ಕಲ್ಪನಾ ಲೋಕದಲ್ಲಿ “ವೇದಾ”
Team Udayavani, Jul 19, 2019, 5:00 AM IST
ಜಾತಿ, ಧರ್ಮ, ಕ್ಷೇತ್ರದ ಹಂಗಿಲ್ಲದೇ ಎಲ್ಲರನ್ನು ಸೆಳೆಯುವ ಮತ್ತು ಪ್ರತಿಭೆ ಇದ್ದವರನ್ನು ಪೋಷಿಸುವ ಕ್ಷೇತ್ರವೊಂದಿದ್ದರೆ ಅದು ಸಿನಿಮಾ ಕ್ಷೇತ್ರ. ಅದೇ ಕಾರಣದಿಂದ ಬೇರೆ ಬೇರೆ ಕ್ಷೇತ್ರದಲ್ಲಿರುವವರು ಸಿನಿಮಾ ಕಡೆಗೆ ಆಸಕ್ತರಾಗುತ್ತಾರೆ ಮತ್ತು ಇಲ್ಲೇನೋ ಸಾಧನೆ ಮಾಡಬೇಕೆಂದು ಬರುತ್ತಾರೆ. ಈಗಾಗಲೇ ಬಂದಿರುವ ಅನೇಕರು ಇಲ್ಲಿ ಗಟ್ಟಿನೆಲೆ ಕಂಡುಕೊಂಡಿದ್ದಾರೆ. ಅದೇ ಆಸೆಯೊಂದಿಗೆ ಈಗ ವೇದ ಎಂಬ ನವನಟಿ ಕೂಡಾ ಎಂಟ್ರಿಕೊಟ್ಟಿದ್ದಾರೆ. ಯಾರು ಈ ವೇದ ಎಂದರೆ ಈಗಷ್ಟೇ ಚಿತ್ರರಂಗಕ್ಕೆ ಕಾಲಿಟ್ಟಿರುವ ನವನಟಿ. ಬಿಡುಗಡೆಗೆ ಸಿದ್ಧವಾಗಿರುವ “ಕಲ್ಪನಾ ವಿಲಾಸಿ’ ಎಂಬ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಎಂಬಿಎ ಮಾಡಿ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿರುವ ವೇದ ಅವರಿಗೆ ಸಿನಿಮಾದ ಮೇಲೆ ಆಸಕ್ತಿ ಬಂದು ಈಗ ಈ ಕ್ಷೇತ್ರಕ್ಕೆ ಬಂದಿದ್ದಾರೆ. ಚಿತ್ರದ ಕಥೆ ಬರೆದ ಕಾರ್ತಿಕ್ ಅವರ ಮೂಲಕ ಚಿತ್ರತಂಡ ಸೇರಿಕೊಂಡ ವೇದ ಈ ಹಿಂದೆ ಕಾರ್ತಿಕ್ ಅವರ ಕಿರುಚಿತ್ರವೊಂದರಲ್ಲಿ ನಟಿಸಿದ್ದಾರೆ. “ಚಿತ್ರದಲ್ಲಿ ನನ್ನ ಪಾತ್ರ ತುಂಬಾ ಚೆನ್ನಾಗಿದೆ. ಇದೊಂದು ಸಸ್ಪೆನ್ಸ್ ಚಿತ್ರವಾಗಿದ್ದು, ಬಹುತೇಕ ಚಿತ್ರೀಕರಣ ರಾತ್ರಿ ವೇಳೆ ನಡೆದಿದೆ’ ಎನ್ನುತ್ತಾರೆ ವೇದ. ಅಂದಹಾಗೆ, ವೇದ ಈಗಾಗಲೇ ಇನ್ನೊಂದು ಹೊಸ ಸಿನಿಮಾವನ್ನು ಒಪ್ಪಿಕೊಂಡಿದ್ದು, ಕಂಪೆನಿ ಕೆಲಸದ ಜೊತೆಗೆ ಚಿತ್ರರಂಗದಲ್ಲಿ ಮುಂದುವರೆಯುವ ಆಸಕ್ತಿ ಕೂಡಾ ಅವರಿಗಿದೆ.
ಅಂದಹಾಗೆ, ವಿಶ್ವ ಜಿ ಕಡೂರು ನಿರ್ದೇಶಿಸಿರುವ “ಕಲ್ಪನಾ ವಿಲಾಸಿ’ ಚಿತ್ರ ಒಂದು ಕ್ರೈಮ್ ಥ್ರಿಲ್ಲರ್ ಜಾನರ್‌ಗೆ ಸೇರಿದ್ದು, ನೈಜ ಘಟನೆಯನ್ನು ಆಧರಿಸಿ ಈ ಚಿತ್ರ ಮಾಡಲಾಗಿದೆ. ಚಿತ್ರಕ್ಕೆ ಕಿರಣ್ ಎನ್ನುವವರು ಕಥೆ ಇದೆ. ನಟಿ ಕಲ್ಪನಾ ಅವರ ಸಾವಿನ ನಂತರ ಆ ಊರಲ್ಲಿ ಅವರ ಆತ್ಮ ತಿರುಗುತ್ತಿದೆ ಎಂದು ಆ ಊರಿನವರು ಹೇಳುತ್ತಿದ್ದಾರಂತೆ. ಆ ಅಂಶವನ್ನಿಟ್ಟುಕೊಂಡು ಈ “ಕಲ್ಪನಾ ವಿಲಾಸಿ’ ಎಂಬ ಚಿತ್ರ ಮಾಡಲಾಗಿದೆ. ನಿಜಕ್ಕೂ ಆತ್ಮ ತಿರುಗುತ್ತಿದೆಯಾ ಅಥವಾ ಜನರ ಊಹೆನಾ ಎಂಬ ಅಂಶವನ್ನಿಟ್ಟುಕೊಂಡು ಚಿತ್ರವನ್ನು ಕಟ್ಟಿಕೊಡಲಾಗಿದೆಯಂತೆ. ಚಿತ್ರದ ಬಹುತೇಕ ಭಾಗ ಮಡಿಕೇರಿ ಸುತ್ತಮುತ್ತ ಚಿತ್ರೀಕರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.