ್ನುವ ಸುಮಧುರವಾದ ಹಾಡೊಂದಕ್ಕೆ ವಾಸುಕಿ ರಾಗ ಸಂಯೋಜನೆ ಮಾಡುವುದರ
ಜೊತೆಗೆ ಅವರೇ ಹಾಡಿದ್ದಾರೆ.
ಅಪ್ಪಟ ಹಿಂದೂಸ್ತಾನಿ ಟಚ್ನೊಂದಿಗೆ ಕಂಪೋಸ್ ಮಾಡಿರುವ ಈ ಹಾಡಿನಲ್ಲಿ ಚಿತ್ರದ ಪ್ರಮುಖ ಪಾತ್ರಗಳಲ್ಲಿರುವ ಪ್ರವೀಣ್ ತೇಜ್, ರಾಧಿಕಾ ನಾರಾಯಣ್ ಹಾಗೂ ಅನನ್ಯಾ ಕಶ್ಯಪ್ ನಟಿಸಿ¨ªಾರೆ. ಪ್ರಮೋದ್ ಮರವಂತೆ ಸಾಹಿತ್ಯ ಹೊಂದಿರುವ ಈ ಹಾಡು ಪಿ ಆರ್ ಕೆ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗಿದೆ.
ವಿನಯ್ ಭಾರದ್ವಾಜ್ ನಿರ್ದೇಶನವಿರುವ ಈ ಚಿತ್ರಕ್ಕೆ ಅಭಿಮನ್ಯು ಸದಾನಂದನ್ ಛಾಯಾಗ್ರಹಣದೆ.”ಮುಂದಿನ ನಿಲ್ದಾಣ’ ಸಿನಿಮಾ ಮುಂದಿನ ತಿಂಗಳಲ್ಲಿ ತೆರೆ ಕಾಣಲು ಸಕಲ ಸಿದ್ಧತೆ ನಡೆಸಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.