ಜೆಕೆಗೆ ವಾರಂಟ್
Team Udayavani, Oct 5, 2018, 6:00 AM IST
ಒಂದು ಚಿತ್ರ ಮೂವರು ಸಂಗೀತ ನಿರ್ದೇಶಕರು, ಮೂವರು ಛಾಯಾಗ್ರಾಹಕರು..!
– ಇದು “ವಾರಂಟ್’ ಕಥೆಯೊಳಗಿನ ಗುಟ್ಟು. ನಾಗೇಂದ್ರ ಅರಸ್ ಸದ್ದಿಲ್ಲದೆಯೇ ಮುಗಿಸಿದ ಚಿತ್ರವಿದು. ಚಿತ್ರದ ಬಗ್ಗೆ ಹೇಳಲೆಂದೇ ತಂಡ ಕಟ್ಟಿಕೊಂಡು ಮಾಧ್ಯಮ ಮುಂದೆ ಬಂದಿದ್ದರು ನಾಗೇಂದ್ರ ಅರಸ್. ಮೊದಲು ಮಾತು ಶುರುಮಾಡಿದ್ದು ನಿರ್ದೇಶಕ ನಾಗೇಂದ್ರ ಅರಸ್, “ಇದು ಆ್ಯಕ್ಷನ್ ಚಿತ್ರ. ಒಂದು ರೀತಿಯ ರಿವೇಂಜ್ ಕಥೆ. ಹಾಗಂತ, ಇಲ್ಲಿ ಅಂಡರ್‌ವರ್ಲ್ಡ್ ಕಥೆ ಇಲ್ಲ. ನಡೆದ ಒಂದು ಘಟನೆಯನ್ನು ಹೇಗೆ ಪತ್ತೆ ಹಚ್ಚುತ್ತಾರೆ ಎಂಬುದೇ ಕಥೆ. ಇಲ್ಲಿ ಮನರಂಜನೆಗೂ ಜಾಗವಿದೆ. ಸೆಂಟಿಮೆಂಟ್ ಅಂಶಗಳೂ ಇವೆ. ಬ್ಯಾಂಕಾಕ್‌ನಲ್ಲಿ 13 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಬೆಂಗಳೂರಿನಲ್ಲಿ 20 ದಿನ ಚಿತ್ರೀಕರಿಸಿದ್ದು, ಈಗ ಚಿತ್ರ ಡಬ್ಬಿಂಗ್ ಹೋಗಲು ಸಜ್ಜಾಗಿದೆ. ಚಿತ್ರದಲ್ಲಿ ಮನೋಹರ್, ಮ್ಯಾಥು ಮನು ಸಂಗೀತವಿದೆ. ಶ್ರೀಧರ್ ಹಿನ್ನೆಲೆ ಸಂಗೀತವಿದೆ. ಇನ್ನು, ಡಿಸೋಜ, ಎಂ.ಬಿ.ಹಳ್ಳಿಕಟ್ಟಿ ಮತ್ತು ಸಂದೀಪ್ ಮಲ್ಲಿಕಾರ್ಜುನ್ ಅವರ ಛಾಯಾಗ್ರಹಣವಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಡಿಸೆಂಬರ್ ಅಥವಾ ಜನವರಿ ಒಳಗೆ “ವಾರಂಟ್’ ಬರಲಿದೆ’ ಎಂದು ಹೇಳಿಕೊಂಡರು ನಾಗೇಂದ್ರ ಅರಸ್.
ಚಿತ್ರಕ್ಕೆ ಜೆಕೆ ನಾಯಕ. ಅವರಿಗೆ ಇದೊಂದು ಬೇರೆ ರೀತಿಯ ಚಿತ್ರವಂತೆ.”ಕಳೆದ ಒಂದುವರೆ ವರ್ಷದ ಹಿಂದೆ ಶುರುವಾದ ಚಿತ್ರವಿದು. ಕಥೆ ಬರೆದಿದ್ದ ನಿರ್ಮಾಪಕಿ ಮನೀಷಾ ಅವರು ಒಮ್ಮೆ ಕಥೆ ಮತ್ತು ಪಾತ್ರ ವಿವರಿಸಿದರು. ಚೆನ್ನಾಗಿತ್ತು. ಸಾಕಷ್ಟು ಅಂಶಗಳಿದ್ದವು. ಜೊತೆಗೆ ನಾಗೇಂದ್ರ ಅರಸ್ ನಿರ್ದೇಶನ ಅಂತ ಗೊತ್ತಾಯ್ತು. ಅವರ ಜೊತೆಗೆ “ಜಸ್ಟ್ ಲವ್’ .”ಮೇ 1′ ಚಿತ್ರ ಮಾಡಿದ್ದೆ. ಇದು ಮೂರನೇ ಸಿನಿಮಾ. ಇಲ್ಲಿ ಕಮರ್ಷಿಯಲ್ ಅಂಶಗಳಿವೆ. ಚಿತ್ರದ ಬಗ್ಗೆ ಹೇಳುವುದಾದರೆ, ವ್ಯಕ್ತಿಯ ಬದುಕಿನಲ್ಲೊಂದು ತಪ್ಪು ನಡೆದಾಗ, ಆ ವ್ಯಕ್ತಿ ಹೇಗಾಗುತ್ತಾನೆ. ಅದೇ ವ್ಯಕ್ತಿ ತನ್ನ ತಪ್ಪು ತಿದ್ದಿಕೊಂಡು ಮುನ್ನೆಡೆದಾಗ ಹೇಗೆಲ್ಲಾ ಬದಲಾಗುತ್ತಾನೆ ಎಂಬುದು ಕಥೆ. ನನಗಿಲ್ಲಿ ಎರಡು ಶೇಡ್ ಪಾತ್ರವಿದೆ. ಮೊದಲು ಕೆಟ್ಟ ಕೆಲಸ ಮಾಡಿಕೊಂಡು ಆ ಬಳಿಕ ಅದರಿಂದ ಎಚ್ಚೆತ್ತುಕೊಂಡು ಒಳ್ಳೆಯ ಕೆಲಸ ಮಾಡಲು ಹೊರಡುವ ಪಾತ್ರ’ ಎಂದು ಹೇಳಿದರು ಜೆಕೆ.
ನಿರ್ಮಾಪಕಿ ಮನೀಷಾ ಚಿತ್ರಕ್ಕೆ ಕಥೆ ಬರೆದಿದ್ದಲ್ಲದೆ, ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಅವರು ಜೆಕೆ ಜೊತೆಗೆ ಹಾಡೊಂದಕ್ಕೆ ಕುಣಿದಿದ್ದಾರೆ. ಮೂಲತಃ ಕಾರವಾರದವರಾದ ಅವರು ಮುಂಬೈನಲ್ಲಿ ವಾಸ ವಾಗಿದ್ದಾರೆ. ಒಂದು ವರ್ಷದ ಹಿಂದೆ ಕಥೆ ಬರೆದಿದ್ದರಂತೆ. ಅದನ್ನು ಚಿತ್ರ ಮಾಡಬೇಕು ಅಂತ ನಿರ್ಧರಿಸಿ, ಜೆಕೆ ಮತ್ತು ನಾಗೇಂದ್ರ ಅರಸ್ ಬಳಿಕ ಚರ್ಚಿಸಿ, ಚಿತ್ರ ಮಾಡಿದ್ದಾರೆ. ಸಮಾಜದಲ್ಲಿ ನಡೆವ ಸಣ್ಣ ಪುಟ್ಟ ಘಟನೆಗಳು ಚಿತ್ರಕ್ಕೆ ಸ್ಫೂರ್ತಿ ಎನ್ನುವ ಮನೀಷಾ, ಇಲ್ಲೊಂದು ಸಂದೇಶ ಹೇಳಿದ್ದಾರಂತೆ. ಆದೇ ನೆಂಬ ಕುತೂಹಲ ವಿದ್ದರೆ ಸಿನಿಮಾ ನೋಡಬೇಕು ಎಂಬುದು ಅವರ ಮಾತು.ಚಿತ್ರಕ್ಕೆ ಒಂದು ಹಾಡುಕೊಟ್ಟ ವಿ.ಮನೋಹರ್ ಮಾತನಾಡಿ, ತಂಡಕ್ಕೆ ಶುಭ ಕೋರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ
Kambala: ಕೋಣಗಳ ಸಂಖ್ಯೆ ದುಪ್ಪಟ್ಟು-ಕಂಬಳ ಆಸಕ್ತಿ ಮೂರುಪಟ್ಟು!
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
Daily Horoscope: ವಧೂವರಾನ್ವೇಷಿಗಳಿಗೆ ಯಶಸ್ಸಿನ ಭರವಸೆ, ಸ್ವರ್ಣೋದ್ಯಮಿಗಳಿಗೆ ಹೇರಳ ಲಾಭ
Child Care: ಶಿಶು ಮರಣ ತಗ್ಗಿಸಲು ಮನೆಮಟ್ಟದ ಎಳೆ ಮಕ್ಕಳ ಆರೈಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.